Anasuya Bharadwaj: ಬಿಕ್ಕಿ ಬಿಕ್ಕಿ ಅತ್ತ ಅನಸೂಯಾ ಭಾರಧ್ವಜ್: ವಿಡಿಯೋ ಫುಲ್ ವೈರಲ್
'ರಂಗಸ್ಥಳಂ' ಚಿತ್ರದಲ್ಲಿ ರಂಗಮ್ಮತ್ತ ಪಾತ್ರದಲ್ಲಿ ನಟಿಸಿ ಸಿನಿರಸಿಕರ ಮನಗೆದ್ದ ನಟಿ ಅನಸೂಯಾ ಭಾರಧ್ವಜ್. ತೆಲುಗು ಕಿರುತೆರೆ ನಿರೂಪಕಿಯಾಗಿ ಗಮನ ಸೆಳೆದ ಚೆಲುವೆ ಬಳಿಕ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಚೆಲುವೆ ಆಗ್ಗಿಂದಾಗ್ಗೆ ವಿಡಿಯೋ, ಫೋಟೊ ಶೇರ್ ಮಾಡುತ್ತಿರುತ್ತಾರೆ. ಸದ್ಯ ಆಕೆ ಬಿಕ್ಕಿ ಬಿಕ್ಕಿ ಅತ್ತಿರುವ ವಿಡಿಯೊ ಪೋಸ್ಟ್ ಮಾಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಅನಸೂಯ ಕಿರುತೆರೆ ನಿರೂಪಣೆ ಬಿಟ್ಟು ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದ್ದಾರೆ. 'ಪುಷ್ಪ' ಚಿತ್ರದಲ್ಲಿ ದ್ರಾಕ್ಷಾಯಿಣಿ ಪಾತ್ರದಲ್ಲಿ ಎಲ್ಲರ ಹುಬ್ಬೇರಿಸಿದ್ದ ಚೆಲುವೆ ಸೀಕ್ವೆಲ್‌ನಲ್ಲಿ ಆ ಪಾತ್ರ ಮುಂದುವರೆಸಿದ್ದಾರೆ. ಕೆಲ ಐಟಂ ಸಾಂಗ್‌ಗಳನ್ನೂ ಹೆಜ್ಜೆ ಹಾಕಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳಿಗೆ ತಲೆ ಕೆಡಿಸಿಕೊಳ್ಳದೇ ಬೋಲ್ಡ್ ಫೋಟೊ, ವಿಡಿಯೋಗಳನ್ನು ತೇಲಿಬಿಡುತ್ತಿದ್ದ ಚೆಲುವೆ ಏಕಾಏಕಿ ಶಾಕ್ ಕೊಟ್ಟಿದ್ದಾರೆ.

ಸದ್ಯ ಹೊಸ ಪೋಷ್ಟ್‌ನಲ್ಲಿ ಅನಸೂಯಾ ತನ್ನ ಅಳಲು ತೋಡಿಕೊಂಡಿದ್ದಾರೆ. ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿ ನಿರಂತರವಾಗಿ ಕಣ್ಣೀರು ಹಾಕಿದ್ದಾರೆ. ಅನಸೂಯಾ ಹಿಂದೆಂದೂ ಕಾಣದಂತ ರೀತಿಯಲ್ಲಿ ಕಣ್ಣೀರು ಹಾಕುವ ವಿಡಿಯೋ ಪೋಸ್ಟ್ ಹಾಕಿರುವುದು ಕೆಲವರಿಗೆ ಶಾಕ್ ತಂದಿದೆ. ತನ್ನ ಜೀವನದಲ್ಲಿಯೂ ಇಂತಹ ಘಟನೆಗಳು ನಡೆಯುತ್ತವೆ, ಮತ್ತು ಅವುಗಳನ್ನು ಎದುರಿಸಿದ್ದೇನೆ, ತನ್ನ ಜೀವನದಲ್ಲೂ ನೋವು, ಕಣ್ಣೀರನ್ನು ಎದುರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಜಗತ್ತಿನಲ್ಲಿ ಎಷ್ಟೇ ದೊಡ್ಡವರಾಗಿರಲಿ ಅಥವಾ ಸಾಮಾನ್ಯ ಜನರಿರಲಿ, ಎಲ್ಲರಿಗೂ ಸಮಸ್ಯೆಗಳು ಇರುತ್ತವೆ. ಪ್ರತಿಯೊಬ್ಬರ ಜೀವನದಲ್ಲೂ ಕಷ್ಟಗಳು ಇದ್ದೇ ಇರುತ್ತವೆ. ಆದರೆ ಅದನ್ನು ಧೈರ್ಯದಿಂದ ಎದುರಿಸಬೇಕು. ನೋವು ವ್ಯಕ್ತಪಡಿಸಲು ಕಷ್ಟಪಟ್ಟು ಅಳುವುದರಲ್ಲಿ ತಪ್ಪೇನಿಲ್ಲ, ಚೆನ್ನಾಗಿ ಅಳುವುದು ಮತ್ತು ಎಲ್ಲಾ ನೋವನ್ನು ಹೊರಹಾಕಿ ಸಹಜ ಸ್ಥಿತಿಗೆ ಬರಬೇಕು. ಮತ್ತೆ ಸ್ಟ್ರಾಂಗ್ ಆಗಿ ಕಂಬ್ಯಾಕ್ ಮಾಡಬೇಕು. ನೋವನ್ನು ಬಿಟ್ಟುಬಿಡಲು ಅಳುವುದರಲ್ಲಿ ತಪ್ಪೇನಿಲ್ಲ, ಇದೇ ವೇಳೆ ನೋವು ಮತ್ತು ಕಣ್ಣೀರು ಇದೆ ಎಂದು ಎದೆಗುಂದಬಾರದು ಎಂದು ಬರೆದುಕೊಂಡಿದ್ದಾರೆ.
"ಹಲೋ, ನೀವೆಲ್ಲಾ ಆರಾಮಾಗಿ ಇದ್ದೀರಾ ಅಂದುಕೊಂಡಿದ್ದೇನೆ. ನನ್ನ ಪೋಸ್ಟ್ ನೋಡಿ ಗೊಂದಲಕ್ಕೆ ಈಡಾಗಿರುತ್ತೀರಾ ಎಂದು ಗೊತ್ತು. ನನಗೆ ಗೊತ್ತಿರುವಂತೆ ಸೋಶಿಯಲ್ ಮೀಡಿಯಾ ಫ್ಲಾಟ್‌ಪಾರ್ಮ್ ಅನ್ನೋದು ಸಮಾಚಾರ ಹಂಚಿಕೊಳ್ಳಲು ಇವೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ಇದ್ದರೂ ಒಬ್ಬರನ್ನು ಒಬ್ಬರು ಸಂಪರ್ಕಿಸಲು, ಒಬ್ಬರಿಗೊಬ್ಬರು ಇದ್ದೀವಿ ಎಂದು ಹೇಳಲು, ಮಾಹಿತಿ ಹಂಚಿಕೊಳ್ಳಲು, ಜೀವನ ವಿಧಾನ ಸಂಪ್ರದಾಯ, ಸಂತೋ ಹಂಚಿಕೊಳ್ಳಲು ಸೋಶಿಯಲ್ ಮೀಡಿಯಾ ಇದೆ. ಅಚ್ಚರಿ ಏನು ಅಂದರೆ ನಿಜಕ್ಕೂ ಇದೇ ನಡೆಯುತ್ತಾ?
ಅಷ್ಟಕ್ಕೂ ನಾನು ಈ ಪೋಸ್ಟ್ ಯಾಕೆ ಮಾಡ್ತೀದ್ದೀನಿ ಅಂದರೆ, ನಾನು ಯಾವುದೇ ಫೋಟೊಶೂಟ್ ಮಾಡಿದರೂ ಸುಮ್ಮನೆ ಫೋಟೊ ಕ್ಲಿಕ್ಕಿಸಿಕೊಂಡರೂ, ಡ್ಯಾನ್ಸ್ ಮಾಡಿದ್ದರೂ, ನಕ್ಕರೂ, ಕೌಂಟರ್ ಕೊಟ್ಟರೂ, ಏನೇ ಇದ್ದರೂ ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತೇನೆ. ಯಾಕಂದರೆ ಅದೆನ್ನ ನನ್ನ ಜೀವನದ ಭಾಗ. ನನ್ನ ಜೀವನದಲ್ಲಿ ನೋವಿನ ವಿಷಯಗಳು ಇವೆ. ಆಗ ನಾನು ಕುಗ್ಗಿಹೋಗಿ, ಕಣ್ಣೀರು ಹಾಕಿದೆ. ಅದನ್ನು ನಿಮ್ಮೊಟ್ಟಿಗೆ ಹಂಚಿಕೊಂಡೆ. ನನ್ನ ಜೀವನದಲ್ಲೂ ಇಂತಹ ದಿನಗಳು ಇರುತ್ತವೆ ಎಂದು ತಿಳಿಸಲು ಬಯಸಿದೆ.
ಮಾನವನ ಜೀವನ ಅಂದಮೇಲೆ ಎಲ್ಲವೂ ಇರುತ್ತದೆ. ಒಬ್ಬ ಸೆಲೆಬ್ರೆಟಿಯಾಗಿ ನಾನು ಎಮೋಷನ್ ಬ್ಯಾಲೆನ್ಸ್ ಮಾಡಿಕೊಳ್ಳಲು ಯತ್ನಿಸಿದೆ. ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದು ಬೇಡ ಎಂದುಕೊಂಡೆ. ಸಾಧ್ಯವಾದಷ್ಟು ಗಟ್ಟಿಯಾಗಿ ಇರಬೇಕು ಎಂದುಕೊಂಡೆ. ಹಾಗಿರುವುದೇ ನಿಜವಾಗ ಬಲ ಎಂದುಕೊಂಡೆ. ಆದರೆ ಅದು ನಿಜವಲ್ಲ. ಸದ್ಯಕ್ಕೆ ನನ್ನ ನೋವನ್ನು ಹೊರಹಾಕುವುದೇ ನನ್ನ ಬಲ. ನನ್ನ ನೋವನ್ನೆಲ್ಲಾ ಕಣ್ಣೀರಿನ ರೂಪದಲ್ಲಿ ಹೊರಹಾಕಿ ಮತ್ತೆ ಎದ್ದು ನಿಲ್ಲುತ್ತೇನೆ. ಅದು ಅಷ್ಟು ಸುಲಭ ಅಲ್ಲ.

ಎಲ್ಲರಲ್ಲೂ ನಾನು ಕೇಳಿಕೊಳ್ಳುವುದು ಇಷ್ಟೆ. ದಯವಿಷ್ಟು ಸಹೃದಯದಿಂದ ವ್ಯವಹರಿಸಿ. ಮತ್ತೊಬ್ಬರು ಯಾವ ಪರಿಸ್ಥಿತಿಯಲ್ಲಿ ಇದ್ದಾರೆ ಅನ್ನೋದು ಗೊತ್ತಿಲ್ಲದೇ, ಬಾಯಿಗೆ ಬಂದಂತೆ ಮಾತನಾಡಬೇಡಿ. ಕೊಂಚ ಆಲೋಚಿಸಿ. ಈ ವಿಡಿಯೋ 5 ದಿನಗಳ ಹಿಂದಿನದ್ದು. ಸದ್ಯಕ್ಕೆ ನಾನು ಚೆನ್ನಾಗಿಯೇ ಇದ್ದೀನಿ." ಎಂದು ಅನಸೂಯಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಪತಿ ಹಾಗೂ ಮಕ್ಳಳ ಜೊತೆ ಆಕೆ ವಿದೇಶ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಬಿಕಿನಿಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಹುಬ್ಬೇರಿಸಿದ್ದರು.


Click it and Unblock the Notifications











