ಒಂದೇ ರೆಸಾರ್ಟ್‌ನಲ್ಲಿ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ವಾಸ್ತವ್ಯ ; ಹೇಳಿದ್ದೇನು ರೌಡಿ ತಮ್ಮ..?
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಡುವೆ ಇರುವುದು ಸ್ನೇಹ ಅಲ್ಲ ಬದಲಿಗೆ ಪ್ರೇಮ ಎಂಬ ಅನುಮಾನ ಅನೇಕರಲ್ಲಿದೆ. ಈ ಅನುಮಾನಕ್ಕೆ ಮೂಲ ಕಾರಣ ಹತ್ತಾರು ಇವೆ.ಆ ಪೈಕಿ ರೆಸಾರ್ಟ್ ರಹಸ್ಯ ಕೂಡ ಒಂದು.
ಹೌದು.. ನಿಮಗೆ ನೆನಪಿದ್ದರೆ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಂದೇ ರೆಸಾರ್ಟ್ ನಿಂದ ಹಂಚಿಕೊಂಡ ಫೋಟೋವೊಂದು ಹಿಂದೆ ವೈರಲ್ ಆಗಿತ್ತು. ನಿಜಾ ಅವತ್ತು ವೈರಲ್ ಆದ ಈ ಫೋಟೋದಲ್ಲಿ ಇಬ್ಬರು ಜೊತೆಯಲ್ಲಿ ಇರಲಿಲ್ಲ. ಆದರೆ.. ಬೇರೆ ಬೇರೆ ಸಂದರ್ಭದಲ್ಲಿ ಹಂಚಿಕೊಳ್ಳಲಾದ ಆ ಎರಡು ಫೋಟೋ ಒಂದೇ ಜಾಗದಲ್ಲಿ ತೆಗೆದಿದ್ದು ಅನ್ನುವುದು ಅನೇಕರ ವಾದ. ಈ ವಾದವನ್ನೇ ಮುಂದಿಟ್ಟುಕೊಂಡು ಓರ್ವ ಯೂಟ್ಯೂಬರ್ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಅವರಲ್ಲಿ ನೇರಾ ನೇರವಾದ ಪ್ರಶ್ನೆಯೊಂದನ್ನ ಮಾಡಿದ್ದಾರೆ

ಹೌದು, ಅಸಲಿಗೆ ಆನಂದ್ ದೇವರಕೊಂಡ ಅಭಿನಯದ 'ಗಂ ಗಂ ಗಣೇಶಾ' ಇಂದು ರಿಲೀಸ್ ಆಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಚಿತ್ರದ ಪ್ರಚಾರಾರ್ಥ ಅನೇಕ ಸಂದರ್ಶನಗಳನ್ನ ಆನಂದ್ ದೇವರಕೊಂಡ ನೀಡ್ತಾನೇ ಬಂದಿದ್ದಾರೆ. ಆ ಪೈಕಿ ಒಂದು ಸಂದರ್ಶನದ ತುಣುಕು ಈಗ ವೈರಲ್ ಆಗಿದೆ.
ವೈರಲ್ ಆದ ಈ ವಿಡಿಯೋದಲ್ಲಿ ನಿಮ್ಮ ಅಣ್ಣ, ಸ್ಟಾರ್ ಹೀರೋಯಿನ್ ಒಂದೇ ರೆಸಾರ್ಟ್ಗೆ ತೆರಳಿದ್ದರಲ್ಲ. ನೋಡಿ ನಮ್ಮ ಬಳಿ ಫೋಟೋ ಇದೆ' ಎಂದು ಯೂಟ್ಯೂಬರ್ ತೋರಿಸಿದ್ದಾರೆ. ಇದಕ್ಕೆ ಆನಂದ್ 'ನನ್ನ ಬಳಿಯೂ ಇದೆ' ಎಂದು ಯಾವುದೋ ಒಂದು ಫೋಟೋ ತೋರಿಸಿದ್ದಾರೆ.
ಆ ನಂತರ ಒಂದೇ ರೆಸಾರ್ಟ್ಗೆ ಇಬ್ಬರೂ ಹೋಗಿದ್ದು ಹೇಗೆ ಎಂದು ಕೇಳಲಾದ ಪ್ರಶ್ನೆಗೆ ತುಂಬಾ ದೂರ ಇದ್ದ ಕಾರಣ ವಿಮಾನದಲ್ಲಿ ತೆರಳಿದ್ದಾರೆ ಎಂದು ವಿಜಯ್ ದೇವರಕೊಂಡ ತಮ್ಮ ಆನಂದ್ ಹೇಳಿದ್ದಾರೆ.ಇನ್ನೂ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವೆ ನಡೆಯುತ್ತಿರುವುದು ಏನು..? ಎಂಬ ಪ್ರಶ್ನೆಗೆ ಮುಂದಿನ ಸಿನಿಮಾಗೆ ಸ್ಕ್ರಿಪ್ಟ್ ಡಿಸ್ಕಶನ್ ನಡೆಯುತ್ತಿದೆ ಎಂದು ಆನಂದ್ ದೇವರಕೊಂಡ ಫನ್ನಿ ಉತ್ತರವನ್ನ ಕೊಟ್ಟು ಕೈತೊಳೆದುಕೊಂಡಿದ್ದಾರೆ. ಮುಂದುವರೆದು ರೆಸಾರ್ಟ್ ವಾಸ್ತವ್ಯ ಕೇವಲ ಕಾಕತಾಳೀಯ ಅಷ್ಟೇ ಅಂದಿದ್ದಾರೆ ಆನಂದ್ ದೇವರಕೊಂಡ
ಅಂದ್ಹಾಗೇ ಮೊನ್ನೆ ಇದೇ ಗಂ ಗಂ ಗಣೇಶ ಚಿತ್ರದ ಪ್ರಚಾರಕ್ಕೆ ರಶ್ಮಿಕಾ ಮಂದಣ್ಣ ಕೂಡ ಕೈ ಜೋಡಿಸಿದ್ದರು. ಈ ವೇಳೆ ನಿಮ್ಮ ಫೇವರಿಟ್ ನಟ ಯಾರು ಎಂದು ಕೇಳಿದಾಗ ರಶ್ಮಿಕಾ ಉತ್ತರಿಸಲು ಹಿಂದು ಮುಂದು ನೋಡುತ್ತಿದ್ದರು.
ರಶ್ಮಿಕಾ ಅವರ ಈ ಚಡಪಡಿಕೆಯನ್ನ ನೋಡಿದ ಅಭಿಮಾನಿಗಳು ರೌಡಿ.. ರೌಡಿ.. ರೌಡಿ.. ಎಂದು ಕೂಗಲು ಆರಂಭಿಸಿದರು. ಆಗ ರಶ್ಮಿಕಾ "ನೀನು ನನ್ನ ಫ್ಯಾಮಿಲಿ ಕಣೋ ಆನಂದ್.. ಯಾಕೋ ಹಿಂಗೆ ತಗ್ಲಾಕ್ತೀಯಾ? ಸರಿ ಬಿಡಪ್ಪಾ ನನ್ನ ಫೇವರಿಟ್ ಹೀರೊ ರೌಡಿನೇ ಎಂದಿದ್ದರು. ನಿನ್ನನ್ನ ಚಿಕ್ಕ ರೌಡಿ (ಆನಂದ್ ದೇವರಕೊಂಡ) ಅಂತ ಕೂಡ ಹೇಳಬಹುದು ಎಂದು ಹೇಳಿದ್ದರು.ರಶ್ಮಿಕಾ ಹಾಗೂ ಆನಂದ್ ದೇವರಕೊಂಡ ನಡುವಿನ ಈ ಕ್ಯೂಟ್ ಸಂಭಾಷಣೆಯ ವೀಡಿಯೋ ಕೂಡ ಮೊನ್ನೆಯೆಲ್ಲ ವೈರಲ್ ಆಗಿತ್ತು


Click it and Unblock the Notifications











