Anasuya Bharadwaj: "ಇವತ್ತು ಆಂಟಿ ಎನ್ನುವವರೇ ಮುಂದೆ ರೇ*ಸ್ಟ್‌ಗಳಾಗುತ್ತಾರೆ": ಅನಸೂಯಾ ಆಕ್ರೋಶ
ತೆಲುಗು ನಿರೂಪಕಿ, ನಟಿ ಅನಸೂಯಾ ಭಾರಧ್ವಜ್ ಇತ್ತೀಚೆಗೆ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಇದೇ ಕಾರಣಕ್ಕೆ ಕಿರುತೆರೆ ನಿರೂಪಣೆಗೂ ಗುಡ್‌ಬೈ ಹೇಳಿದ್ದಾರೆ. ಸದ್ಯ 'ಪುಷ್ಪ'- 2 ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಅನಸೂಯ ಸಿಕ್ಕಾಪಟ್ಟೆ ಟ್ರೋಲ್‌ಗಳನ್ನು ಎದುರಿಸುತ್ತಿರುತ್ತಾರೆ.
ಬೋಲ್ಡ್ ಫೋಟೊಶೂಟ್‌ಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುವ ಅನಸೂಯಾ ಟ್ರೋಲ್ ಮಾಡುವವರಿಗೆ ಖಡಕ್ ತಿರುಗೇಟು ಕೊಡುತ್ತಾರೆ. ಇನ್ನು ಕೆಲವರು ಅನುಸೂಯ ಅವರನ್ನು ಆಂಟಿ ಎಂದು ಕರೆಯುತ್ತಿದ್ದಾರೆ. ಈ ಬಗ್ಗೆ ಆಕೆ ಸಾಕಷ್ಟು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಂಟಿ ಎಂದು ಕೆಟ್ಟು ದೃಷ್ಟಿಯಿಂದ ಕರೆಯುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೇ ತಿರುಗೇಟು ಕೂಡ ಕೊಡುತ್ತಿರುತ್ತಾರೆ.

ಆಂಟಿ ಎಂದು ತಮ್ಮನ್ನು ಸಂಬೋಧಿಸುವವರ ಬಗ್ಗೆ ಅಸಮಾಧಾನ ಯಾಕೆ ಎನ್ನುವ ಬಗ್ಗೆ ಸಂದರ್ಶನವೊಂದರಲ್ಲಿ ಅನಸೂಯ ಮಾತನಾಡಿದ್ದಾರೆ. "ನಾನು ಏನಾದರೂ ಪೋಸ್ಟ್ ಮಾಡಿದರೆ ಮನೆಯಲ್ಲಿ ಸುಮ್ಮನೆ ಮಕ್ಕಳನ್ನು ನೋಡಿಕೊಂಡು ಇರಬಹುದಲ್ಲವೇ ಆಂಟಿ ಎನ್ನುತ್ತಾರೆ. ಆಂಟಿ ಎನ್ನುವ ಪದದಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅದನ್ನು ಕೆಲವರು ಕೆಟ್ಟದಾಗಿ ಅಸಭ್ಯವಾಗಿ ಬಳಸುತ್ತಾರೆ. ಚಿಕ್ಕ ಮಕ್ಕಳು, ಗೊತ್ತಿರುವವರು ಬಂದು ಮುದ್ದಾಗಿ ಆಂಟಿ ಎಂದು ಕರೆಯುತ್ತಾರೆ. ಚಿಕ್ಕ ಮಕ್ಕಳು ನನ್ನನ್ನು ಆಂಟಿ ಎಂದು ಕರೆದರೆ ನನಗೆ ಸಂತೋಷವಾಗುತ್ತದೆ. ಆದರೆ ನನ್ನ ವಯಸ್ಸಿನವರು ಮತ್ತು ನಿಮ್ಮ ವಯಸ್ಸಿನವರು ಬೇರೆ ರೀತಿಯಲ್ಲಿ ಆಂಟಿ ಎಂದು ಕರೆಯುತ್ತಾರೆ. ಅದು ನನಗೆ ಇಷ್ಟವಿಲ್ಲ."
"ಇಂಗ್ಲೀಷ್‌ನಲ್ಲಿ ಚಿಕ್ಕಮ್ಮನನ್ನು ಆಂಟಿ ಎನ್ನುತ್ತಾರೆ. ತಾಯಿ ಬಳಿಕ ತಾಯಿಯಂತವರನ್ನು ಆಂಟಿ ಎನ್ನುತ್ತಾರೆ. ನಾನು ಬಾಲ್ಯದಲ್ಲಿ ನನ್ನ ನೆರೆಹೊರೆಯವರಲ್ಲಿ ಅನೇಕರನ್ನು ಆಂಟಿ ಎಂದು ಕರೆಯುತ್ತಿದ್ದೆ. ಒಂದು ವೇಳೆ ಅವರು ಬೇಡ ಎಂದರೆ ನಾನು ಹಾಗೆ ಅವರನ್ನು ಕರೆಯುವುದಿಲ್ಲ. ಯಾಕೆಂದರೆ ಅವರಿಗೆ ನೋವಾಗುತ್ತದೆ ಎಂದು ಅರ್ಥ ಮಾಡಿಕೊಂಡು ಸುಮ್ಮನಾಗುತ್ತೇನೆ. ಆದರೆ ನನ್ನನ್ನು ಕೆಲವರು ಆಂಟಿ ಎನ್ನುವುದು ಇಷ್ಟವಿಲ್ಲ. ಆದರೂ ಮತ್ತೆ ಮತ್ತೆ ಅದೇ ರೀತಿ ಸಂಭೋಧಿಸುವುದು ಯಾಕೆ? ಮತ್ತೊಬ್ಬರನ್ನು ಯಾಕೆ ನೋಯಿಸಬೇಕು? ಎಂದು ಪ್ರಶ್ನಿಸಿದ್ದಾರೆ.
ಕೆಲವರಿಗೆ ಮತ್ತೊಬ್ಬರನ್ನು ನೋಯಿಸುವುದರಿಂದ ಪೈಶಾಚಿಕ ಸಂತೋಷ. ಅದು ಯಾಕೆ? ನನ್ನ ಬಗ್ಗೆ ಕಾಮೆಂಟ್ ಮಾಡುವವನನ್ನು ಜನ್ಮದಲ್ಲಿ ನಾನು ನೋಡ್ತೀನೋ ಇಲ್ಲವೋ ಗೊತ್ತಿಲ್ಲ. ಆತ ಕೂಡ ನನ್ನನ್ನು ನೋಡ್ತಾನಾ? ಇಲ್ವಾ ಗೊತ್ತಿಲ್ಲ. ಆದರೂ ನನ್ನ ಮೇಲೆ ಅಷ್ಟು ದ್ವೇಷ ಆತನಿಗೆ ಅಷ್ಟು ದ್ವೇಷ ಇದೆ ಅಂದ್ರೆ ತನ್ನ ಸುತ್ತಮುತ್ತಾ ಇರುವ ಮಹಿಳೆಯರನ್ನು ಆತ ಹೇಗೆ ನೋಡ್ತಾನೆ? ಇಂತಹವರೇ ಮುಂದೆ ರೇ*ಸ್ಟ್ ಆಗುತ್ತಾರೆ" ಎಂದು ಗಂಭೀರವಾಗಿ ಹೇಳುತ್ತಾ ಅನುಸೂಯಾ ಭಾವುಕರಾಗಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಈ ಹಿಂದೆ ಅನುಸೂಯಾ ಅವರನ್ನು ಆಂಟಿ ಎಂದು ಕೆಲವರು ಸಂಬೋಧಿಸಿದ್ದು ಅದಕ್ಕೆ ಆಕೆ ಗರಂ ಆಗಿದ್ದು ಭಾರೀ ಸುದ್ದಿಯಾಗಿತ್ತು. ಟ್ವಿಟ್ಟರ್‌ನಲ್ಲಿ ಹ್ಯಾಶ್‌ಟ್ಯಾಗ್ ಆಂಟಿ ಟ್ರೆಂಡ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಆಕೆ ತಮ್ಮ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು. ಏಜ್‌ಶೇಮಿಂಗ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಇದೇ ವಿವಾದದ ಬಗ್ಗೆ ಹಿಂದೆ ಒಮ್ಮೆ ಮಾತನಾಡಿದ್ದ ಅನಸೂಯಾ ಆಂಟಿ ಎಂದು ಕರೆಯುವುದರಲ್ಲಿ ತಪ್ಪೇನಿಲ್ಲ, ಆದರೆ ಗಡ್ಡ, ಮೀಸೆ ಬಂದವರು ಕೂಡ ಹೀಗೆ ಕರೆದರೆ ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ಬಗ್ಗೆ ಅನಸೂತಾ ಪರೋಕ್ಷವಾಗಿ ಟಾಂಗ್ ನೀಡಿದ್ದರು. ಇದರ ಬೆನ್ನಲ್ಲೇ ವಿಜಯ್ ದೇವರಕೊಂಡ ಅಭಿಮಾನಿಗಳು ಆಕೆಯನ್ನು ಟ್ರೋಲ್ ಮಾಡಲು ಆರಂಭಿಸಿದ್ದರು. ಆ ಸಮಯದಲ್ಲಿ ಈ 'ಆಂಟಿ' ಎಂದು ಟ್ರೋಮ್ ಮಾಡುವುದು ಹೆಚ್ಚಾಗಿತ್ತು. ಇನ್ನು 'ಪುಷ್ಪ' ಸರಣಿ ಸಿನಿಮಾಗಳಲ್ಲಿ ದಾಕ್ಷಾಯಿಣಿ ಎನ್ನುವ ನೆಗೆಟಿವ್ ಪಾತ್ರದಲ್ಲಿ ಅನಸೂಯಾ ನಟಿಸಿದ್ದಾರೆ. ಈ ಸಿನಿಮಾ ಸೀಕ್ವೆಲ್ ಮುಂದಿನ ವರ್ಷ ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ. ಇದಕ್ಕು ಮುನ್ನ ಸುಕುಮಾರ್ ನಿರ್ದೇಶನದ 'ರಂಗಸ್ಥಳಂ' ಚಿತ್ರದಲ್ಲಿ ರಂಗಮ್ಮತ್ತ ಪಾತ್ರದಲ್ಲಿ ಆಕೆ ಮೆಚ್ಚುಗೆ ಪಡೆದಿದ್ದರು.


Click it and Unblock the Notifications











