9 ಗಜಗಳ ಸೀರೆ ಉಡುವುದು ಇಷ್ಟ.. ಆದ್ರೆ ಆ ಸಮಯದಲ್ಲಿ ತಡಕ್ಕೊಳ್ಳೋದು ಕಷ್ಟ

ನಟಿ ಅನಸೂಯ ಭಾರಧ್ವಜ್ ತೆಲುಗು ಸಿನಿಮಾ ಹಾಗೂ ಕಿರುತೆರೆಯಲ್ಲಿ ಬಹಳ ಬ್ಯುಸಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಖತ್ ಆಕ್ಟೀವ್ ಆಗಿರ್ತಾರೆ. ಮನೆಯಲ್ಲಿ ನಡೆಯುವ ಪೂಜೆ, ಪಾರ್ಟಿ, ಟ್ರಿಪ್, ಫೋಟೊಶೂಟ್ ಎಲ್ಲದರ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಇನ್ನು ತಮ್ಮ ಬೋಲ್ಡ್ ಸ್ಟೇಟ್‌ಮೆಂಟ್‌ಗಳಿಂದಲೂ ಸುದ್ದಿ ಆಗುತ್ತಾರೆ.

'ಜಬರ್ದಸ್ತ್' ಕಾಮಿಡಿ ಶೋ ನಿರೂಪಕಿಯಾಗಿ ಅನಸೂಯ ಭಾರಧ್ವಜ್ ಮೊದಲಿಗೆ ಗಮನ ಸೆಳೆದಿದ್ದರು. ತೆಲುಗಿನ 'ರಂಗಸ್ಥಳಂ' ಚಿತ್ರದ ರಂಗಮ್ಮತ್ತ ಪಾತ್ರ ಅನಸೂಯಗೆ ಬಹಳ ಒಳ್ಳೆ ಹೆಸರು ತಂದುಕೊಟ್ಟಿತ್ತು. 'ಪುಷ್ಪ' ಚಿತ್ರದಲ್ಲಿ ದಾಕ್ಷಾಯಿಣಿ ಎನ್ನುವ ನೆಗೆಟಿವ್ ರೋಲ್ ಪ್ಲೇ ಮಾಡಿದ್ದರು. ಅದು ಕ್ಲಿಕ್ ಆಗಿತ್ತು. ಬಳಿಕ ಕಿರುತೆರೆಯಿಂದ ಬ್ರೇಕ್ ಪಡೆದಿದ್ದರು. ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಮತ್ತೆ ಕಿರುತೆರೆಗೆ ಬರಲ್ಲ ಎಂದುಕೊಂಡಿರುವಾಗಲೇ ರೀ-ಎಂಟ್ರಿ ಕೊಟ್ಟು ಸದ್ದು ಮಾಡಿದ್ದರು.

Anasuya Bharadwaj Opens Up About Challenges of Wearing a 9-Yard Saree for TV Shoot

ಎರಡು ಮಕ್ಕಳ ತಾಯಿಯಾಗಿದ್ದರೂ ಅನಸೂಯ ತಮ್ಮ ಚೆಲುವಿನಿಂದ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಬೋಲ್ಡ್ ಅವತಾರದಲ್ಲಿ ಫೋಟೊ, ವೀಡಿಯೋ ಶೇರ್ ಮಾಡಿ ಚರ್ಚೆ ಹುಟ್ಟುಹಾಕುತ್ತಾರೆ. ಬಿಕಿನಿ ಹಾಕಿದ್ರೆ ತಪ್ಪೇನು? ಅಂತ ಹಿಂದೆ ಸಂದರ್ಶನವೊಂದರಲ್ಲಿ ಅನಸೂಯ ಮಾತನಾಡಿದ್ದರು. ಟ್ರೋಲ್ ಮಾಡುವವರಿಗೆ ಸರಿಯಾಗಿ ತಿರುಗೇಟು ಕೊಡುತ್ತಾರೆ. ತಮ್ಮನ್ನು ಆಂಟಿ ಎಂದು ಕಿಚಾಯಿಸುವವರಿಗೂ ತಕ್ಕ ಬುದ್ದಿ ಹೇಳುತ್ತಾರೆ.

ಎಷ್ಟೇ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡರೂ ನನಗೆ ಸೀರೆ ಅಂದರೆ ಬಹಳ ಇಷ್ಟ ಎಂದು ಅನುಸೂಯ ಹೇಳುತ್ತಿರುತ್ತಾರೆ. 9 ಗಜಗಳ ಸೀರೆ ಉಟ್ಟು ಆಕೆ ಇತ್ತೀಚೆಗೆ ಫೋಟೊಶೂಟ್ ಮಾಡಿಸಿದ್ದರು. ಆ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ಸಾಕಷ್ಟು ಲೈಕ್ಸ್, ಕಾಮೆಂಟ್ಸ್ ಸಹ ಸಿಕ್ಕಿತ್ತು. 9 ಗಜಗಳ ಸೀರೆ ಇಷ್ಟ, ಆದರೆ ಅದರಿಂದ ಸಮಸ್ಯೆ ಕೂಡ ಇದೆ ಎಂದು ಬರೆದುಕೊಂಡಿದ್ದರು.

ಗ್ರೀನ್ ಕಲರ್ ಬಾರ್ಡರ್ ಇರುವ ಹಸಿರು ಮರೂನ್ ಕಲರ್ ಸೀರೆಯಲ್ಲಿ ಅನಸೂಯ ಕಂಗೊಳಿಸಿದ್ದರು. ಅದಕ್ಕೊಪ್ಪುವ ಗ್ರೀನ್ ಕಲರ್ ಬ್ಲೌಸ್ ತೊಟ್ಟು ಸಾಂಪ್ರದಾಯಿಕ ಆಭರಣ ಧರಿಸಿ ಮಿಂಚಿದ್ದರು. 'ಕಿರಾಕ್ ಬಾಯ್ಸ್, ಕಿಲಾಡಿ ಗರ್ಲ್ಸ್' ಎಂಬ ಕಿರುತೆರೆ ರಿಯಾಲಿಟಿ ಶೋನಲ್ಲಿ ಟೀಂ ಲೀಡರ್ ಆಗಿ ಅನಸೂಯ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ವಿಲೇಜ್ ಥೀಮ್‌ನಲ್ಲಿ ಎಪಿಸೋಡ್ ಶೂಟ್ ಮಾಡಿದ್ದರು. ಆಗ ಅನಸೂಯ ಹೀಗೆ 9 ಗಜಗಳ ಸೀರೆ ಉಟ್ಟು ಭಾಗವಹಿಸಿದ್ದರು.

ಫೋಟೊಗಳನ್ನು ಹಂಚಿಕೊಂಡಿದ್ದ ಅನಸೂಯ "ಸಾಂಪ್ರದಾಯಿಕವಾಗಿ 9 ಗಜಗಳ ಸೀರೆ ಉಡುವುದು ಬಹಳ ಚೆನ್ನಾಗಿರುತ್ತದೆ. ಇದರಲ್ಲಿ ಸಾಕಷ್ಟು ಸವಾಲುಗಳು ಇವೆ. ಉದಾಹರಣೆಗೆ 16 ಗಂಟೆಗಳ ಕಾಲ ಚಿತ್ರೀಕರಣ ನಡೆಸಬೇಕು. ಬ್ರೇಕ್ ಸಮಯದಲ್ಲಿ ಮೂತ್ರ ವಿಸರ್ಜಿಸಲು ಕಷ್ಟವಾಗುತ್ತದೆ. ಆದರೆ ಈ ಲುಕ್ ಬಗ್ಗೆ ನನಗೆ ತುಂಬಾ ಇಷ್ಟ, ಹಾಗಾಗಿ ಕಷ್ಟ ಆದರೂ ಪರವಾಗಿಲ್ಲ" ಎಂದು ಅನುಸೂಯ ಕ್ಯಾಪ್ಷನ್ ಕೊಟ್ಟಿದ್ದಾರೆ.

ಅನಸೂಯ ಹೀಗೆ ತಮಗೆ ಅನ್ನಿಸಿದ್ದನ್ನು ಯಾವುದೇ ಮುಚ್ಚುಮರೆ ಇಲ್ಲದೇ ನೇರವಾಗಿ ಹೇಳಿಬಿಡುತ್ತಾರೆ. ಇದೇ ಕಾರಣಕ್ಕೆ ಕೆಲವೊಮ್ಮೆ ಟೀಕೆ ಟಿಪ್ಪಣಿ ಎದುರಿಸಿರುವುದು ಇದೆ. ಆದರೆ ಅದಕ್ಕೆಲ್ಲಾ ಕ್ಯಾರೇ ಎನ್ನುವುದಿಲ್ಲ. ಇತ್ತೀಚೆಗೆ ತಮ್ಮ ಹೊಸ ಮನೆಯ ಗೃಹಪ್ರವೇಶದ ಫೋಟೊಗಳನ್ನು ಕೂಡ ಆಕೆ ಹಂಚಿಕೊಂಡಿದ್ದರು. ಬಳಿಕ ಫ್ಯಾಮಿಲಿ ಜೊತೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದರು. ಆ ಬಗ್ಗೆ ಕೂಡ ಅಭಿಮಾನಿಗಳಿಗೆ ಅಪ್‌ಡೇಟ್ ಕೊಟ್ಟಿದ್ದರು.

ಪವನ್ ಕಲ್ಯಾಣ್ ನಟನೆಯ 'ಹರಿಹರ ವೀರಮಲ್ಲು' ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಅನಸೂಯ ಹೆಜ್ಜೆ ಹಾಕಿದ್ದಾರೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ. 'ವೂಲ್ಫ್' ಹಾಗೂ 'ಫ್ಲ್ಯಾಶ್‌ಬ್ಯಾಕ್' ಎಂಬ ಎರಡು ತಮಿಳು ಚಿತ್ರಗಳು ಈಗ ಕೈಯಲ್ಲಿದೆ.

More from Filmibeat

English summary
Actress Anasuya Bharadwaj says she loves the saree's elegance
Read more about: actress tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X