For Quick Alerts
  ALLOW NOTIFICATIONS  
  For Daily Alerts

  ಯುವ ನಾಯಕನ ಜೊತೆ ನಾಯಕಿಯಾಗಿ ಅನುಷ್ಕಾ ಶೆಟ್ಟಿ

  |

  ಆಕೆಯ ಸಿನಿಜೀವನ ಮುಗಿಯಿತು ಎಂದು ಮಾತನಾಡಿಕೊಳ್ಳುತ್ತಿರುವಾಗಲೇ ಪುಟಿದೆದ್ದು ಬಂದಿದ್ದಾರೆ ನಟಿ ಅನುಷ್ಕಾ ಶೆಟ್ಟಿ.

  ತೆಲುಗು ಸಿನಿಮಾರಂಗವನ್ನು ಆಳಿದ ನಟಿ ಅನುಷ್ಕಾ ಶೆಟ್ಟಿ ಬಾಹುಬಲಿ ನಂತರ ಯಾಕೋ ಮಂಕಾಗಿಬಿಟ್ಟಿದ್ದಾರೆ. ಅನುಷ್ಕಾ ಶೆಟ್ಟಿ ಅವರ ದೇಹಾಕಾರವನ್ನು ಆಡಿಕೊಂಡವರೂ ಇದ್ದಾರೆ. ಅದೇ ಕಾರಣಕ್ಕೆ ಅವರಿಗೆ ಸಿನಿಮಾ ಅವಕಾಶಗಳು ದೊರೆಯುತ್ತಿಲ್ಲ ಎಂದೂ ಗಾಳಿ ಸುದ್ದಿಗಳು ಹರಿದಾಡುತ್ತಿದ್ದಾವೆ. ಆದರೆ ಈಗ ಬಂದಿರುವ ಹೊಸ ಸುದ್ದಿಯ ಪ್ರಕಾರ, ಅನುಷ್ಕಾ ಶೆಟ್ಟಿ ಮರಳಿ ಬರುತ್ತಿದ್ದಾರೆ, ಅದೂ ಯುವ ಹೀರೋ ಜೊತೆಗೆ.

  ಇತ್ತೀಚೆಗೆ ತೆಲುಗು ಸಿನಿಮಾರಂಗದಲ್ಲಿ ತಮ್ಮ ಉತ್ತಮ ನಟನೆ, ಹೊಸ ರೀತಿಯ ಕತೆಗಳುಳ್ಳ ಸಿನಿಮಾಗಳಲ್ಲಿ ನಟಿಸುತ್ತಿರುವ ನವೀನ್ ಪೋಲಿಶೆಟ್ಟಿ ನಟಿಸಲಿರುವ ಮುಂದಿನ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

  ಅನುಷ್ಕಾ ಶೆಟ್ಟಿ ಅವರು ಈಗಾಗಲೇ ಮಹೇಶ್ ಬಾಬು ನಟಿಸುತ್ತಿರುವ 'ಸರ್ಕಾರು ವಾರಿ ಪಾಠ' ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಸಿನಿಮಾದಲ್ಲಿ ಅವರನ್ನು ನಾಯಕಿಯ ಪಾತ್ರವಲ್ಲ. ಕೀರ್ತಿ ಸುರೇಶ್ ಅವರು ಮಹೇಶ್ ಎದುರಿಗೆ ನಾಯಕಿಯಾಗಿದ್ದಾರೆ.

  4ವರ್ಷಾದ ಮಗುವಾಗಿದ್ದಾಗಲೇ ಹಾರ್ಮೋನಿಯಂ‌ ನುಡಿಸಿದ ಶ್ರೆಯಾ ಘೋಶಾಲ್ | Filmibeat Kannada

  ಆದರೆ ನವೀನ್ ಪೋಲಿಶೆಟ್ಟಿ ಜೊತೆಗಿನ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಅವರೇ ನಾಯಕಿ ಎನ್ನಲಾಗುತ್ತಿದೆ. ಆದರೆ ಕತೆಯಲ್ಲಿ ಭಿನ್ನತೆ ಇರಲಿದೆ. ಕತೆಯ ಅಗತ್ಯದಾನುಸಾರ ಹೆಚ್ಚು ವಯಸ್ಸಿನ ನಾಯಕಿಯನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.

  English summary
  Actress Anushka Shetty acting with new hero Naveen Polishetty in new Telugu movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X