twitter
    For Quick Alerts
    ALLOW NOTIFICATIONS  
    For Daily Alerts

    ಬುಕ್‌ ಮೈ ಶೋ ದಂಧೆ ಬಂದ್ ಮಾಡಿದ ಸಿಎಂ ಜಗನ್!

    |

    ಸಿನಿಮಾ ಮನೊರಂಜನೆ ಉದ್ಯಮದಲ್ಲಿ ಬುಕ್‌ ಮೈ ಶೋ ಲೀಡರ್ ಆಗಿದೆ. ಭಾರತದಾದ್ಯಂತ ಸಿನಿಮಾ ಬುಕ್ ಮಾಡಲು 60% ಗಿಂತಲೂ ಹೆಚ್ಚಿನ ಮಂದಿ ಬುಕ್‌ ಮೈ ಶೋ ಅಪ್ಲಿಕೇಶನ್ ಬಳಸುತ್ತಿದ್ದಾರೆ. ಆದರೆ ಆಂಧ್ರದಲ್ಲಿ ಸಿಎಂ ಜಗನ್ 'ಬುಕ್‌ ಮೈ ಶೋ'ನ ಈ ಮೋನೊಪೋಲಿಗೆ ಮರ್ಮಾಘಾತ ನೀಡಿದ್ದಾರೆ.

    ಆಂಧ್ರದಲ್ಲಿ ಸಿನಿಮಾ ಟಿಕೆಟ್ ಬುಕ್‌ ಮಾಡಲು ಸರ್ಕಾರವೇ ಹೊಸದೊಂದು ಅಪ್ಲಿಕೇಶನ್ ಪರಿಚಯಿಸುತ್ತಿದೆ. ಅಪ್ಲಿಕೇಶನ್ ಸಂಪೂರ್ಣ ತಯಾರಾಗಿದ್ದು ಅಪ್ಲಿಕೇಶನ್‌ನ ಬೆಲೆ, ಟಿಕೆಟ್ ಬುಕ್ ಮಾಡುವ ವಿಧಾನದ ಬಗೆಗಿನ ಮಾಹಿತಿಯನ್ನು ಅಧಿಕಾರಿಗಳು ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದಾರೆ.

    ಜೋಡಿ ನಂ.1 ರಿಯಾಲಿಟಿ ಶೋ: ಕಂಟೆಸ್ಟೆಂಟ್ ಪಟ್ಟಿ ಇಲ್ಲಿದೆ!ಜೋಡಿ ನಂ.1 ರಿಯಾಲಿಟಿ ಶೋ: ಕಂಟೆಸ್ಟೆಂಟ್ ಪಟ್ಟಿ ಇಲ್ಲಿದೆ!

    ಆಂಧ್ರದಲ್ಲಿ ಟಿಕೆಟ್ ಬುಕ್ ಮಾಡಲು ಲಾಂಚ್ ಮಾಡಲಾಗುತ್ತಿರುವ ಅಪ್ಲಿಕೇಶನ್ ಹೆಸರು 'ಯುವರ್ ಸ್ಕ್ರೀನ್' ಎಂದಾಗಿದೆ. ಈ ಅಪ್ಲಿಕೇಶನ್ ಲಾಂಚ್ ಆದ ಬಳಿಕ ಆಂಧ್ರದಲ್ಲಿ ಬುಕ್‌ಮೈ ಶೋ ಡಿಮ್ಯಾಂಡ್ ಸಂಪೂರ್ಣವಾಗಿ ಬಿದ್ದು ಹೋಗಲಿದೆ.

    ಅಪ್ಲಿಕೇಶನ್ ಅನ್ನು ತಂದಿರುವ ಉದ್ದೇಶ ಬೇರೆ

    ಅಪ್ಲಿಕೇಶನ್ ಅನ್ನು ತಂದಿರುವ ಉದ್ದೇಶ ಬೇರೆ

    ಅಸಲಿಗೆ, ಸರ್ಕಾರವು ಈ ಅಪ್ಲಿಕೇಶನ್ ಅನ್ನು ಬುಕ್‌ಮೈಶೋಗೆ ಎದುರಾಗಿ ತಂದಿದ್ದಲ್ಲ. ಬದಲಿಗೆ ತೆಲುಗು ಚಿತ್ರರಂಗದ ಆದಾಯದ ಮೇಲೆ ನಿಗಾ ಇಡುವ ಹಾಗೂ ತೆರಿಗೆಗಳ್ಳತನ ತಪ್ಪಿಸುವ ಉದ್ದೇಶದಿಂದ ತರಲಾಗಿದೆ. ಆಂಧ್ರದಲ್ಲಿ ಸಿನಿಮಾ ಟಿಕೆಟ್ ದರ ನಿರ್ಣಯಿಸುವ ಹಕ್ಕು ರಾಜ್ಯ ಸರ್ಕಾರದ ಬಳಿ ಇದ್ದು (ಆಂಧ್ರ ಪ್ರದೇಶ ಸಿನಿಮಾ ರೆಗ್ಯುಲೇಟರಿ ಆಕ್ಟ್ 1955). ಇನ್ನು ಮುಂದೆ ಸರ್ಕಾರವೇ ಸಿನಿಮಾಗಳ ಟಿಕೆಟ್ ಬೆಲೆ ನಿಗದಿಪಡಿಸಲಿದೆ. ಟಿಕೆಟ್ ಅನ್ನು ಸರ್ಕಾರವೇ ಮಾರಾಟ ಮಾಡಲಿವೆ.

    ಅತ್ಯಂತ ಕಡಿಮೆ ಶುಲ್ಕ ಪಡೆಯಲಿರುವ ಯುವರ್ ಸ್ಕ್ರೀನ್!

    ಅತ್ಯಂತ ಕಡಿಮೆ ಶುಲ್ಕ ಪಡೆಯಲಿರುವ ಯುವರ್ ಸ್ಕ್ರೀನ್!

    ಈ ಅಪ್ಲಿಕೇಶನ್ ಹಾಗೂ ವೆಬ್‌ಸೈಟ್ ಅನ್ನು ಆಂಧ್ರ ಪ್ರದೇಶ ಟಿವಿ ಮತ್ತು ಚಿತ್ರಮಂದಿರ ಅಭಿವೃದ್ಧಿ ನಿಗಮ (APSFTTDC) ಅಭಿವೃದ್ಧಿಪಡಿಸಿದ್ದು, ಅಪ್ಲಿಕೇಶನ್ ಕೆಲವೇ ದಿನಗಳಲ್ಲಿ ಲಾಂಚ್ ಆಗಲಿದೆ. APSFTTDC ನಿರ್ದೇಶಕ ವಿಜಯ್ ಕುಮಾರ್ ರೆಡ್ಡಿ ಮಾತನಾಡಿ, ''ಅಪ್ಲಿಕೇಶನ್ ಮೂಲಕ ರಾಜ್ಯದ ಯಾವುದೇ ಚಿತ್ರಮಂದಿರಗಳ ಟಿಕೆಟ್ ಅನ್ನು ಬುಕ್ ಮಾಡಬಹುದಾಗಿದ್ದು, ಟಿಕೆಟ್ ಬುಕ್ ಮಾಡಲು ಕೇವಲ 1.90 ರುಪಾಯಿ ಮಾತ್ರವೇ ಸೇವಾ ಶುಲ್ಕ ಇರಲಿದೆ'' ಎಂದಿದ್ದಾರೆ. ಅಲ್ಲದೆ ಆನ್‌ಲೈನ್‌ನಿಂದ ಮಾರಾಟವಾದ ಟಿಕೆಟ್‌ನ ಹಣವನ್ನು ಅದೇ ದಿನ ಚಿತ್ರಮಂದಿರಗಳ ಮಾಲೀಕರ ಖಾತೆಗೆ ವರ್ಗ ಮಾಡಲಾಗುತ್ತದೆ'' ಎಂದಿದ್ದಾರೆ.

    ಬುಕ್‌ ಮೈಶೋನಲ್ಲಿ ಟಿಕೆಟ್ ದುಬಾರಿ

    ಬುಕ್‌ ಮೈಶೋನಲ್ಲಿ ಟಿಕೆಟ್ ದುಬಾರಿ

    ಬುಕ್‌ಮೈ ಶೋ ಅಪ್ಲಿಕೇಶನ್‌ನಲ್ಲಿ ಒಂದು ಟಿಕೆಟ್ ಬುಕ್ ಮಾಡಲು 22 ರಿಂದ 28 ರುಪಾಯಿ ವರೆಗೆ ಹೆಚ್ಚುವರಿ ಶುಲ್ಕ ನೀಡಬೇಕಾಗುತ್ತದೆ. ಟಿಕೆಟ್ ದರ ಹೆಚ್ಚಿದ್ದಷ್ಟು ಶುಲ್ಕ ಹೆಚ್ಚುತ್ತಾ ಹೋಗುತ್ತದೆ. ಈ ಹಿಂದೆಯೇ ಹಲವಾರು ಮಂದಿ ಸಿನಿ ಪ್ರಿಯರು ಬುಕ್‌ ಮೈ ಶೋನಲ್ಲಿ ಇಂಟರ್ನೆಟ್ ಹ್ಯಾಂಡ್ಲಿಂಗ್ ಚಾರ್ಜಸ್ ಹೆಚ್ಚೆಂದು ಆಕ್ಷೇಪ ಎತ್ತಿದ್ದರು. ಆದರೆ ಬುಕ್‌ ಮೈ ಶೋಗೆ ಪರ್ಯಾಯವೇ ಇಲ್ಲದ ಕಾರಣ ಅನಿವಾರ್ಯವಾಗಿ ಅದನ್ನೇ ಬಳಸಬೇಕಿತ್ತು. ಆದರೆ ಈಗ ಆಂಧ್ರ ಸರ್ಕಾರವು ಟಿಕೆಟ್‌ ಬುಕಿಂಗ್‌ನಲ್ಲಿ ಬುಕ್‌ ಮೈಶೋನ ಏಕಮೇವತ್ವವನ್ನು ಒಡೆದು ಹಾಕಿದೆ.

    'ಯುವರ್ ಸ್ಕ್ರೀನ್'ನಿಂದ ತೆರಿಗೆಗಳ್ಳತನ ತಪ್ಪಲಿದೆ

    'ಯುವರ್ ಸ್ಕ್ರೀನ್'ನಿಂದ ತೆರಿಗೆಗಳ್ಳತನ ತಪ್ಪಲಿದೆ

    'ಯುವರ್ ಸ್ಕ್ರೀನ್' ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಆಂಧ್ರದಲ್ಲಿ ಅತ್ಯಂತ ಕಡಿಮೆ ದರಕ್ಕೆ ಸಿನಿಮಾ ಟಿಕೆಟ್ ಮಾರಾಟವಾಗಲಿದೆ. ಸಿನಿಮಾಗಳ ಒಟ್ಟು ಕಲೆಕ್ಷನ್ ಲೆಕ್ಕಾಚಾರ ಸರಿಯಾಗಿ ಸಿಗಲಿದೆ. ಯಾವ ಸಿನಿಮಾ ಎಷ್ಟು ಗಳಿಸಿದೆ ಎಂಬ ಮಾಹಿತಿ ಸರ್ಕಾರದ ಬಳಿ ಪಕ್ಕಾ ಆಗಿರಲಿದ್ದು, ಇದರಿಂದ ತೆರಿಗೆ ಗಳ್ಳತನ ಹಾಗೂ ಬ್ಲಾಕ್‌ನಲ್ಲಿ ಟಿಕೆಟ್ ಮಾರಾಟ ತಪ್ಪಲಿದೆ. ಚಿತ್ರಮಂದಿರಗಳ ಕೌಂಟರ್‌ನಲ್ಲಿಯೂ ಟಿಕೆಟ್ ಖರೀದಿ ಮಾಡಬಹುದು ಆದರೆ ಚಿತ್ರಮಂದಿರಗಳ ಮಾಲೀಕರು 'ಯುವರ್ ಸ್ಕ್ರೀನ್' ವೆಬ್‌ಸೈಟ್‌ ಮೂಲಕವೇ ಕೌಂಟರ್‌ನಲ್ಲಿ ಟಿಕೆಟ್ ಕೊಡಬೇಕಾಗಿರುತ್ತದೆಯಾದ್ದರಿಂದ, ಮಾರಾಟವಾಗುವ ಪ್ರತಿ ಟಿಕೆಟ್‌ನ ಲೆಕ್ಕ ಸರ್ಕಾರದ ಬಳಿ ಇರಲಿದೆ.

    English summary
    Andhra Pradesh government releasing Your Screen application for movie ticket booking. This may end usage on BookmyShow application in Andhra Pradesh.
    Saturday, June 25, 2022, 10:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X