Yatra-2: ಆಂಧ್ರ ಸಿಎಂ ಬಯೋಪಿಕ್ ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ಚಿತ್ರರಂಗದಲ್ಲಿ ದಶಕದಿಂದ ಬಯೋಪಿಕ್ ಸಿನಿಮಾಗಳ ಟ್ರೆಂಡ್ ನಡೀತಿದೆ. ಕ್ರೀಡಾ ಕ್ಷೇತ್ರದ ಸಾಧಕರ ಜೊತೆಗೆ ರಾಜಕೀಯ ನಾಯಕರ ಜೀವನಾತಧರಿತ ಸಿನಿಮಾಗಳು ಹೆಚ್ಚು ತೆರೆಗೆ ಬರ್ತಿವೆ. ಇನ್ನು ಕೆಲ ಬಯೋಪಿಕ್‌ ಸಿನಿಮಾಗಳು ಎರಡೆರಡು ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರುತ್ತಿರುವುದು ವಿಶೇಷ.

ಸೀಕ್ವೆಲ್ ಕ್ರೇಜ್ ಬಯೋಪಿಕ್ ಸಿನಿಮಾಗಳನ್ನು ಬಿಟ್ಟಿಲ್ಲ. ತೆಲುಗಿನಲ್ಲಿ 'ಯಾತ್ರ' ಸೀಕ್ವೆಲ್‌ ತೆರೆಗೆ ಬರುತ್ತಿದೆ. ಮಮ್ಮುಟ್ಟಿ ನಟನೆಯ 'ಯಾತ್ರ' ಸಿನಿಮಾ 2019ರಲ್ಲಿ ತೆರೆಕಂಡಿತ್ತು. ಅಖಂಡ ಆಂಧ್ರದ ಮಾಜಿ ಸಿಎಂ ವೈ. ಎಸ್ ರಾಜಶೇಖರ್ ರೆಡ್ಡಿ ಜೀವನಾಧರಿತ ಈ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಇದೀಗ ಅವರ ಪುತ್ರ ವೈ. ಎಸ್ ಜಗನ್ ಮೋಹನ್ ರೆಡ್ಡಿ ಕುರಿತು 'ಯಾತ್ರ'-2 ಸಿನಿಮಾ ನಿರ್ಮಾಣವಾಗುತ್ತಿದೆ.

Andra-CM-Jagan-biopic-yatra-2-first-look

ಮಮ್ಮುಟಿ ಪುತ್ರ ದುಲ್ಕರ್ ಸಲ್ಮಾನ್ 'ಯಾತ್ರ'-2 ಚಿತ್ರದಲ್ಲಿ ಜಗನ್ ಪಾತ್ರ ಮಾಡುತ್ತಾರೆ ಎನ್ನುವ ಚರ್ಚೆ ನಡೆದಿತ್ತು. ಆದರೆ ಆ ಅವಕಾಶ ತಮಿಳು ನಟ ಜೀವಾ ಪಾಲಾಗಿದೆ. ಸದ್ಯ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು ರಾಜಶೇಖರ್ ರೆಡ್ಡಿ ಹಾಗೂ ಜಗನ್ ಪಾತ್ರಗಳನ್ನು ಮಮ್ಮುಟಿ, ಜೀವಾ ಲುಕ್‌ ನೋಡಬಹುದಾಗಿದೆ. ಈ ಪೊಲಿಟಿಕಲ್ ಡ್ರಾಮಾ ಚಿತ್ರಕ್ಕೆ ಮಹಿ ರಾಘವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

2019, ಫೆಬ್ರವರಿ 8ರಂದು 'ಯಾತ್ರ' ಸಿನಿಮಾ ಬಿಡುಗಡೆಯಾಗಿತ್ತು. ಸರಿಯಾಗಿ 5 ವರ್ಷಗಳ ಬಳಿಕ ಅದೇ ದಿನ ಸೀಕ್ವೆಲ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. "ನಾನು ಯಾರೋ ಈ ಪ್ರಪಂಚಕ್ಕೆ ಇನ್ನು ಗೊತ್ತಿಲ್ಲದೇ ಇರಬಹುದು. ಆದರೆ ಒಂದು ನೆನಪಿಟ್ಟುಕೊಳ್ಳಿ. ನಾನು ವೈ. ಎಸ್ ರಾಜಶೇಖರ್ ರೆಡ್ಡಿ ಮಗ" ಎನ್ನುವ ಡೈಲಾಗ್‌ನ ಕೂಡ ಪೋಸ್ಟರ್‌ನಲ್ಲಿ ನೋಡಬಹುದಾಗಿದೆ.

ತ್ರೀ ಆಟಂ ಲಿವ್ಸ್, ವಿ ಸೆಲ್ಯೂಲಾಯ್ಡ್ ಹಾಗೂ ಶಿವ ಮೇಕ ಜಂಟಿಯಾಗಿ 'ಯಾತ್ರ'-2 ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. 2019ರ ಆಂಧ್ರ ಚುನಾವಣೆಗೂ ಮುನ್ನ ಬಂದ 'ಯಾತ್ರ' ಸಿನಿಮಾ ಜಗನ್ ಗೆಲುವಿಗೆ ಪ್ಲಸ್ ಆಗಿತ್ತು. ಮುಂದಿನ ವರ್ಷ ಮತ್ತೊಂದು ಚುನಾವಣೆ ಬರ್ತಿದ್ದು ಅದಕ್ಕೂ ಮುನ್ನ ಸೀಕ್ವೆಲ್ ತೆರೆಗೆ ಬರಲಿದೆ. ವೈಎಸ್‌ಆರ್ ನಿಧನಕ್ಕೂ ಮುನ್ನ ಮತ್ತು ನಂತರ ಜಗನ್‌ನ ಪರಿಸ್ಥಿತಿ ಹೇಗಿತ್ತು? ಹೇಗೆ ಜಗನ್ ಸಿಎಂ ಆದ್ರು ಎನ್ನುವುದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗುತ್ತಿದೆ.

ವೈಎಸ್‌ಆರ್ ಪಾದಯಾತ್ರೆ ಮಾಡಿ ಸಿಎಂ ಪಟ್ಟಕ್ಕೇರಿದ ಕತೆಯನ್ನು ಆಧಿರಿಸಿ 'ಯಾತ್ರ' ಸಿನಿಮಾ ಬಂದಿತ್ತು. 'ಯಾತ್ರ'-2 ಚಿತ್ರದಲ್ಲಿ ಸಿಎಂ ಜಗನ್ ಮಾಡಿದ ಪಾದಯಾತ್ರೆಯನ್ನು ತೋರಿಸಲು ಹೊರಟಿರುವುದು ಗೊತ್ತಾಗುತ್ತಿದೆ. ವೈಎಸ್‌ಆರ್ ಅವರ ಸಾವಿನ ಸಂದರ್ಭ, ಆ ಸಮಯದಲ್ಲಿ ನಡೆದ ಘಟನೆಗಳು ಮತ್ತು ಅವರ ಸಾವಿನ ನಂತರ ಅವರ ಅಭಿಮಾನಿಗಳ ನೋವು ಎಂಥದ್ದು ಎನ್ನುವುದನ್ನು ಈಗ ತೋರಿಸುವ ಪ್ರಯತ್ನ ನಡೀತಿದೆ.

ವೈಎಸ್ಆರ್ ಅಗಲಿಕೆಯ ನೋವಿನಲ್ಲೇ ಅಭಿಮಾನಿಗಳು ಜೀವ ಬಿಟ್ಟಿದ್ದರು. 'ಓದಾರ್ಪು ಯಾತ್ರ' ಹೆಸರಿನಲ್ಲಿ ಅಂತಹ ಅಭಿಮಾನಿಗಳ ಕುಟುಂಬಗಳನ್ನು ಜಗನ್ ಭೇಟಿ ಮಾಡಿದ್ದರು. ಅದು ಸೀಕ್ವೆಲ್‌ಗೆ ಕೇಂದ್ರಬಿಂದು. ಫಸ್ಟ್ ಲುಕ್ ಪೋಸ್ಟರ್ ನೋಡಿದ್ರೆ ಮಮ್ಮುಟ್ಟಿ ಮತ್ತು ಜೀವಾ ಇಂಟೆನ್ಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

'ಯಾತ್ರ'-2 ಚಿತ್ರಕ್ಕೆ ಮದಿ ಛಾಯಾಗ್ರಹಣ, ಸಂತೋಷ್ ನಾರಾಯಣ್ ಸಂಗೀತವಿದೆ. ಬಹಳ ಅದ್ಧೂರಿಯಾಗಿಯೇ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Jeeva starrer Yatra-2 firstlook Released
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X