ರಾಮ್ ಗೋಪಾಲ್ ವರ್ಮಾ ವಿರುದ್ಧ ಯುವತಿಯ ಕಾನೂನು ಹೋರಾಟ

ಬೇರೆಯವರ ಜೀವನದ ಬಗ್ಗೆ ಸಿನಿಮಾ ಮಾಡಿ, ವಿವಾದ ಎಬ್ಬಿಸಿ ಹಣ ದೋಚುವ ರಾಮ್ ಗೋಪಾಲ್ ವರ್ಮಾ ಅನ್ನು ತೆಲುಗು ಮಾಧ್ಯಮಗಳು 'ವಿಲಕ್ಷಣ ನಿರ್ದೇಶಕ' ಎಂದು ಕರೆಯುತ್ತಾರೆ.

Recommended Video

Kaanadante Maayavadanu Behind The scenes Part 02 | Oneindia Kannada

ತಿಂಗಳಿಗೊಂದರಂತೆ ಸಿನಿಮಾಗಳನ್ನು ನಿರ್ಮಿಸಿ ಆನ್‌ಲೈನ್ ನಲ್ಲಿ ಬಿಡುಗಡೆ ಮಾಡುತ್ತಿದ್ದ ರಾಮ್‌ ಗೋಪಾಲ್ ವರ್ಮಾ ಗೆ ಯುವತಿಯೊಬ್ಬಾಕೆ ಬ್ರೇಕ್ ಹಾಕಿದ್ದಾಳೆ.

ದೇಶವೇ ಬೆಚ್ಚಿಬೀಳುವಂತೆ ಮಾಡಿದ್ದ ಆಂಧ್ರಪ್ರದೇಶದ ಮರ್ಯಾದೆ ಹತ್ಯೆಯ ಬಗ್ಗೆ ರಾಮ್ ಗೋಪಾಲ್ ವರ್ಮಾ 'ಮರ್ಡರ್' ಎಂಬ ಸಿನಿಮಾ ಮಾಡುವುದಾಗಿ ಘೋಷಿಸಿ ಇದಾಗಲೇ ಚಿತ್ರೀಕರಣ ಪ್ರಾರಂಭಿಸಿದ್ದರು. ಆದರೆ ಆ ಸಿನಿಮಾ ಬಿಡುಗಡೆಗೆ ತಡೆ ಬೀಳುವ ಎಲ್ಲಾ ಸಾಧ್ಯತೆ ಇದೆ.

ಮರ್ಯಾದೆ ಹತ್ಯೆ ಮಾಡಿಸಿದ್ದ ಮಾರುತಿ ರಾವ್

ಮರ್ಯಾದೆ ಹತ್ಯೆ ಮಾಡಿಸಿದ್ದ ಮಾರುತಿ ರಾವ್

ಪ್ರೇಮ ವಿವಾಹವಾಗಿದ್ದ ಅಮೃತಾ ಹಾಗೂ ಪ್ರಣಯ್ ಚೆನ್ನಾಗಿಯೇ ಜೀವನ ಸಾಗಿಸುತ್ತಿದ್ದರು. ಆದರೆ ಅಮೃತಾಳ ತಂದೆ ಪ್ರಣಯ್ ಅನ್ನು ಹಾಡು ಹಗಲೆ ಕೊಲ್ಲಿಸಿಬಿಟ್ಟ. ಗರ್ಭಿಣಿಯಾಗಿದ್ದ ಅಮೃತಾಳ ಎದುರೇ ಗಂಡ ಪ್ರಣಯ್ ಕೊಲೆಯಾದ ಘಟನೆ ದೇಶದವೇ ಬೆಚ್ಚಿ ಬೀಳುವಂತೆ ಮಾಡಿತ್ತು.

ಮರ್ಡರ್ ಸಿನಿಮಾ ಘೋಷಿಸಿದ್ದ ವರ್ಮಾ

ಮರ್ಡರ್ ಸಿನಿಮಾ ಘೋಷಿಸಿದ್ದ ವರ್ಮಾ

ಇದೇ ಘಟನೆಯನ್ನು ಇಟ್ಟುಕೊಂಡು ಮರ್ಡರ್ ಸಿನಿಮಾವನ್ನು ಘೋಷಿಸಿದ್ದರು ರಾಮ್ ಗೋಪಾಲ್ ವರ್ಮಾ, ಸಿನಿಮಾದ ಪೋಸ್ಟರ್‌ಗಳು ಸಹ ಬಿಡುಗಡೆ ಆಗಿದ್ದವು. ಕೆಲವೇ ದಿನಗಳಲ್ಲಿ ಸಿನಿಮಾವನ್ನು ಆನ್‌ಲೈನ್‌ ನಲ್ಲಿ ಬಿಡುಗಡೆ ಮಾಡುವುದಾಗಿ ವರ್ಮಾ ಹೇಳಿದ್ದರು.

ಸಿನಿಮಾದಲ್ಲಿ ಕೆಲವು ಸತ್ಯಗಳನ್ನು ಮರೆಮಾಚಲಾಗಿದೆ: ಅಮೃತಾ

ಸಿನಿಮಾದಲ್ಲಿ ಕೆಲವು ಸತ್ಯಗಳನ್ನು ಮರೆಮಾಚಲಾಗಿದೆ: ಅಮೃತಾ

ಆದರೆ ಅಮೃತಾ ಪ್ರಣಯ್, ರಾಮ್ ಗೋಪಾಲ್ ವರ್ಮಾ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದು, ಸಿನಿಮಾಕ್ಕೆ ತಡೆ ಒಡ್ಡಬೇಕೆಂದು ನ್ಯಾಯಾಲಯವನ್ನು ಮನವಿ ಮಾಡಿದ್ದಾರೆ. ಸಿನಿಮಾದಲ್ಲಿ ಕೆಲವೊಂದು ಸತ್ಯಗಳನ್ನು ಮರೆಮಾಚಲಾಚಿರುವ ಸಂಭವ ಇದೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

ಕಹಿ ಘಟನೆಯನ್ನು ರೋಚಕವಾಗಿ ತೋರಿಸುತ್ತಾರೆ: ಅಮೃತಾ

ಕಹಿ ಘಟನೆಯನ್ನು ರೋಚಕವಾಗಿ ತೋರಿಸುತ್ತಾರೆ: ಅಮೃತಾ

ನಾನು ಇದಾಗಲೇ ಪತಿ ಪ್ರಣಯ್ ಹಾಗೂ ತಂದೆ ಮಾರುತಿ ರಾವ್ ಅನ್ನು ಕಳೆದುಕೊಂಡು ದುಖದಲ್ಲಿದ್ದೇನೆ. ಇಂಥಹಾ ಸಮಯದಲ್ಲಿ ನನ್ನ ಜೀವನದ ಬಗ್ಗೆ ಸಿನಿಮಾ ಮಾಡುವುದು ಸಮಂಜಸವಲ್ಲ. ಅಲ್ಲದೆ ವರ್ಮಾ ನನ್ನ ಜೀವನದ ಕಹಿ ಘಟನೆಯನ್ನು ರೋಚಕವಾಗಿ ತೋರಿಸಿ ಹಣ ಮಾಡುವ ಉಮೇದು ಹೊಂದಿದ್ದಾರೆ ಎಂದು ಅಮೃತಾ ದೂರಿನಲ್ಲಿ ಹೇಳಿದ್ದಾರೆ.

ಆಗಸ್ಟ್ 6 ರಂದು ಹಾಜರಾಗಲು ಸೂಚನೆ

ಆಗಸ್ಟ್ 6 ರಂದು ಹಾಜರಾಗಲು ಸೂಚನೆ

ನಲಗೊಂಡ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಎಸ್‌ಸಿ/ಎಸ್‌ಟಿ ಪ್ರಕರಣ ಎಂದು ಪರಿಗಣಿಸಿ, ವರ್ಮಾಗೆ ನೊಟೀಸ್ ಜಾರಿ ಮಾಡಲಾಗಿದೆ. ರಾಮ್ ಗೋಪಾಲ್ ವರ್ಮಾ ಆಗಸ್ಟ್ 6 ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.

More from Filmibeat

English summary
Amrutha Pranay filled complaint against director Ram Gopal Varma. She asked to issue stay on Murder movie which is on her life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X