For Quick Alerts
  ALLOW NOTIFICATIONS  
  For Daily Alerts

  ಅಂಧಾದುನ್ ತೆಲುಗು ರೀಮೇಕ್ ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರತಂಡ

  |

  ಬಾಲಿವುಡ್ ಸೂಪರ್ ಹಿಟ್ ಚಿತ್ರ ಅಂಧಾದುನ್ ತೆಲುಗಿನಲ್ಲಿ ರೀಮೇಕ್ ಆಗುತ್ತಿರುವುದು ತಿಳಿದಿರುವ ವಿಚಾರ. ಇದೀಗ, ತೆಲುಗು ವರ್ಷನ್ ಅಂಧಾದುನ್ ಸಿನಿಮಾ ಬಿಡುಗಡೆ ದಿನಾಂಕ ಬಹಿರಂಗವಾಗಿದೆ.

  ನಟ ನಿತೀನ್, ತಮನ್ನಾ ಭಾಟಿಯಾ ಹಾಗೂ ನಭಾ ನಟೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಅಂಧಾದುನ್ ತೆಲುಗು ಸಿನಿಮಾ ಜೂನ್ 15 ರಂದು ರಿಲೀಸ್ ಆಗಲಿದೆ. ಈ ಕುರಿತು ನಟಿ ತಮನ್ನಾ ಟ್ವಿಟ್ಟರ್‌ನಲ್ಲಿ ಅಧಿಕೃತ ದಿನಾಂಕ ಪ್ರಕಟಿಸಿದ್ದಾರೆ.

  ಅಂಧಾದುನ್ ತಮಿಳು ರೀಮೇಕ್ ಹೆಸರು ಫಿಕ್ಸ್, ಟಬು ಪಾತ್ರದಲ್ಲಿ ಸ್ಟಾರ್ ನಟಿಅಂಧಾದುನ್ ತಮಿಳು ರೀಮೇಕ್ ಹೆಸರು ಫಿಕ್ಸ್, ಟಬು ಪಾತ್ರದಲ್ಲಿ ಸ್ಟಾರ್ ನಟಿ

  ಆಯುಷ್ಮಾನ್ ಖುರಾನ್ ಪಾತ್ರದಲ್ಲಿ ನಿತೀನ್ ಹಾಗೂ ಟಬು ಪಾತ್ರದಲ್ಲಿ ತಮನ್ನಾ ಹಾಗೂ ರಾಧಿಕಾ ಆಪ್ಟೆ ಪಾತ್ರದಲ್ಲಿ ನಭಾ ನಟೇಶ್ ಕಾಣಿಸಿಕೊಳ್ಳುತ್ತಿದ್ದಾರೆ. ದುಬೈನಲ್ಲಿ ಚಿತ್ರದ ಮೊದಲ ಹಂತದ ಶೂಟಿಂಗ್ ಆರಂಭವಾಗಿತ್ತು.

  ತೆಲುಗು ವರ್ಷನ್ ಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲ. ಸದ್ಯಕ್ಕೆ ನಿತೀನ್ 30 ಎಂದು ಹೇಳಲಾಗುತ್ತಿದೆ. ಫೆಬ್ರವರಿ 24, 2020 ರಲ್ಲಿ ಸಿನಿಮಾ ಆರಂಭವಾಗಿತ್ತು. ಈ ನಡುವೆ ಕೊರೊನಾ ವೈರಸ್ ಕಾರಣದಿಂದ ಶೂಟಿಂಗ್ ಸ್ಥಗಿತಗೊಂಡಿತ್ತು.

  2018ರಲ್ಲಿ ತೆರೆಕಂಡಿದ್ದ 'ಅಂಧಾದುನ್' ಚಿತ್ರವನ್ನ ಹಿಂದಿಯಲ್ಲಿ ಶ್ರೀರಾಮ್ ರಾಘವನ್ ನಿರ್ದೇಶಿಸಿದ್ದರು. 2019ನೇ ಸಾಲಿನಲ್ಲಿ ಪ್ರಕಟವಾದ ರಾಷ್ಟ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಪಡೆದುಕೊಂಡಿತ್ತು.

  ಈ ವರ್ಷ ಕೀರ್ತಿ ಸುರೇಶ್ ಮದುವೆ, ಹುಡುಗ ಯಾರು ಗೊತ್ತಾ | Filmibeat Kannada

  ಅಂದ್ಹಾಗೆ, ತಮಿಳಿನಲ್ಲೂ ಅಂಧಾದುನ್ ರೀಮೇಕ್ ಆಗುತ್ತಿದ್ದು, ನಿರ್ಮಾಪಕ ತ್ಯಾಗರಾಜನ್ ನಿರ್ಮಾಣ ಮಾಡುತ್ತಿದ್ದಾರೆ. ತಮಿಳಿನಲ್ಲಿ 'ಅಂಧಾಗನ್' ಎಂಬ ಹೆಸರು ಅಂತಿಮವಾಗಿದೆ. ಹಿಂದಿಯಲ್ಲಿ ಆಯುಷ್ಮಾನ್ ಖುರಾನ್ ನಟಿಸಿದ್ದ ಪಾತ್ರದಲ್ಲಿ ಪ್ರಶಾಂತ್ ಅಭಿನಯಿಸುತ್ತಿದ್ದು, ಟಬು ನಿರ್ವಹಿಸಿದ್ದ ಪಾತ್ರದಲ್ಲಿ ಸ್ಟಾರ್ ನಟಿ ಸಿಮ್ರಾನ್ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Actor Nithiin starrer Andhadhun Telugu remake will hit screen on June 15th. the movie directed by Director Merlapaka Gandhi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X