ತಮ್ಮ ವಿರುದ್ಧದ ಅಸಭ್ಯದ ಹೇಳಿಕೆಗೆ ಭಾವುಕರಾದ ನಟಿ, ಸಚಿವೆ ರೋಜಾ: ಟಿಡಿಪಿ ಮಾಜಿ ಸಚಿವನ ಬಂಧನ

ಆಂಧ್ರ ಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವೆ, ನಟಿ ಆರ್.ಕೆ. ರೋಜಾ ಅವರ ವಿರುದ್ಧ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಬಂಡಾರು ಸತ್ಯನಾರಾಯಣ ಮೂರ್ತಿ ಅಸಭ್ಯವಾಗಿ ಮಾತನಾಡಿದ್ದು, ಆಂಧ್ರ ರಾಜಕೀಯದಲ್ಲಿ ಭಾರಿ ಗದ್ದಲ ಉಂಟು ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮಾಜಿ ಸಚಿವ ಬಂಡಾರು ಸತ್ಯನಾರಾಯಣರನ್ನು ಬಂಧಿಸಲಾಗಿದೆ.

ಮಾಜಿ ಸಚಿವ ಹಾಗೂ ಟಿಡಿಪಿಯ ಹಿರಿಯ ನಾಯಕ ಬಂಡಾರು ಸತ್ಯನಾರಾಯಣ ಮೂರ್ತಿ ಅವರನ್ನು ಗುಂಟೂರು ಪೊಲೀಸರು ಅನಕಾಪಲ್ಲಿ ಜಿಲ್ಲೆಯ ವೆನ್ನೆಲಪಾಲೆಂ ನಿವಾಸದಲ್ಲಿ 18 ಗಂಟೆಗಳ ಕಾಲ ನಡೆದ ಭಾರೀ ನಾಟಕದ ಬಳಿಕ ಬಂಧಿಸಿದ್ದಾರೆ. ಈ ನಡುವೆ ನಟಿ ರೋಜಾ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿದ್ದಾರೆ.

Andhra Pradesh ex-minister arrested for comments on Tourism Minister, actress Roja

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವೆ ರೋಜಾ, ಟಿಡಿಪಿ ನಾಯಕರು ಬಂಡಾರು ಸತ್ಯನಾರಾಯಣ ಮೂರ್ತಿ ಅವರ ಹೇಳಿಕೆಯನ್ನು ಖಂಡಿಸುವ ಬದಲು ಬಹಿರಂಗವಾಗಿ ಬೆಂಬಲಿಸಿದ ರೀತಿಗೆ ತಾನು ತುಂಬಾ ಶಾಕ್‌ಗೆ ಒಳಗಾಗಿದ್ದೇನೆ. ಹಿರಿಯ ನಾಯಕರಾದ ಗಂಟಾ ಶ್ರೀನಿವಾಸ ರಾವ್ ಮತ್ತು ಚಿ. ಅಯ್ಯಣ್ಣ ಪತ್ರುಡು ಅಂತಹ ಕೆಟ್ಟ ಕಾಮೆಂಟ್ ಅನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ನಾರಾ ಲೋಕೇಶ್ ಕೂಡ ಅವರ ಬಂಧನವನ್ನು ಖಂಡಿಸಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಟಿಡಿಪಿ ಮಹಿಳೆಯರನ್ನು ಹೀಗೆ ನಡೆಸಿಕೊಳ್ಳುತ್ತಿದೆಯೇ..? ಎಂದು ಅಸಮಾಧಾನ ಹೊರಹಾಕಿದ್ದಾರೆ.

ಚಿತ್ರರಂಗದ ವ್ಯಕ್ತಿಗಳ ಮೇಲೆ ಟಿಡಿಪಿ ನಾಯಕರು ಆಗಾಗ್ಗೆ ಮಾಡುವ ಕೆಟ್ಟ ಟೀಕೆಗಳನ್ನು ಉಲ್ಲೇಖಿಸಿದ ಅವರು, ತೆಲುಗು ದೇಶಂ ಪಕ್ಷದ ತಮ್ಮ ಪಕ್ಷದ ಸಂಸ್ಥಾಪಕ ಎನ್.ಟಿ. ರಾಮರಾವ್ ಅವರು ಸಿನಿಮಾ ಲೋಕದಿಂದ ಬಂದವರು ಎಂಬುದನ್ನು ಮತ್ತು ಅವರ ಮಾತುಗಳನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಹೇಳಿದ್ದಾರೆ.

ಇದರ ಜೊತೆಗೆ ತಮ್ಮ ಮತ್ತು ತಮ್ಮ ಕುಟುಂಬದ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ ಮತ್ತು ತನ್ನ ವಿರುದ್ಧ ಅಸಂಸದೀಯ ಪದಗಳನ್ನು ಬಳಸಿದ ಎಲ್ಲರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.

Andhra Pradesh ex-minister arrested for comments on Tourism Minister, actress Roja

ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧ ಅಸಂಬದ್ಧ ಹೇಳಿಕೆ

ಇದರ ಜೊತೆಗೆ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧವೂ ಅಗೌರವದ ಹೇಳಿಕೆ ನೀಡಿದ ಆರೋಪದ ಮೇಲೆ ಬಂಡಾರು ಸತ್ಯನಾರಾಯಣ ಅವರನ್ನು ಬಂಧಿಸಲಾಗಿದೆ. ಗುಂಟೂರು ಜಿಲ್ಲೆಯ ಅರುಂಡೇಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ದೂರುಗಳು ದಾಖಲಾಗಿದೆ.

ಇನ್ನು, ವೈಎಸ್‌ಆರ್‌ಸಿ ಕಾರ್ಯಕರ್ತೆ ಬಡಿ ಕಲ್ಯಾಣಿ ನಗರಂಪಲೆಂ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಿಸಿದ್ದಾರೆ. ದೂರುಗಳು ಕ್ರಮವಾಗಿ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1 ರಂದು ದಾಖಲಾಗಿವೆ. ರೋಜಾ ಅವರ ಪ್ರಕರಣದಲ್ಲಿ ಪೊಲೀಸರು ಐಟಿ ಕಾಯ್ದೆಯ ಸೆಕ್ಷನ್ 135 (ಎ), 324 (ಬಿ) ಮತ್ತು ಸೆಕ್ಷನ್ 67 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮುಖ್ಯಮಂತ್ರಿ ವಿರುದ್ಧ ಕಾಮೆಂಟ್ ಮಾಡಿದ ಪ್ರಕರಣದಲ್ಲಿ ಪೊಲೀಸರು ಸೆಕ್ಷನ್ 41 (ಎ), 41 (ಬಿ) 153 (ಎ), 234, 504 ಮತ್ತು 505 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆದರೆ, ಈ ಹಿಂದೆ ಗುಂಟೂರು ಪೊಲೀಸರು ತನ್ನ ಪತಿಯನ್ನು ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಆರೋಪಿಸಿ ಬಂಡಾರು ಸತ್ಯನಾರಾಯಣ ಮೂರ್ತಿ ಅವರ ಪತ್ನಿ ಪವಾರವಾಡ ಪೊಲೀಸರಿಗೆ ದೂರು ನೀಡಿದ್ದರು.

More from Filmibeat

English summary
Andhra Pradesh ex-minister arrested for comments on Tourism Minister, actress Roja.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X