ಲಿಪ್ ಲಾಕ್ ಮಾಡಿದ ಅನುಪಮಾ ಪರಮೇಶ್ವರನ್ ; ಪಕ್ಕದ ಮನೆ ಹುಡುಗಿಯ ಹಾಟ್ ಅವತಾರ ..!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಟಸಾರ್ವಭೌಮ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದವರು ಅನುಪಮಾ ಪರಮೇಶ್ವರನ್. ತನ್ನ ಮುದ್ದು ಮುದ್ದಾದ ನಟನೆಯ ಮೂಲಕ ಕನ್ನಡಿಗರ ಮನ ಗೆದ್ದ ಅನುಪಮಾ, ಇದೀಗ ಅಭಿನಯಕ್ಕಿಂತ ಗ್ಲ್ಯಾಮರ್ ಗೆ ಹೆಚ್ಚು ಒತ್ತಿರುವ ಪಾತ್ರಗಳತ್ತ ಹೊರಳುತ್ತಿದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ಟಿಲ್ಲು ಸ್ಕ್ವೇರ್.
2002ರಲ್ಲಿ ಬಂದಿದ್ದ ಡಿಜೆ ಟಿಲ್ಲು ಚಿತ್ರದ ಮುಂದುವರೆದ ಭಾಗ ಈ ಟಿಲ್ಲು ಸ್ಕ್ವೇರ್. ಸಿದ್ದು ಜೊನ್ನಲಗಡ್ಡ ಈ ಚಿತ್ರದ ನಾಯಕ. ಮೊದಲ ಭಾಗದಲ್ಲಿ ನೇಹಾ ಶೆಟ್ಟಿ ನಾಯಕಿಯ ಪಾತ್ರವನ್ನ ನಿರ್ವಹಿಸಿದ್ದರು. ಇದೀಗ ಎರಡನೇ ಭಾಗಕ್ಕೆ ಅನುಪಮಾ ಪರಮೇಶ್ವರನ್ ಬಣ್ಣ ಹಚ್ಚಿದ್ದಾರೆ.

ಮೈ ಚಳಿ ಬಿಟ್ಟು ನಟಿಸಿದ್ದಾರೆ. ಸಿದ್ದ ಜೊನ್ನಲಗಡ್ಡ ತುಟಿಗೆ ತುಟಿ ಒತ್ತಿದ್ದಾರೆ. ಅನುಪಮಾ ಅವರ ಈ ಬೋಲ್ಡ್ ಅವತಾರ ಅನೇಕರನ್ನ ದಂಗಾಗಿಸಿದೆ. ಇಷ್ಟು ದಿನ ಅನುಪಮಾ ಅವರಲ್ಲಿ ಪಕ್ಕದ ಮನೆಯ ಹುಡುಗಿಯನ್ನ ಕಾಣ್ತಿದ್ದ ಸಿನಿಪ್ರೇಮಿಗಳ ಹೃದಯ ಕೂಡ ಚೂರು ಚೂರಾಗಿದೆ. ಇನ್ನೂ ಅಭಿಮಾನಿಗಳ ಕಷ್ಟ ಹೇಳತೀರದು.
ಟಿಲ್ಲು ಸ್ಕ್ವೇರ್ ಚಿತ್ರವನ್ನ ಮಲ್ಲಿಕ್ ರಾಮ್ ನಿರ್ದೇಶಿಸಿದ್ದಾರೆ. ಸೂರ್ಯದೇವರ ನಾಗ ವಂಶಿ ಹಾಗೂ ಸಾಯಿ ಸೌಜನ್ಯ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಇನ್ನೂ ಸದ್ಯಕ್ಕೆ ಟ್ರೇಲರ್ ಮೂಲಕ ಎಲ್ಲರ ಗಮನ ಸೆಳಿಯುತ್ತಿರುವ ಸಿನಿಮಾ ಇದೇ ಮಾರ್ಚ್ 29ಕ್ಕೆ ತೆರೆಗೆ ಬರಲಿದೆ.

ಮಲಯಾಳಂ ನ ಪ್ರೇಮಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಅನುಪಮಾ, ಆರಂಭದಲ್ಲಿ ಗಮನ ಸೆಳೆದಿದ್ದು ತನ್ನ ಹೋಮ್ಲಿ ಲುಕ್ ಗಳಿಂದನೇ. ಗ್ಲ್ಯಾಮರಸ್ ಪಾತ್ರಗಳಿಂದ ಅಂತರವನ್ನ ಕಾಪಾಡಿಕೊಂಡು, ಸಾಂಪ್ರದಾಯಿಕ ಉಡುಗೆ ತೊಡುಗೆಗಳಿಂದ ಅಭಿಮಾನಿ ಬಳಗವನ್ನ ಸಂಪಾದಿಸಿ ಅವರ ಹೃದಯಕ್ಕೆ ಹತ್ತಿರವಾಗಿದ್ದ ಅನುಪಮಾ, ಅ ಆ ಮತ್ತು ಶತಮಾನಂ ಭವತಿ ಚಿತ್ರಗಳ ಮೂಲಕ ಬದಲಾವಣೆಯ ದಾರಿಯನ್ನ ಹಿಡಿದರು.
ರೌಡಿ ಬಾಯ್ಸ್ ಹಾಗೂ ಕಾರ್ತಿಕೇಯ 2 ಚಿತ್ರಗಳಲ್ಲಿ ತಮ್ಮ ಟ್ರೆಂಡಿ ಲುಕ್ ನಿಂದ ಎಲ್ಲರ ಮನರಂಜಿಸಿದರು. ಆದರೆ ಈಗ ಟಿಲ್ಲು ಟಿಲ್ಲು ಸ್ಕ್ವೇರ್ ಮೂಲಕ ಅನುಪಮಾ ಮತ್ತೊಂದು ಹೆಜ್ಜೆಯನ್ನ ಮುಂದಿಟ್ಟಿದ್ದಾರೆ. ಈ ಹೆಜ್ಜೆ ಸದ್ಯಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.


Click it and Unblock the Notifications











