For Quick Alerts
  ALLOW NOTIFICATIONS  
  For Daily Alerts

  ಲೈಂಗಿಕ ದೌರ್ಜನ್ಯಕ್ಕೆ ಯತ್ನ: ನಟಿಯ ಪತಿ ಬಂಧನ

  |

  ತೆಲುಗಿನ ಖ್ಯಾತ ಟಿವಿ ಕಾರ್ಯಕ್ರಮ ನಿರೂಪಕಿ ಮತ್ತು ನಟಿ ಶ್ಯಾಮಲಾ ಅವರ ಪತಿ ನರಸಿಂಹ ರೆಡ್ಡಿ ಅನ್ನು ವಂಚನೆ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಯತ್ನ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.

  ನರಸಿಂಹ ರೆಡ್ಡಿ ವಿರುದ್ಧ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದು, 'ನನ್ನಿಂದ 2017ರಿಂದಲೂ ನರಸಿಂಹ ರೆಡ್ಡಿ ಹಣ ಸಾಲವಾಗಿ ಪಡೆಯುತ್ತಿದ್ದರು. ಈಗ ಆ ಮೊತ್ತ 1 ಕೋಟಿ ರೂ ದಾಟಿದೆ. ಹಣ ಹಿಂತಿರಿಗಿಸುವಂತೆ ಕೇಳಿದಾಗ ನನಗೆ ಬೆದರಿಕೆ ಹಾಕಿದ್ದಲ್ಲದೆ, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  ಶ್ಯಾಮಲಾ ಹಾಗೂ ನರಸಿಂಹ ರೆಡ್ಡಿ ವಿವಾಹವಾಗಿ ಹತ್ತು ವರ್ಷವಾಗಿದೆ. ನರಸಿಂಹ ರೆಡ್ಡಿ ಸಹ ನಟರಾಗಿದ್ದವರು ನಟನಾಗಿ ಅವಕಾಶಗಳು ಸಿಗದ ಕಾರಣ ವ್ಯಾಪಾರ ಮಾಡುತ್ತಿದ್ದರು.

  ಪ್ರಕರಣದ ಬಗ್ಗೆ ಮಾಧ್ಯಗಳೊಂದಿಗೆ ಮಾತನಾಡಿರುವ ಶ್ಯಾಮಲಾ, 'ಇದೊಂದು ಸುಳ್ಳು ಪ್ರಕರಣ. ಪತಿ ನರಸಿಂಹ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಅವರು ಮಹಿಳೆಗೆ ಮೋಸ ಮಾಡುವ ವ್ಯಕ್ತಿ ಅಲ್ಲ. ನಾನು ಅವರನ್ನು ಪ್ರೀತಿಸಿ ಮದುವೆ ಆಗಿರುವಾಕೆ, ಅವರ ವ್ಯಕ್ತಿತ್ವ ಎಂಥಹದ್ದು ಎಂಬುದನ್ನು ಈ ಹತ್ತು ವರ್ಷಗಳಲ್ಲಿ ಕಂಡುಕೊಂಡಿದ್ದೇನೆ' ಎಂದಿದ್ದಾರೆ.

  'ಪ್ರಕರಣದ ಬಗ್ಗೆ ದೂರು ನೀಡಿರುವ ಮಹಿಳೆ ಬಗ್ಗೆ ಏನೂ ಗೊತ್ತಿಲ್ಲ ಎಂದಿರುವ ಶ್ಯಾಮಲಾ, 'ಪತಿಯ ಬಳಿ ಮಾತನಾಡಿ, ನಮ್ಮ ಹಿರಿಯರೊಟ್ಟಿಗೆ ವಕೀಲರೊಂದಿಗೆ ಮಾತನಾಡಿದ ಬಳಿಕವಷ್ಟೆ ಹೆಚ್ಚಿನ ಮಾಹಿತಿ ನೀಡುತ್ತೇನೆ' ಎಂದಿದ್ದಾರೆ ಶ್ಯಾಮಲಾ.

  English summary
  Telugu anchor Shyamala's husband Narasimha Reddy arrested in cheating and sexual harassment case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X