ಟಾಪ್ ನಟಿ ಜೊತೆ ಅಲ್ಲು ಅರ್ಜುನ್ ತಂದೆ ಡ್ಯಾನ್ಸ್! ವಿಡಿಯೋ ವೈರಲ್
ಸಿನಿಮಾಗಳಲ್ಲಿ ನಟಿಯರೊಟ್ಟಿಗೆ ನಟ ಅಲ್ಲು ಅರ್ಜುನ್ ಡ್ಯಾನ್ಸ್ ಮಾಡುವುದು ಸಾಮಾನ್ಯ. ಆದರೆ ತೆರೆಯ ಹಿಂದೆ, ಅಲ್ಲು ಅರ್ಜುನ್ ತಂದೆ, ಖ್ಯಾತ ನಟಿಯೊಟ್ಟಿಗೆ ಹೆಜ್ಜೆ ಹಾಕಿದ್ದಾರೆ!
ನಿರ್ಮಾಪಕ ಅಲ್ಲು ಅರವಿಂದ್, ಖ್ಯಾತ ನಟಿ ಅನುಪಮಾಪರಮೇಶ್ವರನ್ ಜೊತೆ ಸಖತ್ ಸ್ಟೆಪ್ಸ್ ಹಾಕಿದ್ದು ಆ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
'ನಟಸಾರ್ವಭೌಮ' ನಟಿಯ ಜೊತೆ ಅಲ್ಲು ಅರವಿಂದ್ ಮಾತ್ರವೇ ಅಲ್ಲ, ಅಲ್ಲು ಅರ್ಜುನ್‌ರ ಇತ್ತೀಚೆಗಿನ ಸೂಪರ್ ಹಿಟ್ ಸಿನಿಮಾ 'ಪುಷ್ಪ'ದ ನಿರ್ದೇಶಕ ಸುಕುಮಾರ್ ಸಹ ಹೆಜ್ಜೆ ಹಾಕಿದ್ದಾರೆ.
ಆಗಿರುವುದಿಷ್ಟು, '18 ಪೇಜಸ್' ಹೆಸರಿನ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿ ಹಿಟ್ ಆಗಿದೆ. ಆ ಸಿನಿಮಾದ ಸಕ್ಸಸ್ ಪಾರ್ಟಿಗೆ ಅಲ್ಲು ಅರವಿಂದ್ ಹಾಗೂ ನಿರ್ದೇಶಕ ಸುಕುಮಾರ್ ಅತಿಥಿಯಾಗಿ ಹೋಗಿದ್ದರು. ಆಗ ಸಿನಿಮಾದ ನಾಯಕಿ ಅನುಪಮಾ ಅವರು '18 ಪೇಜಸ್' ಸಿನಿಮಾದ ಸಿಗ್ನೇಚರ್ ಸ್ಟೆಪ್ಸ್ ಹಾಕಿದ್ದಾರೆ. ಆ ಸರಳವಾದ ಸ್ಟೆಪ್ಸ್ ಅಲ್ಲು ಅರವಿಂದ್‌ಗೆ ಇಷ್ಟವಾಗಿ ಅವರೂ ಸಹ ಅನುಪಮಾ ಜೊತೆಗೆ ಸ್ಟೆಪ್ಸ್ ಹಾಕಿದ್ದಾರೆ.
ಅಲ್ಲೆ ಇದ್ದ ನಿರ್ದೇಶಕ ಸುಕುಮಾರ್ ಅವರನ್ನೂ ಅನುಪಮಾ ಪರಮೇಶ್ವರನ್ ಡ್ಯಾನ್ಸ್ ಮಾಡಲು ಕರೆದಿದ್ದಾರೆ. ಸುಕುಮಾರ್ ಸಹ ಸೇರಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಜೊತೆಗೆ ನಟ ನಿಖಿಲ್ ಸಹ ಸೇರಿಕೊಂಡಿದ್ದಾರೆ.

ಅಲ್ಲು ಅರವಿಂದ್, ಸುಕುಮಾರ್, ಅನುಪಮಾ ಪರಮೇಶ್ವರನ್, ನಿಖಿಲ್ ಒಟ್ಟಿಗೆ ಸ್ಟೆಪ್ಸ್ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಸಕ್ಸಸ್ ಪಾರ್ಟಿಯಲ್ಲಿ ಅನುಪಮಾ ಅವರನ್ನು ಅಲ್ಲು ಅರವಿಂದ್ ಮಗಳು ಎಂದು ಕರೆದಿದ್ದಾರೆ. ಆ ವಿಡಿಯೋ ಸಹ ವೈರಲ್ ಆಗುತ್ತಿದ್ದು, ಅನುಪಮಾ ಪರಮೇಶ್ವರನ್ ಅಭಿಮಾನಿಗಳು ಈಗ ಅಲ್ಲು ಅರವಿಂದ್ ಅವರನ್ನು ಸೋಷಿಯಲ್ ಮೀಡಿಯಾನಲ್ಲಿ ಮಾವ ಎಂದು ಕರೆಯಲು ಆರಂಭಿಸಿದ್ದಾರೆ.
ಕೇರಳದ ಚೆಲುವೆ ಅನುಪಮಾ ಪರಮೇಶ್ವರನ್ 'ಪ್ರೇಮಂ' ಸಿನಿಮಾ ಮೂಲಕ ನಟನೆಗೆ ಕಾಲಿಟ್ಟರು. ಅದೇ ಸಿನಿಮಾ ಮೂಲಕ ನಟಿ ಸಾಯಿ ಪಲ್ಲವಿಯೂ ಬೆಳಕಿಗೆ ಬಂದರು. ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ 'ನಟಸಾರ್ವಭೌಮ' ಸಿನಿಮಾದಲ್ಲಿಯೂ ನಟಿಸಿರುವ ಅನುಪಮಾ ತಮ್ಮ ಅದ್ಭುತ ನಟನೆಯ ಜೊತೆಗೆ ಸರಳವಾದ ಸೌಂದರ್ಯದಿಂದಲೂ ಹಲವಾರು ಅಭಿಮಾನಿಗಳನ್ನು ಗಳಿಸಿದ್ದಾರೆ.
'18 ಪೇಜಸ್' ಸಿನಿಮಾದಲ್ಲಿ ಅನುಪಮಾ ಪರಮೇಶ್ವರನ್ ಹಾಗೂ ನಿಖಿಲ್ ಸಿದ್ಧಾರ್ಥ್ ಒಟ್ಟಿಗೆ ನಟಿಸಿದ್ದಾರೆ. ಕೆಲವು ದಿನಗಳ ಹಿಂದೆ ಬಿಡುಗಡೆ ಆದ ಈ ಸಿನಿಮಾ ಹಿಟ್ ಆಗಿದೆ.


Click it and Unblock the Notifications











