ಹೋಳಿ ಆಡುವಾಗ 'ಆಂಟಿ' ಎಂದ ಯುವಕ; ಧಮ್ಮಿದ್ದರೆ ಬಾರೋ ಎಂದು ಅನಸೂಯ ಸವಾಲ್

ತೆಲುಗು ನಟಿ, ನಿರೂಪಕಿ ಅನಸೂಯ ಭಾರಧ್ವಜ್ ಪದೇ ಪದೆ ಸುದ್ದಿ ಆಗುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕೆಯನ್ನು ಟ್ರೋಲ್ ಮಾಡುವುದು, ಅದಕ್ಕೆ ಆಕೆ ತಿರುಗೇಟು ಕೊಡುವುದು ಹೊಸದೇನು ಅಲ್ಲ. ಕೆಲವರು ಆಕೆಯನ್ನು 'ಆಂಟಿ' ಎಂದು ಕರೆದು ಕೆಣಕುವ ಪ್ರಯತ್ನ ಮಾಡುತ್ತಾರೆ. ಇದೀಗ ನೇರವಾಗಿಯೇ ಒಬ್ಬ 'ಆಂಟಿ' ಎಂದುಬಿಟ್ಟಿದ್ದಾನೆ.

ತನ್ನನ್ನು ಆಂಟಿ ಎಂದು ಕರೆಯುವುದರ ಬಗ್ಗೆ ಅನಸೂಯ ಭಾರಧ್ವಜ್ ಅಸಮಾಧಾನ ವ್ಯಕ್ತಪಡಿಸುತ್ತಲೇ ಬರ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಬೇಕಂತಲೇ ಹೀಗೆ ಟ್ರೋಲ್ ಮಾಡುತ್ತಾರೆ. ಅದಕ್ಕೆಲ್ಲಾ ಖಾರವಾಗಿ ಆಕೆ ಪ್ರತಿಕ್ರಿಯಿಸಿದ್ದಾರೆ. ಎರಡು ಮಕ್ಕಳ ತಾಯಿಯನ್ನು ಆಂಟಿ ಎನ್ನದೇ ಬೇರೇನು ಕರೆಯಬೇಕು ಎಂದು ಕೆಲವರು ಕಾಮೆಂಟ್ ಮಾಡುವುದು ಇದೆ. ಕೆಟ್ಟ ಅರ್ಥದಲ್ಲಿ ನನ್ನನ್ನು ಆಂಟಿ ಎನ್ನುತ್ತಾರೆ ಎಂದು ಆಕೆ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ.

Anasuya Bharadwaj warned a man who called her Aunty at a public Holi event

ಇತ್ತೀಚೆಗೆ ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ಹೋಳಿ ಸೆಲೆಬ್ರೇಷನ್ ಕಾರ್ಯಕ್ರಮಕ್ಕೆ ಅನಸೂಯ ಭಾರಧ್ವಜ್ ಹಾಜರಾಗಿದ್ದರು. ಬಿಳಿ ಸೀರೆ ಉಟ್ಟು ಹೋಳಿ ಹಚ್ಚಿಕೊಂಡು ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಈ ವೇಳೆ ಅನಸೂಯ ವೇದಿಕೆಯಲ್ಲಿದ್ದಾಗ ಎದುರಿನ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ 'ಆಂಟಿ' ಎಂದು ಕೂಗಿದ್ದಾನೆ. ಇದ್ದಕ್ಕಿದಂತೆ ಗರಂ ಆಗಿದ್ದ ಅನಸೂಯ ಧೈರ್ಯ ಇದ್ದರೆ ವೇದಿಕೆ ಮೇಲೆ ಬಾರೋ ಎಂದು ಸವಾಲ್ ಹಾಕಿದ್ದಾರೆ.

"ಗುಂಪಿನಲ್ಲಿ ನಿನ್ನ ಮುಖ ನನಗೆ ನೆನಪಿದೆ. ಇಲ್ಲಿಗೆ ಬಂದುಬಿಡು, ಅವನನ್ನು ಇಲ್ಲಿ ಕಳುಹಿಸಿ" ಎಂದು ಮೈಕ್ ಹಿಡಿದು ಅನಸೂಯ ಹೇಳಿದ್ದಾರೆ. ನನ್ನನ್ನು ಕೆಣಕಿದರೆ ಏನಾಗುತ್ತದೆ ಎಂದು ನಿನಗೆ ಗೊತ್ತಾಗಬೇಕು ಬಾ. ಬರೋಕೆ ಧೈರ್ಯ ಇಲ್ಲವೇ, ವೇದಿಕೆ ಏರಲು ಭಯದಿಂದ ಉಚ್ಚೆ ಹೊಯ್ದುಕೊಳ್ಳುವಂತಾಗಿದ್ಯಾ? ಎಂದು ಸನ್ನೆ ಮಾಡಿ ಅನುಸೂಯ ಕೌಂಟರ್ ಕೊಟ್ಟಿದ್ದಾರೆ. ಸುತ್ತಾಮುತ್ತ ಬೌನ್ಸರ್ಸ್ ಇದ್ದಿದ್ದು ನೋಡಿ ಆ ಯುವಕ ಸೈಲೆಂಟ್‌ ಆಗಿಬಿಟ್ಟಿದ್ದಾನೆ.

ಸೆಲೆಬ್ರೆಟಿಗಳು ಪಬ್ಲಿಕ್ ಈವೆಂಟ್‌ಗಳಲ್ಲಿ ಭಾಗಿ ಆದಾಗ ಇಂತಹ ಕಹಿ ಅನುಭವ ಆಗುವುದು ಸಹಜ. ಸೋಶಿಯಲ್ ಮೀಡಿಯಾದಲ್ಲಿ ಹೇಗೆ ನಮ್ಮನ್ನು ಏನು ಮಾಡೋಕೆ ಆಗುವುದಿಲ್ಲ ಎಂದು ಅಟ್ಟಹಾಸ ಮೆರೆಯುತ್ತಾರೋ ಅದೇ ರೀತಿ ಗುಂಪಿನಲ್ಲಿ ಏನಾದರೂ ಹೇಳಿ ಸುಮ್ಮನಾಗಿಬಿಡುತ್ತಾರೆ. ಕೆಲವರು ಇದನ್ನು ಕೇಳಿಯೂ ಕೇಳಿಸಿಕೊಳ್ಳದಂತೆ ಸುಮ್ಮನಾಗುತ್ತಾರೆ. ಮತ್ತೆ ಕೆಲವರು ಅನಸೂಯ ರೀತಿ ಹೀಗೆ ತಿರುಗೇಟು ಕೊಡುತ್ತಾರೆ.

ಅನಸೂಯ ಭಾರಧ್ವಜ್ ಹೀಗೆ ಯುವಕನಿಗೆ ಸವಾಲು ಹಾಕಿರುವ ವೀಡಿಯೋ ವೈರಲ್ ಆಗ್ತಿದೆ. ಇನ್ನು ಆಕೆ ಹೋಳಿ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಬಂದು ಹೋಗಿರುವ ಫೋಟೊ, ವೀಡಿಯೋಗಳು ಸಖತ್ ಸದ್ದು ಮಾಡ್ತಿದೆ. ತೆಲುಗು ಕಿರುತೆರೆಯ 'ಜಬರ್ದಸ್ತ್' ಶೋ ನಿರೂಪಕಿಯಾಗಿ ಅನಸೂಯ ಜನಪ್ರಿಯತೆ ಗಳಿಸಿದರು. ಬಳಿಕ ಸಿನಿಮಾಗಳಲ್ಲಿ ಕೂಡ ಅವಕಾಶ ಪಡೆದಿದ್ದರು.

'ರಂಗಸ್ಥಳಂ' ಹಾಗೂ 'ಪುಷ್ಪ' ಸಿನಿಮಾಗಳಲ್ಲಿ ಅನಸೂಯಾ ಅವರಿಗೆ ಒಳ್ಳೆ ಪಾತ್ರಗಳು ಸಿಕ್ಕಿತ್ತು. ಇತ್ತೀಚೆಗೆ ಕಿರುತೆರೆಯಿಂದ ಅಂತರ ಕಾಯ್ದುಕೊಂಡು ಸಿನಿಮಾಗಳ ಕಡೆ ಹೆಚ್ಚು ಫೋಕಸ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದು ಫೋಟೊಶೂಟ್‌ಗಳ ಮೂಲಕ ಗಮನ ಸೆಳೆಯುತ್ತಾರೆ.

'ಲೈಗರ್' ಸಿನಿಮಾ ರಿಲೀಸ್ ವೇಳೆ ವಿಜಯ್ ದೇವರಕೊಂಡ ಬಗ್ಗೆ ಅನಸೂಯ ಮಾಡಿದ್ದ ಕಾಮೆಂಟ್ ಸಖತ್ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ದೇವರಕೊಂಡ ಅಭಿಮಾನಿಗಳು ಆಕೆಯನ್ನು ಟ್ರೋಲ್ ಮಾಡಲು ಆರಂಭಿಸಿದರು. ಆಂಟಿ ಎಂದು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಮಾಡಿದ್ದರು. ಆ ಬಳಿಕ ಅನಸೂಯ ಹಾಗೂ ದೇವರಕೊಂಡ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕಿರಿಕ್ ಹೆಚ್ಚಾಗಿತ್ತು.

More from Filmibeat

English summary
At a public Holi celebration event, Anasuya Bharadwaj warned a man against calling her Aunty;
Read more about: tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X