ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿಗೆ ಇದು ಎಷ್ಟನೇ ಮದುವೆ ಗೊತ್ತಾ..?
ಅರುಂಧತಿ, ದೇವಸೇನಾ, ಭಾಗಮತಿ ರೀತಿಯ ಅದ್ಬುತ ಪಾತ್ರಗಳಿಗೆ ಜೀವತುಂಬಿ ಅನೇಕರ ಹೃದಯವನ್ನ ಗೆದ್ದವರು ಅನುಷ್ಕಾ ಶೆಟ್ಟಿ. ಮೊದಲಿಂದನೂ ವುಮೆನ್ ಓರಿಯೆಂಟೆಡ್ ಸಿನಿಮಾಗಳಿಗೆ ಮೊದಲ ಆದ್ಯತೆಯನ್ನ ನೀಡುತ್ತಾ ಬಂದ ಅನುಷ್ಕಾ ಶೆಟ್ಟಿ ತಮ್ಮ 42ನೇ ಪ್ರಾಯದಲ್ಲಿ ಮದುವೆಯಾಗುವ ಮನಸು ಮಾಡಿದ್ದಾರೆ ಅನ್ನುವ ಸುದ್ದಿ ಮೊನ್ನೆಯಿಂದ ಗುಲ್ಲಾಗಿದೆ.
ಕೇವಲ ಆಂಧ್ರದಲ್ಲಿ ಅಷ್ಟೇ ಅಲ್ಲ ಈ ಬಾರಿ ಕರುನಾಡಿನಲ್ಲಿಯೂ ಅನುಷ್ಕಾ ಶೆಟ್ಟಿ ಮದುವೆಯ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.ಯಾಕೆಂದರೆ.. ಅನುಷ್ಕಾ ಕೈ ಹಿಡಿಯಲಿರುವ ಆ ಅದೃಷ್ಟವಂತ ಕನ್ನಡ ಚಿತ್ರರಂಗದ ನಿರ್ಮಾಪಕ ಅನ್ನುವುದು ಅನೇಕರ ಊಹೆ.

ಈ ಬಾರಿಯಾದರೂ ಈ ಊಹಾಪೋಹ ನಿಜವಾಗುತ್ತಾ ಗೊತ್ತಿಲ್ಲ. ಆದರೆ ನಿಜವಾಗಲಿ ಅನ್ನುವುದು ಅನೇಕರ ಪ್ರಾರ್ಥನೆ. ಯಾಕೆಂದರೆ ಹಿಂದೆ ಅನೇಕ ಬಾರಿ ಅನುಷ್ಕಾ ಶೆಟ್ಟಿ ಮದುವೆಯನ್ನ ಅನೇಕರು ಅನೇಕ ವ್ಯಕ್ತಿಗಳ ಜೊತೆ ಮಾಡಿಸಿದ್ದಾರೆ.
ಹೌದು, ನಿಮಗೆ ಗೊತ್ತಿರಲಿ.. ನಾಗಾರ್ಜುನನ ಮಗ ನಾಗಚೈತನ್ಯನಿಗೂ ಅನುಷ್ಕಾಗೂ ಮದುವೆ ಆಗೇ ಹೋಯ್ತು ಅಂತಾ ಹಿಂದೆ ಸುದ್ದಿ ಹಬ್ಬಿತ್ತು. ಆಮೇಲೆ ಪ್ರಭಾಸ್ ಜೊತೆಗೂ ಈಕೆಯ ಹೆಸರು ತಳುಕು ಹಾಕಿಕೊಂಡಿತು. ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಅಂತಾ ಆಂಧ್ರ ಮೀಡಿಯಾ ಬರೆದೂ ಬರೆದೂ ಸುಸ್ತಾಯಿತು. ಇದು ಸಾಕು ಎನಿಸಿದಾಗ ಅದ್ಯಾರೋ ಕ್ರಿಕೆಟಿಗನ ಜೊತೆ ಅನುಷ್ಕಾ ಮದುವೆ ಫಿಕ್ಸು ಅಂತಾ ಬ್ರೇಕಿಂಗ್ ನ್ಯೂಸೂ ಬಂತು.

ಆ ನಂತರ ತೆಲುಗಿನ ಖ್ಯಾತ ನಿರ್ದೇಶಕ ಕೆ. ರಾಘವೇಂದ್ರ ರಾವ್ ಪುತ್ರ ಕೋವೆಲಮುಡಿ ಪ್ರಕಾಶ್ ಜೊತೆ ಅನುಷ್ಕಾ ಮದುವೆಯಾಗುವುದು ಪಕ್ಕಾ ಎಂಬ ಭವಿಷ್ಯವಾಣಿ ಕೇಳಿ ಬಂತು. ಇನ್ನೂ ಅನುಷ್ಕಾ ಅಭಿನಯದ ಸೈಜ್ ಜೀರೋ ಚಿತ್ರವನ್ನ ಈ ವ್ಯಕ್ತಿಯೇ ನಿರ್ದೇಶಿಸಿದ್ದರಿಂದ ಅನೇಕರು ಈ ಸುದ್ದಿ ನಿಜವೆಂದು ನಂಬಿದ್ದರು. ಆದರೆ ಈಗ ಆ ನಿರ್ದೇಶಕನ ಜಾಗಕ್ಕೆ ಕನ್ನಡದ ನಿರ್ಮಾಪಕರೊಬ್ಬರು ಬಂದು ಕುಳಿತಿದ್ದಾರೆ.
ಇನ್ನೂ ಅನುಷ್ಕಾ ಶೆಟ್ಟಿ ಕನ್ನಡದ ನಿರ್ಮಾಪಕನ ಜೊತೆ ಸಪ್ತಪದಿ ತುಳಿದರೆ, ಡಾರ್ಲಿಂಗ್ ಪ್ರಭಾಸ್ ಕಥೆ ಏನು ಎಂಬ ಪ್ರಶ್ನೆ ಮೂಡುವುದು ಸಹಜ. ಯಾಕೆಂದರೆ.. ಅನುಷ್ಕಾ ಶೆಟ್ಟಿ ಮದುವೆ ವಿಚಾರ ಪ್ರಸ್ತಾಪವಾದಾಗೆಲ್ಲ, ಇವರ ಅಭಿಮಾನಿಗಳು ಪ್ರಭಾಸ್ ಹೆಸರನ್ನೇ ಸೂಚಿಸಿದ್ದಾರೆ. ಪ್ರಭಾಸ್ ಮತ್ತು ಅನುಷ್ಕಾ ಅವರದ್ದು ಹೇಳಿ ಮಾಡಿಸಿದ ಜೋಡಿ ಅನ್ನುವ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕೆ ಅನುಷ್ಕಾ ಶೆಟ್ಟಿ ನಿಜವಾಗಿಯೂ ಕನ್ನಡದ ನಿರ್ಮಾಪಕರ ಜೊತೆ ಮದುವೆಯಾಗ್ತಾರಾ ಅನ್ನುವ ಪ್ರಶ್ನೆ ಅನೇಕರನ್ನ ಈಗ ಕಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಕೂಡ ನಡೆಯುತ್ತಿದೆ.

ನಿಜ... ಸಿನಿಮಾ ಕಲಾವಿದರೆಂದಮೇಲೆ ಅವರ ಸುತ್ತ ಬಣ್ಣ ಬಣ್ಣದ ಸುದ್ದಿಗಳು ರೆಕ್ಕೆ ಪುಕ್ಕಗಳ ಸಮೇತ ಸುಳಿದಾಡುವುದು ಸಹಜ.ಆದರೆ ಅನುಷ್ಕಾ ಶೆಟ್ಟಿ ಮದುವೆ ವಿಚಾರದಲ್ಲಿ ಈ ಸುದ್ದಿಗಳು ಮೇಲಿಂದ ಮೇಲೆ ಗಿರಕಿ ಹೊಡೆಯುತ್ತಾನೇ ಇವೆ. ಇಂಥಾ ಗಾಳಿ ಸುದ್ದಿಗಳಿಗೆ ಯಾವತ್ತೂ ತಲೆ ಕೆಡಿಸಿಕೊಳ್ಳದ, ಯಾವಾಗ ಇಂಥ ರೂಮರ್ ಹಬ್ಬಿದರೂ, ಮೀಡಿಯಾದವರು, ಅಭಿಮಾನಿಗಳು ಪ್ರಶ್ನೆ ಕೇಳಿದಾಗಲೂ 'ಕಾಲವೇ ಉತ್ತರಿಸುತ್ತದೆ ಎಂದು ಹೇಳ್ತಾನೇ ಬಂದ ಅನುಷ್ಕಾ ಶೆಟ್ಟಿಗೆ ನಿಜವಾಗಿಯೂ ಕಂಕಣ ಭಾಗ್ಯ ಕೂಡಿ ಬಂದಿದೆಯಾ, ಕನ್ನಡ ನಿರ್ಮಾಪಕರ ಜೊತೆ ಮದುವೆ ನಡೆಯುತ್ತಾ ಅನ್ನುವುದನ್ನ ಕಾದು ನೋಡಬೇಕಿದೆ


Click it and Unblock the Notifications











