ಅವತ್ತು ನಾಗಾರ್ಜುನ ಕಣ್ಣಿಗೆ 'ಹಾಟ್' ಆಗಿ ಕಂಡಿದ್ದ ಶೋಭಿತಾ ಇವತ್ತು ಅಕ್ಕಿನೇನಿ ಕುಟುಂಬದ ಭಾವಿ ಸೊಸೆ...!

ಇದು ಬಣ್ಣದ ಲೋಕ. ಇಲ್ಲಿ ಲವ್ವು.. ಡವ್ವು.. ಎಲ್ಲವೂ ಮಾಮೂಲಿ. ಇವತ್ತು ಜೊತೆ ಇದ್ದವರು, ಮರು ದಿನ 'ಹಮ್ ಆಪ್ಕೆ ಹೇ ಕೌನ್' ಎಂದರೆ, ಇನ್ನೂ ಕೆಲವರು 'ಹಮ್ ಸಾಥ್-ಸಾಥ್ ಹೈ' ಎನ್ನುತ್ತಾರೆ. ಇದಕ್ಕೆ ನಾಗಚೈತನ್ಯ ಬದುಕು ಸದ್ಯದ ಅತ್ಯುತ್ತಮ ಉದಾಹರಣೆ.

ಹೌದು, ಹಿಂದೊಮ್ಮೆ ಆಂಧ್ರದ ಅಪ್ರತಿಮ ಸುಂದರಿ ಸಮಂತಾಗೆ ತನ್ನ ಹೃದಯವನ್ನು ಕೊಟ್ಟಿದ್ದ ನಾಗಚೈತನ್ಯ ಇಂದು ಅದೇ ಹೃದಯವನ್ನು ಶೋಭಿತಾಗೆ ನೀಡಿದ್ದಾರೆ. ನಿಜಾ.. ಎರಡು ಜೀವಗಳ ಅನುರಾಗದ ಅನುಬಂಧಕ್ಕೆ ಯಾರ ಅಪ್ಪಣೆ ಬೇಕಿಲ್ಲ. ಆದರೆ, ಸಮಂತಾ ಅವರಿಂದ ದೂರವಾದ ನಾಗಚೈತನ್ಯ ಮತ್ತೊಬ್ಬ ಚೆಲುವೆಯ ಮನದರಸವಾಗಬಹುದು ಎನ್ನುವ ಕಲ್ಪನೆಯನ್ನೂ ಯಾರು ಮಾಡಿರಲಿಲ್ಲ. ಹೀಗಾಗಿಯೇ ನಾಗಚೈತನ್ಯ ಮತ್ತು ಶೋಭಿತಾ ಅವರ ನಿಶ್ಚಿತಾರ್ಥ ಸಮಾರಂಭದ ಫೋಟೋಗಳನ್ನು ನೋಡಿ ಕೆಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಬಹುತೇಕರು ನಾಗಚೈತನ್ಯ ಅವರ ಮೊದಲ ಪತ್ನಿ ಸಮಂತಾಗೆ ಧೈರ್ಯವನ್ನೂ ತುಂಬುತ್ತಿದ್ದಾರೆ. ಆದರೆ ಇದೆಲ್ಲದರ ನಡುವೆ ಇನ್ನೂ ಕೆಲವರು ಶೋಭಿತಾ ಅವರ ಮಾವ ನಾಗಾರ್ಜುನ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ನಾಗಾರ್ಜುನ ಅವತ್ತು ಹೇಳಿದ ಮಾತನ್ನೂ ನೆನಪು ಮಾಡಿಕೊಳ್ಳುತ್ತಿದ್ದಾರೆ.

An old video resurfaced where Nagarjuna called Sobhita Dhulipala hot and attractive

ಹೌದು, ಅದು 2018ರ ಸಮಯ. ಅಡವಿ ಶೇಷ್ ಮತ್ತು ಶೋಭಿತಾ ಅಭಿನಯದ ಗೂಢಾಚಾರಿ ಚಿತ್ರದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ನಾಗಾರ್ಜುನ, ಅಡವಿ ಶೇಷ್ ಸಾಹಸವನ್ನೂ ಮೆಚ್ಚಿಕೊಂಡಿದ್ದರು. ಚಿತ್ರವನ್ನು ಹೊಗಳಿದ್ದರು. ಆದರೆ, ಇದೇ ಸಮಯದಲ್ಲಿ ಮಾತನಾಡಿದ್ದ ನಾಗಾರ್ಜುನ ತಮ್ಮ ಭಾವಿ ಸೊಸೆ ಶೋಭಿತಾ ಅವರ ಸೌಂದರ್ಯವನ್ನು ಹಾಡಿ ಹೊಗಳಿದ್ದರು.

ಅವತ್ತು ಸಭಿಕರನ್ನು ಉದ್ದೇಶಿಸಿ ಮಾತನಾಡಿದ್ದ ನಾಗಾರ್ಜುನ, ಶೋಭಿತಾ ತುಂಬಾ ಒಳ್ಳೆಯವಳು. ಆದರೆ ನಾನು ಈ ರೀತಿ ಹೇಳಬಾರದು. ಆದರೂ.. ಶೋಭಿತಾ ಸಿನಿಮಾದಲ್ಲಿ ತುಂಬಾ ಹಾಟ್ ಆಗಿದ್ದರು ಎಂದು ಹೇಳಿದ್ದರು. ಶೋಭಿತಾ ಅತ್ಯಾಕರ್ಷಕವಾಗಿದ್ದಾರೆ ಎನ್ನುವ ಮಾತುಗಳನ್ನಾಡಿದ್ದರು.

Nagarjuna once said this about his future Daughter in Law, Sobhita
byu/Significant-Neat-142 inBollyBlindsNGossip

ಅವತ್ತು, ನಾಗಾರ್ಜುನ ಆಡಿದ್ದ ಈ ಮಾತು, ಇವತ್ತು.. ತಿರುಗು ಬಾಣವಾಗಿದೆ. ಹೀಗಾಗಿಯೇ ಪುರಾತನ ಕಾಲದ ಆ ವಿಡಿಯೋ ಹೆಕ್ಕಿ ತೆಗೆದಿರುವ ಅನೇಕರು ನಾಗಾರ್ಜುನ ವಿರುದ್ಧ ತಮ್ಮ ಆಕ್ರೋಶವನ್ನು ಈಗ ಹೊರ ಹಾಕುತ್ತಿದ್ದಾರೆ. ಅವತ್ತು ನಾಗಾರ್ಜುನ ಮಾತನಾಡಿದ್ದು ತಪ್ಪು ಎನ್ನುತ್ತಿದ್ದಾರೆ. ಆಕೆ ನಿಮ್ಮ ಸೆರೆಯಾಳು ಅಲ್ಲವೆನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಾಗಾರ್ಜುನ ಮೇಲೆ ಕೆಂಡ ಕಾರುತ್ತಾ ಅವರನ್ನು ವಿಪರೀತ ಟ್ರೋಲ್ ಕೂಡ ಮಾಡುತ್ತಿದ್ದಾರೆ.

ಒಟ್ನಲ್ಲಿ ಸದ್ಯಕ್ಕೆ ಸಮಂತಾ ಅವರನ್ನು ಮರೆತು, ನಾಗಚೈತನ್ಯ- ಶೋಭಿತಾ ಅವರ ಜೊತೆ ಹೊಸ ಬದುಕನ್ನು ಶುರು ಮಾಡಲು ಅಣಿಯಾಗಿದ್ದಾರೆ. ಇಂದು ಗುರು-ಹಿರಿಯರ ಸಮ್ಮುಖದಲ್ಲಿ ಶೋಭಿತಾ ಜೊತೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ಧಾರೆ. ಇದರ ನಡುವೆ ಭಾವಿ ಸೊಸೆ ಶೋಭಿತಾ ಅವರ ಬಗ್ಗೆ ಅವರ ಭಾವಿ ಮಾವ ನಾಗಾರ್ಜುನ ಮಾತನಾಡಿದ್ದ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲವರು ವೈರಲ್ ಮಾಡುತ್ತಿದ್ಧಾರೆ. ಪರ-ವಿರೋಧದ ಚರ್ಚೆ ಮಾಡುತ್ತಿದ್ದಾರೆ. ನಾಗಾರ್ಜುನ ಅವರಿಗೆ ಛೀಮಾರಿಯನ್ನೂ ಹಾಕುತ್ತಿದ್ಧಾರೆ.

An old video resurfaced where Nagarjuna called Sobhita Dhulipala hot and attractive

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X