15 ವರ್ಷಗಳ ಹಿಂದೆ ಮಹೇಶ್ ಬಾಬು ಕೊಟ್ಟಿದ್ದ ಗುಡ್‌ನ್ಯೂಸ್ ಇವತ್ತು ನಿಜವಾಯ್ತು!

ನಿರ್ದೇಶಕ ರಾಜಮೌಳಿ ಹಾಗೂ ನಟ ಮಹೇಶ್ ಬಾಬು ಸಿನಿಮಾ ಅಧಿಕೃತವಾಗಿ ಸೆಟ್ಟೇರಿದೆ ಎನ್ನಲಾಗ್ತಿದೆ. ಹೈದರಾಬಾದ್‌ನಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೀತಿದೆ ಎನ್ನುವ ಗುಸು ಗುಸು ಕೇಳಿಬರ್ತಿದೆ. ಬಹಳ ಹಿಂದೆಯೇ ಮಹೇಶ್ ಹಾಗೂ ಮೌಳಿ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಬೇಕಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಅಂತೂ ಇಂತೂ ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.

ಸೋಲಿಲ್ಲದ ಸರದಾರ ರಾಜಮೌಳಿ. ಸೂಪರ್ ಹಿಟ್ ಸಿನಿಮಾಗಳ ಸರದಾರ ಮಹೇಶ್ ಬಾಬು. ಇವರಿಬ್ಬರ ಕಾಂಬಿನೇಷನ್‌ ಅಂದ್ರೆ ಬಾಕ್ಸಾಫೀಸ್ ಶೇಕ್ ಆಗುವುದು ಗ್ಯಾರಂಟಿ. ಅದೇ ಕಾರಣಕ್ಕೆ ಈ ಸಿನಿಮಾ ಇನ್ನಿಲ್ಲದ ನಿರೀಕ್ಷೆ ಹುಟ್ಟಾಕ್ಕಿದೆ. 'RRR' ಬ್ಲಾಕ್‌ಬಸ್ಟರ್ ಹಿಟ್ ಬಳಿಕ ಮಹೇಶ್ ಬಾಬು ಚಿತ್ರದ ಕೆಲಸಗಳಲ್ಲಿ ಜಕ್ಕಣ್ಣ ಬ್ಯುಸಿಯಾಗಿದ್ದರು. ಕಳೆದೊಂದು ವರ್ಷದಿಂದ ಯಾವುದೇ ಚಿತ್ರದಲ್ಲಿ ನಟಿಸದೇ ಈ ದಿನಕ್ಕಾಗಿ ಮಹೇಶ್ ಬಾಬು ಕಾಯುತ್ತಿದ್ದರು.

Amid SS Rajamouli Mahesh Babu s SSMB 29 launch Mahesh babu old tweet goes viral

2010ರ ಮೇ 22ರಂದು ಮಹೇಶ್ ಬಾಬು ಒಂದು ಟ್ವೀಟ್ ಮಾಡಿದ್ದರು. "ನಿಮಗೆಲ್ಲಾ ಒಂದು ಗುಡ್‌ನ್ಯೂಸ್. ನಾನು ಹಾಗೂ ರಾಜಮೌಳಿ ಒಟ್ಟಿಗೆ ಸೇರಿ ಒಂದು ಸಿನಿಮಾ ಮಾಡ್ತಿದ್ದೀವಿ" ಎಂದು ಬರೆದುಕೊಂಡಿದ್ದರು. ಅಂದಿನಿಂದಲೂ ಈ ಬಗ್ಗೆ ಕುತೂಹಲ ಇತ್ತು. 'ಮಗಧೀರ' ಸಿನಿಮಾ ಬಳಿಕ ಮೌಳಿ ನಿರ್ದೇಶನದಲ್ಲಿ 'ಮರ್ಯಾದ ರಾಮಣ್ಣ' ಸಿನಿಮಾ ಬಂದಿತ್ತು.

'ಮರ್ಯಾದ ರಾಮಣ್ಣ' ಬಳಿಕವೇ ರಾಜಮೌಳಿ- ಮಹೇಶ್ ಬಾಬು ಸಿನಿಮಾ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಬಳಿಕ ಮೌಳಿ 'ಈಗ' ಚಿತ್ರ ಕೈಗೆತ್ತಿಕೊಂಡರು. ಬಳಿಕ 'ಬಾಹುಬಲಿ' ಸರಣಿಗಾಗಿ ಐದಾರು ವರ್ಷ ವ್ಯಯಿಸಿದರು. ಬಳಿಕ 'RRR' ಸಿನಿಮಾ ಬಂತು. ಇದೀಗ ಕೊನೆಗೂ ಮಹೇಶ್ ಬಾಬು ಜೊತೆ ಕೈ ಜೋಡಿಸಿದ್ದಾರೆ. ಈ ಬಾರಿ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಪ್ಲ್ಯಾನ್ ನಡೀತಿದೆ.

'SSMB 29' ಸಿನಿಮಾ ಲಾಂಚ್ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ ಸದ್ದಿಲ್ಲದೇ ಚಿತ್ರಕ್ಕೆ ಪೂಜೆ ನಡೀತಿದೆ ಎಂದು ವರದಿಯಾಗಿದೆ. ಬಳಿಕ ಫೋಟೊ ಸಮೇತ ಚಿತ್ರತಂಡ ವಿಚಾರ ಹಂಚಿಕೊಳ್ಳುವ ನಿರೀಕ್ಷೆಯಿದೆ. ಹೈದರಾಬಾದ್ ಅಲ್ಯೂಮಿನಿಯಂ ಫ್ಕಾಕ್ಟರಿ ಆವರಣದಲ್ಲಿ ಮುಹೂರ್ತ ಸಮಾರಂಭ ನಡೀತಿದೆ. ಅಲ್ಲಿಗೆ ಮಹೇಶ್ ಬಾಬು, ರಾಮಾ ರಾಜಮೌಳಿ ಕಾರುಗಳು ಹೋಗಿರುವ ವೀಡಿಯೋಗಳು ವೈರಲ್ ಆಗುತ್ತಿದೆ.

ದೇಶ ವಿದೇಶಗಳಲ್ಲಿ ನಡೆಯುವ ಕಥೆ ಚಿತ್ರದಲ್ಲಿ ಇರಲಿದೆ. ಇನ್ನು ಹೆಸರಿಡದ ಈ ಚಿತ್ರವನ್ನು ಸದ್ಯಕ್ಕೆ SSMB 29 ಎಂದು ಕರೆಯಲಾಗುತ್ತಿದೆ. ಕೆ. ಎಲ್ ನಾರಾಯಣ ಎಂಬುವವರು ಚಿತ್ರಕ್ಕೆ ಹಣ ಹಾಕಲಿದ್ದಾರೆ. ಅವರ ಜೊತೆ ಹಾಲಿವುಡ್ ಸ್ಟುಡಿಯೋವೊಂದು ಕೈ ಜೋಡಿಸಲಿದೆ. ಮೌಳಿ ನಿರ್ದೇಶನದ 'RRR' ಸಿನಿಮಾ ಹಾಲಿವುಡ್ ಫಿಲ್ಮ್ ಮೇಕರ್ಸ್ ಗಮನ ಸೆಳೆದಿತ್ತು. ಚಿತ್ರದ ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿತ್ತು. ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ರಿಲೀಸ್ ಆಗಿ ಹಾಲಿವುಡ್ ಫಿಲ್ಮ್ ಮೇಕರ್ಸ್ ನೋಡಿ ಮೆಚ್ಚಿದ್ದರು.

ಹಾಲಿವುಡ್ ವೇದಿಕೆಗಳಲ್ಲಿ 'RRR' ಸಿನಿಮಾ ಪ್ರಶಸ್ತಿ ಗೆದ್ದಿತ್ತು. ಹಾಗಾಗಿ ರಾಜಮೌಳಿ ಬಗ್ಗೆ ಹಾಲಿವುಡ್ ಮಂದಿಗೂ ಗೊತ್ತಾಗಿದೆ. ಹಾಗಾಗಿ ಸಹಜವಾಗಿಯೇ ಮುಂದಿನ ಚಿತ್ರವನ್ನು ಹಾಲಿವುಡ್ ರೇಂಜ್‌ನಲ್ಲಿ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಇನ್ನು ಮಹೇಶ್ ಬಾಬು ಅವರನ್ನು ಅಭಿಮಾನಿಗಳು ಹಾಲಿವುಡ್ ಹೀರೋ ಎಂದು ಕೊಂಡಾಡುತ್ತಾರೆ. ಹಾಗಾಗಿ ಮೌಳಿ- ಮಹೇಶ್ ಕಾಂಬೋ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

ಎರಡು ಭಾಗಗಳಾಗಿ 'SSMB 29' ಸಿನಿಮಾ ಬರುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ಅಂದಾಜು 1000 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಮೂಡಿ ಬರುವ ನಿರೀಕ್ಷೆಯಿದೆ. ಹಾಗಾಗಿ ಇದು ಭಾರತೀಯ ಸಿನಿಚರಿತ್ರೆಯಲ್ಲಿ ಬಹಳ ದುಬಾರಿ ಸಿನಿಮಾ ಎನಿಸಿಕೊಳ್ಳಲಿದೆ. ದೇಶ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆ. ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಸಹ ನಟಿಸುವ ಸಾಧ್ಯತೆಯಿದೆ.

More from Filmibeat

English summary
SSMB 29: Telugu actor Mahesh babu's 15 years old post trending now
Read more about: mahesh babu rajamouli tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X