ಸ್ವೀಟಿಗೂ ಪಪ್ಸ್‌ಗೂ ಎಲ್ಲಿಂದ ನಂಟು? ಆ ಸೀಕ್ರೆಟ್ ಬಿಚ್ಚಿಟ್ಟಿದ್ದು ಅದೊಂದು ಪೋಸ್ಟ್

ನಟ ಪ್ರಭಾಸ್ ಹಾಗೂ ನಟಿ ಅನುಷ್ಕಾ ಶೆಟ್ಟಿ ಮಧ್ಯೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಗುಸುಗುಸು ಕಳೆದೊಂದು ದಶಕದಿಂದ ಕೇಳಿಬರ್ತಿದೆ. ಇಬ್ಬರು 3 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇಬ್ಬರು ಆತ್ಮೀಯ ಸ್ನೇಹಿತರು ಕೂಡ. ಇಬ್ಬರ ಒಡನಾಟ ನೋಡಿ ಇಬ್ಬರು ಪ್ರೀತಿಲಿ ಬಿದ್ದಿದ್ದಾರೆ, ಮದುವೆ ಕೂಡ ಆಗ್ತಾರೆ ಎನ್ನುವ ವದಂತಿ ಪದೇ ಪದೇ ಸದ್ದು ಮಾಡುತ್ತದೆ.

ವಯಸ್ಸು 40 ದಾಟಿದ್ರು ಇಬ್ಬರು ಮದುವೆ ಬಗ್ಗೆ ಆಲೋಚಿಸಿದಂತೆ ಕಾಣ್ತಿಲ್ಲ. ಇಬ್ಬರ ಮದುವೆ ಬಗ್ಗೆ ಪದೇ ಪದೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಲೇ ಇರುತ್ತದೆ. ಕೆಲವೊಮ್ಮೆ ಪ್ರಭಾಸ್‌ಗೆ ಮನೆಯಲ್ಲಿ ಹುಡುಗಿಯನ್ನು ಹುಡುಕುತ್ತಿದ್ದಾರೆ ಅಂದ್ರೆ ಮಗದೊಮ್ಮೆ ಅನುಷ್ಕಾಗೆ ಮದುವೆ ಫಿಕ್ಸ್ ಆಗಿದೆ ಎನ್ನುವ ಗುಸುಗುಸು ಕೇಳಿಬರುತ್ತದೆ. ಆದರೆ ಅವರಿಬ್ಬರು ಮಾತ್ರ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ಧಾರೆ. ಇಷ್ಟು ದಿನ ನೆಚ್ಚಿನ ನಟ- ನಟಿಯ ಮದುವೆ ಬಗ್ಗೆ ಅಭಿಮಾನಿಗಳು ಕೇಳಿ ಕೇಳಿ ಈಗ ಸುಮ್ಮನಾಗಿದ್ದಾರೆ.

Anushka Shetty calls Prabhas as Pupsuu, Sweety instagram Story Goes Viral

ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಂತ ಅವರಿಬ್ಬರು ಹೇಳಿದ್ದಾರೆ. ಆದ್ರು ಕೂಡ ಅಭಿಮಾನಿಗಳು ಇಬ್ಬರು ಮದುವೆ ಆದ್ರೆ, ಚೆನ್ನಾಗಿರುತ್ತೆ ಎನ್ನುವ ಆಸೆ ವ್ಯಕ್ತಪಡಿಸುತ್ತಲೇ ಇದ್ದಾರೆ. ಅಂದಹಾಗೆ ಪ್ರಭಾಸ್‌ಗೆ ಅನುಷ್ಕಾ ಶೆಟ್ಟಿ ಒಂದು ಮುದ್ದಾದ ಹೆಸರು ಇಟ್ಟಿದ್ದಾರೆ. ಅದೇ ಹೆಸರಿನಿಂದ ಕರೆಯುತ್ತಾರೆ. ಅದು ಏನು ಅಂದ್ರೆ 'ಪಪ್ಸು'. ಹೌದು ಪ್ರಭಾಸ್‌ನ ಅನುಷ್ಕಾ ಶೆಟ್ಟಿ ಪಪ್ಸು ಎಂದು ಸಂಭೋದಿಸುತ್ತಾರೆ. ಸದ್ಯ ಅನುಷ್ಕಾ ಶೆಟ್ಟಿ ನಟನೆಯ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾ ಟೀಸರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಜೊತೆ ನವೀನ್ ಪೊಲಿಶೆಟ್ಟಿ ಮಿಂಚಿದ್ದಾರೆ. ಕಾಮಿಡಿ ಎಂಟರ್‌ಟೈನರ್ ಸಿನಿಮಾ ಟೀಸರ್ ಗಮನ ಸೆಳೆದಿದೆ.

'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಶೆಫ್ ಆಗಿ ಬಣ್ಣ ಹಚ್ಚಿದ್ದಾರೆ. ನವೀನ್ ಸ್ಟ್ಯಾಂಡಪ್‌ ಕಾಮೆಡಿಯನ್ ಆಗಿ ಮಿಂಚಿದ್ದಾರೆ. ಇವರಿಬ್ಬರ ನಡುವಿನ ಪರಿಚಯ ಸ್ನೇಹವಾಗಿ ತಿರುಗಿ ಮುಂದೆ ಏನೆಲ್ಲಾ ಆಗುತ್ತದೆ ಎನ್ನುವ ಕಥೆ ಚಿತ್ರದಲ್ಲಿದೆ. ಪ್ರಭಾಸ್ ಸಹಭಾಗಿತ್ವದ ಯುವಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಚಿತ್ರದ ಟೀಸರ್ ನೋಡಿ ಪ್ರಭಾಸ್ ಮೆಚ್ಚಿಕೊಂಡಿದ್ದು ತಂಡಕ್ಕೆ ಶುಭ ಹಾರೈಸಿದ್ದಾರೆ. ಇದರ ಸ್ಕ್ರೀನ್‌ಶಾಟ್‌ ತೆಗೆದು 'ಥ್ಯಾಂಕ್ಯೂ ಪಪ್ಸು' ಎಂದು ಬರೆದು ಅನುಷ್ಕಾ ಶೆಟ್ಟಿ ಇನ್‌ಸ್ಟಾ ಸ್ಟೋರಿಯಲ್ಲಿ ಹಾಕಿದ್ದಾರೆ.

Anushka Shetty calls Prabhas as Pupsuu, Sweety instagram Story Goes Viral

'ನಿಶಬ್ಧಂ' ಸಿನಿಮಾ ನಂತರ ಅನುಷ್ಕಾ ಶೆಟ್ಟಿ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಅಂದಹಾಗೆ ಅನುಷ್ಕಾ ಶೆಟ್ಟಿನ ಪ್ರಭಾಸ್ 'ಸ್ವೀಟಿ' ಎಂದು ಕರೆಯುತ್ತಾರೆ. ಅನುಷ್ಕಾ ಶೆಟ್ಟಿ ಮೂಲ ಹೆಸರು ಸ್ವೀಟಿ ಶೆಟ್ಟಿ. ಚಿತ್ರರಂಗಕ್ಕೆ ಬಂದ ಮೇಲೆ ಅದನ್ನು ಬದಲಿಸಿಕೊಂಡಿದ್ದರು. ಕುಟುಂಬಸ್ಥರು, ಆತ್ಮೀಯರು ಹಾಗೂ ಸ್ನೇಹಿತರು ಆಕೆಯನ್ನು ಸ್ವೀಟಿ ಅಂತ್ಲೇ ಕರೆಯುತ್ತಾರೆ.

ಪ್ರಭಾಸ್ ಸಿನಿಮಾಗಳ ವಿಚಾರಕ್ಕೆ ಬಂದರೆ ಜೂನ್ 16ಕ್ಕೆ 'ಆದಿಪುರುಷ್' ಸಿನಿಮಾ ರಿಲೀಸ್ ಆಗಲಿದೆ. ಸೆಪ್ಟೆಂಬರ್ 28ಕ್ಕೆ 'ಸಲಾರ್', ಮುಂದಿನ ವರ್ಷ ಸಂಕ್ರಾಂತಿಗೆ 'ಪ್ರಾಜೆಕ್ಟ್‌- ಕೆ' ಸಿನಿಮಾ ತೆರೆಗಪ್ಪಳಿಸಲಿದೆ. 'ಬಾಹುಬಲಿ' ನಂತರ ಪ್ರಭಾಸ್ ಬರೀ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಾತ್ರ ನಟಿಸ್ತಿದ್ದಾರೆ. ಇನ್ನು ರಾಜಾ ಡೀಲಕ್ಸ್ ಎನ್ನುವ ಒಂದು ಹಾರರ್ ಕಾಮಿಡಿ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ಧಾರೆ.

Anushka Shetty calls Prabhas as Pupsuu, Sweety instagram Story Goes Viral

ಅನುಷ್ಕಾ ಶೆಟ್ಟಿ ಹೊಸದಾಗಿ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. 'ಸೈಜ್ ಜೀರೊ' ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ಸ್ವೀಟಿ ಇದೇ ಕಾರಣಕ್ಕೆ ಸಾಕಷ್ಟು ಅವಕಾಶಗಳನ್ನು ಕಳೆದುಕೊಳ್ಳುವಂತಾಯಿತು. ಎಷ್ಟೇ ಪ್ರಯತ್ನಪಟ್ರು ಮೊದಲಿನ ಪಿಜಿಕ್ ಮರಳಿ ಪಡೆಯಲು ಸಾಧ್ಯವಾಗಲಿಲ್ಲ. ಹಾಗಾಗಿ ನಿಧಾನವಾಗಿ ಚಿತ್ರರಂಗದಿಂದ ದೂರಾಗುತ್ತಿದ್ದಾರೆ.

More from Filmibeat

English summary
Anushka Shetty calls Prabhas as Pupsuu, Sweety instagram Story Goes Viral. Prabhas impressed by the teaser of Miss. Shetty Mr. Polishetty, wishes anushka Shetty and team for the film. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X