Don't Miss!
- Sports
ಐಪಿಎಲ್ 2021: ಟಿ20 ಕ್ರಿಕೆಟ್ ವಿಶ್ವ ದಾಖಲೆ ಬರೆದ ಸಿಎಸ್ಕೆ ನಾಯಕ ಎಂಎಸ್ ಧೋನಿ
- News
"ಜನರನ್ನು ಲಸಿಕೆ ಪಡೆಯಲು ಉತ್ತೇಜಿಸಿ; ವದಂತಿ ವಿರುದ್ಧ ಅರಿವು ಮೂಡಿಸಿ"
- Automobiles
2021ರ ಫೋಕ್ಸ್ವ್ಯಾಗನ್ ಪೊಲೊ ಕಾರಿನ ಆಕರ್ಷಕ ಟೀಸರ್ ಬಿಡುಗಡೆ
- Finance
ಚಿನ್ನದ ಬೆಲೆ ಏರಿಕೆ: ಏಪ್ರಿಲ್ 19ರ ಬೆಲೆ ಹೀಗಿದೆ
- Education
Vikas Bank Recruitment 2021: ಪ್ರೊಬೆಷನರಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಪ್ರತಿದಿನ ಒಂದು ಕಪ್ ಅನಾನಸ್ ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಯುವ ನಾಯಕನ ಜೊತೆ ನಾಯಕಿಯಾಗಿ ಅನುಷ್ಕಾ ಶೆಟ್ಟಿ
ಆಕೆಯ ಸಿನಿಜೀವನ ಮುಗಿಯಿತು ಎಂದು ಮಾತನಾಡಿಕೊಳ್ಳುತ್ತಿರುವಾಗಲೇ ಪುಟಿದೆದ್ದು ಬಂದಿದ್ದಾರೆ ನಟಿ ಅನುಷ್ಕಾ ಶೆಟ್ಟಿ.
ತೆಲುಗು ಸಿನಿಮಾರಂಗವನ್ನು ಆಳಿದ ನಟಿ ಅನುಷ್ಕಾ ಶೆಟ್ಟಿ ಬಾಹುಬಲಿ ನಂತರ ಯಾಕೋ ಮಂಕಾಗಿಬಿಟ್ಟಿದ್ದಾರೆ. ಅನುಷ್ಕಾ ಶೆಟ್ಟಿ ಅವರ ದೇಹಾಕಾರವನ್ನು ಆಡಿಕೊಂಡವರೂ ಇದ್ದಾರೆ. ಅದೇ ಕಾರಣಕ್ಕೆ ಅವರಿಗೆ ಸಿನಿಮಾ ಅವಕಾಶಗಳು ದೊರೆಯುತ್ತಿಲ್ಲ ಎಂದೂ ಗಾಳಿ ಸುದ್ದಿಗಳು ಹರಿದಾಡುತ್ತಿದ್ದಾವೆ. ಆದರೆ ಈಗ ಬಂದಿರುವ ಹೊಸ ಸುದ್ದಿಯ ಪ್ರಕಾರ, ಅನುಷ್ಕಾ ಶೆಟ್ಟಿ ಮರಳಿ ಬರುತ್ತಿದ್ದಾರೆ, ಅದೂ ಯುವ ಹೀರೋ ಜೊತೆಗೆ.
ಇತ್ತೀಚೆಗೆ ತೆಲುಗು ಸಿನಿಮಾರಂಗದಲ್ಲಿ ತಮ್ಮ ಉತ್ತಮ ನಟನೆ, ಹೊಸ ರೀತಿಯ ಕತೆಗಳುಳ್ಳ ಸಿನಿಮಾಗಳಲ್ಲಿ ನಟಿಸುತ್ತಿರುವ ನವೀನ್ ಪೋಲಿಶೆಟ್ಟಿ ನಟಿಸಲಿರುವ ಮುಂದಿನ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಅನುಷ್ಕಾ ಶೆಟ್ಟಿ ಅವರು ಈಗಾಗಲೇ ಮಹೇಶ್ ಬಾಬು ನಟಿಸುತ್ತಿರುವ 'ಸರ್ಕಾರು ವಾರಿ ಪಾಠ' ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಸಿನಿಮಾದಲ್ಲಿ ಅವರನ್ನು ನಾಯಕಿಯ ಪಾತ್ರವಲ್ಲ. ಕೀರ್ತಿ ಸುರೇಶ್ ಅವರು ಮಹೇಶ್ ಎದುರಿಗೆ ನಾಯಕಿಯಾಗಿದ್ದಾರೆ.
ಆದರೆ ನವೀನ್ ಪೋಲಿಶೆಟ್ಟಿ ಜೊತೆಗಿನ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಅವರೇ ನಾಯಕಿ ಎನ್ನಲಾಗುತ್ತಿದೆ. ಆದರೆ ಕತೆಯಲ್ಲಿ ಭಿನ್ನತೆ ಇರಲಿದೆ. ಕತೆಯ ಅಗತ್ಯದಾನುಸಾರ ಹೆಚ್ಚು ವಯಸ್ಸಿನ ನಾಯಕಿಯನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.