ತಮ್ಮ ಅಂಗಾಂಗಗಳ ಬಗ್ಗೆ ಅಶ್ಲೀಲ ಜೋಕ್; ಆಂಕರ್ ಅನಸೂಯ ವಿರುದ್ಧ ನಟಿ ರಾಶಿ ಆಕ್ರೋಶ

ನಟಿಯರು ತೊಡುವ ಕಾಸ್ಟ್ಯೂಮ್ ಬಗ್ಗೆ ತೆಲುಗು ನಟ ಶಿವಾಜಿ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿರುವುದು ಗೊತ್ತೇಯಿದೆ. ಈ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಲೇ ಇದೆ. ಶಿವಾಜಿ ಹೇಳಿಕೆಯನ್ನು ನಟಿ, ನಿರೂಪಕಿ ಅನಸೂಯ ಭಾರಧ್ವಜ್ ಖಂಡಿಸಿದ್ದಾರೆ. ಆದರೆ ಅದೇ ಅನಸೂಯ ವಿರುದ್ಧ ಜನಪ್ರಿಯ ನಟಿ ರಾಶಿ ಗರಂ ಆಗಿದ್ದಾರೆ.

ನಟ ಶಿವಾಜಿ ಹೇಳಿಕೆ ಹಾಗೂ ಬಳಸಿದ್ದ ಅವಹೇಳನಕಾರಿ ಪದಗಳ ಬಗ್ಗೆ ಅನಸೂಯ ಮಾತನಾಡುತ್ತಿದ್ದಾರೆ. ಪದೇ ಪದೆ ಪೋಸ್ಟ್ ಮಾಡಿ ತಿರುಗೇಟು ಕೊಡುತ್ತಿದ್ದಾರೆ. ವಿಡಿಯೋ ಮಾಡಿ ಕೌಂಟರ್ ಕೊಟ್ಟಿದ್ದಾರೆ. ಮಹಿಳೆಯರ ಧರಿಸುವ ಬಟ್ಟೆ ಬಗ್ಗೆ ಮಾತನಾಡಲು ನೀವು ಯಾರು ಎಂದು ಕೇಳಿದ್ದಾರೆ. ಈ ಬಗ್ಗೆ ಮಾತನಾಡುತ್ತಿರುವವರ ಪೋಸ್ಟ್‌ಗಳನ್ನು ಅನಸೂಯ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇದೇ ಆಕೆ 'ಜಬರ್ದಸ್ತ್' ಎಂಬ ಕಾರ್ಯಕ್ರಮದಲ್ಲಿ ನಟಿ ರಾಶಿ ಬಗ್ಗೆ ಆಡಿದ್ದ ಮಾತು ಈಗ ಚರ್ಚೆ ಹುಟ್ಟಾಕ್ಕಿದೆ.

Anasuya bharadwaj Raashi Controversy Past Jabardasth Remark Resurfaces Amid Sivaji Statement Row

ಮಹಿಳೆಯರ ಗೌರವದ ಬಗ್ಗೆ ಇಷ್ಟೆಲ್ಲಾ ಮಾತನಾಡುವ ಅನಸೂಯ ಭಾರಧ್ವಜ್ ಅಂದು ನಟಿ ರಾಶಿ ಬಗ್ಗೆ ಬಾಡಿ ಶೇಮಿಂಗ್ ಮಾಡಿದ್ದರು. ಅದು ರಿಯಾಲಿಟಿ ಶೋನಲ್ಲಿ ಪ್ರಸಾರ ಆಗಿತ್ತು. ಆಗ ಯಾಕೆ ಯಾರು ಕೇಳಲಿಲ್ಲ. ಅಂತಹ ಡೈಲಾಗ್ಸ್ ಅನಸೂಐ ಹೇಗೆ ಹೇಳಿದ್ದರು? ಎನ್ನುವ ಚರ್ಚೆ ಶುರುವಾಗಿದೆ. ಆಗ ಕೂಡ ಈ ಬಗ್ಗೆ ಮೌಣ ವಹಿಸಿದ್ದ ನಟಿ ರಾಶಿ ಇದೀಗ ಅನಸೂಯಗೆ ತಿರುಗೇಟು ಕೊಟ್ಟಿದ್ದಾರೆ. ಆಕೆಯ ಹೆಸರು ಹೇಳದೇ ಆಕ್ರೋಶ ಹೊರ ಹಾಕಿದ್ದಾರೆ. ಆ ಶೋ, ತೀರ್ಪುಗಾರರು ಎಲ್ಲರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ನಟಿ ರಾಶಿ ಮಾತನಾಡಿ ನಟ ಶಿವಾಜಿ ಹೇಳಿಕೆ ತಪ್ಪು. ಆತ ನನಗೆ ವೈಯಕ್ತಿಕವಾಗಿ ಗೊತ್ತು. ಶಿವಾಜಿ ಬಳಸಿದ ಪದಗಳು ಸರಿಯಲ್ಲ. ಅದಕ್ಕೆ ಕ್ಷಮೆ ಕೂಡ ಕೇಳಿದ್ದಾರೆ. ಆತನ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಇದೆಲ್ಲದರ ನಡುವೆ ಅನಾವಶ್ಯಕವಾಗಿ ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ. ಹಾಗಾಗಿ ಕೆಲ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ನಟಿ ರಾಶಿ ತಿಳಿಸಿದ್ದಾರೆ.

"ಕೆಲ ವರ್ಷಗಳ ಹಿಂದೆ ನನ್ನ ಗಂಡ ನನಗೆ ಒಂದು ವಿಡಿಯೋ ಕ್ಲಿಪ್ಪಿಂಗ್ ತೋರಿಸಿದ್ರು. ಅದು ಯಾವ ಶೋ ಅಂತ ನಿಮಗೆ ಗೊತ್ತು. ಅದರಲ್ಲಿ ಒಂದು ಕಾಮಿಡಿ ಸ್ಕಿಟ್ ಮಾಡಿದ್ರು. ಅದರಲ್ಲಿ, ಅವರು 'ರಾಶಿ ಫಾಲಾಲು' ಎಂಬ ಪದವನ್ನು ಬಳಸಿದ್ರು. 'ನೀವು ರಾಶಿಯವರ ಫಲಗಳ ಬಗ್ಗೆ ಮಾತನಾಡುತ್ತಿದ್ದೀರಾ?' ಅಂತ ಲೇಡಿ ಆಂಕರ್ ಕೇಳ್ತಾಳೆ. ರಾಶಿ ಫಲ ಅಂತಾರೆ ಸರಿ. ಆದರೆ 'ರಾಶಿ ಅವರ ಫಲಗಳು' ಎನ್ನುವುದರಲ್ಲಿ ನನ್ನ ಹೆಸರಿದೆ. ಆ ಆಂಕರ್ ನನ್ನ ಬಗ್ಗೆ ಮಾತನಾಡಿದ್ದರು. ಅದಕ್ಕೆ ತೀರ್ಪುಗಾರರು ನಕ್ಕದ್ದರು. ನಾನು ಆ ಜಾಗದಲ್ಲಿ ಇದ್ದಿದ್ದರೆ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದೆ. ನೀವು ಕಾಮಿಡಿ ಮಾಡಬಹುದು, ಆದರೆ ನಿಮ್ಮ ಹೆತ್ತವರಿಗೂ ನಿಮ್ಮನ್ನು ದೈಹಿಕವಾಗಿ ಅವಮಾನಿಸುವ ಹಕ್ಕಿಲ್ಲ. ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದೆ. ನಮ್ಮ ತಾಯಿ ಬೇಡ ಎಂದಿದ್ದಕ್ಕೆ ಸುಮ್ಮನಾದೆ" ಎಂದು ರಾಶಿ ವಿವರಿಸಿದ್ದಾರೆ.

ತೆಲುಗು ಕಿರುತೆರೆ ಜನಪ್ರಿಯ ಕಾರ್ಯಕ್ರಮ 'ಜಬರ್ದಸ್ತ್'. ವರ್ಷಗಳ ಕಾಲ ಈ ಶೋ ಪ್ರಸಾರವಾಗಿ ದಾಖಲೆ ಬರೆದಿತ್ತು. ಕಾಮಿಡಿ ಸ್ಕಿಟ್‌ಗಳ ಮೂಲಕ ವೀಕ್ಷಕರನ್ನು ರಂಜಿಸುವ ಪ್ರಯತ್ನ ಮಾಡಿತ್ತು. ಕಾರ್ಯಕ್ರಮದ ನಿರೂಪಕಿ ಆಗಿದ್ದ ಅನಸೂಯ ಕೆಲವೊಮ್ಮೆ ಸ್ಕಿಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹೈಪರ್ ಆದಿ ಟೀಂ ಸ್ಕಿಟ್‌ನಲ್ಲಿ ಇಂತಾದೊಂದು ಡೈಲಾಗ್ ಇತ್ತು. ಅದರಲ್ಲಿ ಅನಸೂಯಾ, "ನೀವು ರಾಶಿಯ ಫಲಗಳ ಬಗ್ಗೆ ಮಾತನಾಡುತ್ತಿದ್ದೀರಾ?" ಎಂದು ಕೇಳುತ್ತಾರೆ. ಅದಕ್ಕೆ ಪ್ರತಿಯಾಗಿ ಹೈಪರ್ ಆದಿ, "ಅದು ರಾಶಿಯ ಫಲಗಳಲ್ಲ, ಅದು ರಾಶಿಫಲ" ಎಂದು ಹೇಳುವಂತೆ ಸನ್ನಿವೇಶ ಇತ್ತು. ಪರೋಕ್ಷವಾಗಿ ನಟಿ ರಾಶಿ ಅಂಗಾಂಗಗಳ ಬಗ್ಗೆ ಕುಚೋದ್ಯ ಮಾಡಿದ್ದರು.

More from Filmibeat

Read more about: tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X