"ರಜನಿಕಾಂತ್ ಮಾತಿನಿಂದ NTR ಆತ್ಮಕ್ಕೂ ನೋವಾಗುತ್ತದೆ": ಸೂಪರ್ ಸ್ಟಾರ್ ಹೇಳಿಕೆಗೆ ರೋಜಾ ತಿರುಗೇಟು
ಸೂಪರ್ ಸ್ಟಾರ್ ರಜನಿಕಾಂತ್ ಹೇಳಿಕೆಗೆ ಆಂಧ್ರದ ಮಂತ್ರಿ, ನಟಿ ರೋಜಾ ತಿರುಗೇಟು ನೀಡಿದ್ದಾರೆ. ರಜಿನಿಕಾಂತ್‌ಗೆ ತೆಲುಗು ರಾಜ್ಯ ಹಾಗೂ ಇಲ್ಲಿನ ರಾಜಕೀಯದ ಬಗ್ಗೆ ಏನು ಗೊತ್ತಿಲ್ಲ. ಅವರ ಹೇಳಿಕೆಗೆ ಎನ್‌ಟಿಆರ್ ಆತ್ಮಕ್ಕೂ ನೋವಾಗುತ್ತದೆ ಎಂದು ರೋಜಾ ಹೇಳಿದ್ದಾರೆ. ಇತ್ತೀಚೆಗೆ ನಡೆದ ಎನ್‌ಟಿರ್ ಜಯಂತೋತ್ಸವ ಕಾರ್ಯಕ್ರಮದಲ್ಲಿ ತಲೈವಾ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದ್ದರು.
ಎನ್‌ಟಿಆರ್ ಅವರ ದೊಡ್ಡ ಅಭಿಮಾನಿಯಾಗಿರುವ ರಜನಿಕಾಂತ್ ಕಾರ್ಯಕ್ರಮದಲ್ಲಿ ಅವರ ಸಾಧನೆ, ಜನಪ್ರಿಯತೆ ಬಗ್ಗೆ ಮಾತನಾಡಿದ್ದರು. ಜೊತೆಗೆ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು, ಶಾಸಕ- ನಟ ಬಾಲಕೃಷ್ಣ ಕುರಿತು ಕೂಡ ಮೆಚ್ಚುಗೆಯ ಮಾತುಗಳನ್ನಾಗಿದ್ದರು. ಇದು ಜಗನ್ ನೇತೃತ್ವದ ವೈಆರ್‌ಎಸ್ ಕಾಂಗ್ರೆಸ್ ಪಕ್ಷದ ನಾಯಕಕ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ಕಾರಣಕ್ಕೆ ರೋಜಾ ಈಗ ಸೂಪರ್ ಸ್ಟಾರ್ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಹೇಳಿಕೆ ಈಗ ಸಖತ್ ವೈರಲ್ ಆಗಿದೆ.

ಮಾಧ್ಯಮಗಳ ಜೊತೆ ಮಾತನಾಡಿರುವ ನಟಿ ರೋಜಾ "ರಜನಿಕಾಂತ್‌ರಿಂದ ಚಂದ್ರಬಾಬು ಸುಳ್ಳು ಹೇಳಿಸಿದ್ದರೆ. ಎನ್‌ಟಿಆರ್ ಏನು ಹೇಳಿದ್ದರೋ ಆ ವಿಡಿಯೋವನ್ನು ರಜನಿಕಾಂತ್‌ಗೆ ಕೊಡ್ತೀನಿ. ಎನ್‌ಟಿಆರ್ ಬಗ್ಗೆ ಬಹಳ ದಾರುಣವಾಗಿ ಕಾರ್ಟೂನ್‌ಗಳನ್ನು ಚಿತ್ರಿಸಿ ಅವಮಾನಿಸಿದ ವ್ಯಕ್ತಿ ಚಂದ್ರಬಾಬು ನಾಯ್ಡು. ರಜನಿಕಾಂತ್‌ಗೆ ಇಲ್ಲಿನ ರಾಜಕೀಯದ ಬಗ್ಗೆ ಮಾಹಿಯಿ ಇಲ್ಲ. ತಲೈವಾ ಹೇಳಿಕೆಯಿಂದ ಎನ್‌ಟಿಆರ್ ಆತ್ಮಕ್ಕೂ ಕೂಡ ನೋವಾಗುತ್ತದೆ. ಎನ್‌ಟಿಆರ್ ಅಭಿಮಾನಿಗಳಿಗೆ ನೋವಾಗುವಂತೆ ರಜನಿಕಾಂತ್ ಮಾತನಾಡಿದ್ದಾರೆ."
"ಚಂದ್ರಬಾಬು ಇಲ್ಲದಿದ್ದಾಗಲೇ ಹೈದರಾಬಾದ್ ಅಭಿವೃದ್ಧಿಯಾಗಿದೆ. ವಿದೇಶಗಳಲ್ಲಿ ತೆಲುಗರು ಉದ್ಯೋಗ ಗಿಟ್ಟಿಸಿಕೊಳ್ಳಲು ವೈಎಸ್‌ಆರ್ ಕಾರಣ. ಚಂದ್ರಬಾಬು ನಾಯ್ಡು ಅಲ್ಲ. ಚಂದ್ರಬಾಬು ವಿಜನ್ ಕಾರಣಕ್ಕೆ 2020ರಲ್ಲಿ ಟಿಡಿಪಿ 23 ಸ್ಥಾನಗಳಿಗೆ ಸೀಮಿತವಾಗುವಂತಾಯಿತು. ವಿಜನ್ 2047ಕ್ಕೆ ಚಂದ್ರಬಾಬು ಯಾವ ದೇಶದಲ್ಲಿರುತ್ತಾರೋ ರಜನಿಕಾಂತ್‌ಗೆ ಗೊತ್ತಾ? ಇಂತಹ ಹೇಳಿಕೆಯಿಂದ ರಜನಿಕಾಂತ್ ತಮ್ಮ ಬಗ್ಗೆ ತೆಲುಗು ಜನರಲ್ಲಿದ್ದ ಗೌರವ ಕೂಡ ಕಮ್ಮಿ ಮಾಡಿಕೊಂಡಿದ್ದಾರೆ."

"ಇಷ್ಟೆಲ್ಲಾ ಮಾತನಾಡುವವರು 27 ವರ್ಷಗಳಲ್ಲಿ ಎನ್‌ಟಿಆರ್‌ಗೆ ಭಾರತರತ್ನ ಯಾಕೆ ಕೊಡಿಸಲಿಲ್ಲ. ಎನ್‌ಟಿಆರ್ ಯುಗಪುರುಷ ಎಂದವರು ಬೆನ್ನಿಗೆ ಚೂರಿ ಹಾಕಿದ್ದೇಕೆ? ರಜನಿಕಾಂತ್ ಹೇಳಿದಂತೆ 2024ರಲ್ಲಿ ಚಂದ್ರಬಾಬು ನಾಯ್ಡು ಮತ್ತೆ ಸಿಎಂ ಆಗುವ ಸಾಧ್ಯತೆ ಇಲ್ಲ. ಎನ್‌ಟಿಆರ್‌ಗೆ ಅಸೆಂಬ್ಲಿಯಲ್ಲಿ ಹೇಗೆ ಅವಮಾನ ಮಾಡಿದರು ಎನ್ನುವುದನ್ನು ನಾನು ರಜನಿಕಾಂತ್‌ಗೆ ದಾಖಲೆ ಸಮೇತ ಮನವರಿಕೆ ಮಾಡಿಕೊಡುತ್ತೇನೆ" ಎಂದಿದ್ದಾರೆ.
ಎನ್‌ಟಿಆರ್ 100ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿಜಯವಾಡದಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಜನಿಕಾಂತ್. "ದಿವಂಗತ ಎನ್‌ಟಿಆರ್ ಯುಗಪುರುಷ. ಚಿಕ್ಕಂದಿನಿಂದಲೂ ಅವರು ಗೊತ್ತು. 'ಪಾತಾಳ ಭೈರವಿ' ನಾನು ನೋಡಿದ ಅವರ ಮೊದಲ ಸಿನಿಮಾ. ಅವರು ಬಹಳ ಕೋಪಿಷ್ಠರು. ಆದರೆ ಮನಸ್ಸು ಹಾಕಿನಂತೆ ಎಂದಿದ್ದರು. ಎನ್‌ಟಿಆರ್ ವಾರಸ್ದಾರನಾಗಿ ಬಾಲಕೃಷ್ಣ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಕಣ್ಣೋಟದಲ್ಲೇ ಬಾಲಯ್ಯ ಏನು ಬೇಕಾದರೂ ಮಾಡ್ತಾರೆ. ಬಾಲಯ್ಯ ಮಾಡುವ ಸ್ಟಂಟ್ಸ್‌ಗಳನ್ನು ನಾನಾಗಲಿ, ಬಿಗ್‌ಬಿ, ಶಾರುಕ್, ಸಲ್ಮಾನ್ ಖಾನ್ ಮಾಡೋಕೆ ಆಗೊಲ್ಲ"
ಇನ್ನು ಆಂಧ್ರದ ಮಾಜಿ ಸಿಎಂ ಚಂದ್ರಬಾಬು ಅವರನ್ನು ಹೊಗಳಿದ ರಜನಿಕಾಂತ್, "ಐಟಿ ವಿಚಾರದಲ್ಲಿ ಚಂದ್ರಬಾಬು ನಾಯ್ಡು ಕೈಗೊಂಡ ನಿರ್ಧಾರಗಳು ಏನು ಅನ್ನುವುದು ಎಲ್ಲರಿಗೂ ಗೊತ್ತಿದೆ. ಅವರಿಂದಲೇ ಹೈದರಾಬಾದ್‌ನಲ್ಲಿ ಐಟಿ ಅಭಿವೃದ್ದಿ ಆಯಿತು. ಹೈದರಾಬಾದ್‌ಗೆ ಹೋದರೆ ನಾವು ಭಾರತದಲ್ಲಿ ಇದ್ದೀವಾ? ನ್ಯೂಯಾರ್ಕ್‌ನಲ್ಲಿ ಇದ್ದೀವಾ? ಎನ್ನುವ ಅನುಮಾನ ಮೂಡುತ್ತದೆ. ಇನ್ನು ನಮ್ಮಬ್ಬರದ್ದು 30 ವರ್ಷಗಳ ಸ್ನೇಹ."
"ನಾನು ಯಾವಾಗ ಭೇಟಿ ಆಗಬೇಕು ಅಂದ್ರು ಅಪಾಯಿಂಟ್‌ಮೆಂಟ್ ಕೊಡ್ತಾರೆ. ಚಂದ್ರಬಾಬುನ ನನಗೆ ನಟ ಮೋಹನ್ ಬಾಬು ಪರಿಚಯಿಸಿದರು. ಚಂದ್ರಬಾಬುಗೆ ದೇಶ ರಾಜಕಾರಣ ಮಾತ್ರವಲ್ಲ ಪ್ರಪಂಚ ರಾಜಕಾರಣ ಕೂಡ ಗೊತ್ತು. ಚಂದ್ರಬಾಬು ಒಬ್ಬ ವಿಷನರಿ, ದೂರದೃಷ್ಟಿ ಉಳ್ಳವರು, ಈಗ ಲಕ್ಷಾಂತರ ಜನ ಐಟಿ ಉದ್ಯೋಗಿಗಳಾಗಿ ಸಂತೋಷದಿಂದ ಇದ್ದಾರೆ ಅಂದ್ರೆ ಅದಕ್ಕೆ ಅವರೇ ಕಾರಣ. 2047ರ ವೇಳೆಗೆ ಏನೆಲ್ಲಾ ಅಭಿವೃದ್ಧಿ ಮಾಡಬೇಕು ಎನ್ನುವುದರ ಬಗ್ಗೆ ಅವರಿಗೆ ದೂರದೃಷ್ಟಿ ಇದೆ.
"ಚಂದ್ರಬಾಬು ಯೋಜನೆಗಳು ಕಾರ್ಯರೂಪಕ್ಕೆ ಬಂದರೆ ಆಂಧ್ರಪ್ರದೇಶ ಸಾಕಷ್ಟು ಅಭಿವೃದ್ಧಿ ಆಗುತ್ತದೆ" ಎಂದು ರಜನಿಕಾಂರ್ ಆಡಿ ಹೊಗಳಿದ್ದರು. ಇದೇ ಮಾತುಗಳು ಈಗ ಮಂತ್ರಿ ರೋಜಾ ಬೇಸರಕ್ಕೆ ಕಾರಣವಾಗಿದೆ.


Click it and Unblock the Notifications











