For Quick Alerts
  ALLOW NOTIFICATIONS  
  For Daily Alerts

  ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಜೀವನ ತೆರೆಗೆ: ಮುಖ್ಯ ಪಾತ್ರದಲ್ಲಿ ಪ್ರತಿಭಾನ್ವಿತ ನಟ

  |

  ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಜೀವನ ಯಾವ ಸಿನಿಮಾಕ್ಕಿಂತಲೂ ಕಡಿಮೆ ಇಲ್ಲ. ಹಾಗಾಗಿಯೇ ಅವರ ಜೀವನ ಈಗ ಸಿನಿಮಾ ಆಗುತ್ತಿದೆ.

  ಜಗನ್ ತಂದೆ ರಾಜಶೇಖರ ರೆಡ್ಡಿ ಅವರ ಜೀವನ 'ಯಾತ್ರಾ' ಹೆಸರಲ್ಲಿ ಈಗಾಗಲೇ ಸಿನಿಮಾ ಆಗಿದ್ದು ಇದೀಗ ಜಗನ್ ಮೋಹನ್ ರೆಡ್ಡಿ ಜೀವನವೂ ಸಿನಿಮಾ ಆಗಲಿಕ್ಕೆ ಯೋಜನೆ ಸಿದ್ದವಾಗಿದೆ.

  ರಾಜಶೇಖರ್ ರೆಡ್ಡಿ ಅವರ ಜೀವನವನ್ನು 'ಯಾತ್ರಾ' ಹೆಸರಿನಲ್ಲಿ ಸಿನಿಮಾ ಮಾಡಿದ್ದ ನಿರ್ದೇಶಕ ವಿ.ರಾಘವ ಅವರೇ ಜಗನ್ ಜೀವನವನ್ನು ಸಹ ಸಿನಿಮಾ ಮಾಡಲು ತಯಾರಾಗಿದ್ದಾರೆ. ಸಿನಿಮಾದಲ್ಲಿ ಜಗನ್ ಪಾತ್ರವನ್ನು ಪ್ರತೀಕ್ ಗಾಂಧಿ ನಿರ್ವಹಿಸುವುದುಉ ಬಹುತೇಕ ಪಕ್ಕಾ ಆಗಿದೆ.

  'ಸ್ಕ್ಯಾಮ್ 1992' ವೆಬ್ ಸರಣಿಯಲ್ಲಿ ತಮ್ಮ ಅತ್ಯುತ್ತಮ ಅಭಿನಯದಿಂದ ಬಾಲಿವುಡ್‌ ತಿರುಗಿ ನೋಡುವಂತೆ ಮಾಡಿರುವ ಪ್ರತೀಕ್ ಗಾಂಧಿ ಜಗನ್ ಪಾತ್ರ ನಿರ್ವಹಿಸಲು ಸೂಕ್ತ ವ್ಯಕ್ತಿಯಾಗಿದ್ದಾರೆ. ಜಗನ್ ಜೀವನ ಆಧರಿಸಿದ ಸಿನಿಮಾವು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ದು, ಬಾಲಿವುಡ್ ನಟನನ್ನು ಆಯ್ಕೆ ಮಾಡಲು ಅದೂ ಸಹ ಒಂದು ಕಾರಣವಿರಬಹುದು.

  ವೈ.ಎಸ್.ಜಗನ್ ಜೀವನ ಸಿನಿಮೀಯ ತಿರುವುಗಳಿಂದ ಕೂಡಿದೆ. ಸಿಎಂ ಆಗಿದ್ದ ತಂದೆ ಅಪಘಾತದಲ್ಲಿ ತೀರಿಕೊಂಡ ನಂತರ ಪಾರ್ಟಿ ಹೈಕಮಾಂಡ್ ಜಗನ್ ಅನ್ನು ನಡೆಸಿಕೊಂಡ ರೀತಿ. ಜಗನ್ ಆರಂಭಿಸಿದ 'ಓದಾರ್ಪು ಯಾತ್ರಾ'ಗೆ ಅಡ್ಡಿ ಪಡಿಸಿದ ರಾಜಕೀಯ ಮುಖಂಡರುಗಳು. ನಂತರ ಪ್ರತ್ಯೇಕ ಪಕ್ಷ ಸ್ಥಾಪನೆ ಆ ನಂತರ ವಿವಿಧ ಪ್ರಕರಣಗಳಲ್ಲಿ ಜಗನ್ ಅನ್ನು ಸಿಲುಕಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು. ಬಂಧನ, ಜೈಲಿನಿಂದ ಹೊರಬಂದು ಪಕ್ಷ ಕಟ್ಟಿ ಭಾರಿ ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು ಅದೂ ಕಡಿಮೆ ವಯಸ್ಸಿನಲ್ಲಿಯೇ ಇವೆಲ್ಲವೂ ಕಡಿಮೆ ಸಾಧನೆಯಲ್ಲ.

  ಬಿಡುಗಡೆಯಾಯ್ತು ಉಮಾಪತಿ ಮತ್ತು ಅರುಣಾಕುಮಾರಿ ವಾಟ್ಸಾಪ್ ಮೆಸೇಜ್ | Filmibeat Kannada

  ಜಗನ್ ಪಾತ್ರ ನಿರ್ವಿಸುತ್ತಿರುವ ಪ್ರತೀಕ್ ಗಾಂಧಿ ತಾವೊಬ್ಬ ಅತ್ಯುತ್ತಮ ನಟ ಎಂದು ಈಗಾಗಲೇ ಗುರುತು ಪಡೆದುಕೊಂಡಿದ್ದಾರೆ. ಪ್ರಸ್ತುತ ಅವರು, 'ರಾವಣ್ ಲೀಲ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  English summary
  Andhra Pradesh CM YS Jagan Mohan Reddy's biopic is on the cards. Rajshekhar Reddy's biopic director Raghav is now planing to direct Jagan's life as movie. Scam 1992's fame Pratik Gandhi will be seen as Jagan Mohan Reddy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X