"ಕೆಲವರಿಗೆ ಶರ್ಟು, ಪ್ಯಾಂಟು ಕೂಡ ಸಮಸ್ಯೆ ಆಗ್ಬಿಟ್ಟಿದೆ, ಏನ್ ಮಾಡೋದು"; ಅನಸೂಯಾ ತಿರುಗೇಟು

ತೆಲುಗು ನಟಿ, ನಿರೂಪಕಿ ಅನಸೂಯಾ ಭಾರಧ್ವಜ್ ಇತ್ತೀಚೆಗೆ ಶೋವೊಂದರಲ್ಲಿ ಜಾಕೆಟ್ ತೆಗೆದ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಭಾರೀ ಟ್ರೋಲ್ ಎದುರಿಸುವಂತಾಯಿತು. ಆದರೆ ಅದಕ್ಕೆ ಜಗ್ಗದೇ ಅನಸೂಯಾ ತಿರುಗೇಟು ನೀಡಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಒಂದಷ್ಟು ಟ್ವೀಟ್ ಮಾಡಿದ್ದಾರೆ.

ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿದ್ದರೂ ಅನಸೂಯಾ ಗ್ಲಾಮರ್ ಕಮ್ಮಿ ಆಗಿಲ್ಲ. ಆಫ್‌ ಸ್ಕ್ರೀನ್, ಆನ್‌ ಸ್ಕ್ರೀನ್ ಗ್ಲಾಮರಸ್ ಆಗಿ ಕಾಣಿಸಿಕೊಂಡು ನೋಡುಗರ ಹುಬ್ಬೇರಿಸುತ್ತಾ ಬರುತ್ತಿದ್ದಾರೆ. ಫೋಟೋಶೂಟ್‌ಗಳಲ್ಲಿ ಅಂತೂ ಅನು ಬೋಲ್ಡ್‌ನೆಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ದಿಢೀರ್ ಸ್ಮಾಲ್‌ ಸ್ಕ್ರೀನ್‌ನಿಂದ ದೂರಾಗಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದರು. ಆದರೆ ನಿರೀಕ್ಷಿತ ಮಟ್ಟದಲ್ಲಿ ಅವಕಾಶಗಳು ಸಿಗಲಿಲ್ಲ ಎಂದು ಮತ್ತೆ ಕಿರುತೆರೆಗೆ ವಾಪಸ್ ಆಗಿದ್ದಾರೆ.

Anasuya Bharadwaj hits back at trolls slamming her for removing jacket in tv show

'ಕಿರಾಕ್ ಬಾಯ್ಸ್ ಕಿಲಾಡಿ ಗರ್ಲ್ಸ್' ಎನ್ನುವ ಕಿರುತೆರೆ ಶೋನಲ್ಲಿ ಅನಸೂಯಾ ಕಾಣಿಸಿಕೊಳ್ಳುತ್ತಿದ್ದಾರೆ. ಒಂದಷ್ಟು ಹುಡುಗರು, ಹುಡುಗಿಯರ ತಂಡಗಳ ನಡುವೆ ನಡೆಯುವ ಶೋ ಇದೆ. ಒಬ್ಬರಿಗೊಬ್ಬರು ಟಾಸ್ಕ್‌ಗಳನ್ನು ಕೊಡೋದು ಅದನ್ನು ಮತ್ತೊಂದು ತಂಡ ಹೇಗೆ ಎದುರಿಸುತ್ತದೆ ಎನ್ನುವುದೇ ಶೋ ಕಾನ್ಸೆಪ್ಟ್. ಹುಡುಗರ ತಂಡದ ನಾಯಕತ್ವವನ್ನು ಶೇಖರ್ ಮಾಸ್ಟರ್ ವಹಿಸಿಕೊಂಡಿದ್ದರೆ ಹುಡುಗಿಯರ ತಂಡವನ್ನು ಅನಸೂಯ ಮುನ್ನಡೆಸಲಿದ್ದಾರೆ.

ಟಾಸ್ಕ್‌ಗಳ ವೇಳೆ ಒಬ್ಬರಿಗೊಬ್ಬರು ಸವಾಲು ಹಾಕುವುದು. ಅದನ್ನು ಎದುರಾಳಿ ತಂಡ ಸ್ವೀಕರಿಸುವುದನ್ನು ನೋಡಬಹುದು. ಈ ವೀಕೆಂಡ್‌ನಿಂದಲೇ 'ಕಿರಾಕ್ ಬಾಯ್ಸ್ ಕಿಲಾಡಿ ಗರ್ಲ್ಸ್' ಶೋ ಶುರುವಾಗಲಿದೆ. ಸದ್ಯ ಮೊದಲ ಪ್ರೋಮೊ ರಿಲೀಸ್ ಆಗಿ ವೈರಲ್ ಆಗುತ್ತಿದೆ. ಇದರಲ್ಲಿ ಅನಸೂಯ ತಾವು ತೊಟ್ಟಿದ್ದ ಜಾಕೆಟ್ ತೆಗೆದು ಬೋಲ್ಡ್ ಆಗಿ ಶೇಖರ್ ಮಾಸ್ಟರ್‌ಗೆ ಸವಾಲು ಹಾಕಿರುವುದನ್ನು ನೋಡಬಹುದು. ಕಿರುತೆರೆ ಶೋನಲ್ಲಿ ಇದೆಲ್ಲ ಓವರ್ ಆಯ್ತು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಟ್ರೋಲ್ಸ್ ಬಗ್ಗೆ ಅನಸೂಯಾ ಭಾರಧ್ವಜ್ ಪ್ರತಿಕ್ರಿಯಿಸಿ ತಿರುಗೇಟು ನೀಡಿದ್ದಾರೆ. "ಇದು ನಿಜಕ್ಕೂ ನಾನ್ಸೆನ್ಸ್ ಎಂದು ನೆಟ್ಟಿಗನೊಬ್ಬ ಪೋಸ್ಟ್ ಮಾಡಿದ್ದಾನೆ.. ಏನಾದರೂ ಹೇಳಿದ್ರೆ, ಅನಸೂಯಾ ವಿಕ್ಟಿಮ್ ಕಾರ್ಡ್ ಪ್ಲೇ ಮಾಡುತ್ತಾರೆ ಎಂದಿದ್ದಾನೆ. ಇದನ್ನು ನೋಡಿ "ನೀನು ಹಾಕಿರುವ ಎಮೋಜಿಗಳನ್ನು ನೋಡಿ ನಿನ್ನ ಮೈಂಡ್ ಸೆಟ್.. ನೀನೇಕೆ ಇಂಥ ಕಾಯಿಲೆಯಿಂದ ನರಳುತ್ತಿದ್ದೀಯಾ? ಎಂದು ಗೊತ್ತಾಗುತ್ತದೆ" ಎಂದು ತಿರುಗೇಟು ಕೊಟ್ಟಿದ್ದಾರೆ.

Anasuya Bharadwaj hits back at trolls slamming her for removing jacket in tv show

ಮತ್ತೊಬ್ಬ ನೆಟ್ಟಿಗ ಇನ್ನಷ್ಟು ಖಾರವಾಗಿ ಕಾಮೆಂಟ್ ಮಾಡಿದ್ದಾನೆ. "ನಿಮಗೆ ನಿಜವಾಗಿಯೂ ಅರ್ಥ ಆಗುತ್ತಿಲ್ಲ ಕಣ್ರೀ, ಹೇಗಿದ್ದ ಶೋಗಳು ಹೇಗಾಗುತ್ತಿವೆ. ನಿಮ್ಮ ಪಾತ್ರ ಉತ್ತಮವಾಗಿರಬೇಕು, ಆದರೆ ಕೆಟ್ಟ ಕಡೆ ವಾಲುತ್ತಿದೆ. ಒಬ್ಬ ನಟಿಯಾಗಿ ನೀನು ನನಗೆ ಇಷ್ಟ. ಆದರೆ ಇಂತಹ ಕೆಲಸಗಳನ್ನು ಮಾಡದಿರುವುದು ಒಳಿತು ಎಂದು ಪೋಸ್ಟ್ ಮಾಡಿದ್ದಾನೆ. ಇದಕ್ಕೆ ಅನಸೂಯಾ ರಿಪ್ಲೇ ವೈರಲ್ ಆಗುತ್ತಿದೆ.

ಎಂಟರ್‌ಟೈನ್‌ಮೆಂಟ್ ಇಂಡಸ್ಟ್ರಿಯಲ್ಲಿದ್ದು ನಾವು ಒಂದಷ್ಟು ವಿಚಾರಗಳನ್ನು ಎಕ್ಸ್‌ಪ್ಲೋರ್ ಮಾಡಬೇಕು. ವೀಕ್ಷಕರ ಅಭಿರುಚಿಗೆ ತಕ್ಕಂತೆ ಕೆಲವು ಬದಲಾವಣೆಗಳು ಅನಿವಾರ್ಯ. ನಿಮ್ಮ ಪ್ರತಾಪ ಕಿರುತೆರೆ ಮೇಲೆ ಮಾತ್ರ. ಸಿನಿಮಾಗಳಲ್ಲಿ ಎಷ್ಟೇ ಆಕ್ಷೇಪಾರ್ಹ ವಿಷಯಗಳು ಬಂದರೂ ಬ್ಲಾಕ್ ಬಸ್ಟರ್ ಹಿಟ್ ಮಾಡುತ್ತೀರಿ. ಆದರೆ ಅವರು ಟಿವಿಯಲ್ಲಿ ಬರೀ ಪ್ರೋಮೋ ನೋಡಿ ಜಡ್ಜ್‌ಮೆಂಟ್ ಮಾಡುತ್ತಿದ್ದೀರಾ, ಅದು ಬರೀ ಪ್ರೋಮೊ, ಹಿಂದೆ ಮುಂದೆ ಬೇರೆ ಕಥೆ ಇದೆ. ಅಷ್ಟಕ್ಕೂ ಅದರಲ್ಲಿ ಏನಿದೆ ಅನ್ನೋದು ಅವರವರ ಲಿಮಿಟ್ಸ್‌ಗೆ ಬಿಟ್ಟಿದ್ದು. ಕೆಲವರಿಗೆ ಪ್ಯಾಂಟ್, ಶರ್ಟ್ ಕೂಡ ಸಮಸ್ಯೆಯಾಗಿದೆ. ನಾನು ಏನು ಹೇಳ್ತಿದ್ದೀನಿ ಎನ್ನುವುದು ನಿಮಗೆ ಅರ್ಥವಾಗಿದೆ ಎಂದು ಭಾವಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

'ಜಬರ್ದಸ್ತ್' ಕಾಮಿಡಿ ಶೋನಿಂದ ಅನಸೂಯಗೆ ನೇಮು ಫೇಮು ಸಿಕ್ಕಿತ್ತು. ಬಳಿಕ 'ರಂಗಸ್ಥಳಂ' ಹಾಗೂ 'ಪುಷ್ಪ' ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದರು. ಒಂದಷ್ಟು ಚಿತ್ರಗಳಲ್ಲಿ ಆಕೆ ನಟಿಸುತ್ತಿದ್ದು ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

More from Filmibeat

English summary
Anasuya Bharadwaj reacts on trolls for kiraak boys killadi girls promo;
Read more about: tollywood telugu actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X