ಸ್ಟಾರ್ ಕ್ರಿಕೆಟರ್ ಜೊತೆ ಮದುವೆ ವದಂತಿ: ಸ್ಪಷ್ಟನೆ ಕೊಟ್ಟ ಅನುಷ್ಕಾ ಶೆಟ್ಟಿ.!
ಕರಾವಳಿ ಕುವರಿ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಇತ್ತೀಚೆಗೆಷ್ಟೇ ಒಂದು ಗಾಸಿಪ್ ಹಬ್ಬಿತ್ತು. ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಜೊತೆಗೆ ಅನುಷ್ಕಾ ಶೆಟ್ಟಿ ಮದುವೆ ನಡೆಯಲಿದೆ ಎಂಬ ಗಾಳಿ ಸುದ್ದಿ ಇಂಡಿಯಾದ ಮೂಲೆ ಮೂಲೆಯಲ್ಲೂ ಗಿರಕಿ ಹೊಡೆದಿತ್ತು.
ಉತ್ತರ ಭಾರತದ ಕ್ರಿಕೆಟರ್ ರನ್ನ ಅನುಷ್ಕಾ ಶೆಟ್ಟಿ ವರಿಸಲಿದ್ದಾರೆ.. ವರ್ಷಗಳಿಂದ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಅಂತ ಎಲ್ಲಾ ಕಡೆ ಸುದ್ದಿ ಆಗಿತ್ತು. ಆದ್ರೆ, ಆ ಕ್ರಿಕೆಟರ್ ಯಾರು ಎಂಬುದರ ಕುರಿತು ಸುಳಿವು ಮಾತ್ರ ಸಿಕ್ಕಿರಲಿಲ್ಲ.
ಈಗ ಇದೇ ಗಾಸಿಪ್ ಬಗ್ಗೆ ನಟಿ ಅನುಷ್ಕಾ ಶೆಟ್ಟಿ ಮೌನ ಮುರಿದಿದ್ದಾರೆ. ಕ್ರಿಕೆಟರ್ ಜೊತೆಗಿನ ಮದುವೆ ವದಂತಿ ಬಗ್ಗೆ ನಟಿ ಅನುಷ್ಕಾ ಶೆಟ್ಟಿ ಸ್ಪಷ್ಟನೆ ಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಎಲ್ಲಾ ಸುಳ್ಳು.. ಸುಳ್ಳು..
''ಕ್ರಿಕೆಟರ್ ಜೊತೆಗಿನ ಡೇಟಿಂಗ್ ಮತ್ತು ಮದುವೆ ಸುದ್ದಿ ಶುದ್ಧ ಸುಳ್ಳು. ನಾನು ಯಾವ ಕ್ರಿಕೆಟರ್ ಜೊತೆಗೂ ಎಂಗೇಜ್ ಆಗಿಲ್ಲ. ಅದರ ಬಗ್ಗೆ ಮಾತನಾಡುವ ಮುನ್ನ ಸತ್ಯವನ್ನು ತಿಳಿದುಕೊಳ್ಳಿ'' ಎಂದು ಹೇಳುವ ಮೂಲಕ ಎಲ್ಲಾ ಗಾಸಿಪ್ ಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ ನಟಿ ಅನುಷ್ಕಾ ಶೆಟ್ಟಿ.

ಅಪ್ಪ-ಅಮ್ಮ ತೋರಿಸಿದ ಹುಡುಗನ ಜೊತೆಗೆ ಮದುವೆ
''ಕುಟುಂಬದವರ ಇಚ್ಛೆಯಂತೆ ನನ್ನ ಮದುವೆ ನಡೆಯಲಿದೆ. ಅಪ್ಪ-ಅಮ್ಮ ತೋರಿಸಿದ ಹುಡುಗನನ್ನು ನಾನು ಮದುವೆ ಆಗುತ್ತೇನೆ. ಫ್ಯಾಮಿಲಿಯ ಇಷ್ಟದಂತೆ ಆದಷ್ಟು ಬೇಗ ಮದುವೆ ಆಗುತ್ತೇನೆ'' ಎಂದು ಅನುಷ್ಕಾ ಶೆಟ್ಟಿ ತಿಳಿಸಿದ್ದಾರೆ.

ಅನುಷ್ಕಾ ಮದುವೆ ಗಾಸಿಪ್ ಒಂದೆರಡಲ್ಲ.!
ಬೆಂಗಳೂರು ಮೂಲದ ಬಿಸಿನೆಸ್ ಮ್ಯಾನ್ ಒಬ್ಬರನ್ನ ಅನುಷ್ಕಾ ಶೆಟ್ಟಿ ಮದುವೆ ಆಗ್ತಾರಂತೆ ಎಂಬ ಅಂತೆ-ಕಂತೆ ಮೊದಲು ಕೇಳಿಬಂದಿತ್ತು. ಆನಂತರ 'ಬಾಹುಬಲಿ' ಪ್ರಭಾಸ್ ಜೊತೆಗೆ ಅನುಷ್ಕಾ ಶೆಟ್ಟಿ ಹೆಸರು ತಳುಕು ಹಾಕಿಕೊಂಡಿತ್ತು. ಬಳಿಕ ಕ್ರಿಕೆಟರ್ ಜೊತೆಗೆ ಅನುಷ್ಕಾ ಶೆಟ್ಟಿ ವಿವಾಹ ಎಂಬ ಗಾಸಿಪ್ ಹಬ್ಬಿತ್ತು. ಈ ಎಲ್ಲಾ ಗಾಸಿಪ್ ಗಳಿಗೂ ಸ್ಪಷ್ಟನೆ ಕೊಟ್ಟು ಬ್ರೇಕ್ ಹಾಕಿದ್ದಾರೆ ನಟಿ ಅನುಷ್ಕಾ ಶೆಟ್ಟಿ.

ಅತ್ಯಂತ ದುಬಾರಿ ನಟಿ
ಟಾಲಿವುಡ್ ನಲ್ಲಿ ಸದ್ಯ ಬಹು ಬೇಡಿಕೆಯ ಮತ್ತು ಅತ್ಯಂತ ದುಬಾರಿ ನಟಿ ಎಂಬ ಖ್ಯಾತಿಗೆ ಅನುಷ್ಕಾ ಶೆಟ್ಟಿ ಪಾತ್ರರಾಗಿದ್ದಾರೆ. ಅನುಷ್ಕಾ ಶೆಟ್ಟಿ ಅಭಿನಯದ 'ನಿಶಬ್ಧಂ' ಬಿಡುಗಡೆಗೆ ಸಿದ್ಧವಾಗಿದೆ. ಅನುಷ್ಕಾ ಶೆಟ್ಟಿ ಕೈಯಲ್ಲಿ ಇನ್ನೂ ಎರಡ್ಮೂರು ಚಿತ್ರಗಳಿವೆ.


Click it and Unblock the Notifications











