'ಅನಿಮಲ್' ಹಿಂಸೆ.. ಸ್ತ್ರೀದ್ವೇಷ.. ವಂಗಾ ಎದುರು ಉಪೇಂದ್ರನ ಎಳೆದು ತಂದ ತೆಲುಗು ಬಾಬುಗಳು

ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಅನಿಮಲ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 5 ದಿನಕ್ಕೆ ಸಿನಿಮಾ 480 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಂದೀಪ್ ರೆಡ್ಡಿ ವಂಗಾ ಟೇಕಿಂಗ್, ರಣ್‌ಬೀರ್ ಪರ್ಫಾರ್ಮನ್ಸ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ವೈಲೆನ್ಸ್ ಅತಿಯಾಯ್ತು ಎಂದು ಗೊಣಗುತ್ತಲೇ ಕೆಲವರು ಸಿನಿಮಾ ನೋಡುತ್ತಿದ್ದಾರೆ.

ಟೀ ಸೀರಿಸ್, ಭದ್ರಕಾಳಿ ಪಿಕ್ಚರ್ಸ್ ಹಾಗೂ ಸಿನಿ1 ಸ್ಟುಡಿಯೋ ಬ್ಯಾನರ್‌ಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದವು. ಅಂದಾಜು 200 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಫಸ್ಟ್ ವೀಕೆಂಡ್‌ನಲ್ಲಿ ಗೆಲುವಿನ ದಡ ಸೇರಿದೆ. ಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್, ತ್ರಿಪ್ತಿ ದಿಮ್ರಿ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದಾರೆ.

Animal: Sandeeep Reddy vanga amidst criticism for misogyny, Upendra name Trending now

'ಅನಿಮಲ್' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ A ಸರ್ಟಿಫಿಕೇಟ್ ಸಿಕ್ಕಿದೆ. ಚಿತ್ರದಲ್ಲಿ ವೈಲೆನ್ಸ್ ಹಾಗೂ ಹಸಿಬಿಸಿ ದೃಶ್ಯಗಳು ಓವರ್ ಆಯ್ತು ಎನ್ನುವ ಮಾತುಗಳು ಕೇಳಿಬರ್ತಿದೆ. ಕೆಲವರಿಗೆ ಸಿನಿಮಾ ವಾಕರಿಕೆ ತರಿಸುತ್ತಿದೆ. ಆದರೂ ಕೂಡ 3 ಗಂಟೆ 12 ನಿಮಿಷಗಳ ಸುದೀರ್ಘ ಚಿತ್ರವನ್ನು ಪ್ರೇಕ್ಷಕರು ಮುಗಿಬಿದ್ದು ನೋಡುತ್ತಿದ್ದಾರೆ. ತಂದೆ ಮಗನ ಬಾಂಧವ್ಯದ ಕತೆಯನ್ನು ಇಷ್ಟು ಹಿಂಸಾತ್ಮಕವಾಗಿ ಗಾಢವಾಗಿ ತೋರಿಸುವ ಅವಶ್ಯಕತೆ ಇತ್ತಾ? ಎಂದು ಕೆಲವರು ಚಕಾರ ಎತ್ತುತ್ತಿದ್ದಾರೆ.

ಮುಖ್ಯವಾಗಿ ಸಂದೀಪ್ ರೆಡ್ಡಿ ವಂಗಾ ತಮ್ಮ ಸಿನಿಮಾಗಳಲ್ಲಿ ಮಹಿಳಾ ಪಾತ್ರಗಳನ್ನು ನಡೆಸಿಕೊಳ್ಳುತ್ತಿರುವುದು ರೀತಿ ಸರಿಯಿಲ್ಲ. 'ಅನಿಮಲ್' ಚಿತ್ರದಲ್ಲೂ ಸ್ತ್ರೀದ್ವೇಷವನ್ನು ಬಹಳ ವೈಭವೀಕರಿಸಿ ತೋರಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇದೇ ವಿಚಾರಕ್ಕೆ ನಿರ್ದೇಶಕರನ್ನು ಟ್ರೋಲ್ ಮಾಡುತ್ತಿದ್ದಾರೆ. ಇತ್ತೀಚೆಗೆ 'ಅನಿಮಲ್' ಸಿನಿಮಾ ಚೆನ್ನಾಗಿದೆ ಎಂದು ಪೋಸ್ಟ್ ಮಾಡಿದ ತಮಿಳು ನಟಿ ತ್ರಿಶಾಗೂ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

ತಮ್ಮ ಸಿನಿಮಾಗಳಲ್ಲಿ ಸಂದೀಪ್ ರೆಡ್ಡಿ ವಂಗಾ ಮಹಿಳೆಯರನ್ನು ತೋರಿಸಿರುವ ರೀತಿ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಕನ್ನಡ ನಟ, ನಿರ್ದೇಶಕ ಉಪೇಂದ್ರ ಹೆಸರು ಟ್ರೆಂಡ್ ಆಗುತ್ತಿದೆ. 'ಅನಿಮಲ್' ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾಗೂ ಉಪೇಂದ್ರಗೂ ಎಲ್ಲಿಂದ ಎಲ್ಲಿಗೆ ಸಂಬಂಧ. ಉಪ್ಪಿ ಹೆಸರು ಯಾಕೆ ಚರ್ಚೆಗೆ ಬಂತು ಎನ್ನುವ ಅನುಮಾನ ಮೂಡುವುದು ಸಹಜ.

ರಿಯಲ್ ಸ್ಟಾರ್ ಉಪೇಂದ್ರ ಕೂಡ ಒಂದ್ಕಾಲದಲ್ಲಿ ರಾ ಮೇಕಿಂಗ್, ವೈಲೆನ್ಸ್‌ ಇರುವ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಆ ಸಿನಿಮಾಗಳಲ್ಲೂ ಮಹಿಳಾ ಪಾತ್ರಗಳನ್ನು ಇದೇ ರೀತಿ ತೋರಿಸಿದ್ದರು. ಈಗ ಸಂದೀಪ್ ರೆಡ್ಡಿ ವಂಗಾ ಬಗ್ಗೆ ಮಾತನಾಡುವವರು 25 ವರ್ಷಗಳ ಹಿಂದೆ ಉಪೇಂದ್ರ ಸಿನಿಮಾಗಳನ್ನು ನೋಡಿ ಏನು ಹೇಳುತ್ತಾರೆ ಎಂದು ಚರ್ಚೆ ಶುರು ಮಾಡಿದ್ದಾರೆ. ಉಪೇಂದ್ರ ತಮ್ಮ ಸಿನಿಮಾಗಳಲ್ಲಿ ಮಹಿಳಾ ಪಾತ್ರಗಳ ಜೊತೆ ಒರಟಾಗಿ ನಡೆದುಕೊಂಡಿರುವ ವಿಡಿಯೋಗಳನ್ನು ವೈರಲ್ ಮಾಡುತ್ತಿದ್ದಾರೆ. ಅಭಿಮಾನಿಗಳಂತೂ ಉಪೇಂದ್ರನ ನೋಡಿ ಸಂದೀಪ್ ರೆಡ್ಡಿ ವಂಗಾ ಕಾಪಿ ಮಾಡಿದ್ದಾರೆ ಎಂದು ವಾದಿಸುತ್ತಿದ್ದಾರೆ.

ಸಂದೀಪ್ ರೆಡ್ಡಿ ಈಗ ಇಷ್ಟೆಲ್ಲಾ ಟೀಕೆ ಎದುರಿಸುತ್ತಿದ್ದಾರೆ ಅಂದ್ರೆ ಆಗಿನ ಕಾಲದಲ್ಲಿ ಉಪೇಂದ್ರ ಏನೆಲ್ಲಾ ಎದುರಿಸಿರಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಉಪ್ಪಿ ನಟನೆಯ 'ಉಪೇಂದ್ರ', 'ಆಟೋಶಂಕರ್', 'ರಾ' ಸಿನಿಮಾ ವಿಡಿಯೋಗಳು ವೈರಲ್ ಆಗುತ್ತಿದೆ. 'ಅನಿಮಲ್' ಚಿತ್ರದಲ್ಲಿ ರಣ್‌ಬೀರ್‌ ಆಟಿಟ್ಯೂಟ್‌ಗಿಂತಲೂ ಉಪ್ಪಿ ಸಿನಿಮಾಗಳಲ್ಲಿ ಆರ್ಭಟ ಜೋರಾಗಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಕೆಲವರು 'ಉಪೇಂದ್ರ' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಯು' ಸರ್ಟಿಫಿಕೇಟ್ ಸಿಕ್ಕಿತ್ತಾ? ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅಂತಹ ಸಿನಿಮಾಗಳು ಈಗ ಬಂದಿದ್ದರೆ ಭಾರೀ ರಾದ್ದಾಂತವೇ ಆಗುತ್ತಿತ್ತು ಎನ್ನುತ್ತಿದ್ದಾರೆ.

ನಟ ಉಪೇಂದ್ರಗೆ ಟಾಲಿವುಡ್‌ನಲ್ಲೂ ದೊಡ್ಡ ಅಭಿಮಾನಿ ಬಳಗವಿದೆ. 'ಓಂ' ಚಿತ್ರವನ್ನು ತೆಲುಗಿನಲ್ಲಿ ತಾವೇ ನಿರ್ದೇಶನ ಮಾಡಿದ್ದರು. 'ಎ' ಹಾಗೂ 'ಉಪೇಂದ್ರ' ಸಿನಿಮಾಗಳು ತೆಲುಗಿಗೆ ಡಬ್ ಆಗಿ ರಿಲೀಸ್ ಆಗಿದ್ದವು. ಟಾಲಿವುಡ್‌ನಲ್ಲಿ ಪೂರಿ ಜಗನ್ನಾಥ್ ಸೇರಿದಂತೆ ಹಲವರಿಗೆ ಉಪೇಂದ್ರ ಸಿನಿಮಾಗಳೇ ಪ್ರೇರಣೆ ಎನ್ನುವ ಮಾತುಗಳು ಕೇಳಿಬಂದಿತ್ತು.

More from Filmibeat

English summary
Amid Animal criticism; Netizens recalls Upendra old films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X