"ನಿನ್ನ ರೇಟ್ ಎಷ್ಟು" ? ಎಂದವನಿಗೆ ಮುಟ್ಟಿ ನೋಡಿಕೊಳ್ಳುವಂಥಾ ಉತ್ತರ ಕೊಟ್ಟ ಅನಸೂಯ!

ಟಾಲಿವುಡ್‌ನಲ್ಲಿ ಆಂಕರ್ ಅನಸೂಯ ವರ್ಸಸ್ ವಿಜಯ್ ದೇವರಕೊಂಡ ಫ್ಯಾನ್ಸ್ ವಾರ್ ತಾರಕಕ್ಕೇರಿದೆ. 'ಲೈಗರ್' ಸಿನಿಮಾ ರಿಲೀಸ್ ಬೆನ್ನಲ್ಲೇ ವಿಜಯ್ ದೇವರಕೊಂಡನ ಟಾರ್ಗೆಟ್ ಮಾಡಿ ನಟಿ, ನಿರೂಪಕಿ ಅನಸೂಯ ಮಾಡಿದ್ದ ಟ್ವೀಟ್‌ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಕೆಲವರು ಆಕೆಯ ವಿರುದ್ಧ ತಿರುಗಿ ಬಿದ್ದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು.

'ಲೈಗರ್' ಚಿತ್ರಕ್ಕೆ ನೆಗೆಟಿವ್ ಟಾಕ್ ಬಂದ ಹಿನ್ನೆಲೆಯಲ್ಲಿ 'ತಾಯಿಗೆ ಅಮಾಮಾನ ಮಾಡಿದರೆ ಆ ಕರ್ಮ ಸುಮ್ಮನೆ ಬಿಡುವುದಿಲ್ಲ' ಎಂದು ಅನಸೂಯ ಟ್ವೀಟ್ ಮಾಡಿದ್ದರು. ಸಿನಿಮಾ ಸೋಲಿನಿಂದ ಹೀರೋ ಕಂಗೆಟ್ಟಿದ್ದರೆ ನೀನು ಸಂತೋಷ ಪಡುತ್ತಿದ್ದೀಯಾ ಎಂದು ಕೆಲವರು ಖ್ಯಾತೆ ತೆಗೆದಿದ್ದರು. ಆಕೆಯನ್ನು 'ಆಂಟಿ' ಎಂದು ಸಂಬೋಧಿಸಿ ಮೀಮ್ಸ್‌ ಕ್ರಿಯೇಟ್ ಮಾಡಿ ಟ್ವೀಟ್‌ಗಳ ಸುರಿಮಳೆ ಸುರಿಸಿ ಟ್ರೋಲ್ ಮಾಡಿದ್ದರು. ಅನಸೂಯ ಸಹ ಖಡಕ್ಕಾಗಿ ಕೌಂಟರ್ ಕೊಡುತ್ತಾ ಬರ್ತಿದ್ದಾರೆ. ಕೆಟ್ಟದಾಗಿ ಟ್ವೀಟ್ ಮಾಡಿದವರ ವಿರುದ್ಧ ಸೈಬರ್ ಠಾಣೆಯಲ್ಲಿ ದೂರು ನೀಡುವುದಾಗಿ ಹೇಳಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಕೆಲವರು ಮನಸೋಇಚ್ಛೆ ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ. ಅದರಲ್ಲಿ ಒಬ್ಬ ಹದ್ದು ಮೀರಿ ಕೆಟ್ಟದಾಗಿ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಆಕೆ ಸರಿಯಾಗಿಯೇ ತಿರುಗೇಟು ನೀಡಿದ್ದಾಳೆ.

ಈ ಟ್ವೀಟ್‌ ವಾರ್‌ನಲ್ಲಿ ಸಾಕಷ್ಟು ಜನ ನಿರೂಪಕಿ ಅನಸೂಯ ಬೆಂಬಲಕ್ಕೆ ನಿಂತಿದ್ದಾರೆ. 'ಕೋಟಿಗೊಬ್ಬ'-3 ಚಿತ್ರದಲ್ಲಿ ನಟಿಸಿದ್ದ ಶ್ರದ್ಧಾ ದಾಸ್ ಕೂಡ ಆಕೆಯ ಪರ ಟ್ವೀಟ್‌ ಮಾಡಿದ್ದರು. ಇದಕ್ಕೆ ಗರಂ ಆದ ಕೆಲವರು ಆಕೆಯನ್ನು ಟ್ರೋಲ್ ಮಾಡಿದ್ದರು. ಈ ಟ್ರೋಲ್ ಗದ್ದಲದಲ್ಲಿ ತಪ್ಪೆಲ್ಲಾ ಅನಸೂಯದು. ನೀನು ಸುಮ್ಮನೆ ಇದರಲ್ಲಿ ತಲೆ ಹಾಕಬೇಡ ಎಂದರು. ಇನ್ನು ಅನಸೂಯ ತಮ್ಮ ಬಗ್ಗೆ ಕೆಟ್ಟದಾಗಿ ಟ್ವೀಟ್ ಮಾಡುತ್ತಿರುವವರಿಗೆ ರಿಪ್ಲೇ ಮಾಡಿ ಕೌಂಟರ್‌ ಕೊಡುತ್ತಿದ್ದಾರೆ.

ನಿನ್ನ ರೇಟ್ ಎಷ್ಟು ಎಂದವನಿಗೆ ತಿರುಗೇಟು!

ನಿನ್ನ ರೇಟ್ ಎಷ್ಟು ಎಂದವನಿಗೆ ತಿರುಗೇಟು!

ನಾನು ಯಾಕಾದರೂ ವಿಜಯ್ ದೇವರಕೊಂಡನ ಕೆಣಕಿದೆನೋ ಎಂದು ಪಶ್ಚಾತಾಪ ಪಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಅನಸೂಯನ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಅದರಲ್ಲೂ ಒಬ್ಬ ನೆಟ್ಟಿನ 'ನಿನ್ನ ರೇಟ್ ಎಷ್ಟು' ಎನ್ನುವಂತೆ ಟ್ವೀಟ್ ಮಾಡಿದ್ದಾನೆ. ಇದಕ್ಕೆ ಜವಾಬು ಕೊಟ್ಟಿರುವ ಅನಸೂಯ "ನಿಮ್ಮ ತಂಗಿಯನ್ನೋ ಅಥವಾ ನಿಮಗೆ ಮದುವೆ ಆಗಿದ್ದು, ಅಥವಾ ತಂಗಿಗೆ ಒಂದು ದಿನಕ್ಕೆ ಎಷ್ಟು? ಅದೇ ಒಂದು ದಿನ ಆಫೀಸ್‌ನಲ್ಲಿ ಎಷ್ಟು? ಎಂದು ಕೇಳಿದರೆ ಏನ್ ಹೇಳುತ್ತೀರಾ?" ತಿರುಗೇಟು ನೀಡಿದ್ದಾರೆ.

ಈ ಟ್ವೀಟ್ ಗಲಾಟೆ ಶುರುವಾಗಿದ್ದು ಹೇಗೆ?

ಈ ಟ್ವೀಟ್ ಗಲಾಟೆ ಶುರುವಾಗಿದ್ದು ಹೇಗೆ?

5 ವರ್ಷಗಳ ಹಿಂದೆ ವಿಜಯ್ ದೇವರಕೊಂಡ ನಟನೆಯ 'ಅರ್ಜುನ್ ರೆಡ್ಡಿ' ಸಿನಿಮಾ ರಿಲೀಸ್ ಆಗಿತ್ತು. ಚಿತ್ರದಲ್ಲಿ ವಿಜಯ್ ದೇವರಕೊಂಡ ಮ್ಯಾನರಿಸಂ ಹಾಗೂ ಆಟಿಟ್ಯೂಡ್ ಬಹಳ ವಿಭಿನ್ನವಾಗಿ ಇತ್ತು. ಸಿಕ್ಕಾಪಟ್ಟೆ ರಗಡ್ ಆಗಿ ಕ್ಯಾರೆಕ್ಟರೈಸೇಷನ್ ಮಾಡಲಾಗಿತ್ತು. ಚಿತ್ರದ ದೃಶ್ಯವೊಂದರಲ್ಲಿ ತಾಯಿಯನ್ನು ಬೈಯುವಂತಹ ಸಂಭಾಷಣೆ ಇತ್ತು. ಸೆನ್ಸಾರ್ ಮಂಡಳಿ ಇದನ್ನು ಮ್ಯೂಟ್ ಮಾಡಿಸಿತ್ತು. ಆದರೆ ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಇದೇ ಪದವನ್ನು ಅಭಿಮಾನಿಗಳ ಬಾಯಲ್ಲಿ ವಿಜಯ್ ದೇವರಕೊಂಡ ಹೇಳಿಸಿದ್ದರು. ಇದಕ್ಕೆ ನಿರೂಪಕಿ ಅನಸೂಯ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂದು ತಾಯಿ ಬಗ್ಗೆ ದೇವರಕೊಂಡ ಬೈದ ಪಾಪಕ್ಕೆ 'ಲೈಗರ್' ಚಿತ್ರ ಸೋತಿದೆ ಅನ್ನುವ ಅರ್ಥದಲ್ಲಿ ಅನಸೂಯ ಟ್ವೀಟ್ ಮಾಡಿದ್ದರು.

ಅನಸೂಯಾಗೆ ನಟಿ ಶ್ರದ್ಧಾ ದಾಸ್ ಬೆಂಬಲ

ಅನಸೂಯಾಗೆ ನಟಿ ಶ್ರದ್ಧಾ ದಾಸ್ ಬೆಂಬಲ

ವಯಸ್ಸಿನ ಕಾರಣಕ್ಕೆ ಆಂಟಿ ಎಂದು ಅವಮಾನ ಮಾಡಬೇಡಿ ಎಂದು ಅನಸೂಯ ಹೇಳುತ್ತಾ ಬರುತ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿ ನಟಿ ಶ್ರದ್ಧಾ ದಾಸ್ ಟ್ವೀಟ್ ಮಾಡಿದ್ದರು. "ನಿನಗಿಂತ ಅರ್ಧ ವಯಸ್ಸಿಯ ಹುಡುಗಿಯರಿಗಿಂತ ನೀನೇ ಚೆನ್ನಾಗಿದ್ದೀಯಾ. ನಿನಗಿಂತ ಹೆಚ್ಚು ವಯಸ್ಸಿನ ಅಂಕಲ್‌ಗಳಿಗಿಂತ ನೀನೇ ಹಾಟ್ ಆಗಿ ಕಾಣಿಸುತ್ತೀಯಾ, ನಾನು ಯಾವಾಗಲೂ ನಿನಗೆ ಅಭಿಮಾನಿ" ಎಂದು ಬರೆದುಕೊಂಡಿದ್ದರು. ಇದೇ ಕಾರಣಕ್ಕೆ ನಟಿ ಶ್ರದ್ಧಾ ದಾಸ್‌ನ ಕೆಲವರು ಟ್ರೋಲ್ ಮಾಡಿದ್ದರು.

ಕಿರುತೆರೆಯ ಜನಪ್ರಿಯ ನಿರೂಪಕಿ ಅನಸೂಯ

ಕಿರುತೆರೆಯ ಜನಪ್ರಿಯ ನಿರೂಪಕಿ ಅನಸೂಯ

ಕಿರುತೆರೆಯ 'ಜಬರ್ದಸ್ತ್‌' ಕಾಮಿಡಿ ಶೋ ನಿರೂಪಕಿಯಾಗಿ ಅನಸೂಯ ಭಾರಧ್ವಜ್ ಜನಪ್ರಿಯತೆ ಗಳಿಸಿದರು. ನಂತರ ಒಂದಷ್ಟು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 'ರಂಗಸ್ಥಳಂ' ಹಾಗೂ 'ಪುಷ್ಪ' ಆಕೆಯ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇತ್ತೀಚಿಗೆ 'ಜಬರ್ದಸ್ತ್‌' ಶೋ ಬಿಟ್ಟು ಹೊರ ಬಂದಿರುವ ಅನಸೂಯ ಮತ್ತೊಂದು ವಾಹಿನಿಯಲ್ಲಿ 'ಅಗಟ್ಟುನುಂಟಾವಾ ಈಗಟ್ಟುಕೊಸ್ತಾವಾ' ಅನ್ನುವ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. 'ಪುಷ್ಪ'- 2 ಚಿತ್ರದಲ್ಲೂ ನಟಿಸಲಿದ್ದಾರೆ.

More from Filmibeat

English summary
Anasuya Bharadwaj Gave A Strong Counter To Netizen Who Abused Her. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X