"ನನ್ನ ಗ್ಲಾಮರ್ ತೋರಿಸ್ಬೇಕು, ನನಗೆ ನಾಚಿಕೆ ಇಲ್ಲ, ಯಾಕಂದ್ರೆ ಇದು ನನ್ನ ಬಾಡಿ"; ಅನಸೂಯ
ತೆಲುಗು ನಟಿ, ನಿರೂಪಕಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿ ಇರುತ್ತಾರೆ. ತಮ್ಮ ಬೋಲ್ಡ್ ಅವತಾರದಿಂದ ಪದೇ ಪದೆ ಸುದ್ದಿ ಆಗುತ್ತಾರೆ. ಇನ್ನು ಅಷ್ಟೇ ಬೋಲ್ಡ್ ಆಗಿ ಮಾತನಾಡಿ ಗಮನ ಸೆಳೆಯುತ್ತಾರೆ. ಟ್ರೋಲ್ ಮಾಡುವವರಿಗೆ ಖಡಕ್ ತಿರುಗೇಟು ನೀಡುತ್ತಾರೆ.
ಕಿರುತೆರೆಯ ಜಬರ್ದಸ್ತ್ ಶೋ ನಿರೂಪಕಿಯಾಗಿ ಗಮನ ಸೆಳೆದ ಅನಸೂಯ ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. 'ರಂಗಸ್ಥಳಂ' ಚಿತ್ರದ ರಂಗಮ್ಮತ್ತ ಪಾತ್ರ ಒಳ್ಳೆ ಹೆಸರು ತಂದು ಕೊಟ್ಟಿತ್ತು. ಬಳಿಕ 'ಪುಷ್ಪ' ಚಿತ್ರದಲ್ಲಿ ದಾಕ್ಷಾಯಿಣಿ ಆಗಿ ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದರು. ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದ್ದಂತೆ ಕಿರುತೆರೆಗೆ ಗುಡ್‌ಬೈ ಹೇಳಿದ್ದರು. 2 ವರ್ಷಗಳ ಬಳಿಕ ಮತ್ತೆ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದಾರೆ.

'ಕಿರಾಕ್ ಬಾಯ್ಸ್ ಕಿಲಾಡಿ ಗರ್ಲ್ಸ್' ಎನ್ನುವ ರಿಯಾಲಿಟಿ ಶೋನಲ್ಲಿ ಟೀಂ ಲೀಡರ್ ಆಗಿ ಅನಸೂಯ ಭಾಗವಹಿಸುತ್ತಿದ್ದಾರೆ. ಮೊದಲ ಎಪಿಸೋಡ್‌ನಲ್ಲೇ ತೊಟ್ಟಿದ್ದ ಜಾಕೆಟ್ ತೆಗೆದು ಬೋಲ್ಡ್ ಅವತಾರದಲ್ಲಿ ಅನಸೂಯ ಕಾಣಿಸಿಕೊಂಡಿದ್ದರು. ಇದು ಸಖತ್ ವೈರಲ್ ಆಗಿ ಭಾರೀ ಸುದ್ದಿ ಆಗಿತ್ತು.
ಸದ್ಯ 'ಸಿಂಬಾ' ಎನ್ನುವ ಹೊಸ ಚಿತ್ರದಲ್ಲಿ ಅನಸೂಯ ಭಾರಧ್ವಜ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಜಗಪತಿ ಬಾಬು ಜೊತೆಗೆ ಕನ್ನಡ ನಟ ವಶಿಷ್ಠ ಸಿಂಹ ಸಹ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಟ್ರೈಲರ್ ಬಿಡುಗಡೆ ಆಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಸೂಯ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಒಳ್ಳೆ ಅವಕಾಶಗಳನ್ನು ಯಾಕೆ ಕೈಬಿಡುತ್ತಿದ್ದೀರಾ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅನಸೂಯ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. "ರಿಪಿಟೇಶನ್ ಒಂದು ಕಾರಣ. ನನಗೆ ಬಂದಿರುವ ಪಾತ್ರಗಳೇ ಮತ್ತೆ ಬರುತ್ತಿವೆ. ಆದರೆ ನಾನು ನೋ ಎನ್ನುತ್ತೇನೆ. ರಂಗಮ್ಮನತ್ತ ರೀತಿಯ ಪಾತ್ರಗಳು ನನಗೆ ಬಹಳ ಬಂದವು. ತೆಲುಗು ನಟಿಯಾಗಿ ಬೇರೆ ಭಾಷೆಗಳಿಂದ ಅವಕಾಶ ಬರುತ್ತಿರುವುದು ಖುಷಿಯಾಗುತ್ತಿದೆ"
"ನಾನು ಎಲ್ಲಾ ಪಾತ್ರ ಒಪ್ಪಿಕೊಳ್ಳಲ್ಲ. ನಾನು ನನ್ನ ಗ್ಲಾಮರ್ ಪ್ರೊಜೆಕ್ಟ್ ಮಾಡಬೇಕು ಎಂದುಕೊಂಡಿದ್ದೇನೆ. ನಾನು ಮೇಂಟೇನ್ ಮಾಡುವಷ್ಟು ದಿನ ಹೀಗೆ ಶೋ ಆಫ್ ಮಾಡ್ತಿದೆ. ಈ ವಿಷಯದಲ್ಲಿ ನನಗೆ ನಾಚಿಕೆಯಿಲ್ಲ. ಯಾಕಂದರೆ ಇದು ನನ್ನ ಬಾಡಿ. ಇದೇ ನಾನು. ನನ್ನಂತೆ ಯಾರು ಇಲ್ಲ ಅಂದುಕೊಳ್ತೀನಿ" ಎಂದು ಅನಸೂಯ ಉತ್ತರ ಕೊಟ್ಟಿದ್ದಾರೆ.
ಬೇಡ ಎನ್ನುತ್ತಾ ಕೂತಿದ್ದರೆ ಅವಕಾಶಗಳು ವ್ಯರ್ಥ ಆಗಲ್ವಾ? ಇದಕ್ಕೆ ನಿಮ್ಮ ಪತಿ ಏನು ಹೇಳಲ್ವಾ?ಎನ್ನುವ ಪ್ರಶ್ನೆಗೆ "ಆ ತರ ಏನು ಇಲ್ಲ. ಒಳ್ಳೆ ಅವಕಾಶಗಳು ಬಂದರೆ ಭಾರೀ ಸಂಭಾವನೆಯನ್ನೇ ಕೇಳ್ತೀನಿ ಬಿಡಲ್ಲ, ಇನ್ನು ನನ್ನ ಸಿನಿಮಾಗಳ ವಿಚಾರದಲ್ಲಿ ನಮ್ಮ ಪತಿ ತಲೆ ಹಾಕಲ್ಲ. ಅವರು ಬಂಗಾರ. ಈ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ" ಎಂದು ಅನುಸೂಯ ಪ್ರತಿಕ್ರಿಯಿಸಿದ್ದಾರೆ.
ಕೆಲ ದಿನಗಳ ಹಿಂದೆ ವಿಜಯ್ ದೇವರಕೊಂಡ ಫ್ಯಾನ್ಸ್ ಜೊತೆ ಅನಸೂಯ ಸಂಘರ್ಷ ಏರ್ಪಟ್ಟಿತ್ತು. ಸೋಶಿಯಲ್ ಮೀಡಿಯಾದಲ್ಲಿ ದೇವರಕೊಂಡ ಫ್ಯಾನ್ಸ್ ಆಕೆಯನ್ನು ಟ್ರೋಲ್ ಮಾಡಿದ್ದರು. ಆಂಟಿ ಎಂದು ಕರೆದು ಹೀಯಾಳಿಸಿದ್ದರು. ಇದಕ್ಕೆ ಆಕೆ ಕೂಡ ಖಡಕ್ ಕೌಂಟರ್ ಕೊಟ್ಟಿದ್ದರು. ಈ ಬಗ್ಗೆ ಕೂಡ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಎದುರಾಗಿತ್ತು.
"ನಾನು ಇದಕ್ಕೆ ಇಂಪಾರ್ಟೆನ್ಸ್ ಕೊಡುವುದಿಲ್ಲ. ಸಿನಿಮಾಗಳೊಂದಿಗೆ ಹೇಗೆ ಮೆಸೇಜ್ ಕೊಡುತ್ತಾರೋ ಅದೇ ರೀತಿ ಹೇಳಬೇಕು ಎಂದು ನಾನು ಆಗ ಪ್ರತಿಕ್ರಿಯಿಸಿದ್ದೆ. ಸ್ಟೇಜ್ ಮೇನರ್ಸ್ ಬಗ್ಗೆ ನಾನು ಆ ದಿನ ಮಾತನಾಡಿದ್ದೆ. ಲೈಮ್ ಲೈಟ್‌ನಲ್ಲಿದ್ದಾಗ ಸರಿಯಾಗಿ ಇರಬೇಕು. ಆದರೆ ಒಬ್ಬೊಬ್ಬರು ಒಂದೊಂದು ರೀತಿ ಇರ್ತಾರೆ. ಕೆಲವೊಮ್ಮೆ ಮಿತಿಮೀರಿದಾಗ ಎಲ್ಲರಿಗೂ ಅರ್ಥವಾಗುತ್ತದೆ. ಆ ದಿನ ನೀವ್ಯಾರು ಮಾತನಾಡಲಿಲ್ಲ. ಅದಕ್ಕೆ ನಾನು ಮಾತನಾಡಿದೆ" ಎಂದು ಅನಸೂಯಾ ಹೇಳಿದ್ದಾರೆ.


Click it and Unblock the Notifications











