ರಿಯಾಲಿಟಿ ಶೋ ವೇದಿಕೆಯಲ್ಲಿ ಜಾಕೆಟ್ ತೆಗೆದು ಶೇಖರ್ ಮಾಸ್ಟರ್‌ಗೆ ಅನಸೂಯ ಸವಾಲ್!

ತೆಲುಗು ನಟಿ, ನಿರೂಪಕಿ ಅನಸೂಯ ಭಾರಧ್ವಜ್ ತಮ್ಮ ಬೋಲ್ಡ್ ಕಾಮೆಂಟ್ಸ್ ಹಾಗೂ ಬೋಲ್ಡ್‌ನೆಸ್‌ನಿಂದ ಸದಾ ಸುದ್ದಿಯಲ್ಲಿರುತ್ತಾರೆ. ನಾನಿರೋದು ಹೀಗೆ ಏನಿವಾಗ ಎನ್ನುವ ಜಾಯಮಾನದವರು. ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಹಾಟ್ ಫೋಟೊಶೂಟ್‌ಗಳಿಂದ ಆಗಾಗ್ಗೆ ಗಮನ ಸೆಳೆಯುತ್ತಿರುತ್ತಾರೆ. ಇನ್ನು ಟ್ರೋಲ್ ಮಾಡುವವರಿಗೆ ಸರಿಯಾಗಿಯೇ ತಿರುಗೇಟು ನೀಡುತ್ತಾರೆ.

'ರಂಗಸ್ಥಳಂ' ಚಿತ್ರದ ರಂಗಮ್ಮತ್ತ ಹಾಗೂ 'ಪುಷ್ಪ' ಚಿತ್ರದ ದಾಕ್ಷಾಯಿಣಿ ಪಾತ್ರಗಳಿಂದ ಬೆಳ್ಳಿ ಪರದೆಯಲ್ಲೂ ಅನಸೂಯ ಕಮಾಲ್ ಮಾಡಿದ್ದಾರೆ. ತೆಲುಗು ಕಿರುತೆರೆಯ 'ಜಬರ್ದಸ್ತ್' ಶೋ ಮೂಲಕ ಆಕೆ ಹೆಚ್ಚು ಜನಪ್ರಿಯತೆ ಸಾಧಿಸಿದರು. ಆ ಶೋನಲ್ಲೂ ಬೋಲ್ಡ್ ಅವತಾರದಿಂದ ಎಲ್ಲರ ಹುಬ್ಬೇರಿಸುತ್ತಿದ್ದರು. ಮದುವೆಯಾಗಿ ಎರಡು ಮಕ್ಕಳ ತಾಯಿಯಾದರೂ ಆಕೆಯ ಗ್ಲಾಮರ್ ಕಮ್ಮಿ ಆಗಿಲ್ಲ ಎಂದು ಅಭಿಮಾನಿಗಳು ಹೇಳುತ್ತಿರುತ್ತಾರೆ.

Anasuya Bharadwaj removed her jacket in reality show stage video goes viral

ಚಿತ್ರರಂಗದಲ್ಲಿ ಸಕ್ಸಸ್ ಸಿಗುತ್ತಿದ್ದಂತೆ ಕಿರುತೆರೆಗೆ ಗುಡ್‌ಬೈ ಹೇಳಿದ್ದರು. ಕೆಲ ದಿನಗಳ ಕಾಲ ವಿಶ್ರಾಂತಿ ಪಡೆದು ಬರೀ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದರು. ಇದೀಗ 'ಕಿರಾಕ್ ಬಾಯ್ಸ್ ಕಿಲಾಡಿ ಗರ್ಲ್ಸ್' ಎನ್ನುವ ಶೋನಲ್ಲಿ ಟೀಂ ಲೀಡರ್ ಆಗಿ ಕಾಣಿಸಿಕೊಂಡಿದ್ದಾರೆ. ಶ್ರೀಮುಖಿ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳ ತಂಡಕ್ಕೆ ಅನಸೂಯ ಲೀಡರ್ ಆಗಿದ್ದರೆ ಹುಡುಗರ ತಂಡವನ್ನು ಡ್ಯಾನ್ಸ್ ಮಾಸ್ಟರ್ ಶೇಖರ್ ಲೀಡ್ ಮಾಡುತ್ತಿದ್ದಾರೆ.

ಸದ್ಯ 'ಕಿರಾಕ್ ಬಾಯ್ಸ್ ಕಿಲಾಡಿ ಗರ್ಲ್ಸ್' ಶೋ ಹೊಸ ಪ್ರೋಮೊ ರಿಲೀಸ್ ಆಗಿ ವೈರಲ್ ಆಗುತ್ತಿದೆ. ವಿಭಿನ್ನ ಗೇಮ್‌ಗಳ ಮೂಲಕ ವೀಕ್ಷಕರಲ್ಲಿ ಕುತೂಹಲ ಮೂಡುವಂತೆ ಮಾಡಿದ್ದಾರೆ. ಇನ್ನು ಹೊಸ ಪ್ರೋಮೊದಲ್ಲಿ ಅನಸೂಯ ಭಾರಧ್ವಜ್ ಜಾಕೆಟ್ ತೆಗೆದು ಶೇಖರ್ ಮಾಸ್ಟರ್‌ಗೆ ಸವಾಲು ಹಾಕುವ ಸಣ್ಣ ಝಲಕ್ ಇದೆ. ಇದನ್ನು ನೋಡಿ ಕೆಲವರು ಹುಬ್ಬೇರಿಸಿದ್ದಾರೆ. ರಿಯಾಲಿಟಿ ಶೋನಲ್ಲಿ ಇದೆಲ್ಲಾ ಬೇಕಾ? ಎನ್ನುತ್ತಿದ್ದಾರೆ. ಶೋನಲ್ಲಿ ಈ ಎರಡು ತಂಡಗಳ ನಡುವೆ ಸವಾಲಿನ ಪಂದ್ಯಗಳು ನಡೆಯಲಿವೆ. ಮೊದಲಿಗೆ ಭರ್ಜರಿ ಡ್ಯಾನ್ಸ್ ಮಾಡಿ ಶೇಖರ್ ಮಾಸ್ಟರ್ ಎಂಟ್ರಿ ಕೊಟ್ಟಿದ್ದಾರೆ. ಅನಸೂಯ ತಮ್ಮದೇ ಸ್ಟೈಲ್‌ನಲ್ಲಿ ಡೈಲಾಗ್ ಬಿಟ್ಟಿದ್ದಾರೆ.

Anasuya Bharadwaj removed her jacket in reality show stage video goes viral

ಹುಡುಗಿಯರ ತಂಡದ ಸದಸ್ಯರು ಹಸಿರು ಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿ ತಿನ್ನುವ ಟಾಸ್ಕ್ ಕೊಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ಗ್ಲಿಸರಿನ್ ಇಲ್ಲದೇ ಅಳುವ ಟಾಸ್ಕ್‌ ಅನ್ನು ಹುಡುಗರ ತಂಡಕ್ಕೆ ಕೊಟ್ಟಿದ್ದಾರೆ. ಕೊನೆಗೆ ಈ ಗೇಮ್‌ನ ಫೈನಲ್‌ನಲ್ಲಿ ಗೆದ್ದವರಿಗೆ 20 ಲಕ್ಷ ರೂ. ಬಹುಮಾನ ಎಂದು ನಿರೂಪಕಿ ಶ್ರೀಮುಖಿ ಘೋಷಿಸಿದ್ದಾರೆ. ಇದು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.

ಕೂಡಲೇ ವೇದಿಕೆಗೆ ಬಂದ ಅನಸೂಯಾ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ವೇದಿಕೆಯಲ್ಲೇ ತೊಟ್ಟಿದ್ದ ಜಾಕೆಟ್ ತೆಗೆದು ಸವಾಲಿಗೆ ಸಿದ್ಧನಾ? ಎಂದು ಕೇಳಿದ್ದಾರೆ. ಒಳ ಉಡುಪು ಕಾಣುವಂತೆ ಅನುಸೂಯ ಕಾಣಿಸಿಕೊಂಡಿದ್ದು ಶೋನಲ್ಲಿ ಎಲ್ಲರೂ ಹುಬ್ಬೇರಿಸಿದ್ದಾರೆ. ಬಳಿಕ ಶೇಖರ್ ಮಾಸ್ಟರ್ ಸಹ ತಾವು ತೊಟ್ಟಿದ್ದ ಜಾಕೆಟ್ ತೆಗೆದು ಸೈ ಎಂದಿದ್ದಾರೆ. ಸದ್ಯ ಈ ಪ್ರೋಮೊ ಸಖತ್ ವೈರಲ್ ಆಗುತ್ತಿದೆ.

ಜೂನ್ 29ರಿಂದ ಪ್ರತಿ ಶನಿವಾರ, ಭಾನುವಾರ 'ಕಿರಾಕ್ ಬಾಯ್ಸ್ ಕಿಲಾಡಿ ಗರ್ಲ್ಸ್' ಶೋ ಪ್ರಸಾರವಾಗಲಿದೆ. 'ಜಬರ್ದಸ್ತ್‌' ಶೋನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳವುದು, ಸ್ಪರ್ಧಿಗಳ ಜೋಕ್ ಸಹಿಸೋದು ಕಷ್ಟ ಎನ್ನುವ ಕಾರಣಕ್ಕೆ ಅನಸೂಯ ಭಾರಧ್ವಜ್ ಶೋ ಬಿಟ್ಟಿದ್ದರು ಎನ್ನಲಾಗಿತ್ತು. ಆದರೆ ಈಗ ನೋಡಿದರೆ ಅದಕ್ಕಿಂತ ಬೋಲ್ಡ್ ಅವತಾರ ತಾಳಿದ್ದಾರಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಸಿನಿಮಾಗಳಲ್ಲಿ ಅವಕಾಶಗಳು ಸಿಗದೇ ಕಾರಣಕ್ಕೆ ಕಿರುತೆರೆಗೆ ವಾಪಸ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

More from Filmibeat

English summary
Anasuya Bharadwaj's bold attempt for telugu reality show;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X