twitter
    For Quick Alerts
    ALLOW NOTIFICATIONS  
    For Daily Alerts

    ತೆಲುಗು ಸಿನಿಮಾರಂಗಕ್ಕೆ ಶಾಕ್ ಕೊಟ್ಟ ಸಿಎಂ ಜಗನ್ ಮೋಹನ್ ರೆಡ್ಡಿ

    |

    ಆಂಧ್ರ ಪ್ರದೇಶದಲ್ಲಿ ಸಿನಿಮಾ ಮಂದಿರಗಳ ಟಿಕೆಟ್ ದರಗಳ ಬಗ್ಗೆ ಬಹು ಸಮಯದಿಂದಾಗಿ ಸರ್ಕಾರ, ಚಿತ್ರರಂಗ ಹಾಗೂ ಚಿತ್ರಮಂದಿರ ಮಾಲೀಕರ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಇದೀಗ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಹೊರಡಿಸಿರುವ ಆದೇಶ ಚಿತ್ರಮಂದಿರ ಮಾಲೀಕರಿಗೆ ಹಾಗೂ ಚಿತ್ರೋದ್ಯಮಿಗಳಿಗೆ ಶಾಕ್ ನೀಡಿದೆ.

    ಆಂಧ್ರ ಪ್ರದೇಶದ ಚಿತ್ರಮಂದಿರಗಳ ಟಿಕೆಟ್ ದರ ಹೆಚ್ಚು ಮಾಡಬೇಕು ಎಂದು ಚಿತ್ರ ರಂಗದ ಹಿರಿಯರು ಹಲವು ದಿನಗಳಿಂದ ಸರ್ಕಾರದ ಬಳಿ ಮನವಿ ಮಾಡುತ್ತಲೇ ಇದ್ದಾರೆ. ನಟ ಚಿರಂಜೀವಿ ನೇತೃತ್ವದ ನಿಯೋಗ ಈಗಾಲಗೇ ಎರಡು ಮೂರು ಬಾರಿ ಜಗನ್ ಅನ್ನು ಭೇಟಿ ಮಾಡಿದ್ದು, ಟಿಕೆಟ್ ದರಗಳನ್ನು ಸರ್ಕಾರ ಹೆಚ್ಚು ಮಾಡಲಿದೆ ಎಂದೇ ಊಹಿಸಲಾಗಿತ್ತು.

    ಆದರೆ ಜಗನ್, ಏಕಾ-ಏಕಿ ಚಿತ್ರಮಂದಿರದ ಟಿಕೆಟ್ ದರಗಳನ್ನು ಹೆಚ್ಚು ಮಾಡುವ ಬದಲಿಗೆ ಸರ್ಕಾರದ ವತಿಯಿಂದಲೇ ವೆಬ್‌ಸೈಟ್ ಒಂದನ್ನು ಲಾಂಚ್ ಮಾಡಲಿದ್ದಾರೆ. ಈ ವೆಬ್‌ಸೈಟ್ ಮೂಲಕ ರಾಜ್ಯದ ಎಲ್ಲ ಚಿತ್ರಮಂದಿರಗಳು, ಸಿಂಗಲ್ ಥಿಯೇಟರ್‌ಗಳು ಟಿಕೆಟ್ ವಿತರಣೆಯ ಮೇಲೆ ಕಣ್ಣಿಡಲಾಗುತ್ತದೆ. ರೈಲ್ವೆ ಟಿಕೆಟ್ ಮಾನಿಟರಿಂಗ್ ವ್ಯವಸ್ಥೆಯಂತೆಯೇ ಈ ಹೊಸ ವ್ಯವಸ್ಥೆಯೂ ಕಾರ್ಯನಿರ್ವಹಿಸಲಿದೆ.

    ಚಿತ್ರಮಂದಿರ ಟಿಕೆಟ್ ಮಾರಾಟದ ಮೇಲೆ ಕಣ್ಣಿಡುವುದರಿಂದ ಸಿನಿಮಾದ ಟಿಕೆಟ್ ಎಷ್ಟು ಮಾರಾಟವಾಗಿದೆ. ನಿರ್ಮಾಪಕರಿಗೆ ಎಷ್ಟು ಲಾಭ ಹೋಗಿದೆ, ಚಿತ್ರಮಂದಿರಗಳಿಗೆ ಎಷ್ಟು ಹೋಗಿದೆ, ಸರ್ಕಾರಕ್ಕೆ ಎಷ್ಟು ತೆರಿಗೆ ಧಕ್ಕಲಿದೆ ಎಂಬಿತ್ಯಾದಿ ಅಂಕಿ-ಅಂಶಗಳು ಸುಲಭವಾಗಿ ಸಿಗಲಿವೆ. ಟಿಕೆಟ್ ಮಾರಾಟ ವ್ಯವಸ್ಥೆಯ ಮೇಲ್ವಿಚಾರಣೆ ವೆಬ್‌ಸೈಟ್‌ ನಿರ್ಮಾಣದ ಬಗ್ಗೆ ಆಂಧ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ಕುಮಾರ್ ವಿಶ್ವಜೀತ್ ಅಧಿಕೃತ ಆದೇಶ ಹೊರಡಿಸಿದ್ದಾರೆ.

    ಎಲ್ಲ ಮಾಹಿತಿ ವೆಬ್‌ಸೈಟ್‌ನಿಂದ ಲಭ್ಯ

    ಎಲ್ಲ ಮಾಹಿತಿ ವೆಬ್‌ಸೈಟ್‌ನಿಂದ ಲಭ್ಯ

    ವೆಬ್‌ಸೈಟ್‌ನಿಂದ ಸಿಗುವ ಅಂಕಿ-ಅಂಶಗಳ ಆಧಾರದ ಮೇಲೆ ಸರ್ಕಾರವು ಚಿತ್ರಮಂದಿರದ ಟಿಕೆಟ್ ದರವನ್ನು ಹೆಚ್ಚು ಮಾಡಬೇಕೆ ಬೇಡವೇ ಎಂಬ ಬಗ್ಗೆ ನಿರ್ಣಯ ತೆಗೆದುಕೊಳ್ಳಲಿದೆ. ಯಾವ ಸಿನಿಮಾಕ್ಕೆ ನಷ್ಟವಾಯಿತು, ಯಾವ ಸಿನಿಮಾ ಎಷ್ಟು ಲಾಭ ಗಳಿಸಿತು ಎಂಬೆಲ್ಲ ಮಾಹಿತಿಯು ಈ ವೆಬ್‌ಸೈಟ್‌ನಿಂದಾಗಿ ಸುಲಭವಾಗಿ ಲಭ್ಯವಾಗಲಿದೆ. ಸಿನಿಮಾದ ನಿರ್ಮಾಪಕರು ಕಲೆಕ್ಷನ್ ವಿಚಾರದಲ್ಲಿ ಇನ್ನು ಮುಂದೆ ಸುಳ್ಳು ಹೇಳಲು ಸಾಧ್ಯವೇ ಇಲ್ಲ.

    'ವಕೀಲ್ ಸಾಬ್' ಬಿಡುಗಡೆ ಸಮಯಕ್ಕೆ ಶುರುವಾದ ಗಲಾಟೆ

    'ವಕೀಲ್ ಸಾಬ್' ಬಿಡುಗಡೆ ಸಮಯಕ್ಕೆ ಶುರುವಾದ ಗಲಾಟೆ

    ಇದೇ ಏಪ್ರಿಲ್ 9 ರಂದು ಪವನ್ ಕಲ್ಯಾಣ್ ನಟನೆಯ 'ವಕೀಲ್ ಸಾಬ್' ಸಿನಿಮಾ ಬಿಡುಗಡೆ ಆಗಿತ್ತು. ಆ ಸಮಯದಲ್ಲಿ ಆಂಧ್ರ ಪ್ರದೇಶದಲ್ಲಿ ಚಿತ್ರಮಂದಿರಗಳಲ್ಲಿ 50% ಆಕ್ಯುಪೆನ್ಸಿ ನಿಯಮ ಜಾರಿಯಲ್ಲಿತ್ತು. ಹಾಗಾಗಿ ಕೆಲವು ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಹೆಚ್ಚು ಮಾಡಲಾಯಿತು. ಬೆನಿಫಿಟ್ ಶೋ, ಫ್ಯಾನ್ಸ್ ಶೋಗಳನ್ನು ಆಯೋಜಿಸಲಾಯಿತು. ಇದಕ್ಕೆ ಸರ್ಕಾರ ಅಡ್ಡಿ ಪಡಿಸಿ, ಟಿಕೆಟ್ ದರ ಹೆಚ್ಚಿಸುವಂತಿಲ್ಲ. ಬೆನಿಫಿಟ್ ಶೋ, ಪ್ರೀಮಿಯರ್ ಶೋ, ಫ್ಯಾನ್ಸ್ ಶೋ ಹಾಕುವಂತಿಲ್ಲ ಎಂದಿತು. ಇದು ಪವನ್ ಅಭಿಮಾನಿಗಳನ್ನು ಕೆರಳಿಸಿತ್ತು.

    ಹೂಕೋರ್ಟ್‌ನಲ್ಲಿ ಸರ್ಕಾರದ ಪರ ಆದೇಶ

    ಹೂಕೋರ್ಟ್‌ನಲ್ಲಿ ಸರ್ಕಾರದ ಪರ ಆದೇಶ

    ಆಂಧ್ರ ಸರ್ಕಾರದ ನಿರ್ಣಯದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲಾಯಿತು, ಆದರೆ ಅಲ್ಲಿ ಸರ್ಕಾರಕ್ಕೆ ಗೆಲುವಾಗಿ ಸರ್ಕಾರದ ಅನುಮತಿ ಇಲ್ಲದೆ ಚಿತ್ರಮಂದಿರಗಳು ಟಿಕೆಟ್ ದರ ಹೆಚ್ಚಿಸುವಂತಿಲ್ಲ ಎಂದು ನಿರ್ಣಯವಾಗಿದೆ. ಇದೀಗ ಸರ್ಕಾರ ವೆಬ್‌ಸೈಟ್ ಸಹ ಬಿಡುಗಡೆ ಮಾಡುತ್ತಿರುವುದರಿಂದ ಚಿತ್ರಮಂದಿರಗಳ ಟಿಕೆಟ್ ದರ ನಿಶ್ಚಯಿಸುವಲ್ಲಿ ಅಳೆದು-ತೂಗಿ ನಿರ್ಣಯ ತೆಗೆದುಕೊಳ್ಳಲಿದೆ.

    ಕಡಿಮೆ ಟಿಕೆಟ್ ಬೆಲೆ ಇದೆ ಆಂಧ್ರದಲ್ಲಿ

    ಕಡಿಮೆ ಟಿಕೆಟ್ ಬೆಲೆ ಇದೆ ಆಂಧ್ರದಲ್ಲಿ

    ಇಡೀ ದೇಶದಲ್ಲಿ ಅತ್ಯಂತ ಕಡಿಮೆ ಟಿಕೆಟ್ ದರ ಇರುವುದು ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ. ಆಂಧ್ರ ಪ್ರದೇಶದ ಕೆಲವು ಪಟ್ಟಣಗಳಲ್ಲಿ ಕೇವಲ 30 ರುಪಾಯಿಗೆ ಸಿನಿಮಾ ನೋಡಬಹುದು. ಮಲ್ಟಿಫ್ಲೆಕ್ಸ್‌ನಲ್ಲಿಯೂ ಅತ್ಯಂತ ಕಡಿಮೆ ಬೆಲೆ ಆಂಧ್ರಪ್ರದೇಶದಲ್ಲಿದೆ. ಇಲ್ಲಿ ಸರಾಸರಿ 140 ರುಗೆ ಮಲ್ಟಿಫ್ಲೆಕ್ಸ್‌ನಲ್ಲಿ ಸಿನಿಮಾ ನೋಡಬಹುದು. ತೆಲಂಗಾಣ ರಾಜ್ಯದಲ್ಲಿಯೂ ಟಿಕೆಟ್ ದರ ಬಹಳ ಕಡಿಮೆ ಇದೆ.

    English summary
    Andhra Pradesh CM Jagan Mohan Reddy all set to launch a portal to track the sale of movie ticket at single screens and multiplexes across the state. Know more.
    Wednesday, September 8, 2021, 18:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X