Rashmika Mandanna: ನೆಗೆಟಿವಿಟಿ.. ಟ್ರೋಲ್: "ಕೊನೆಗೂ ಒಳ್ಳೆ ಟೈಮ್ ಬಂತು" ಎಂದ ರಶ್ಮಿಕಾ

ರಶ್ಮಿಕಾ ಮಂದಣ್ಣ ಕರಿಯರ್ ಟಾಪ್ ಗೇರ್‌ನಲ್ಲಿದೆ. ತೆಲುಗು, ಹಿಂದಿ ಸಿನಿಮಾಗಳ ಮೂಲಕ ಕೊಡಗಿನ ಚೆಲುವೆ ಮೋಡಿ ಮಾಡುತ್ತಿದ್ದಾರೆ. ತಮಿಳು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಆದರೆ ಕನ್ನಡ ಸಿನಿಮಾಗಳಲ್ಲಿ ನಟಿಸೋ ಲಕ್ಷಣಗಳು ಕಾಣುತ್ತಿಲ್ಲ. ಸದ್ಯ 'ಅನಿಮಲ್' ಸಿನಿಮಾ ಲಿಪ್‌ಲಾಕ್ ವಿಚಾರಕ್ಕೆ ಭಾರೀ ಸುದ್ದಿಯಲ್ಲಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ರಶ್ಮಿಕಾಗೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಜಾಸ್ತಿ ಆಗ್ತಿದೆ. ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾಗುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆಗಿನ ಎಂಗೇಜ್‌ಮೆಂಟ್ ಬ್ರೇಕ್‌ಅಪ್ ಬಳಿಕ ಟ್ರೋಲ್ಸ್ ಮತ್ತಷ್ಟು ಹೆಚ್ಚಾಯಿತು. ಈ ಬಗ್ಗೆ ಸಾಕಷ್ಟು ಸಂದರ್ಶನಗಳಲ್ಲಿ ಹೇಳಿಕೊಂಡು ನೋವು ಹೊರ ಹಾಕಿದ್ದಾರೆ. ಇತ್ತೀಚೆಗೆ ಟ್ರೋಲ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ತಾನಾಯ್ತು ತನ್ನ ಕೆಲಸ ಆಯ್ತು ಎಂದು ಮುಂದುವರೆದಿದ್ದಾರೆ.

Rashmika-mandanna-about-her-career

ಸದ್ಯ ರಣ್ಬೀರ್ ಕಪೂರ್ ಜೋಡಿಯಾಗಿ 'ಅನಿಮಲ್' ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ಚಿತ್ರದ ಟೀಸರ್, ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಈ ಸಿನಿಮಾ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗ್ತಿದೆ. ಇತ್ತೀಚೆಗೆ ಬಂದ 'ಓ ಬಾಲೆ' ಸಾಂಗ್ ಸಖತ್ ವೈರಲ್ ಆಗ್ತಿದೆ. ಕಾರಣ ಹಾಡಿನಲ್ಲಿ ರಣ್ಬೀರ್‌- ರಶ್ಮಿಕಾ ಲಿಪ್‌ಲಾಕ್ ದೃಶ್ಯಗಳು. ಹಾಡಿನ ತುಂಬಾ ಇಬ್ಬರು ಪದೇ ಪದೆ ತುಟಿಗೆ ತುಟಿ ಬೆರಸಿ ಎಲ್ಲರ ಹುಬ್ಬೇರಿಸಿದ್ದಾರೆ.

ಡಿಸೆಂಬರ್ 1ಕ್ಕೆ 'ಅನಿಮಲ್' ಸಿನಿಮಾ ರಿಲೀಸ್ ಆಗಲಿದೆ. ಅರ್ಜುನ್ ರೆಡ್ಡಿ ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿವಂಗಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ರಶ್ಮಿಕಾ ಲಿಪ್‌ಲಾಕ್ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್‌ಗೆ ಗುರಿಯಾಗಿದೆ. ಕೆಲವರು ವಿಜಯ್ ದೇವರಕೊಂಡ ಹೆಸರು ಎಳೆದುತಂದು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಇದೆಲ್ಲದರ ನಡುವೆ ನಟಿ ರಶ್ಮಿಕಾ ಸಂದರ್ಶವೊಂದರಲ್ಲಿ ಮಾತನಾಡಿದ್ದು "ಈಗ ನನಗೆ ಒಳ್ಳೆ ಟೈಮ್ ಶುರುವಾಗಿದೆ" ಎಂದಿದ್ದಾರೆ.

"ಈಗ ನನ್ನ ಟೈಟಮ್ ಬಹಳ ಚೆನ್ನಾಗಿದೆ. ತಿನ್ನುವ ಪ್ರತಿ ಅಗುಳಿನ ಮೇಲೆ ತಿನ್ನುವವರ ಹೆಸರು ಬರೆದಿರುತ್ತದೆ ಎನ್ನುತ್ತಾರೆ. ಈ ಮಾತು ನಟ ನಟಿಯರಿಗೂ ಅನ್ವಯಿಸುತ್ತದೆ. ನಟಿಸುವ ಪಾತ್ರಗಳ ಮೇಲೆ ಕಲಾವಿದರ ಹೆಸರು ಬರೆದಿರುತ್ತದೆ. ಪ್ರತಿಯೊಬ್ಬರಿಊ ಒಳ್ಳೆಯ ಸಮಯ ಬರುತ್ತೆ. ಹಾಗೆ ಈಗ ನನಗೆ ಒಳ್ಳೆ ಟೈಮ್ ನಡೀತಿದೆ. ಅಷ್ಟರಮಟ್ಟಿಗೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೀನಿ. ಒಳ್ಳೆ ಒಳ್ಳೆ ಕತೆಗಳು, ಪಾತ್ರಗಳು ಸಿಗುತ್ತಿದೆ" ಎಂದಿದ್ದಾರೆ.

ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ರಶ್ಮಿಕಾ ಸಿನಿಕರಿಯರ್ ಆರಂಭವಾಯಿತು. ಕನ್ನಡದಲ್ಲಿ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ ಚೆಲುವೆ 'ಚಲೋ' ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದರು. ಬಳಿಕ ನಟಿಸಿದ 'ಗೀತಾ ಗೋವಿಂದಂ' ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ಅಲ್ಲಿಂದ ಮುಂದೆ ಆಕೆ ಮತ್ತೆ ತಿರುಗಿ ನೋಡಲಿಲ್ಲ. ತೆಲುಗಿನ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು.

ತೆಲುಗು ನಂತರ ತಮಿಳು ಸಿನಿಮಾಗಳಲ್ಲಿ ಮಿಂಚಿದರು. 'ಮಿಷನ್ ಮಜ್ನು' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದರು. ಆದರೆ ಆ ಚಿತ್ರಕ್ಕೂ ಮುನ್ನ ಬಿಗ್‌ಬಿ ಜೊತೆ ನಟಿಸಿದ 'ಗುಡ್‌ಬೈ' ಸಿನಿಮಾ ರಿಲೀಸ್ ಆಯಿತು. ಇನ್ನು ತೆಲುಗಿನಲ್ಲಿ 'ಪುಷ್ಪ' ಚಿತ್ರದಲ್ಲಿ ಶ್ರೀವಲ್ಲಿಯಾಗಿ ಗಮನ ಸೆಳೆದರು. ಕನ್ನಡದಲ್ಲಿ 'ಪೊಗರು' ರಶ್ಮಿಕಾ ನಟಿಸಿದ ಕೊನೆಯ ಸಿನಿಮಾ.

'ಅನಿಮಲ್' ಬಳಿಕ ರಶ್ಮಿಕಾ ನಟನೆಯ 'ಪುಷ್ಪ'-2 ಸಿನಿಮಾ ತೆರೆಗೆ ಬರಲಿದೆ. 'ರೈನ್‌ಬೋ' ಎನ್ನುವ ಮಹಿಳಾ ಪ್ರಧಾನ ಸಿನಿಮಾ ಕೂಡ ಆಕೆಯ ಕೈಯಲ್ಲಿದೆ. ಇನ್ನು ಧನುಷ್ ನಟನೆಉ 50ನೇ ಚಿತ್ರಕ್ಕೂ ನಾಯಕಿಯಾಗಿ ರಶ್ಮಿಕಾ ಆಯ್ಕೆ ಆಗಿದ್ದಾರೆ. ಸದ್ಯ ಬಾಲಿವುಡ್ ನಟಿಯರಿಗೂ ಕೂಡ ಕೊಡಗಿನ ಚೆಲುವೆ ಪೈಪೋಟಿ ಕೊಡುತ್ತಿದ್ದಾರೆ.

More from Filmibeat

English summary
Rashmika Mandanna about her career and roles;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X