'ಆಂಟಿ' ಅಂದ್ರೆ ಕೋಪ ಬರುತ್ತೆ ಯಾಕಂದ್ರೆ ಅವ್ರು ಹಾಗೆ ಕರೆಯೋದ್ರ ಹಿಂದೆ ಬೇರೆನೇ ಅರ್ಥ ಇದೆ": ಅನಸೂಯ
ತೆಲುಗು ನಟಿ, ನಿರೂಪಕಿ ಅನುಸೂಯ ಭಾರಧ್ವಜ್ ಪದೇ ಪದೇ ಟ್ರೋಲ್ ಆಗುತ್ತಲೇ ಇರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಅನಸೂಯ ಹಾಟ್ ಹಾಟ್ ಫೋಟೊಗಳನ್ನು ಶೇರ್ ಮಾಡಿ ಅಭಿಮಾನಿಗಳ ಮನಗೆಲ್ಲುತ್ತಿರುತ್ತಾರೆ. ಆದರೆ ಕೆಲವರು ಮಾತ್ರ ಆಂಟಿ ಎಂದು ಕಾಮೆಂಟ್ ಮಾಡುತ್ತಿರುತ್ತಾರೆ. ಈ ಬಗ್ಗೆ ಆಕೆ ಬೇಸರ ವ್ಯಕ್ತಪಡಿಸುತ್ತಾ ಬರ್ತಿದ್ದಾರೆ. ಇದಕ್ಕೆ ಕಾರಣ ಏನು ಅಂತ ಈಗ ಹೇಳಿದ್ದಾರೆ.
ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ಬಗ್ಗೆ ಅನಸೂಯ ಪರೋಕ್ಷವಾಗಿ ಕಾಮೆಂಟ್ ಮಾಡಿದ್ದರು. ಈ ಕಾಮೆಂಟ್ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಅಮ್ಮನನ್ನು ಬೈದ ಪಾಪ ಹೆಗಲೇರಿದೆ. ಅದಕ್ಕೆ 'ಲೈಗರ್' ಸಿನಿಮಾ ಸೋತಿದೆ ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿದ್ದರು. ಇದರಿಂದ ಬೇಸರಕೊಂಡ ವಿಜಯ್ ದೇವರಕೊಂಡ ಫ್ಯಾನ್ಸ್ ಆಕೆಯ ವಿರುದ್ಧ ಟ್ರೋಲ್ ಮಾಡಲು ಆರಂಭಿಸಿದರು. ಆಂಟಿ ಎನ್ನುವ ಟ್ಯಾಗ್ ಟ್ರೆಂಡ್ ಆಗುವಂತೆ ಮಾಡಿದರು.

ಹೆಣ್ಣು ಮಕ್ಕಳನ್ನು ಆಂಟಿ ಎಂದು ಕರೆಯುವುದು ಕೂಡ ಕಿರುಕುಳದ ಅಡಿಯಲ್ಲಿ ಬರುತ್ತದೆ. ನಾನು ಕೇಸ್ ಹಾಕುತ್ತೇನೆ ಎಂದು ಅನಸೂಯ ಎಚ್ಚರಿಕೆ ನೀಡಿದರು. ಆದರೂ ವಿಜಯ್ ದೇವರಕೊಂಡ ಫ್ಯಾನ್ಸ್ ಅದಕ್ಕೆ ಹೆದರಲಿಲ್ಲ. ಟ್ರೋಲ್ ಮುಂದುವರೆಸಿದರು. ಒಂದಷ್ಟು ಜನ ಅನಸೂಯ ಪರ ನಿಂತರು. 3 ದಿನಗಳ ಕಾಲ ವಿಜಯ್ ಫ್ಯಾನ್ಸ್ ವರ್ಸಸ್ ಅನಸೂಯ ಮಾತಿನ ಯುದ್ಧ ತಾರಕಕ್ಕೇರಿತ್ತು. ಆಕೆ ಕೆಲವರ ವಿರುದ್ಧ ಸೈಬರ್ ಕ್ರೈಂಗೆ ದೂರು ಕೂಡ ನೀಡಿದರು. ಅದಕ್ಕು ಮುನ್ನ ಕೂಡ ಆಕೆಯನ್ನು ಆಂಟಿ ಎಂದು ಸಂಭೋದಿಸುತ್ತಿದ್ದರು.
ಅನುಸೂಯಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಹಾಗಾಗಿ ಆಕೆಯನ್ನು ಆಂಟಿ ಎಂದು ಕರೆಯುವುದರಲ್ಲಿ ತಪ್ಪೇನಿದೆ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹೇಳುತ್ತಿರುತ್ತಾರೆ. ಈ ವಿಚಾರವಾಗಿ ಆಕೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಆಂಟಿ ಎಂದು ಕರೆದರೆ ಯಾಕೆ ಕೋಪ ಬರುತ್ತದೆ ಎಂದು ವಿವರಿಸಿದ್ದಾರೆ. ಆದರೆ ಈಗ ಕೋಪ ಬರೋದಿಲ್ಲ ಎಂದು ಕೂಡ ವಿವರಿಸಿದ್ದಾರೆ.
ಅಭಿಮಾನಿಗಳ ಜೊತೆ ಆನ್‌ಲೈನ್ ಚಾಟಿಂಗ್ ವೇಳೆ ಅಭಿಮಾನಿ ಒಬ್ಬರು "ಅಕ್ಕ ನಿಮ್ಮನ್ನು ಆಂಟಿ ಎಂದು ಕರೆದರೆ ಯಾಕೆ ಕೋಪ ಬರುತ್ತದೆ?" ಎಂದು ಕೇಳಿದ್ದಾರೆ. ಇದಕ್ಕೆ ಅನಸೂಯ ಉತ್ತರಿಸಿದ್ದು "ಹೌದು ಆ ರೀತಿ ಕರೆದರೆ ನನಗೆ ಕೋಪ ಬರುತ್ತದೆ. ಯಾಕಂದರೆ ಅವರ ಆ ಕೂಗಿನ ಹಿಂದೆ ಬೇರೆ ಅರ್ಥ ಇದೆ. ಆದರೆ ಇತ್ತೀಚೆಗೆ ನನಗೆ ಕೋಪ ಬರುತ್ತಿಲ್ಲ. ಈ ಟ್ರೋಲರ್‌ಗಳನ್ನು ತಿದ್ದುವುದಕ್ಕಿಂತ ನನಗೆ ಮುಖ್ಯವಾದ ಕೆಲಸಗಳು ಸಾಕಷ್ಟಿದೆ" ಎಂದಿದ್ದಾರೆ.

ಅನಸೂಯ ಕಾಮೆಂಟ್ ಈಗ ವೈರಲ್ ಆಗ್ತಿದೆ. ಯಾಕಂದರೆ ಆಕೆ ಬೇರೆ ಸೆಲೆಬ್ರೆಟಿಗಳಿಗಿಂತ ಭಿನ್ನ. ಯಾವುದಕ್ಕೂ ಹಿಂದು ಮುಂದು ನೋಡುವವರಲ್ಲ. ಟ್ರೋಲರ್ಸ್‌ನ ಸಹಿಸೋದಿಲ್ಲ. ಹದ್ದು ಮೀರಿ ಕಾಮೆಂಟ್ ಮಾಡಿದರೆ ತಿರುಗಿ ಬೀಳುತ್ತಾರೆ. ಕಾನೂನು ಕ್ರಮ ಕೂಡ ಕೈಗೊಳ್ಳುತ್ತಾರೆ. ಆಕೆಯ ನೀಡಿದ ದೂರಿನ ಹಿನ್ನಲೆಯಲ್ಲಿ ಜೈಲಿಗೆ ಹೋಗಿ ಬಂದವರು ಇದ್ದಾರೆ. ತೆಲುಗು ಕಿರುತೆರೆಯ 'ಜಬರ್ದಸ್ತ್' ಶೋನಿಂದ ಫೇಮಸ್ ಆದ ಚೆಲುವೆ ನಂತರ ಸಿನಿಮಾಗಳಲ್ಲೂ ನಟಿಸಿದರು.
ರಾಮ್‌ಚರಣ್ ನಟನೆಯ 'ರಂಗಸ್ಥಳಂ' ಚಿತ್ರದಲ್ಲಿ ಕೊಲ್ಲಿ ರಂಗಮ್ಮ ಪಾತ್ರದಲ್ಲಿ ಗಮನ ಸೆಳೆದರು. 'ಪುಷ್ಪ' ಚಿತ್ರದಲ್ಲಿ ದಾಕ್ಷಾಯಿಣಿ ಎನ್ನುವ ನೆಗೆಟಿವ್ ರೋಲ್‌ನಲ್ಲಿ ಮಿಂಚಿದ್ದರು. ಇತ್ತೀಚೆಗೆ ಕಿರುತೆರೆಗೆ ಗುಡ್‌ಬೈ ಹೇಳಿ ಸಂಪೂರ್ಣವಾಗಿ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಿಂದಲೂ ಸುದ್ದಿಯಲ್ಲಿ ಇರುತ್ತಾರೆ. ಆಕೆ ನಟಿಸಿರುವ 'ರಂಗಮಾರ್ತಾಂಡ' ಸಿನಿಮಾ ರಿಲೀಸ್ ಆಗಿದೆ. 'ಪುಷ್ಪ' ಸೀಕ್ವೆಲ್‌ನಲ್ಲೂ ಬಣ್ಣ ಹಚ್ಚಿದ್ದಾರೆ. 'ಫ್ಲಾಶ್‌ಬ್ಯಾಕ್' ಎನ್ನುವ ತಮಿಳು ಚಿತ್ರವೂ ಕೈಯಲ್ಲಿದೆ.


Click it and Unblock the Notifications











