ನನ್ನಿಷ್ಟದ ಬಟ್ಟೆ ಹಾಕ್ಕೊಂಡ್ರೆ ತಪ್ಪೇನು? ಅನಸೂಯಾ ಭಾರಧ್ವಜ್ ಪ್ರಶ್ನೆ
ತೆಲುಗು ನಟಿ ಅನಸೂಯಾ ಭಾರಧ್ವಜ್ ನಾನಾ ಕಾರಣಗಳಿಗೆ ಪದೇ ಪದೆ ಸುದ್ದಿ ಆಗುತ್ತಾರೆ. ಅದರಲ್ಲೂ ಮುಖ್ಯವಾಗಿ ಸೋಶಿಯಲ್ ಮೀಡಿಯಾ ಟ್ರೋಲ್ಸ್ ಕಾರಣಕ್ಕೆ ಸುದ್ದಿ ಆಗುವುದೇ ಹೆಚ್ಚು. ತಮ್ಮ ಬಗ್ಗೆ ನೆಗೆಟಿವ್ ಟ್ರೋಲ್ ಮಾಡುವವರ ವಿರುದ್ಧ ಆಕೆಯ ಖಾರವಾಗಿಯೇ ಪ್ರತಿಕ್ರಿಯಿಸುತ್ತಾರೆ. ಇದೀಗ ಮತ್ತೊಮ್ಮೆ ತಮ್ಮನ್ನು ಟಾರ್ಗೆಟ್ ಮಾಡುವವರಿಗೆ ತಿರುಗೇಟು ನೀಡಿದ್ದಾರೆ.
ತೆಲುಗು ಕಿರುತೆರೆ ನಿರೂಪಕಿಯಾಗಿದ್ದ ಅನಸೂಯ ಬಳಿಕ ಚಿತ್ರರಂಗಕ್ಕೂ ಬಂದರು. ಎರಡು ಮಕ್ಕಳ ತಾಯಿಯಾಗಿರುವ ಆಕೆ ತಮ್ಮ ಬಿಂದಾಸ್ ಆಟಿಟ್ಯೂಡ್ ಹಾಗೂ ಸ್ಟೈಲಿಶ್ ಡ್ರೆಸ್ಸಿಂಗ್ ಸೆನ್ಸ್‌ನಿಂದ ಗಮನ ಸೆಳೆಯುತ್ತಾರೆ. ನಾನು ಇರುವುದೇ ಹೀಗೆ? ಇದು ನನ್ನಿಷ್ಟ, ನಮ್ಮ ಕುಟುಂಬದವರಿಗೆ ಈ ಬಗ್ಗೆ ಅಭ್ಯಂತರವಿಲ್ಲ. ನಿಮಗೇನು ಸಮಸ್ಯೆ? ಎಂದು ತಿರುಗೇಟು ಕೊಡುತ್ತಿರುತ್ತಾರೆ. ತಮ್ಮನ್ನು ಆಂಟಿ ಎಂದು ಸಂಭೋದಿಸಿ ಟ್ರೋಲ್ ಮಾಡುವವರ ಬಗ್ಗೆಯೂ ಅಸಮಾಧಾನ ಹೊರ ಹಾಕುತ್ತಿರುತ್ತಾರೆ.

ತಮ್ಮ ಡ್ರೆಸ್ಸಿಂಗ್ ಬಗ್ಗೆ ಎದುರಾಗುತ್ತಿರುವ ಟೀಕೆಗಳ ಬಗ್ಗೆ ಅನುಸೂಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾಯಿಯಾದ ಮಾತ್ರಕ್ಕೆ ತಮ್ಮನ್ನು ತಾವು ಬಿಟ್ಟುಬಿಡಬೇಕಾ? ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. "ಇತ್ತೀಚೆಗೆ ಯಾರಾದರೂ ನನ್ನ ಬಗ್ಗೆ ಕಾಮೆಂಟ್ ಮಾಡಿದಾಗ ನಾನು ಸುಮ್ಮನಿರುತ್ತೇನೆ. ಆ ಆದರೂ ನನ್ನಷ್ಟಕ್ಕೆ ನಾನು ನನ್ನಿಷ್ಟದಂತೆ ಬದುಕುವುದನ್ನು ಟೀಕಿಸಿದಾಗ ಪ್ರತಿಕ್ರಿಯಿಸಲೇ ಬೇಕಾಗುತ್ತದೆ" ಎಂದು ಪೋಸ್ಟ್ ಆರಂಭಿಸಿದ್ದಾರೆ.
ಇತ್ತೀಚೆಗೆ ಕೆಲವರು ಸೋಶಿಯಲ್ ಮೀಡಿಯಾ ಚಾನಲ್‌ಗಳಲ್ಲಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಮಹಿಳೆಯರಿಂದ ವೀಡಿಯೋ ಮಾಡಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಅವರೆಲ್ಲಾ ಯಾರು ಎನ್ನುವುದು ನನಗೆ ಗೊತ್ತಿಲ್ಲ. ಆದರೂ ನನ್ನನ್ನಯ ವೈಯಕ್ತಿಕವಾಗಿ ಟೀಕಿಸುತ್ತಿದ್ದಾರೆ. "ಹೌದು, ನಾನು ಒಬ್ಬ ಮಹಿಳೆ, ಹೆಂಡತಿ ಮತ್ತು ಇಬ್ಬರು ಮಕ್ಕಳ ತಾಯಿ. ಗ್ಲಾಮರ್, ಸ್ಟೈಲ್ ಮತ್ತು ಆತ್ಮವಿಶ್ವಾಸ ಪ್ರತಿಬಿಂಬಿಸುವ ರೀತಿಯಲ್ಲಿ ಉಡುಗೆ ತೊಡುತ್ತೇನೆ. ನಾನು ಹೀಗೆ ಇರುವುದು ನನಗೆ ಇಷ್ಟ. ಒಬ್ಬ ತಾಯಿ ರೀತಿ ನಾನು ಇಲ್ಲ ಎಂದು ಕೆಲವರಯ ಹೇಳೂತ್ತಾರೆ. ನಾನು ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ತಾಯಿಯಾಗುವುದು ಎಂದರೆ ನಿಮ್ಮ ನಿಜವಾದ ಸ್ವಭಾವವನ್ನು ತ್ಯಜಿಸುವುದೇ? ಎಂದು ಅನುಸೂಯ ಪ್ರಶ್ನಿಸಿದ್ದಾರೆ.
"ನಾನು ಹೇಗೆ ಇದ್ದರೂ ನನ್ನ ಪತಿ, ಮಕ್ಕಳು, ಫ್ಯಾಮಿಲಿ ನನ್ನನ್ನು ಒಪ್ಪಿಕೊಳ್ಳುತ್ತಾರೆ. ಪ್ರೀತಿಸುತ್ತಾರೆ. ಅವ್ರು ನನ್ನನ್ನು ಜಡ್ಜ್ ಮಾಡುವುದಿಲ್ಲ. ಅವರು ನನ್ನನ್ನು ಬೆಂಬಲಿಸುತ್ತಾರೆ. ಅದು ಮುಖ್ಯ. ಅಷ್ಟು ಓಪನ್ ಆಗಿ ಇರುವುದು ಕೆಲವರಿಗೆ ಹೊಸತು ಅನಿಸಬಹುದು. ಆದರೆ ಒಬ್ಬರ ಆಯ್ಕೆಯಲ್ಲಿ ತಪ್ಪು ಹುಡುಕಬೇಡಿ. ನನ್ನ ಮಕ್ಕಳು ನನ್ನನ್ನು ಗೌರವದಿಂದ ನೋಡುತ್ತಾರೆ. ಬೋಲ್ಡ್ ಆಗಿ ಇರುವುದು ಅಂದರೆ ಅಗೌರವದಿಂದ ಇರುವುದಲ್ಲ ಎಂದು ನಾನು ನಂಬುತ್ತೇನೆ. ನನಗಿಷ್ಟ ಬಂದ ಬಟ್ಟೆ ಹಾಕಿದ ಮಾತ್ರಕ್ಕೆ ನಾನು ನನ್ನ ಮೌಲ್ಯಗಳನ್ನು ಕಳೆದುಕೊಂಡಂತೆ ಅಲ್ಲ" ಎಂದು ಅನಸೂಯ ಬರೆದುಕೊಂಡಿದ್ದಾರೆ.
ಬಳಿಕ ಮಾತು ಮುಂದುವರೆಸಿರುವ ಅನಸೂಯ "ನನ್ನನ್ನು ಅನುಸರಿಸಲು ನಾನು ಯಾರನ್ನೂ ಕೇಳುತ್ತಿಲ್ಲ, ಅಥವಾ ಬದುಕಲು ಇದೊಂದೇ ಮಾರ್ಗ ಎಂದು ನಾನು ಹೇಳುತ್ತಿಲ್ಲ. ನೀವು ನಿಮ್ಮ ರೀತಿಯಲ್ಲಿ ಬದುಕಲು ಬಯಸುವಂತೆಯೇ ನನ್ನ ರೀತಿಯಲ್ಲಿ ಬದುಕುವ ಸ್ವಾತಂತ್ರ್ಯವನ್ನು ಬಯಸುತ್ತೇನೆ" ಎಂದು ಪೋಸ್ಟ್ ಮಾಡಿದ್ದಾರೆ.
ವಿಜಯ್ ದೇವರಕೊಂಡ ಫ್ಯಾನ್ಸ್ ಹಾಗೂ ಅನಸೂಯ ನಡುವಿನ ಶೀತಲ ಸಮರ ಗೊತ್ತೇಯಿದೆ. ಸದ್ಯ ದೇವರಕೊಂಡ ನಟನೆಯ 'ಕಿಂಗ್‌ಡಮ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇಂತಹ ಸಮಯದಲ್ಲಿ ಬೇಕೆಂದೇ ಇಂತಹ ಪೋಸ್ಟ್ ಮಾಡಿದ್ದೀಯಾ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಅದಕ್ಕೂ ಅನಸೂಯ ತಿರುಗೇಟು ನೀಡಿದ್ದಾರೆ.


Click it and Unblock the Notifications











