Don't Miss!
- Sports
IND vs NZ: ಸರಣಿ ನಿರ್ಣಾಯಕ 3ನೇ ಟಿ20 ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ಆಡುವ 11ರ ಬಳಗ
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮತ್ತೆ ತೂಕ ಹೆಚ್ಚಿಸಿಕೊಂಡ ಅನುಷ್ಕಾ ಶೆಟ್ಟಿ: ಯಾವ ಪಾತ್ರಕ್ಕಾಗಿ ಸ್ವೀಟಿ ತಯಾರಿ?
ಸೌತ ಸಿನಿಮಾರಂಗದಲ್ಲಿ ಹೆಚ್ಚು ಹೆಸರು ಮಾಡಿದ ನಟಿಯರ ಸಾಲಿನಲ್ಲಿ ಅನುಷ್ಕಾ ಶೆಟ್ಟಿ ಕೂಡ ಇದ್ದಾರೆ. ಅನುಷ್ಕಾ ಶೆಟ್ಟಿಯನ್ನು ಸೌತ್ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಅಂತಲೇ ಕರೆಯಲಾಗುತ್ತೆ. ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಅದ್ಯಾಕೋ ಹೆಚ್ಚು ಸಿನಿಮಾಗಳನ್ನು ಮಾಡುತ್ತಿಲ್ಲ. ಅನುಷ್ಕಾ ಶೆಟ್ಟಿ ಸಿನಿಮಾರಂಗದಿಂದ ಬ್ರೇಕ್ ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿಗಳು ಹಬ್ಬಿವೆ.
'ಬಾಹುಬಲಿ' ಸರಣಿ ಸಿನಿಮಾಗಳ ನಂತರ ಅನುಷ್ಕಾ ಶೆಟ್ಟಿ ಹೆಚ್ಚಿನ ಸಿನಿಮಾಗಳನ್ನು ಮಾಡುತ್ತಿಲ್ಲ. ಹಾಗೆ ಅನುಷ್ಕಾ ಶೆಟ್ಟಿ ಮಾಡಿದ ಸಿನಿಮಾಗಳು ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ. 'ಬಾಹುಬಲಿ' ಚಿತ್ರಕ್ಕೂ ಮುನ್ನ ಮಾಡುತ್ತಿದ್ದಂತಹ ಸಿನಿಮಾಗಳೇ ಒಂದು ರೀತಿಯಲ್ಲಿದ್ದರೆ, 'ಬಾಹುಬಲಿ' ಅನಂತರ ನಟಿಸುತ್ತಿರುವ ಸಿನಿಮಾಗಳು ಬೇರೆಯೇ ರೀತಿಯಲ್ಲಿ ಇವೆ.
ಇನ್ನು ಸಿನಿಮಾ ವಿಚಾರ ಬಿಟ್ಟರೆ ಹೆಚ್ಚಾಗಿ ತಮ್ಮ ಮದುವೆ ವಿಚಾರವಾಗಿ ಅನುಷ್ಕಾ ಶೆಟ್ಟಿ ಸುದ್ದಿಯಾಗುತ್ತಾರೆ. ಇತ್ತೀಚಿಗೆ ಅನುಷ್ಕಾ ಶೆಟ್ಟಿ ಮದುವೆ ಫಿಕ್ಸ್ ಆಗಿರುವ ಸುದ್ದಿ ಕೂಡ ಹೆಚ್ಚು ಸಂಚಲನ ಹುಟ್ಟುಹಾಕಿತ್ತು.
ನಾಯಕಿಯ
ಮಾಜಿ
ಪತಿ
ಜೊತೆ
ಅನುಷ್ಕಾ
ಶೆಟ್ಟಿ
ಸಿನಿಮಾ:
ಶೀಘ್ರದಲ್ಲೇ
ಸ್ವೀಟ್
ನ್ಯೂಸ್?
ಇದೀಗ ಅನುಷ್ಕಾ ಶೆಟ್ಟಿ ತಮ್ಮ ಹೊಸ ಲುಕ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು ಅನುಷ್ಕಾ ಶೆಟ್ಟಿ ಮತ್ತೆ ತೂಕವನ್ನು ಹೆಚ್ಚಿಸಿಕೊಂಡು ಹೊಸ ಪಾತ್ರಕ್ಕೆ ತಯಾರಿ ನಡೆಸಿದ್ದಾರೆ.

ಅನುಷ್ಕಾ ತೂಕ ಹೆಚ್ಚಿಸಿದ್ದು ಇದೇ ಮೊದಲೇನಲ್ಲ!
ಈ ಹಿಂದೆ ನಟ ಆರ್ಯನ ಜೊತೆಗೆ 'ಸೈಜ್ ಜೀರೋ' ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ತಮ್ಮ ಪಾತ್ರದ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದರು. ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ವಿಶೇಷ ಪಾತ್ರ ಮಾಡಿದ್ದು, ಈ ಪಾತ್ರಕ್ಕೆ ಸಿಕ್ಕಾ ಪಟ್ಟೆ ದಪ್ಪ ಆಗಿದ್ದರು. ಈ ಪಾತ್ರಕ್ಕಿ ಅನುಷ್ಕಾ ಶೆಟ್ಟಿ ಬರೋಬ್ಬರಿ 20 ಕೆಜಿ ತೂಕವನ್ನು ಹಾಕಿಕೊಂಡಿದ್ದರು. ಅದು ಕೂಡ ಸ್ವಾಭಾವಿಕವಾಗಿಯೇ ದಪ್ಪ ಆಗಿದ್ದರು. ಅನುಷ್ಕಾ ಶೆಟ್ಟಿ ಲುಕ್ ಮತ್ತು ಶ್ರಮಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಇದು ಅನುಷ್ಕಾ ಶೆಟ್ಟಿಗೆ ಸಿನಿಮಾದ ಮೇಲೆ ಇರುವ ಡೆಡಿಕೇಶನ್ ಎಂಥದ್ದು ಎನ್ನುವುದನ್ನು ತೋರಿಸಿತು.
'ಬಾಹುಬಲಿ'
ಬಳಿಕ
ಮತ್ತೆ
ಒಂದಾಗ್ತಾರೆ
ಪ್ರಭಾಸ್
ಹಾಗೂ
ಅನುಷ್ಕಾ
ಶೆಟ್ಟಿ:
ಸಿನಿಮಾ
ಯಾವುದು?

ಮತ್ತೆ ದಪ್ಪ ಆದ ಸ್ವೀಟಿ!
ಅನುಷ್ಕಾ ಶೆಟ್ಟಿ ಹೊಸ ಪ್ರಯೋಗಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ನಾಯಕ ನಟನಿಗೆ ನಾಯಕಿಯಾಗಿ ಮಾತ್ರ ಇರದೇ, ಅನುಷ್ಕಾ ಶೆಟ್ಟಿ ವಿಭಿನ್ನ ಪಾತ್ರ ಪ್ರಯೋಗಕ್ಕೆ ಹಾತೊರೆಯುತ್ತಾ ಇರುತ್ತಾರೆ. ಇದೀಗ ಮತ್ತೊಮ್ಮೆ ಅನುಷ್ಕಾ ಶೆಟ್ಟಿ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ. ಮುಂದಿನ ಚಿತ್ರಕ್ಕಾಗಿ ಮತ್ತೇ ದಪ್ಪ ಆಗಿದ್ದಾರೆ ಎನ್ನಲಾಗುತ್ತಿದೆ. 'ರಾರಾ ಕೃಷ್ಣಯ್ಯ' ಖ್ಯಾತಿಯ ಪಿ ಮಹೇಶ್ ಮುಂದಿನ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಆದರೆ ಅನುಷ್ಕಾ ಶೆಟ್ಟಿ ಈ ಚಿತ್ರದ ಪಾತ್ರಕ್ಕಾಗಿಯೇ ವಿಶೇಷವಾದ ತಯಾರಿ ನಡೆಸಿದ್ದಾರಂತೆ.

ಅನುಷ್ಕಾ ಶೆಟ್ಟಿ ಮದುವೆ!
ಇನ್ನೂ ಇತ್ತೀಗೆಚೆ ನಟಿ ಅನುಷ್ಕಾ ಶೆಟ್ಟಿ ಮದುವೆ ವಿಚಾರಕ್ಕಾಗಿ ಮತ್ತೆ ಸುದ್ದಿ ಆಗಿದ್ದರು. ಆದರೆ ಈ ಬಾರಿ ಅನುಷ್ಕಾ ಶೆಟ್ಟಿ ಮದುವೆ ಆಗುವುದು ಖಚಿತ ಎನ್ನಲಾಗುತ್ತಿದೆ. ಎಷ್ಟೋ ಬಾರಿ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಸುದ್ದಿಗಳು ಹರಿದಾಡಿವೆ. ಆದರೆ ಯಾವುದೂ ಕೂಡ ನಿಜವಾಗಿಲ್ಲ. ಆದರೆ ಈ ಬಾರಿ ಮದುವೆ ನಿಗದಿಯಾಗಿದೆ, ಸದ್ಯದಲ್ಲೇ ಮದುವೆ ದಿನಾಂಕ ಕೂಡ ಪ್ರಕಟವಾಗಲಿದೆ ಎನ್ನುವ ಸುದ್ದಿ ತೆಲುಗು ಸಿನಿಮಾರಂಗದಲ್ಲಿ ಹರಿದಾಡುತ್ತಿವೆ.

ಉದ್ಯಮಿ ಜೊತೆಗೆ ಅನುಷ್ಕಾ ಮದುವೆ!
ಅನುಷ್ಕಾ ಶೆಟ್ಟಿ ಟಾಲಿವುಡ್ ಸೂಪರ್ ಸ್ಟಾರ್ ನಟಿ. ಅನುಷ್ಕಾ ಶೆಟ್ಟಿ ಜೊತೆಗೆ ಚಿತ್ರರಂಗದ ಹಲವು ಹೆಸರುಗಳು ಆಗಾಗ ತಳಕುಹಾಕಿಕೊಂಡಿವೆ. ಆದರೆ ಅನುಷ್ಕಾ ಶೆಟ್ಟಿ ಸಿನಿಮಾರಂಗದವರನ್ನ ಮದುವೆಯಾಗುತ್ತಿಲ್ಲ. ಬದಲಿಗೆ ಉದ್ಯಮಿಯ ಹಿಡಿಯುತ್ತಿದ್ದಾರೆ. ಹೌದು ಅನುಷ್ಕಾ ಶೆಟ್ಟಿ ಬೆಂಗಳೂರು ಮೂಲದ ಉದ್ಯಮಿಯನ್ನು ಮದುವೆಯಾಗಲಿದ್ದಾರಂತೆ. ಹುಡುಗ ಬೆಂಗಳೂರು ಮೂಲದ ಉದ್ಯಮಿಯಾಗಿದ್ದು ಮನೆಯವರೇ ನೋಡಿ ಮದುವೆ ನಿಶ್ಚಯ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ