ಸಖತ್ ವೈರಲ್ ಆಗ್ತಿದೆ 'ನಟಸಾರ್ವಭೌಮ' ನಟಿಯ ಲಿಪ್‌ ಲಾಕ್

ಪುನೀತ್ ರಾಜ್‌ಕುಮಾರ್ ನಟನೆಯ 'ನಟಸಾರ್ವಭೌಮ' ಸಿನಿಮಾದ ಮೂಲಕ ಕನ್ನಡ ಸಿನಿಪ್ರೇಕ್ಷಕರ ಮನ ಗೆದ್ದಿದ್ದ ಅನುಪಮಾ ಪರಮೇಶ್ವರನ್ ಇದೀಗ ತಮ್ಮ ಹೊಸ ಸಿನಿಮಾದ ಲಿಪ್‌ ಲಾಕ್ ಸೀನ್‌ನಿಂದ ಸುದ್ದಿಯಲ್ಲಿದ್ದಾರೆ.

ಮಲಯಾಳಂ ನಟಿ ಅನುಪಮಾ ಪರಮೇಶ್ವರನ್, 'ನಟಸಾರ್ವಭೌಮ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಗ್ಲಾಮರ್ ಸೋಂಕಿಲ್ಲದ ಸರಳ, ಸುಂದರವಾಗಿ ಕಾಣಿಸಿಕೊಂಡಿದ್ದ ಅನುಪಮಾರನ್ನು ಕನ್ನಡದ ಸಿನಿಪ್ರೇಕ್ಷಕರು ತೆರೆಯ ಹೃದಯದಿಂದ ಒಪ್ಪಿಕೊಂಡಿದ್ದರು. ಆದರೆ ತೆಲುಗು ಸಿನಿಮಾವೊಂದರಲ್ಲಿ ನಟಿಸಿರುವ ಅನುಪಮಾ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ.

ತೆಲುಗಿನ ಹೊಸ ಸಿನಿಮಾ 'ರೌಡಿ ಬಾಯ್ಸ್' ಸಿನಿಮಾದಲ್ಲಿ ಅನುಪಮಾ ನಟಿಸಿದ್ದು, ಸಿನಿಮಾದ ಟ್ರೇಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಅನುಪಮಾ ಪರಮೇಶ್ವರನ್, ನಾಯಕ ನಟನಿಗೆ ಗಾಢವಾಗಿ ತುಟಿಗೆ ತುಟಿ ಒತ್ತಿರುವ ದೃಶ್ಯ ಟ್ರೇಲರ್‌ನಲ್ಲಿ ಗಮನ ಸೆಳೆಯುತ್ತಿದೆ.

Anupama Parameshwarans Lip Lock Scene Getting Viral On Social Media

'ರೌಡಿ ಬಾಯ್ಸ್' ಸಿನಿಮಾವು ಕಾಲೇಜು ಪ್ರೇಮಕತೆಯ ಕತೆಯಾಗಿದ್ದು, ಕಾಲೇಜು ಜೀವನದ ಮೋಜು, ಮಸ್ತಿಗಳ ಜೊತೆಗೆ ಎರಡು ಕಾಲೇಜುಗಳ ನಡುವಿನ ವೈಷಮ್ಯ, ಹುಡುಗಿಗಾಗಿ ಕಿತ್ತಾಟ ಇತರ ವಿಷಯಗಳನ್ನು ಒಳಗೊಂಡಿದೆ.

ಸಿನಿಮಾದ ನಾಯಕ ಆಶಿಶ್‌ಗೆ ಇದು ಮೊದಲ ಸಿನಿಮಾ. ಸಿನಿಮಾದ ನಿರ್ಮಾಪಕ ದಿಲ್ ರಾಜು ಅವರ ಹತ್ತಿರದ ಸಂಬಂಧಿ ಆಶಿಶ್ ಆಗಿದ್ದು, ಸಿನಿಮಾಕ್ಕೆ ಭಾರಿ ಬಂಡವಾಳವನ್ನೇ ದಿಲ್ ರಾಜು ಹೂಡಿದ್ದಾರೆ.

''ದೊಡ್ಡ ನಿರ್ಮಾಪಕನ ಕುಟುಂಬ ಕುಡಿಯ ಮೊದಲ ಸಿನಿಮಾದಲ್ಲಿಯೇ ಸ್ಟಾರ್ ನಟಿಯೊಬ್ಬರು ಮುತ್ತು ಕೊಡುತ್ತಾರೆಂದರೆ ಇದು ಕತೆಯ ಒತ್ತಡ ಅಲ್ಲ ನಿರ್ಮಾಪಕನ ಒತ್ತಡ'' ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟ್ರೇಲರ್‌ನಲ್ಲಿ ಒಂದು ಲಿಪ್‌ಲಾಕ್ ದೃಶ್ಯವಷ್ಟೆ ಇದೆ. ಆದರೆ ಸಿನಿಮಾದಲ್ಲಿ ಅನುಪಮಾ ಹಾಗೂ ನಾಯಕ ನಟ ಆಶಿಶ್ ನಡುವೆ ಹಲವು ಲಿಪ್‌ಲಾಕ್‌ ದೃಶ್ಯಗಳಿವೆ ಎನ್ನಲಾಗುತ್ತಿದೆ. ಜೊತೆಗೆ ಕೆಲವು ಹಸಿ-ಬಿಸಿ ದೃಶ್ಯಗಳು ಸಹ ಇವೆ ಎನ್ನಲಾಗುತ್ತಿದೆ.

More from Filmibeat

English summary
Actress Anupama Parameshwaran's lip lock scene getting viral on social media. Anupama acting in Rowdy Boys Telugu movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X