ವಿಜಯ್ ದೇವರಗೊಂಡ ಮನೆ ಪೂಜೆಯಲ್ಲಿ ಅನನ್ಯಾ ಪಾಂಡೆ: ಗಾಸಿಪ್‌ಗೆ ಬಿತ್ತು ಒಗ್ಗರಣೆ!
ಸಿನಿಮಾರಂಗದಲ್ಲಿ ದಿನಕ್ಕೊಂದು ಲವ್ ಸ್ಟೋರಿ, ಬ್ರೇಕಪ್ ಸ್ಟೋರಿ ಸುದ್ದಿ ಆಗುತ್ತಲೇ ಇರುತ್ತದೆ. ಇದು ಬಾಲಿವುಡ್‌ನಲ್ಲಿ ಸರ್ವೇ ಸಾಮಾನ್ಯ. ಯಾರು ಯಾರೊದಿಂಗೆ ಪ್ರೀತಿಯಲ್ಲಿ ಬೀಳ್ತಾರೋ, ಯಾರು ಯಾವಾಗ ಬ್ರೇಕಪ್ ಮಾಡಿಕೊಳ್ಳುತ್ತಾರೋ ಎನ್ನುವುದೇ ಗೊತ್ತಾಗುವುದಿಲ್ಲ. ವಿಚಾರ ಬಹಿರಂಗ ಆದಾಗಲೇ ಅಚ್ಚರಿ ಆಗೋದು.
ಈಗ ಈ ವಿಚಾರದಲ್ಲಿ ಸುದ್ದಿ ಆಗ್ತಾ ಇರೋದು ಮತ್ಯಾರು ಅಲ್ಲ. ನಟ ವಿಜಯ್ ದೇವರಕೊಂಡ. ಹೌದು, ವಿಜಯ್ ದೇವರಕೊಂಡ ಇತ್ತೀಚೆಗೆ ತಮ್ಮ ಮುಂದಿನ ಸಿನಿಮಾ 'ಲೈಗರ್' ವಿಚಾರವಾಗಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಇದರ ಜೊತೆಗೆ ಈ ಚಿತ್ರದ ನಾಯಕಿ ಅನನ್ಯಾ ಪಾಂಡೆ ಜೊತೆಗೂ ಸುದ್ದಿ ಆಗುತ್ತಿದ್ದಾರೆ.
ಅನನ್ಯಾ ಪಾಂಡೆ ಮತ್ತು ವಿಜಯ್ ದೇವರಕೊಂಡ ಹೆಸರು ಒಟ್ಟಿಗೆ ಕೇಳಿ ಬರಲು ಕಾರಣ 'ಲೈಗರ್' ಸಿನಿಮಾ. ಜೊತೆಗೆ ಇವರ ನಡುವೆ ಹೊಸ ಗುಸು, ಗುಸು ಕೂಡ ಕೇಳಿ ಬಂದಿತ್ತು. ಅನನ್ಯಾ ಪಾಂಡೆ ವಿಜಯ್ ಮನೆಗೆ ಭೇಟಿ ಕೊಟ್ಟಿದ್ದು ಗಾಳಿ ಸುದ್ದಿಗೆ ಒಗ್ಗರಣೆ ಹಾಕಿದಂತಾಗಿದೆ.

ವಿಜಯ್ ಮನೆಯ ಪೂಜೆಯಲ್ಲಿ ಅನನ್ಯಾ ಪಾಂಡೆ!
ಅನನ್ಯಾ ಪಾಂಡೆ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಸಿನಿಮಾ ಕೆಲಸಗಳ ಹೊರತಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್ ದೇವರಕೊಂಡ ಮನೆಗೆ ಭೇಟಿ ಕೊಟ್ಟ ಅನನ್ಯಾ ಪಾಂಡೆ, ವಿಜಯ್ ಮನೆಯ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಅವ್ರ ಅಮ್ಮನನ್ನೂ ಭೇಟಿ ಮಾಡಿದ್ದಾರೆ ಅನನ್ಯಾ ಪಾಂಡೆ. ವಿಜಯ್ ಮತ್ತು ಅನನ್ಯಾ ಪಾಂಡೆ ಪೂಜೆಗೆ ಕುಳಿತಿರುವ ಫೋಟೊಗಳು ವೈರಲ್ ಆಗಿವೆ.

ಲೈಗರ್ ಸಿನಿಮಾ ರಿಲೀಸ್‌ಗಾಗಿ ಪೂಜೆ!
'ಲೈಗರ್' ಸಿನಿಮಾ ರಿಲೀಸ್ ಬೆನ್ನಲ್ಲಿ ವಿಜಯ್ ದೇವರಕೊಂಡ ತಾಯಿ ವಿಶೇಷ ಪೂಜೆಯನ್ನು ಹಮ್ಮಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆಗೆ ರಕ್ಷೆ ಕಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ವಿಜಯ್ ದೇವರಕೊಂಡ "ಈ ಇಡೀ ತಿಂಗಳು ಭಾರತದಾದ್ಯಂತ ಪ್ರವಾಸ ಮಾಡಬೇಕಿದೆ. ಈಗಾಗಲೇ ಸಾಕಷ್ಟು ಪ್ರೀತಿ ಸಿಕ್ಕಿದೆ. ಆದರೆ ಈ ಪೂಜೆ ಮಾಡವುದು ಅಮ್ಮನ ಬಯಕೆ. ನಮಗೆಲ್ಲಾ ಪವಿತ್ರವಾದ ರಕ್ಷೆಯನ್ನು ಕಟ್ಟಿದ್ದಾರೆ. ಅವರು ಈಗ ನೆಮ್ಮದಿಯ ನಿದ್ರೆ ಮಾಡುತ್ತಾರೆ. ನಾವು ನಮ್ಮ ಪ್ರವಾಸ ಮುಂದುವರೆಸುತ್ತೇವೆ." ಎಂದು ಬರೆದುಕೊಂಡಿದ್ದಾರೆ.

ವಿಜಯ್ ಅಮ್ಮನಿಗೆ ಅನನ್ಯಾ ಧನ್ಯವಾದ!
ಹೈದರಾಬಾದ್‌ನಲ್ಲಿರುವ ವಿಜಯ್ ದೇವರಕೊಂಡ ಮನೆಗೆ ಭೇಟಿ ಕೊಟ್ಟು, ಪೂಜೆಯಲ್ಲಿ ಭಾಗಿಯಾದ ಬಗ್ಗೆ ನಟಿ ಅನನ್ಯಾ ಪಾಂಡೆ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿಕೊಂಡ ಅನನ್ಯಾ ಪಾಂಡೆ, "ವಿಜಯ್ ಅವ್ರ ಅಮ್ಮನಿಂದ ಆಶೀರ್ವಾದ ಪಡೆದೆ. ಲೈಗರ್ ಚಿತ್ರಕ್ಕಾಗಿ ಹೈದ್ರಾಬಾದ್‌ನಲ್ಲಿ ವಿಜಯ್ ಮನೆಯಲ್ಲಿ ನಡೆದ ಪೂಜೆಯಲ್ಲಿ ಭಾಗಿ ಆದೆ. ಧನ್ಯವಾದಗಳು ಆಂಟಿ" ಎಂದು ಬರೆದುಕೊಂಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ವಿಜಯ್ ದೇವಕೊಂಡ, ಅನನ್ಯಾ ಪಾಂಡೆ!
ಸದ್ಯಕ್ಕೆ ಬಾಲಿವುಡ್‌ನಲ್ಲಿ ಹೆಚ್ಚಾಗಿ ಹರಿದಾಡುತ್ತಿರುವ ಹಾಟ್ ನ್ಯೂಸ್ ಎಂದರೆ ಅದು ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಹೊಸ ಲವ್ ಗಾಸಿಪ್. ಈ ಜೋಡಿ ಇದೀಗ ಬಾಲಿವುಡ್‌ನ ಹಾಟ್ ಕಪಲ್ ಅಂತಲೇ ಕರೆಸಿಕೊಳ್ಳುತ್ತಿದೆ. 'ಲೈಗರ್' ಸಿನಿಮಾದಲ್ಲಿ ಒಟ್ಟಿಗೆ ನಟಿಸಿರುವ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ವೈಯಕ್ತಿಕ ಬದುಕಿನಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರಂತೆ. ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಈ ಜೋಡಿ ಮತ್ತಷ್ಟು ಪರಸ್ಪರ ಹತ್ತಿರವಾಗಿದೆ ಎನ್ನುವುದರ ಜೊತೆಗೆ ಈ ಜೋಡಿಯ ಹೊಸ ಲವ್ ಗಾಸಿಪ್ ಕೂಡ ಶುರುವಾಗಿಬಿಟ್ಟಿದೆ.


Click it and Unblock the Notifications











