ಮಗನಿಗೆ ನೆಚ್ಚಿನ ನಟನ ಹೆಸರಿಡಲು ಬಯಸಿದ್ದ ನಿರೂಪಕಿ, ಒಪ್ಪದ ಅತ್ತೆ, ಮುಂದೇನಾಯ್ತು?

ನೆಚ್ಚಿನ ನಟ-ನಟಿಯರ ಮೇಲೆ ಅಭಿಮಾನಿಗಳ ಪ್ರೀತಿ, ಅಭಿಮಾನ ಯಾವ ರೀತಿ ಇರುತ್ತದೆ ಎಂದು ಬಿಡಿಸಿ ಹೇಳುವುದು ಬೇಕಾಗಿಲ್ಲ. ತಮ್ಮ ಮೈಮೇಲೆ ತಮ್ಮ ಇಷ್ಟದ ನಟನ ಹೆಸರು, ಭಾವಚಿತ್ರವನ್ನು ಟ್ಯಾಟೂ ಹಾಕಿಸಿಕೊಳ್ಳುವವರೂ ಇದ್ದಾರೆ. ತಾವು ಕಟ್ಟಿಸಿದ ಮನೆಯ ಮೇಲೆ ಆರಾಧ್ಯ ದೇವರ ಫೋಟೊ, ಹೆಸರು ಹಾಕಿಸುವವರು ಇದ್ದಾರೆ.

ತಮ್ಮ ಮಕ್ಕಳಿಗೆ ಕೂಡ ತಮ್ಮ ನೆಚ್ಚಿನ ನಟ, ನಟಿಯರ ಹೆಸರನ್ನು ನಾಮಕರಣ ಮಾಡುವವರು ಇದ್ದಾರೆ. ಇನ್ನು ದೊಡ್ಡ ಸೆಲೆಬ್ರೆಟಿಗಳು ಕೂಡ ಮತ್ತೊಬ್ಬರ ಅಭಿಮಾನಿ ಆಗಿರುತ್ತಾರೆ. ತೆಲುಗು ನಿರೂಪಕಿ ಸ್ರವಂತಿ ಚೊಕ್ಕರಾಪು ತೆಲುಗು ನಟ ಪವನ್ ಕಲ್ಯಾಣ್ ಅಭಿಮಾನಿ. ಒಂದಷ್ಟು ಕಾರ್ಯಕ್ರಮಗಳನ್ನು ಆಕೆ ನಿರೂಪಣೆ ಮಾಡಿ ಗಮನ ಸೆಳೆಯುತ್ತಾರೆ. ಕೆಲ ವರ್ಷಗಳ ಹಿಂದೆ ಪ್ರಶಾಂತ್ ಎಂಬುವವರ ಜೊತೆ ಆಕೆಯ ಮದುವೆ ಆಗಿತ್ತು.

Anchor Sravanthi chokkarapu who wanted to name her son Pawan Kalyan then what happened

ನಿರೂಪಕಿ ಶ್ರಾವಂತಿ ಮೊದಲಿನಿಂದಲೂ ನಟ ಪವನ್ ಕಲ್ಯಾಣ್ ದೊಡ್ಡ ಅಭಿಮಾನಿ. ಅವರ ಪತಿ ಕೂಡ ಪವರ್ ಸ್ಟಾರ್ ಅಭಿಮಾನಿ. ಈ ವಿಷಯವನ್ನು ಇಬ್ಬರೂ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಶ್ರಾವಂತಿ ಗರ್ಭಿಣಿಯಾಗಿದ್ದಾಗ ಮಗ ಹುಟ್ಟಿದರೆ ಪವನ್ ಕಲ್ಯಾಣ್ ಎಂದು ಹೆಸರಿಡಲು ನಿರ್ಧರಿಸಿದ್ದರಂತೆ. ಮಗ ಹುಟ್ಟಿದ ಮೇಲೆ ಈ ವಿಚಾರವನ್ನು ಮನೆಯಲ್ಲಿ ಹೇಳಿದ್ದರು.

ಮೊಮ್ಮಗನಿಗೆ ಪವನ್ ಕಲ್ಯಾಣ್ ಹೆಸರಿಡಲು ಆಕೆಯ ಅತ್ತೆ ಒಪ್ಪಲಿಲ್ಲ. ಹಾಗಾಗಿ ಸ್ರವಂತಿ ಪಟ್ಟು ಹಿಡಿದಿದ್ದರು. ಇಲ್ಲ ಪವನ್ ಕಲ್ಯಾಣ್ ಹೆಸರು ಇಡಬೇಕು ಎಂದಿದ್ದರಂತೆ. ಪತಿಯೂ ಆಕೆಯನ್ನು ಬೆಂಬಲಿಸಿದರು. ಆದರೆ ಅವರ ಅತ್ತೆ, ಆ ರೀತಿ ಮಾಡಬಾರದು. ಜನ್ಮ ನಕ್ಷತ್ರದ ಪ್ರಕಾರ 'ಅ' ಅಕ್ಷರದಿಂದ ಮಗುವಿಗೆ ಹೆಸರಿಡಬೇಕು ಎಂದ ಹೇಳಿದ್ದರಂತೆ. ಸರಿ, ಪವನ್ ಕಲ್ಯಾಣ್ ಹೆಸರು ಇಡಲು ಸಾಧ್ಯವಾಗಲಿಲ್ಲ. ಕೊನೆಪಕ್ಷ ಅಕಿರಾ ಎಂದು ಮಗನಿಗೆ ಹೆಸರಿಡಲು ಸವ್ರಂತಿ ನಿರ್ಧರಿಸಿದರು.

ಬಳಿಕ ಎಲ್ಲರನ್ನು ಒಪ್ಪಿಸಿ ಸ್ರವಂತಿ ಹಾಗೂ ಪ್ರಶಾಂತ್ ತಮ್ಮ ಮಗನಿಗೆ ಅಕಿರಾ ನಂದನ್ ಎಂದು ನಾಮಕರಣ ಮಾಡಿದ್ದಾಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಪವನ್ ಕಲ್ಯಾಣ್‌ ಹಾಗೂ ರೇಣು ದೇಸಾಯಿ ಮಗನ ಹೆಸರು ಅಕಿರಾ ನಂದನ್. ಹಾಗಾಗಿ ಅದೇ ಹೆಸರನ್ನು ತಮ್ಮ ಮಗನಿಗೆ ಇಟ್ಟಿದ್ದಾಗಿ ಸ್ರವಂತಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಜನ್ಮ ನಕ್ಷತ್ರದ ಪ್ರಕಾರ ಅಕಿರಾ ಎಂದು ಹೆಸರಿಟ್ಟಿದ್ದಕ್ಕೆ ಕುಟುಂಬಸ್ಥರು ಖುಷಿಯಾಗಿದ್ದಾರೆ ಎಂದು ವಿವರಿಸಿದ್ದರು. ಸ್ರವಂತಿ ತೆಲುಗು ಬಿಗ್‌ಬಾಸ್ ಓಟಿಟಿ ಸ್ಪರ್ಧಿ ಸಹ ಆಗಿದ್ದರು.

Anchor Sravanthi chokkarapu who wanted to name her son Pawan Kalyan then what happened

ಸದ್ಯ ಪವನ್ ಕಲ್ಯಾಣ್ ಆಂಧ್ರ ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಭಿಮಾನಿಗಳು ಸ್ರವಂತಿ ಅಭಿಮಾನ ಮಾತುಗಳನ್ನು ವೈರಲ್ ಮಾಡುತ್ತಿದ್ದಾರೆ. ಜನಸೇನಾ ಪಕ್ಷ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಎನ್‌ಡಿಎ ಸರ್ಕಾರಕ್ಕೂ ಪವರ್ ಸ್ಟಾರ್ ಬೆಂಬಲ ಸೂಚಿಸಿದ್ದಾರೆ. ಇನ್ನು ಇತ್ತೀಚೆಗೆ ಅಕಿರಾ ನಂದನ್ ಹೆಸರು ಟ್ರೆಂಡ್ ಆಗಿತ್ತು. ದೆಹಲಿಗೆ ತೆರಳಿ ಪ್ರಧಾನಿ ಮೋದಿಯನ್ನು ಭೇಟಿ ಮಾಡಿ ಬಂದಿದ್ದ.

ಅಕಿರಾ ನಂದನ್ ಕೂಡ ಚಿತ್ರರಂಗಕ್ಕೆ ಬರಬೇಕು ಎನ್ನುವುದು ಪವರ್ ಸ್ಟಾರ್ ಅಭಿಮಾನಿಗಳ ಮಹದಾಸೆಯಾಗಿದೆ. ಸಿನಿಮಾ ಎಡಿಟಿಂಗ್ ಕೂಡ ಆತ ಕಲಿಯುತ್ತಿದ್ದಾನೆ. ಸದ್ಯಕ್ಕೆ ಆತನಿಗೆ ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ಇಲ್ಲ ಎಂದು ತಾಯಿ ರೇಣು ದೇಸಾಯಿ ಹೇಳಿದ್ದಾರೆ. ಪವನ್- ರೇಣು ವಿಚ್ಛೇದನ ಪಡೆದು ದೂರಾಗಿದ್ದಾರೆ. ರಾಜಕೀಯರಂಗದಲ್ಲಿ ಪವನ್ ಕಲ್ಯಾಣ್ ಸಕ್ರಿಯರಾಗಿದ್ದು ಮುಂದೆ ಮೊದಲಿನಂತೆ ಸಿನಿಮಾಗಳಲ್ಲಿ ನಟಿಸುತ್ತಾರಾ? ಎನ್ನುವ ಅನುಮಾನವೂ ಅಭಿಮಾನಿಗಳಲ್ಲಿದೆ. ಹಾಗಾಗಿ ಅಕಿರಾ ಚಿತ್ರರಂಗಕ್ಕೆ ಬರಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ.

More from Filmibeat

English summary
Pawan kalyan die hard fan Sravanthi chokkarapu's son name akira Nandan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X