"ಹೌದು.. ನಾನು ಕುಡಿಯುತ್ತೇನೆ.. ಈ ವಿಷಯದಲ್ಲಿ ನಾನು ಸುಳ್ಳು ಹೇಳಲ್ಲ"- ಸೌಮ್ಯಾ ರಾವ್
ಕನ್ನಡದ ನಿರೂಪಕಿ ಸೌಮ್ಯಾ ರಾವ್ ನೇರ ನುಡಿಗಳಿಗೆ ಫೇಮಸ್. ತಮಗೆ ತೋಚಿದ್ದನ್ನು ನೇರವಾಗಿ ಹೇಳಿ ಬಿಡುವ ವ್ಯಕ್ತಿತ್ವ. ಕನ್ನಡತಿಯಾಗಿ ಕನ್ನಡದಲ್ಲಿಯೇ ವೃತ್ತಿ ಜೀವನ ಆರಂಭ ಮಾಡಿದರೂ ತೆಲುಗು ಕಿರುತೆರೆಯಲ್ಲಿ ಜನಪ್ರಿಯರಾಗಿದ್ದಾರೆ. ತಮ್ಮ ಸೌಂದರ್ಯ ಹಾಗೂ ಪಟ ಪಟ ಅಂತ ಮಾತಾಡುವ ಪ್ರತಿಭೆಯಿಂದ ಪರಭಾಷೆಯಲ್ಲಿಯೂ ನಿರೂಪಕಿಯಾಗಿ ಕೆಲಸ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ತೆಲುಗಿನಲ್ಲಿ 'ಜಬರ್ದಸ್ತ್' ಶೋ ಮೂಲಕ ನಿರೂಪಣೆ ಮಾಡಿ ತೆಲುಗು ಮಂದಿಯಿಂದ ಭೇಷ್ ಎನಿಸಿಕೊಂಡಿದ್ದಾರೆ.
ಸೌಮ್ಯಾ ರಾವ್ ಕಿರುತೆರೆಯಲ್ಲಿ ಕಡಿಮೆ ಸಮಯದಲ್ಲಿಯೇ ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಬಹುತೇಕ ತೆಲುಗು ಕಿರುತೆರೆಯಲ್ಲಿಯೇ ಹೆಚ್ಚು ಕೆಲಸ ಮಾಡುತ್ತಿರುವ ಸೌಮ್ಯಾ ರಾವ್ ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ವೃತ್ತಿ ಬದುಕು ಹೇಗೆ ಶುರುವಾಯ್ತು? ಬೆಳೆಯುವ ಹಂತದಲ್ಲಿ ತಾವು ಪಟ್ಟ ಪಾಡೇನು ಅನ್ನೋದನ್ನು ಓಪನ್ ಆಗಿ ಹೇಳಿಕೊಂಡಿದ್ದಾರೆ.

"ನಾನು ಜೀರೋಯಿಂದ ಬಂದಿದ್ದೇನೆ. ಪ್ರತಿಯೊಂದು ಹಂತದಲ್ಲಿಯೂ ಕಷ್ಟ ಪಟ್ಟಿದ್ದೇನೆ" ಎಂದು ಹೇಳಿಕೊಂಡಿದ್ದಾರೆ. ಸೌಮ್ಯಾ ರಾವ್ ಈಗ ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಈ ಸಂದರ್ಶನದಲ್ಲಿ ತಮ್ಮ ಕೆಲವು ವೈಯಕ್ತಿಕ ಹವ್ಯಾಸಗಳ ಬಗ್ಗೆನೂ ಹೇಳಿಕೊಂಡಿದ್ದಾರೆ. ಅದರಲ್ಲೂ ತಾನು ಮದ್ಯ ಸೇವನೆ ಮಾಡುತ್ತೇನೆ ಎಂದು ನೇರವಾಗಿ ಒಪ್ಪಿಕೊಂಡಿದ್ದಾರೆ.
ಇತ್ತೀಚೆಗೆ ಯೂಟ್ಯೂನ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸೌಮ್ಯಾ ತಮ್ಮ ಜೀವನದ ಕೆಲವು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಕೆಲವು ಅಭ್ಯಾಸಗಳ ಬಗ್ಗೆ ಮುಚ್ಚುಮರೆ ಇಲ್ಲದೆ ಮಾತಾಡಿದ್ದಾರೆ. ತೆಲುಗಿನ ಜನಪ್ರಿಯ ಶೋ 'ಜಬರ್ದಸ್ತ್' ನಿರೂಪಕಿ ವರ್ಷಾ ನಡೆಸುವ 'ಕಿಸಿಕ್ಕ್ ಟಾಕ್ಸ್' ಕಾರ್ಯಕ್ರಮಕ್ಕೆ ಸೌಮ್ಯಾ ಅತಿಥಿಯಾಗಿ ಭಾಗವಹಿಸಿದ್ದರು. ಇಲ್ಲಿ ವರ್ಷಾ ಜೊತೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಓಪನ್ ಆಗಿ ಮಾಡಿದ್ದಾರೆ. ಈ ವೇಳೆ ಡ್ರಿಂಕಿಂಗ್ ಅಭ್ಯಾಸದ ಬಗ್ಗೆ ಹಿಂಜರಿಕೆ ಇಲ್ಲದೆ ಮಾತನಾಡಿ ಸುದ್ದಿಯಾಗಿದ್ದಾರೆ.
"ನೀವು ಪಾರ್ಟಿಗಳಲ್ಲಿ ಡ್ರಿಂಕ್ಸ್ ಮಾಡುತ್ತೀರಾ?" ಎಂದು 'ಜಬರ್ದಸ್ತ್' ನಿರೂಪಕಿ ವರ್ಷಾ ಹೀಗೊಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಸೌಮ್ಯಾ " ಹೌದು, ನಾನು ವೈನ್ ಕುಡಿಯುತ್ತೇನೆ. ಮನಸ್ಸನ್ನು ರಿಫ್ರೆಶ್ ಮಾಡಿಕೊಳ್ಳುವುದಕ್ಕೆ ಮಧ್ಯ ಸೇವನೆ ಮಾಡುತ್ತೇನೆ. ಸ್ನೇಹಿತರೊಂದಿಗೆ ಪಾರ್ಟಿಗೆ ಹೋದರೆ ಒಂದು ರಿಂದ ಎರಡು ಪೆಗ್ ರೆಡ್ ವೈನ್ ಕುಡಿಯಲೇಬೇಕು. ಈ ವಿಷಯದಲ್ಲಿ ನಾನು ಸುಳ್ಳು ಹೇಳಲು ಬಯಸುವುದಿಲ್ಲ." ಎಂದು ಹೇಳಿದ್ದಾರೆ.
ಹಾಗೇ ಮಾತುಕತೆಯನ್ನು ಮುಂದುವರೆಸಿ, "ನನಗೆ ಕುಡಿಯುವುದೇ ಇಲ್ಲ ಎಂದು ಸುಳ್ಳು ಹೇಳುವ ಅಗತ್ಯವೇನು? ನಾನು ಏನು ಮಾಡುತ್ತೇನೋ, ಅದನ್ನೇ ನೇರವಾಗಿ ಹೇಳುತ್ತೇನೆ ಅಷ್ಟೇ" ಎಂದು ನೇರವಾಗಿ ಯಾವುದೇ ಅಂಜಿಕೆ ಇಲ್ಲದೆ ಹೇಳಿದ್ದಾರೆ. ಹಾಗೇ ಒಂದು ಕ್ಲಾರಿಟಿಯನ್ನೂ ಕೊಟ್ಟಿದ್ದಾರೆ. "ಕುಡಿತವೇ ಅಭ್ಯಾಸವಾಗಿಬಿಡಬಾರದು. ಕೇವಲ ರಿಫ್ರೆಶ್ ಆಗುವುದಕ್ಕೆ ಒಂದು ಮಿತಿಯಲ್ಲಿ ತೆಗೆದುಕೊಂಡರೆ ಒಳ್ಳೆಯದು" ಎಂದು ಹೇಳಿಕೊಂಡಿದ್ದಾರೆ.
ಸೌಮ್ಯಾ ಓಪನ್ ಆಗಿ ಮಾತಾಡುತ್ತಿದ್ದಂತೆ ಇನ್ನೊಂದು ಪ್ರಶ್ನೆಯನ್ನೂ ಕೇಳಿದ್ದಾರೆ. "ನೀವು ಕುಡಿದ ಕೂಡಲೇ ನಿಮ್ಮ ಮನಸ್ಸಿಗೆ ಏನು ಬರುತ್ತೆ?" ಎಂದಾಗ, ಸೌಮ್ಯಾ ಆಶ್ಚರ್ಯವಾಗುವಂತ ಉತ್ತರ ಕೊಟ್ಟಿದ್ದಾರೆ. "ನಾನು ಕೂಡಿದ ಕೂಡಲೇ ನನಗೆ ತಕ್ಷಣಕ್ಕೆ ನೆನಪಾಗೋದು ಚಿತ್ರರಂಗ. ಆ ನಿರ್ದೇಶಕ ನನ್ನನ್ನು ಹೇಗೆ ನಡೆಸಿಕೊಂಡ? ಆ ಕಲಾವಿದ ನನ್ನೊಂದಿಗೆ ಹೀಗೆ ನಡೆದುಕೊಂಡ? ನನಗೆ ಅವಕಾಶ ಕೊಡದೇ ಇರೋರು ಯಾರು? ನನ್ನ ಡೈಲಾಗ್ ಕಟ್ ಮಾಡಿದವರು ಯಾರು? ಎಂಬ ವಿಷಯಗಳೇ ಕಾಡುತ್ತವೆ" ಎಂದು ಹೇಳಿದ್ದಾರೆ.
ನಿರೂಪಕಿ ಸೌಮ್ಯಾ ನೇರವಾದ ಮಾತುಗಳು ಕೆಲವರಿಗೆ ಇಷ್ಟ ಆಗಿಲ್ಲ. ಅದರಲ್ಲೂ ಚಿತ್ರರಂಗದ ಬಗ್ಗೆ ಮಾತಾಡುತ್ತಿದ್ದಂತೆ ಅವರು ದೂರ ಸರಿಯುತ್ತಾರೆ. ಹೀಗಾಗಿ ನನ್ನೊಂದಿಗೆ ಪಾರ್ಟಿಗೆ ಬರುವುದನ್ನೂ ನಿಲ್ಲಿಸಿದ್ದಾರೆ. ಸೌಮ್ಯಾ ಅವರ ಈ ಹೇಳಿಕೆಯನ್ನು ತೆಲುಗು ಮಾಧ್ಯಮಗಳು ಸುದ್ದಿ ಮಾಡಿದ್ದು, ವೈರಲ್ ಆಗುತ್ತಿವೆ.


Click it and Unblock the Notifications











