For Quick Alerts
  ALLOW NOTIFICATIONS  
  For Daily Alerts

  ಮದುವೆಯ ಅವಶ್ಯಕತೆ ಏನಿದೆ? ಮದುವೆ ಆಗುವುದಿಲ್ಲ ಎಂದ ನಟಿ

  |

  ಭಾರತೀಯ ಸಾಮಾಜಿಕ ಪರಿಸರದಲ್ಲಿ ಮದುವೆ ಒಂದು ಅತ್ಯವಶ್ಯಕ ಬಂಧ. ವ್ಯಕ್ತಿಯ ಜೀವನದಲ್ಲಿ ಮದುವೆ ಅತ್ಯಂತ ಪ್ರಮುಖ ಘಟ್ಟ ಎಂದು ನಂಬಲಾಗಿದೆ.

  Recommended Video

  ನನ್ನ ತಂದೆಯ ಬಗ್ಗೆ ಏನಾದರು ಪೋಸ್ಟ್‌ ಹಾಕ್ತಿನಿ ನಿಮಗೇನು ಅಂದ ಡಾನ್ ಜಯರಾಜ್ ಮಗ | Ajith Jayaraj

  ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಸ್ಥಾನವನ್ನು ಲಿವ್‌ ಇನ್ ರಿಲೇಶನ್‌ಶಿಪ್‌ಗಳು ಆಕ್ರಮಿಸಿಕೊಳ್ಳುತ್ತಿವೆ. ಪ್ರೀತಿಯ, ಕಾನೂನಿನ ಒಪ್ಪಂದವಿಲ್ಲದೆ, ತಂತಮ್ಮ ಅವಶ್ಯಕತೆಗಳಿಗೆ ಅನುಸಾರವಾಗಿ ಗಂಡು-ಹೆಣ್ಣು ಒಟ್ಟಿಗೆ ಬಾಳುವುದನ್ನು ಲಿವ್ ಇನ್ ರಿಲೇಶನ್‌ಶಿಪ್ ಎನ್ನಲಾಗುತ್ತದೆ.

  ಯುವಸಮೂಹ ಈ ಲಿವ್‌ ಇನ್ ರಿಲೇಶನ್‌ ಶಿಪ್‌ಗೆ ಆಕರ್ಷಿತರಾಗುತ್ತಿದ್ದಾರೆ. ಬಾಲಿವುಡ್‌ನಲ್ಲಿ ಈಗಾಗಲೇ ಈ ಸಂಸ್ಕೃತಿ ಇದೆ. ಇತ್ತೀಚೆಗೆ ದಕ್ಷಿಣ ಭಾರತದಲ್ಲೂ ಬರುತ್ತಿದೆ. ಇದಕ್ಕೆ ಸಾಕ್ಷಿಯಾಗಿ ತೆಲುಗಿನ ನಟಿ, ಖ್ಯಾತ ಆಂಕರ್ ಒಬ್ಬರು ತಮಗೆ ಮದುವೆಯ ಮೇಲೆ ಆಸಕ್ತಿಯೇ ಇಲ್ಲ ಎಂದಿದ್ದಾರೆ.

  ಹೌದು, ತೆಲುಗಿನ ಚಿತ್ರನಟಿ ಮತ್ತು ಜನಪ್ರಿಯ ಟಿವಿ ನಿರೂಪಕಿ ಆಗಿರುವ ವರ್ಷಿಣಿ ತಾವು ಮದುವೆಯೇ ಆಗುವುದಿಲ್ಲ ಎಂದಿದ್ದಾರೆ. ಅಷ್ಟೆ ಅಲ್ಲದೆ, ಜೀವನದಲ್ಲಿ ಮದುವೆ ಏಕೆ ಮುಖ್ಯ ಎಂದು ಪ್ರಶ್ನೆಯನ್ನೂ ಮಾಡಿದ್ದಾರೆ.

  Anchor Varshini Said She Would Not Married

  ವರ್ಷಿಣಿ ಬಗ್ಗೆ ಎದ್ದಿರುವ ಗಾಸಿಪ್‌ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, 'ಜೀವನದಲ್ಲಿ ಮದುವೆ ಎಂಬುದು ಅಷ್ಟೋಂದು ಅವಶ್ಯಕವಾ? ನನಗೆ ಮದುವೆ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ನನಗೆ ಮದುವೆ ಆಗುವುದು ಇಷ್ಟವೂ ಇಲ್ಲ. ನನಗೆ 'ಸಿಂಗಲ್' ಸ್ಟೇಟಸ್ ಚೆನ್ನಾಗಿದೆ ಎಂದು ಹೇಳಿದ್ದಾರೆ ವರ್ಷಿಣಿ.

  ನಾನು ಜೀವನದಲ್ಲಿ ಈವರೆಗೆ ಕಷ್ಟ ಪಟ್ಟಿಲ್ಲ. ನನ್ನ ತಂದೆ-ತಾಯಿ ನಾನು ಕಷ್ಟಗಳನ್ನೇ ನೋಡದಂತೆ ಬೆಳೆಸಿದ್ದಾರೆ. ಕಷ್ಟಗಳು ಎಂದರೇನು ಎಂಬುದೇ ನನಗೆ ತಿಳಿದಿಲ್ಲ. ನಾನು ನನ್ನ ಜೀವನವನ್ನು ನಿಜವಾಗಿ ಆನಂದಿಸುತ್ತಿದ್ದೇನೆ, ಇದು ಹೀಗೆಯೇ ಇರಲಿ ಎಂಬುದು ನನ್ನ ಆಸೆ ಎಂದಿದ್ದಾರೆ ವರ್ಶಿಣಿ.

  ಸುಡಿಗಾಲಿ ಸುಧೀರ್ ಜೊತೆ ಅಫೇರ್‌ ಬಗ್ಗೆ ಸ್ಪಷ್ಟನೆ ಕೊಟ್ಟ ವರ್ಶಿಣಿ. ನಾನು ಸುಧೀರ್ ಉತ್ತಮ ಗೆಳೆಯರು, ಆತ ನನಗೆ ಅಣ್ಣನ ರೀತಿ. ನಮ್ಮಿಬ್ಬರ ನಡುವೆ ಯಾವುದೇ ಸಂಬಂಧ ಇಲ್ಲ. ಸುಧೀರ್‌ ಗೆ ರಶ್ಮಿ ಸರಿಯಾದ ಜೋಡಿ ಎಂದು ವರ್ಶಿಣಿ ಹೇಳಿದ್ದಾರೆ.

  English summary
  Anchor Varshini said she did not believe in marriage relationship so she would not marry anybody in future.
  Monday, May 18, 2020, 14:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X