For Quick Alerts
  ALLOW NOTIFICATIONS  
  For Daily Alerts

  ಸಂಗೀತ, ನೃತ್ಯ ಶಾಲೆಗೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಹೆಸರಿಟ್ಟ ಆಂಧ್ರ ಸರ್ಕಾರ

  |

  ಭಾರತೀಯ ಸಂಗೀತ ಲೋಕ ಕಂಡ ದಿಗ್ಗಜ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಸೆಪ್ಟೆಂಬರ್‌ ತಿಂಗಳಲ್ಲಿ ಇಹಲೋಕ ತ್ಯಜಿಸಿದರು. ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರಕ್ಕೆ ಎಸ್‌ಪಿಬಿ ಅವರ ಕೊಡುಗೆಯನ್ನು ಗೌರವಿಸಿದ ಆಂಧ್ರ ಸರ್ಕಾರ ಸಂಗೀತ, ನೃತ್ಯ ಶಾಲೆಗೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಹೆಸರಿಟ್ಟಿದೆ.

  ನೆಲ್ಲೂರಿನಲ್ಲಿರುವ ಸರ್ಕಾರಿ ಸಂಗೀತ ಮತ್ತು ನೃತ್ಯ ಶಾಲೆಗೆ 'ಡಾ ಎಸ್‌ಪಿ ಬಾಲಸುಬ್ರಹ್ಮಣ್ಯಂ ಸಂಗೀತ ಮತ್ತು ನೃತ್ಯ ಶಾಲೆ' ಮರುನಾಮಕರಣ ಮಾಡಲಾಗಿದೆ.

  'ಬರ್ತಾರೆ ಅಂದ್ಕೊಂಡಿದ್ದೆ, ಹಾಗೆ ಹೋಗ್ಬಿಟ್ರು'- ಬಾಲು ಅಗಲಿಕೆಗೆ ಎಸ್ ಜಾನಕಿ ಕಣ್ಣೀರು'ಬರ್ತಾರೆ ಅಂದ್ಕೊಂಡಿದ್ದೆ, ಹಾಗೆ ಹೋಗ್ಬಿಟ್ರು'- ಬಾಲು ಅಗಲಿಕೆಗೆ ಎಸ್ ಜಾನಕಿ ಕಣ್ಣೀರು

  ಈ ವಿಷಯವನ್ನು ಕೈಗಾರಿಕೆ, ವಾಣಿಜ್ಯ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಮೆಕಪತಿ ಗೌತಮ್ ರೆಡ್ಡಿ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಚಿವ ''ದಿಗ್ಗಜ ಗಾಯಕ ಎಸ್.ಪಿ.ಬಾಲು ಅವರನ್ನು ಗುರುತಿಸಿ, ನೆಲ್ಲೂರಿನಲ್ಲಿರುವ ಸರ್ಕಾರಿ ನೃತ್ಯ ಮತ್ತು ಸಂಗೀತ ಶಾಲೆಯನ್ನು ''ಡಾ. ಎಸ್ ಪಿ ಬಾಲಸುಬ್ರಮಣ್ಯಂ ಸರ್ಕಾರಿ ನೃತ್ಯ ಮತ್ತು ಸಂಗೀತ ಶಾಲೆ'' ಎಂದು ಹೆಸರು ಬದಲಿಸಿದೆ.

  ಆಂಧ್ರ ಪ್ರದೇಶ ಸರ್ಕಾರದ ಈ ಮಹತ್ವದ ಕೆಲಸಕ್ಕೆ ಎಸ್‌ಪಿಬಿ ಅವರ ಪುತ್ರ ಎಸ್‌ಪಿ ಚರಣ್ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿ, ''ಆಂಧ್ರ ಪ್ರದೇಶ ಸರ್ಕಾರ ಹಾಗೂ ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಗೆ ಧನ್ಯವಾದ'' ತಿಳಿಸಿದ್ದಾರೆ.

  ಅಂದ್ಹಾಗೆ, ಎಸ್‌ಪಿಬಿಯವರ ಸ್ಮರಣಾರ್ಥ ದಕ್ಷಿಣ ಭಾರತೀಯ ಸಿನಿ ಟೆಲಿವಿಷನ್ ಆರ್ಟಿಸ್ಟ್ಸ್ & ಡಬ್ಬಿಂಗ್ ಆರ್ಟಿಸ್ಟ್ಸ್ ಸಂಘದ ಅಧ್ಯಕ್ಷ ರಾಧಾ ರವಿ ಅವರು ಹೊಸ ಡಬ್ಬಿಂಗ್ ಸ್ಟುಡಿಯೋವನ್ನು ನವೆಂಬರ್ 20 ರಂದು ಉದ್ಘಾಟಿಸಿದರು.

  ನನ್ನ ಮಾತು ಕೇಳಲಿಲ್ಲ ನೀನು: ಎಸ್‌ಪಿಬಿ ನೆನೆದು ಭಾವುಕರಾದ ಇಳಯರಾಜನನ್ನ ಮಾತು ಕೇಳಲಿಲ್ಲ ನೀನು: ಎಸ್‌ಪಿಬಿ ನೆನೆದು ಭಾವುಕರಾದ ಇಳಯರಾಜ

  ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಸೆಪ್ಟೆಂಬರ್ 25 ರಂದು ಚೆನ್ನೈ ಎಂಜಿಎಂ ಹೆಲ್ತ್ ಕೇರ್‌ನಲ್ಲಿ ನಿಧನರಾಗಿದ್ದರು. ಕೊರೊನಾ ವೈರಸ್‌ ತಗುಲಿದ ಕಾರಣ ಆಸ್ಪತ್ರೆಗೆ ದಾಖಲಾದ ಎಸ್‌ಪಿಬಿ ಸುಮಾರು 50 ದಿನಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದ್ರೆ, ಬದುಕಿ ಬರಲಿಲ್ಲ.

  English summary
  Andhra pradesh Govt has decided to rename the Government School of Music & Dance in Nellore as “Dr. S P Balasubramanyam Government School of Music & Dance”.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X