"ರೋಜಾನ ಮಂಚದ ಮೇಲೆ ಎತ್ತಾಕಿದಂತೆ ತ್ರಿಶಾನ ಹಾಕ್ಬೋದು ಅಂದ್ಕೊಂಡೆ": ಮನ್ಸೂರ್ ಹೇಳಿಕೆಗೆ ರೋಜಾ ಆಕ್ರೋಶ

ನಟಿ ತ್ರಿಶಾ ಕುರಿತು ತಮಿಳು ಪೋಷಕರ ನಟ ಮನ್ಸೂರ್ ಅಲಿಖಾನ್ ಅವಹೇಳನಕಾರಿ ಹೇಳಿಕೆ ನೀಡಿರುವುದು ಭಾರೀ ಚರ್ಚೆ ಹುಟ್ಟಾಕ್ಕಿದೆ. ಆಕೆಯ ಜೊತೆ 'ಲಿಯೋ' ಸಿನಿಮಾದಲ್ಲಿ ನಟಿಸಿದ ಬಗ್ಗೆ ಮಾತನಾಡುವ ಮನ್ಸೂರ್ ನಾಲಿಗೆ ಹರಿಬಿಟ್ಟಿದ್ದರು. ಆತನ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈಗಾಗಲೇ ಸಾಕಷ್ಟು ನಟ, ನಟಿಯರು ಈ ಹೇಳಿಕೆಯನ್ನು ಖಂಡಿಸಿದ್ದಾರೆ.

ಮನ್ಸೂರ್ ಅಲಿಖಾನ್ ದಕ್ಷಿಣದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದ್ಕಾದಲ್ಲಿ ವಿಲನ್ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ 'ಲಿಯೋ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ದಸರಾ ಸಂಭ್ರಮದಲ್ಲಿ ಬಂದ ಸಿನಿಮಾ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಚಿತ್ರದಲ್ಲಿ ದಳಪತಿ ವಿಜಯ್ ಜೋಡಿಯಾಗಿ ತ್ರಿಶಾ ನಟಿಸಿದ್ದರು.

Andra pradesh Minister Roja fires on actor Mansoor Ali Khans cheap comments

'ಲಿಯೋ' ಚಿತ್ರದ ಹೃದಯಾರಾಜ್ ಡಿಸೋಜಾ ಎನ್ನುವ ಪಾತ್ರದಲ್ಲಿ ಮನ್ಸೂರ್ ಅಲಿಖಾನ್ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಸಿನಿಮಾ ಬಗ್ಗೆ ಮಾಧ್ಯಮಗಳ ಮಾತನಾಡುತ್ತಾ ನಟಿ ತ್ರಿಶಾ ಬಗ್ಗೆ ಅಸಭ್ಯವಾಗಿ ಮನ್ಸೂರ್ ಅಲಿಖಾನ್ ಮಾತನಾಡಿದ್ದಾರೆ. "ಲಿಯೋ ಚಿತ್ರದಲ್ಲಿ ತ್ರಿಶಾ ನಟಿಸ್ತಾರೆ ಎಂದು ಗೊತ್ತಾಯಿತು. ಈ ಸಿನಿಮಾದಲ್ಲಿ ಒಂದು ಬೆಡ್‌ರೂಮ್ ಸೀನ್ ಆದರೂ ಇರುತ್ತದೆ ಎಂದುಕೊಂಡಿದ್ದೆ. ಈ ಹಿಂದೆ ಖುಷ್ಬೂ, ರೋಜಾ ಅವರಂತಹ ನಟಿಯರನ್ನು ಮಂಚದ ಮೇಲೆ ಎತ್ತಿ ಹಾಕಿದಂತೆ ತ್ರಿಶಾನ ಕೂಡ ಹಾಕಬಹುದು ಎಂದುಕೊಂಡಿದ್ದೆ. 150 ಸಿನಿಮಾಗಳಲ್ಲಿ ನಾನು ಮಾಡದೇ ಇರೋದಾ? ಯಾಕೋ ಈಗ ವಿಲನ್ ಆಗಿ ಅವಕಾಶವೇ ಕೊಡುತ್ತಿಲ್ಲ"

"ನಿರ್ದೇಶಕ ಲೋಕೇಶ್ ಕನಕರಾಜ್ 'ಲಿಯೋ' ಚಿತ್ರದ ಕಥೆ ಹೇಳಿದಾಗ ತ್ರಿಶಾ ಜೊತೆಯೂ ರೇ* ಸೀನ್ ಇರಲಿದೆ ಎಂದುಕೊಂಡಿದ್ದೆ. ಆಹಾ ಬಿಳಿ ಹತ್ತಿಯ ರೀತಿ ಕಾಣುವ ಕಾಶ್ಮೀರದಲ್ಲಿ ತ್ರಿಶಾನ ಹಾಗೆ ಎತ್ತಿಕೊಂಡು ಹೋಗಬಹುದು ಎಂದುಕೊಂಡೆ. ಆದರೆ ಕಾಶ್ಮೀರದಲ್ಲಿ ಚಿತ್ರೀಕರಣದ ವೇಳೆ ತ್ರಿಶಾಳನ್ನು ನನಗೆ ತೋರಿಸಲೇಯಿಲ್ಲ" ಎಂದಿದ್ದರು. ಮನ್ಸೂರ್‌ ಅಲಿಖಾನ್ ಹೇಳಿಕೆಗೆ ತ್ರಿಶಾ ಗರಂ ಆಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. ಇನ್ನು ಮುಂದೆ ಆತನೊಟ್ಟಿಗೆ ನಟಿಸುವುದಿಲ್ಲ ಎಂದಿದ್ದರು.

'ಲಿಯೋ' ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಸೇರಿದಂತೆ ಹಲವರು ಮನ್ಸೂರ್ ಅಲಿಖಾನ್ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ. ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ ಮನ್ಸೂರ್ ಅಲಿಖಾನ್ ಪ್ರಕಟನೆ ನೀಡಿದ್ದರು. "ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಜಗತ್ತಿನಲ್ಲಿ ಇನ್ನೂ ಹಲವು ಮಹತ್ವದ ವಿಚಾರಗಳಿದ್ದು, ಪ್ರಸ್ತುತ ಸ್ಪಂದಿಸುತ್ತಿರುವ ಹಿರಿಯರೆಲ್ಲರೂ ಅವುಗಳ ಬಗ್ಗೆ ಮಾತನಾಡಬೇಕು" ಎಂದು ಸಲಹೆ ನೀಡಿದ್ದರು. ನನಗೂ ಮಹಿಳೆಯರ ಬಗ್ಗೆ ಅಪಾರ ಗೌರವವಿದೆ. ನನ್ನೊಟ್ಟಿಗೆ ನಟಿಸಿದ ಯಾವ ನಟಿಗೂ ಅವಮಾನ ಮಾಡಿಲ್ಲ" ಎಂದಿದ್ದರು.

Andra pradesh Minister Roja fires on actor Mansoor Ali Khans cheap comments

ನಟಿ ತ್ರಿಶಾ ಅವರನ್ನು ಶ್ಲಾಘಿಸುವ ಉದ್ದೇಶದಿಂದ ಆ ಕಾಮೆಂಟ್‌ ಮಾಡಿದ್ದೇನೆ. ನನ್ನ ಬಗ್ಗೆ ತಮಿಳುನಾಡಿನ ಜನತೆಗೆ ಗೊತ್ತು. ನಾನು ಮಾಡುವ ಒಳ್ಳೆ ಕೆಲಸಗಳ ಬಗ್ಗೆ ಮಾತನಾಡುತ್ತಾರೆ. ನಾನು ಸುಮ್ಮನೆ ನೀಡಿದ ಹೇಳಿಕೆ ಬಗ್ಗೆ ಈ ರೀತಿ ಗದ್ದಲ ಉಂಟುಮಾಡುವುದು ಸರಿಯಲ್ಲ. ನನ್ನ ಬಗ್ಗೆ ಯಾವುದೇ ವಿವಾದ ಮಾಡಬೇಕು ಎಂದುಕೊಂಡರೆ ಅದಕ್ಕೆ ಹೆದರಲ್ಲ" ಎಂದು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು.

ತ್ರಿಶಾ ಕುರಿತು ಮನ್ಸೂರ್ ಅಲಿಖಾನ್ ಹೇಳಿಕೆಯನ್ನು ಬಹುಭಾಷಾ ನಟಿ, ಆಂಧ್ರ ಸಚಿವೆ ರೋಜಾ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಮನ್ಸೂರ್ ಅಲಿ ಖಾನ್ ರೀತಿಯ ಗಂಡಸರ ಮಾತನಾಡುವ ಪದ್ಧತಿ ಬದಲಾಗಬೇಕು ಅಂದ್ರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅದು ನನ್ನ ಮೇಲೆ ದಾಳಿ ಮಾಡಿದ ಟಿಡಿಪಿ ಎಂಎಲ್ಎ ಆಗಿರಬಹುದು ಅಥವಾ ತ್ರಿಶಾ, ಖುಷ್ಬೂ ಹಾಗೂ ನನ್ನ ಬಗ್ಗೆ ಮಾತನಾಡಿದ ಮನ್ಸೂರ್ ಅಲಿಖಾನ್ ಆಗಿರಬಹುದು. ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದರೆ ಈ ಗಂಡಸರು ಈ ರೀತಿ ಬಾಯಿಗೆ ಬಂದಿದ್ದನ್ನೆಲ್ಲ ನಿರ್ಭಯವಾಗಿ ಮಾತನಾಡುತ್ತಾರೆ. ಮಹಿಳೆಯರನ್ನು ಈ ರೀತಿ ಟಾರ್ಗೆಟ್ ಮಾಡಿದರೂ ರಾಜಕೀಯ, ಸಿನಿಮಾಗಳಲ್ಲಿ ಬೆಳೆದು ತೋರಿಸಿದ್ದೇವೆ. ಉಳಿದವರ ಪರಿಸ್ಥಿತಿ ಏನಾಗಬಹುದು ಊಹಿಸಿ" ಎಂದು ಸಚಿವೆ ರೋಜಾ ಎಕ್ಸ್(ಟ್ವಿಟ್ಟರ್‌) ನಲ್ಲಿ ಪೋಸ್ಟ್ ಮಾಡಿದ್ದಾರೆ.

More from Filmibeat

English summary
Actress Roja condemns Mansoor Ali Khan's derogatory comments about her and trisha;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X