ದಿನನಿತ್ಯ 'ಬಿರಿಯಾನಿ' ತಿಂತಿರಾ ? 'ಬೋಲ್ಡ್' ಲುಕ್ ಬಗ್ಗೆ ಮೌನ ಮುರಿದ ಅನುಪಮಾ..!

ಹೇಳಿ ಕೇಳಿ ಇದು ಗ್ಲಾಮರ್ ಲೋಕ .. ಈ ರಂಗೀನ್ ಲೋಕದಲ್ಲಿ ಏನ್ ಬೇಕಾದ್ರೂ ಆಗ್ಬೋದು. ನಟಿಯರು ಮೈ ತುಂಬಾ ಬಟ್ಟೆ ಉಟ್ರೂ ಸುದ್ದಿ, ಬೋಲ್ಡ್ ಆಗಿ ಮೈಮಾಟ ಪ್ರದರ್ಶಿಸಿದ್ರೂ ಸುದ್ದಿ. ಸದ್ಯದ ಸುದ್ದಿ ಏನಪ್ಪಾ ಅಂದರೆ ಅನುಪಮಾ ಪರಮೇಶ್ವರನ್ ತಮ್ಮ ಹಾಟ್ ಅವತಾರದ ಹಿಂದಿನ ರಹ್ಯಸವನ್ನ ಹೇಳಿದ್ದಾರೆ.

ಹೌದು, ಟಿಲ್ಲು ಸ್ಕ್ವೇರ್ ಸಿನಿಮಾದಲ್ಲಿಅನುಪಮಾ, ಮೈ ಚಳಿ ಬಿಟ್ಟು ನಟಿಸಿರುವ ವಿಚಾರ ನಿಮಗೆ ಗೊತ್ತೇ ಇರಬೇಕು. ಯಾಕೆಂದರೆ ಈ ಚಿತ್ರದ ಚಿಕ್ಕ ತುಣುಕು ಹೊರ ಬಂದಾಗೆಲ್ಲ ಅನುಪಮಾ ಅವರ ಅಭಿಮಾನಿಗಳು ಚಕಾರ ಎತ್ತುತ್ತಾ ಬಂದಿದ್ದಾರೆ. ತಮ್ಮ ಅಸಹನೆ ಅಸಮಾಧಾನ ಹೊರ ಹಾಕ್ತಾನೇ ಬಂದಿದ್ದಾರೆ. ಇನ್ನೂ ಅನುಪಮಾ ಅವರ ಈ ಬೋಲ್ಡ್ ವೆಂಚರ್ ಪೋಲಿ ಹುಡುಗರಿಗಂತೂ ಗೋಲಿ ಸೋಡಾ ಕುಡಿದಷ್ಟೇ ಖುಷಿಯನ್ನ ಕೊಡ್ತಿದೆ.

Anupama Parameswaran broke her silence about the bold look In Tillu Square

ಖುದ್ದು ಅನುಪಮಾಗೆ ಈ ಎಲ್ಲ ವಿಚಾರ ಗೊತ್ತು ಕೂಡ. ಆದರೆ ಅನುಪಮಾ ವ್ಯಕ್ತವಾದ ಅಭಿಪ್ರಾಯಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಬೇಸರ ಮಾಡಿಕೊಂಡಿಲ್ಲ. ಬದಲಿಗೆ ಬದಲಾವಣೆಯ ಈ ಪರ್ವವನ್ನ ಅನುಪಮಾ ಎಂಜಾಯ್ ಮಾಡುತ್ತಿದ್ದಾರೆ. ಹೌದು, ಟಿಲ್ಲು ಸ್ಕೇರ್ ಚಿತ್ರದ ಮೂರನೇ ಹಾಡು ನಿನ್ನೆ ಬಿಡುಗಡೆಯಾಗಿದೆ. ಈ ಹಾಡಿನ ಬಿಡುಗಡೆಯ ಸಮಾರಂಭದಲ್ಲಿ ಅನುಪಮಾ ಅವರಿಗೆ ನೀವ್ಯಾಕಿಷ್ಟು ಬದಲಾಗಿದ್ದೀರಾ ಎಂಬ ಪ್ರಶ್ನೆ ಕೇಳಲಾಗಿದೆ. ಇಂತಹ ಪಾತ್ರ ಹಾಗೂ ಚಿತ್ರ ಮಾಡುವ ಅವಶ್ಯಕತೆ ನಿಮಗೆ ಏನಿತ್ತು ಎಂದು ಕೇಳಲಾಗಿದೆ. ಇದಕ್ಕೆ ತಡಬಡಿಸದೇ ಉತ್ತರವನ್ನ ಕೊಟ್ಟಿದ್ದಾರೆ.

Anupama Parameswaran broke her silence about the bold look In Tillu Square

ನಿಮಗೆ ಬಿರಿಯಾನಿ ಇಷ್ಟ ಅಂತ, ನೀವೂ ಪ್ರತಿ ದಿನ ಬಿರಿಯಾನಿಯನ್ನೇ ತಿನ್ತೀರಾ ಎಂದು ಕೇಳಿರುವ ಅನುಪಮಾ ನಾನಂತೂ ದಿನನಿತ್ಯ ಬಿರಿಯಾನಿ ತಿನ್ನಲ್ಲ ನನಗೆ ಒಂದು ದಿನ ಪಲಾವ್ ಬೇಕು, ಮತ್ತೊಂದು ದಿನ ಪುಳಿಯೋಗರೆ ಬೇಕು ಅಂದಿದ್ದಾರೆ. ಸಿನಿಮಾ ಕೂಡ ಹಾಗೇ. ಕಳೆದ ಒಂಬತ್ತು ವರ್ಷಗಳಿಂದ ಒಂದೇ ತರಹದ ಪಾತ್ರಗಳನ್ನ ಮಾಡಿ ಮಾಡಿ ನನಗೂ ಸಾಕಾಗಿ ಹೋಗಿದೆ. ಈ ಕಾರಣಕ್ಕೆ ಈ ಪ್ರಯತ್ನವೆಂದಿದ್ದಾರೆ ಅನುಪಮಾ. ಇನ್ನೂ ಅನುಪಮಾ ಪ್ರಕಾರ ಈ ತರಹದ ಚಿತ್ರ ಹಾಗೂ ಪಾತ್ರ ಸುಲಭಕ್ಕೆ ಯಾರಿಗೂ ಸಿಗಲ್ಲ. ಸಿಕ್ಕಾಗ ಬಿಟ್ಟರೆ ಅವರಷ್ಟು ಮೂರ್ಖರು ಯಾರಿಲ್ಲ. ಮಾರ್ಚ್ 29ಕ್ಕೆ ಸಿನಿಮಾ ನೋಡಿ ಆಗ ಎಲ್ಲವೂ ನಿಮಗೆ ಗೊತ್ತಾಗುತ್ತೆ ಅನ್ನುವುದು ಅನುಪಮಾ ಅಂಬೋಣ

Anupama Parameswaran broke her silence about the bold look In Tillu Square

ಒಟ್ಟಿನಲ್ಲಿ ಸಿನಿಮಾ ಅಂದ್ಮೇಲೆ ಹಾಡು, ಫೈಟು, ಸೆಂಟಿಮೆಂಟು ಜೊತೆಗೆ ಒಂದಷ್ಟು ಗ್ಲಾಮರ್ ಬೇಕೆ ಬೇಕು. ಇಲ್ಲಾ ಅಂದರೆ ಇವತ್ತಿನ ಕಾಲಘಟ್ಟದಲ್ಲಿ ಯಾರ್ ತಾನೇ ಸಿನಿಮಾ ನೋಡ್ತಾರೆ ಹೇಳಿ. ಇದಕ್ಕೆ ಪೂರಕವಾಗಿ ಮೊನ್ನೆವರೆಗೆ ಗರತಿ ಗೌರಮ್ಮನಂತೆ ಇದ್ದ ನಟಿಮಣಿಯರು ಮಡಿವಂತಿಕೆ ಬಿಟ್ಟು ಚೆಲ್ಲು ಚೆಲ್ಲಾಗಿ ಪ್ರೇಕ್ಷಕರನ್ನ ಮನರಂಜಿಸಲು ಮುಂದಾಗುತ್ತಿದ್ದಾರೆ. ಅಲ್ದೇ ಕೆಲವೊಮ್ಮೆ ಪಾತ್ರ ಬಯಸುತ್ತೆ ಅಂತ ಹೇಳಿ ಸ್ವಲ್ಪ ಜಾಸ್ತಿನೇ ಮೈಮಾಟ ತೋರ್ಸ್ ಬೇಕಾಗುತ್ತೆ. ಅದನ್ನೇ ನಾನು ಮಾಡಿದ್ದು ಎಂದು ಅನುಪಮಾ ಪರೋಕ್ಷವಾಗಿ ಹೇಳಿದ್ದಾರೆ. ಅನುಪಮಾ ಅವರ ಈ ಉತ್ತರದಿಂದ ಇವರ ಹಾಟ್ ಅವತಾರ ನೋಡಿ ವಿಚಲಿತಗೊಂಡಿದ್ದ ಇವರ ಅಭಿಮಾನಿಗಳು ಸಮಾಧಾನಗೊಳ್ಳುತ್ತಾರಾ ಅನ್ನುವುದನ್ನ ಈಗ ನೋಡಬೇಕಿದೆ

More from Filmibeat

English summary
Anupama Parameswaran, who was known to be the girl next door opens up about her bold role in Tillu Square.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X