For Quick Alerts
  ALLOW NOTIFICATIONS  
  For Daily Alerts

  'ಆಂಟಿ' ಎಂದವರಿಗೆ ಫೈನಲ್ ವಾರ್ನಿಂಗ್ ಕೊಟ್ಟ ಅನಸೂಯ ಭಾರಧ್ವಜ್!

  |

  ನಟಿ, ನಿರೂಪಕಿ ಅನುಸೂಯ ಭಾರಧ್ವಜ್ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಜೊತೆಗೆ ಕೆಲವು ವಿವಾದದ ಮೂಲಕವು ಆಗಾಗ ಸುದ್ದಿ ಆಗುತ್ತಿರುತ್ತಾರೆ. ಈಗ ಮತ್ತೊಮ್ಮೆ ಟ್ರೋಲ್‌ಗೆ ತುತ್ತಾಗಿದ್ದಾರೆ. ಪದೇ, ಪದೇ ಅನುಸೂಯ ಟ್ರೋಲ್‌ಗೆ ತುತ್ತಾಗುತ್ತಾ ಇರುತ್ತಾರೆ. ಈಗ ಇವರನ್ನು ಆಂಟಿ ಎಂದು ಕರೆಯುವ ಮೂಲಕ ಟ್ರೋಲ್ ಮಾಡಲಾಗುತ್ತಿದೆ.

  ಟ್ರೋಲ್ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದೇ ಇರುವ ನಟಿ ಅನುಸೂಯ ಈಗ ಕೋಪದಿಂದ ಸಿಡಿದೆದ್ದಂತಿದೆ. ಹಾಗಾಗಿ ಟ್ರೋಲ್ ಮಾಡುವವರಿಗೆ ಬಿಸಿ ಮುಟ್ಟಿಸಿದ್ದಾರೆ. ಕೆಟ್ಟದಾಗಿ ಕಾಮೆಂಟ್ ಮಾಡುವವರಿಗೆ ಅನುಸೂಯ ತಿರುಗೇಟು ನೀಡಿದ್ದಾರೆ.

  'ಲೈಗರ್' ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು?'ಲೈಗರ್' ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು?

  ಈ ಬಗ್ಗೆ ಟ್ವೀಟ್ ಮಾಡಿರುವ ಅನುಸೂಯ, "ಇಲ್ಲಿಂದ.. ನನ್ನನ್ನು ನಿಂದಿಸಿರುವ ಪ್ರತಿಯೊಂದು ಖಾತೆಯ ಸ್ಕ್ರೀನ್‌ಶಾಟ್ ತೆಗೆಯುವುದು.. ಆಂಟಿ ಎಂದು ಕರೆಯುವ ಮೂಲಕ ನನಗೆ ವಯಸ್ಸಿನ ಬಗ್ಗೆ ನಾಚಿಕೆ ಪಡಿಸುವುದು.. ಇದಕ್ಕೆ ನನ್ನ ಕುಟುಂಬವನ್ನು ಸೇರಿಸಿದವರ ವಿರುದ್ಧ ನಾನು ಕೇಸ್ ದಾಖಲಿಸುತ್ತೇನೆ. ನೀವು ಯಾವುದೇ ಕಾರಣವಿಲ್ಲದೆ ನನ್ನ ತಂಟೆಗೆ ಬಂದರೆ, ಯಾಕಾದರೂ ಹೋದೆನೋ ಅನ್ನುವ ಮಟ್ಟಕ್ಕೆ ಕೊಂಡೊಯ್ಯುತ್ತೇನೆ. ಇದು ನನ್ನ ಅಂತಿಮ ಎಚ್ಚರಿಕೆ.." ಎಂದು ಬರೆದುಕೊಂಡಿದ್ದಾರೆ.

  ಈ ಹಿಂದೆ 'ಅರ್ಜುನ್ ರೆಡ್ಡಿ' ಚಿತ್ರದ ಪ್ರಮೋಷನ್ ವೇಳೆ ವಿಜಯ್ ದೇವರಕೊಂಡ ವೇದಿಕೆಯ ಮೇಲೆ ಕೆಟ್ಟ ಪದವನ್ನು ಬಳಸಿದನ್ನು ಅನೂಸೂಯ ವಿರೋಧ ಮಾಡಿದ್ದರು. ಇನ್ನು ಆಕೆ ಇತ್ತೀಚೆಗೆ ಮಾಡಿರುವ ಟ್ವೀಟ್ ಒಂದು ವಿಜಯ್ ದೇವರಕೊಂಡಗೆ ಪರೋಕ್ಷವಾಗಿ ಮಾಡಿದಂತಿದೆ. ಹಾಗಾಗಿ ವಿಜಯ್ ಅಭಿಮಾನಿಗಳು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

  "ಕರ್ಮ ಎನ್ನುವುದು ಬೂಮರಾಂಗ್ ಇದ್ದ ಹಾಗೆ. ತಡವಾದರೂ ಕೂಡ ಅದು ತಿರುಗಿ ಬರುತ್ತದೆ. ತಾಯಿಯ ನೋವು ಎಂದಿಗೂ ಹೊರಟು ಹೋಗುವುದಿಲ್ಲ. ಕರ್ಮ ಹಿಂದಿರುವುದು ಕಷ್ಟವಾದರೂ, ಹಿಂದಿರುಗಿ ಬರುವುದು ಮಾತ್ರ ಖಚಿತ." ಎಂದು ಬರೆದುಕೊಂಡಿದ್ದಾರೆ.

  ಇನ್ನು ಈ ವಿಚಾರದಲ್ಲಿ ಅನುಸೂಯ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಯಾರೆಲ್ಲಾ ಕೆಟ್ಟದಾಗಿ ಕಮೆಂಟ್ ಮಾಡುತ್ತಾ, ಟ್ರೋಲ್ ಮಾಡುತ್ತಿದ್ದಾರೆ. ಅದರಲ್ಲಿ ಹಲವಾರು ಟ್ವೀಟ್‌ಗಳನ್ನು ಮರು ಟ್ವೀಟ್ ಮಾಡಿ ಉತ್ತರ ಕೊಡುತ್ತಿದ್ದಾರೆ. ಮುಂದೆ ಅವರ ಮೇಲೆ ಕೇಸ್ ಹಾಕುವುದಾಗಿಯೂ ನಟಿ ಹೇಳಿಕೊಂಡಿದ್ದಾರೆ.

  English summary
  Anasuya Bharadwaj Warns Troller Who Commenting Her as Aunty, Know More
  Friday, August 26, 2022, 18:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X