ತ್ರಿಶಾ ಬೆನ್ನಿಗೆ ನಿಂತ ಚಿರು: ನೀನೇನ್ ಸಾಚಾನಾ? ಎಂದು ಹಳೇ ವಿಡಿಯೋಗಳನ್ನು ತೋರಿಸಿ ಹಿಗ್ಗಾಮುಗ್ಗಾ ಟ್ರೋಲ್
ತಮಿಳು ನಟ ಮನ್ಸೂರ್ ಅಲಿಖಾನ್ ಇತ್ತೀಚೆಗೆ ನಟಿ ತ್ರಿಶಾ ಕುರಿತು ನೀಡಿದ ಅಸಭ್ಯ ಹೇಳಿಕೆ ಬಗ್ಗೆ ಭಾರೀ ಚರ್ಚೆ ನಡೀತಿದೆ. ಈಗಾಗಲೇ ತಮಿಳುನಾಡು ಪೋಲಿಸರು ಮನ್ಸೂರ್ ಅಲಿಖಾನ್ ವಿರುದ್ಧ ದೂರ ದಾಖಲಿಸಿಕೊಂಡಿದ್ದಾರೆ. ಇನ್ನು ಆತನ ಹೇಳಿಕೆಯನ್ನ ಚಿರಂಜೀವಿ, ರೋಜಾ, ನಾನಿ ಸೇರಿದಂತೆ ಹಲವು ಖಂಡಿಸಿದ್ದಾರೆ. ತ್ರಿಶಾ ಬೆಂಬಲಕ್ಕೆ ನಿಂತಿದ್ದಾರೆ.
ವಿಜಯ್ ನಟನೆಯ 'ಲಿಯೋ' ಚಿತ್ರದಲ್ಲಿ ತ್ರಿಶಾ ನಾಯಕಿಯಾಗಿ ನಟಿಸಿದ್ದರು. ಪೋಷಕ ಪಾತ್ರದಲ್ಲಿ ಮನ್ಸೂರ್ ಅಲಿಖಾನ್ ಕಾಣಿಸಿಕೊಂಡಿದ್ದಾರೆ. ಆದರೆ ಚಿತ್ರದಲ್ಲಿ ನನಗೆ ವಿಲನ್ ಪಾತ್ರ ಸಿಗಲಿಲ್ಲ. ರೋಜಾ, ಖುಷ್ವು ಅವರನ್ನೆಲ್ಲಾ ಮಂಚದ ಮೇಲೆ ಎತ್ತಿಹಾಕಿ ರೇ* ಸೀನ್‌ನಲ್ಲಿ ನಟಿಸಿದಂತೆ ತ್ರಿಶಾ ಜೊತೆಗೂ ನಟಿಸಬಹುದು ಎಂದುಕೊಂಡಿದ್ದೆ. ಆದರೆ ಅವಕಾಶ ಸಿಗಲಿಲ್ಲ. ಶೂಟಿಂಗ್ ವೇಳೆ ಆಕೆಯನ್ನು ನೋಡಲು ಸಾಧ್ಯವಾಗಲಿಲ್ಲ ಎಂದು ಮನ್ಸೂರ್ ಅಲಿಖಾನ್ ಹೇಳಿದ್ದರು. ಈ ಬಗ್ಗೆ ಆಕ್ರೋಶ ವ್ಯಕ್ತವಾದರೂ ಕ್ಷಮೆ ಕೇಳಲು ನಿರಾಕರಿಸಿದ್ದಾರೆ.

"ತ್ರಿಶಾ ಬಗ್ಗೆ ಮನ್ಸೂರ್ ಅಲಿಖಾನ್, ಕಾಮೆಂಟ್ಸ್ ನನ್ನ ಗಮನಕ್ಕೆ ಬಂದವು. ಇಂತಹ ಹೇಳಿಕೆ ಒಬ್ಬ ನಟಿಗೆ ಮಾತ್ರವಲ್ಲ, ಯಾವುದೇ ಮಹಿಳೆಗೆ ಅಸಹ್ಯಕರ. ಈ ಕಾಮೆಂಟ್‌ಗಳನ್ನು ಬಲವಾಗಿ ಖಂಡಿಸಬೇಕು. ವಿಕೃತ ಮನಸ್ಸಿನಿಂದ ಈ ರೀತಿ ಮಾತನಾಡುತ್ತಿದ್ದಾರೆ. ತ್ರಿಶಾ ಮಾತ್ರವಲ್ಲ. ಯಾವುದೇ ಹುಡುಗಿಗೆ ಇಂತಹ ಕಾಮೆಂಟ್‌ಗಳು ಬಂದರೆ ಅವರ ಜೊತೆ ನಿಲ್ಲುತ್ತೇನೆ. ಬೆಂಬಲವಾಗಿ ನಿಲ್ಲುತ್ತೇನೆ" ಎಂದು ಚಿರಂಜೀವಿ ಟ್ವೀಟ್ ಮಾಡಿದ್ದರು.
ತ್ರಿಶಾ ಬೆಂಬಲಕ್ಕೆ ನಿಂತ ಚಿರಂಜೀವಿ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕೆಲವರು ಖುದ್ದು ಚಿರಂಜೀವಿನ ಟ್ರೋಲ್ ಮಾಡಲು ಆರಂಭಿಸಿದ್ದಾರೆ. "ಮಾಡೋದು ಅನಾಚಾರ ಮನೆಮುಂದೆ ಬೃಂದಾವನ" ಎನ್ನುವಂತೆ ನೀವು ಇದೇ ರೀತಿ ಮಾಡಿದ್ದೀರಾ ಅಲ್ಲವೇ? ಎಂದು ಗೇಲಿ ಮಾಡುತ್ತಿದ್ದಾರೆ. ನೀವು ಈ ಹಿಂದೆ ಸಿನಿಮಾ ಕಾರ್ಯಕ್ರಮಗಳಲ್ಲಿ ನಟಿಯರ ಜೊತೆ ಹೇಗೆ ನಡೆದುಕೊಂಡಿದ್ದೀರಾ? ನೋಡಿ ಎನ್ನುತ್ತಿದ್ದಾರೆ.
'ಭೋಳಾ ಶಂಕರ್' ಚಿತ್ರದ ಈವೆಂಟ್‌ನಲ್ಲಿ ನಟಿ ಕೀರ್ತಿ ಸುರೇಶ್ ಜೊತೆ ಹಾಗೂ 'ಆಚಾರ್ಯ' ಸಿನಿಮಾ ಕಾರ್ಯಕ್ರಮದಲ್ಲಿ ಪೂಜಾ ಹೆಗ್ಡೆ ಜೊತೆ ಚಿರು ಸಲ್ಲಾಪದಲ್ಲಿ ತೊಡಗಿದ್ದ ವಿಡಿಯೋಗಳನ್ನು ವೈರಲ್ ಮಾಡುತ್ತಿದ್ದಾರೆ. ಇತ್ತೀಚೆಗೆ ಬಂದ ಚಿರಂಜೀವಿ ನಟನೆಯ 'ಭೋಳಾ ಶಂಕರ್' ಸಿನಿಮಾ ಹೀನಾಯವಾಗಿ ಸೋತಿತ್ತು. ಚಿತ್ರದಲ್ಲಿ ಚಿರು ಸಹೋದರಿ ಪಾತ್ರದಲ್ಲಿ ಕೀರ್ತಿ ಸುರೇಶ್ ನಟಿಸಿದ್ದರು.

ಪ್ರೀ ರಿಲೀಸ್ ಈವೆಂಟ್ ವೇದಿಕೆಯಲ್ಲಿ ಕೀರ್ತಿ ಸುರೇಶ್ ಪಕ್ಕ ನಿಂತ ಚಿರು ಒಂದರ್ಥದಲ್ಲಿ ರೊಮ್ಯಾಂಟಿಕ್ ಮೂಡ್‌ಗೆ ಹೋಗಿಬಿಟ್ಟಿದ್ದರು. ಈ ಚಿತ್ರದಲ್ಲಿ ನಾವಿಬ್ಬರು ಅಣ್ಣ ತಂಗಿಯಾಗಿ ನಟಿಸಿದ್ದರೂ, ಇಂತಹ ಸುಂದರಿ ಅಣ್ಣ ಅಂದ್ರೆ ಮನಸ್ಸಿಗೆ ನೋವಾಗುತ್ತದೆ. ನೀನು ಮುಂದಿನ ಸಿನಿಮಾದಲ್ಲಿ ನನಗೆ ಹೀರೋಯಿನ್ ಆಗಿರು ಸಾಕು ಎಂದಿದ್ದ ವಿಡಿಯೋವನ್ನು ಟ್ರೋಲ್ ಮಾಡುತ್ತಿದ್ದಾರೆ.
'ಆಚಾರ್ಯ' ಸಿನಿಮಾ ಕಾರ್ಯಕ್ರಮದಲ್ಲೂ ಇದೇ ರೀತಿ ನಟಿ ಪೂಜಾ ಹೆಗ್ಡೆ ಜೊತೆ ಚಿರು ಆತ್ಮೀಯವಾಗಿ ಕಾಣಿಸಿಕೊಂಡಿದ್ದ ವಿಡಿಯೋ ವೈರಲ್ ಮಾಡಿ ನೀನು ಮನ್ಸೂರ್ ಅಲಿಖಾನ್‌ಗೆ ಬುದ್ದಿ ಹೇಳ್ತೀಯಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಬೇರೆ ಕಲಾವಿದರ ಅಭಿಮಾನಿಗಳು ಈ ರೀತಿ ಉದ್ದೇಶಪೂರ್ವಕವಾಗಿ ಚಿರಂಜೀವಿನ ಟ್ರೋಲ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಚಿರಂಜೀವಿ ಮನೆಯಲ್ಲಿ ಭರ್ಜರಿ ಪಾರ್ಟಿ ಮಾಡಿದ್ದರು. ಪಾರ್ಟಿಯಲ್ಲಿ ಗಾಯಕಿ ಹಾಡು ಹಾಡುತ್ತಿದ್ದರೆ ಆಕೆಯ ಜೊತೆ ಓಲಾಡುತ್ತಾ ಚಿರು ಹೆಜ್ಜೆ ಹಾಕಿದ್ದರು. ಆ ವಿಡಿಯೋವನ್ನು ಕೂಡ ಶೇರ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಇದೇ ವಿಡಿಯೋಗಳು ಸಖತ್ ಚಕ್ಕರ್ ಹೊಡೀತಿದೆ. ಸಿನಿಮಾಗಳ ವಿಚಾರಕ್ಕೆ ಬಂದರೆ ಚಿರು ಹೊಸ ಸಿನಿಮಾವೊಂದನ್ನು ಘೋಷಿಸಿದ್ದಾರೆ. ಆದರೆ ಇನ್ನು ಚಿತ್ರೀಕರಣ ಶುರುವಾಗಿಲ್ಲ.


Click it and Unblock the Notifications











