ನಗರಿ ಕ್ಷೇತ್ರದಲ್ಲಿ ವೈಎಸ್‌ಆರ್‌ಸಿಪಿ ಫೈಯರ್ ಬ್ರ್ಯಾಂಡ್ ರೋಜಾ ಹೀನಾಯ ಸೋಲು

ಆಂಧ್ರ ವಿಧಾನಸಭೆ ಚುನಾವಣೆ ಮತ ಎಣಿಕೆ ಭರದಿಂದ ಸಾಗುತ್ತಿದೆ. ಆರಂಭದಲ್ಲಿ ಕೆಲವರು ಹಿನ್ನಡೆ ಸಾಧಿಸಿದರೆ ಕೆಲವರು ಮುನ್ನಡೆಯೊಂದಿಗೆ ಗೆಲುವಿನ ದಡ ಸೇರಲು ಮುಂದಾಗಿದ್ದಾರೆ. ಸಿನಿಮಾ ತಾರೆಯರು ಈ ಬಾರಿ ಅದೃಷ್ಟ ಪರೀಕ್ಷೆಗಳಿದಿದ್ದಾರೆ. ಅದರಲ್ಲಿ ಪವನ್ ಕಲ್ಯಾಣ್, ಬಾಲಕೃಷ್ಣ, ರೋಜಾ ಸ್ಪರ್ಧಿಸಿರುವ ಕ್ಷೇತ್ರಗಳ ಫಲಿತಾಂಶ ಕುತೂಹಲ ಮೂಡಿಸಿದೆ.

ಪೀಠಾಪುರದಲ್ಲಿ ಪವನ್ ಕಲ್ಯಾಣ್ ಹಾಗೂ ಹಿಂದೂಪುರದಲ್ಲಿ ಬಾಲಕೃಷ್ಣ ಆರಂಭದಿಂದಲೂ ಮುನ್ನಡೆ ಸಾಧಿಸಿದರು. ಆದರೆ ನಗರಿ ಕ್ಷೇತ್ರದಲ್ಲಿ ಹಾಲಿ ಸಚಿವೆ ರೋಜಾ ಹಿನ್ನಡೆ ಅನುಭವಿಸಿದ್ದರು. ಈ ಬಾರಿ ಆಕೆ ಗೆಲುವುದು ಕಷ್ಟ ಎನ್ನುವ ಚರ್ಚೆ ಶುರುವಾಗಿತ್ತು. ತೆಲುಗು, ತಮಿಳು, ಕನ್ನಡದ ಹಲವು ಸಿನಿಮಾಗಳಲ್ಲಿ ನಟಿ ರೋಜಾ ನಟಿಸಿದ್ದಾರೆ. ಇತ್ತೀಚೆಗೆ ಆಂಧ್ರ ರಾಜಕೀಯರಂಗದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.

Andhra assembly Election Results 2024 RK Roja trailing in Nagari constituency

ತಮ್ಮ ನೇರಾನೇರ ಮಾತುಗಳಿಂದ ರೋಜಾ ಆಂಧ್ರ ರಾಜಕಾರಣದಲ್ಲಿ ಸದ್ದು ಮಾಡುತ್ತಾ ಬರುತ್ತಿದ್ದಾರೆ. ಪ್ರತಿಪಕ್ಷಗಳ ವಿರುದ್ಧ ಸದಾ ವಾಗ್ದಾಳಿ ನಡೆಸುತ್ತಾ ವೈಎಸ್‌ಆರ್‌ ಕಾಂಗ್ರೆಸ್ ಪಾರ್ಟಿ ಫೈಯರ್ ಬ್ರ್ಯಾಂಡ್ ಆಗಿ ಎಂದೇ ಗುರ್ತಿಸಿಕೊಂಡಿದ್ದಾರೆ. ಇನ್ನು ಸ್ವಪಕ್ಷದವರೇ ನಟಿ ರೋಜಾ ಸೋಲಿಗೆ ಪ್ರಯತ್ನಿಸಿದರು ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ಅಂತಿಮವಾಗಿ ರೋಜಾ 45004 ಮತಗಳ ಅಂತರದಲ್ಲಿ ಸೋತಿದ್ದಾರೆ. 107797 ಮತಗಳನ್ನು ಗಳಿಸಿ ಟಿಡಿಪಿ ಅಭ್ಯರ್ಥಿ ಗಾಲಿ ಭಾನು ಪ್ರಕಾಶ್ ಗೆಲುವಿನ ನಗೆ ಬೀರಿದ್ದಾರೆ.

ನಟಿ ರೋಜಾ ರಾಜಕೀಯರಂಗದ ಹಿನ್ನೆಲೆ ನೋಡುವುದಾದರೆ 1998 ರಲ್ಲಿ ಟಿಡಿಪಿಗೆ ಸೇರಿದ್ದರು. ಪಕ್ಷದ ತೆಲುಗು ಮಹಿಳಾ ವಿಭಾಗದ ಅಧ್ಯಕ್ಷರಾಗಿ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದರು. 2004 ರ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ರೋಜಾ ನಗರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ 59,867 ಮತಗಳನ್ನು ಗಳಿಸಿದ್ದು. ಆದರೆ ಗೆಲ್ಲಲಿಲ್ಲ.

2009ರ ಚುನಾವಣೆಯಲ್ಲಿ, ರೋಜಾ ಚಂದ್ರಗಿರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರು. ಆದರೆ ಅರುಣಾ ಕುಮಾರಿ ವಿರುದ್ಧ ಸೋತರು. ಅದೇ ವರ್ಷದಲ್ಲಿ ಅವರು ಟಿಡಿಪಿ ತೊರೆದು ವೈಎಸ್ ರಾಜಶೇಖರ ರೆಡ್ಡಿ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದರು.

ವೈಎಸ್ ರಾಜಶೇಖರ್ ರೆಡ್ಡಿ ಅಗಲಿಕೆ ಬಳಿಕ ಪುತ್ರ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷಕ ಸೇರಿದರು. 2014ರ ವಿಧಾನಸಭಾ ಚುನಾವಣೆಯಲ್ಲಿ ನಗರಿ ವಿಧಾನಸಭಾ ಕ್ಷೇತ್ರದಿಂದ 858 ಮತಗಳ ಅಂತರದಿಂದ ಶಾಸಕರಾಗಿ ಗೆದ್ದಿದ್ದರು. 2019 ರ ಚುನಾವಣೆಯಲ್ಲಿ ಅದೇ ಕ್ಷೇತ್ರದಲ್ಲಿ 2ನೇ ಬಾರಿ ಗೆಲುವಿನ ನಗೆ ಬೀರಿದ್ದರು. 2022 ರಲ್ಲಿ ಆಂಧ್ರ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಯುವ ಅಭಿವೃದ್ಧಿ ಖಾತೆ ಸಚಿವರಾಗಿ ನೇಮಕಗೊಂಡರು.

More from Filmibeat

English summary
Major setback for RK Roja in Andhra assembly Election Nagari constituency
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X