ಸಹನಟನ ಅಗಲಿಕೆಗೆ ಕಂಬನಿ ಮಿಡಿದ ಸ್ವೀಟಿ: ಅನುಷ್ಕಾ ಇಷ್ಟವಾಗುವುದು ಇದೇ ಕಾರಣಕ್ಕೆ

ದೊಡ್ಡ ನಟ-ನಟಿಯರು ತಮ್ಮ ಜೊತೆಗೆ ಸಣ್ಣ ಪಾತ್ರಗಳಲ್ಲಿ ನಟಿಸಿದ ಸಣ್ಣ ನಟರನ್ನು ನೆನಪಿಟ್ಟುಕೊಳ್ಳುವುದು ಅಪರೂಪ. ಆದರೆ ಕರ್ನಾಟಕ ಮೂಲದ ನಟಿ ಅನುಷ್ಕಾ ಶೆಟ್ಟಿ ಹಾಗಲ್ಲ. ತೆಲುಗು ಸಿನಿಮಾರಂಗದಲ್ಲಿ ಅನುಷ್ಕಾ ಅವರಿಗೆ ಸ್ವೀಟಿ ಎಂಬ ಮುದ್ದು ಹೆಸರಿನ ಜೊತೆಗೆ 'ಅಮ್ಮ' ಎಂಬ ಹೆಸರೂ ಇದೆ. ಇದಕ್ಕೆ ಕಾರಣ ಅವರ ಸೌಮ್ಯ, ಮಾನವೀಯ ಗುಣ.

ಅನುಷ್ಕಾ ಶೆಟ್ಟಿ ಜೊತೆಗೆ ಕೇವಲ ಒಂದೇ ಸಿನಿಮಾದಲ್ಲಿ ನಟಿಸಿದ್ದ ಹಿರಿಯ ನಟರೊಬ್ಬರು ನಿನ್ನೆ ನಿಧನ ಹೊಂದಿದ್ದಾರೆ. ಆ ಹಿರಿಯ ಜೀವವನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಕಂಬನಿ ಮಿಡಿದಿದ್ದಾರೆ ನಟಿ ಅನುಷ್ಕಾ ಶೆಟ್ಟಿ.

ತೆಲುಗಿನಲ್ಲಿ ಸೂಪರ್ ಹಿಟ್ ಆದ, ವಿಮರ್ಶಕರಿಂದಲೂ ಪ್ರಶಂಸೆಗಳಿಸಿದ 'ವೇದಂ' ಸಿನಿಮಾದಲ್ಲಿ ನಟಿಸಿದ್ದ ನಾಗಯ್ಯ ವಯೋಸಹಜ ಖಾಯಿಲೆಯಿಂದ ಬಳಲಿ ನಿನ್ನೆ ನಿಧನ ಹೊಂದಿದರು. 'ವೇದಂ' ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ್ದ ನಾಗಯ್ಯ ಅವರನ್ನು 'ವೇದಂ ನಾಗಯ್ಯ' ಎಂದೇ ಕರೆಯಲಾಗುತ್ತಿತ್ತು.

 Anushka Shetty Express Condolence Over Nagaiahs Death

ವೇದಂ ನಾಗಯ್ಯ ಅವರೊಟ್ಟಿಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಅನುಷ್ಕಾ ಶೆಟ್ಟಿ, 'ಪರಿಶುದ್ಧವಾದ ಆತ್ಮ ನಾಗಯ್ಯ ಇಂದು ಸ್ವರ್ಗಕ್ಕೆ ಸೇರಿದರು. ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು. ಅವರ ಕುಟುಂಬಕ್ಕೆ ದುಖಃವನ್ನು ಭರಿಸುವ ಶಕ್ತಿ ಆ ದೇವರು ನೀಡಲಿ' ಎಂದಿದ್ದಾರೆ ಅನುಷ್ಕಾ.

ಅನುಷ್ಕಾ ಅವರು ಹಿರಿಯ ನಟ ನಾಗಯ್ಯ ಅವರನ್ನು ನೆನಪಿಸಿಕೊಂಡಿದ್ದಕ್ಕೆ ಅವರೊಟ್ಟಿಗಿನ ಚಿತ್ರವನ್ನು ಪ್ರಕಟಿಸಿದ್ದಕ್ಕೆ ನೆಟ್ಟಿಗರು ಅನುಷ್ಕಾ ಅವರನ್ನು ಬಹುವಾಗಿ ಹೊಗಳಿದ್ದಾರೆ. 'ತೆಲುಗು ಸಿನಿಮಾ ರಂಗದ ಹಲವರು ನಾಗಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿಲ್ಲ ಆದರೆ ನೀವು ಅವರ ಆತ್ಮಕ್ಕೆ ಶಾಂತಿ ಕೋರಿ ನಿಜವಾದ ಕಲಾವಿದೆ ಎನಿಸಿಕೊಂಡಿದ್ದೀರಿ' ಎಂದು ಹೊಗಳಿದ್ದಾರೆ. ಅನುಷ್ಕಾ ಅವರ ಈ ಫೊಟೊಕ್ಕೆ 3000 ಕ್ಕೂ ಹೆಚ್ಚು ಕಮೆಂಟ್‌ಗಳು, 1.50 ಲಕ್ಷ ಲೈಕ್ಸ್ ಬಂದಿವೆ.

Recommended Video

Chaitra Kotturu Marriage Issue, ಹೆದರಿಸಿ ಬಲವಂತ ಮಾಡಿ ಮದುವೆಯಾದ್ರಾ ಚೈತ್ರಾ ಕೊಟ್ಟೂರು | Filmibeat Kannada

ನಾಗಯ್ಯ ಅವರು ಒಮ್ಮೆ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾದರೆ 'ವೇದಂ' ನಿರ್ದೇಶಕ ಕ್ರಿಶ್ ಅವರನ್ನು ನೋಡಿ ಕಚೇರಿಗೆ ಕರೆಸಿ ಅವರಿಗೆ ಸಿನಿಮಾದಲ್ಲಿ ಪಾತ್ರ ಕೊಟ್ಟರು. ಅಲ್ಲು ಅರ್ಜುನ್, ಅನುಷ್ಕಾ ಶೆಟ್ಟಿ, ಮನೋಜ್ ಮಂಚು, ಮನೋಜ್ ಬಾಜಪೇಯಿ, ಶರಣ್ಯಾ ಇನ್ನೂ ಹಲವಾರು ಪ್ರತಿಭಾವಂತ ನಟರ ಜೊತೆಗೆ ಅಭಿನಯಿಸಿ ತಮ್ಮದೇ ಆದ ಛಾಪು ಮೂಡಿಸಿದರು. ಆ ಸಿನಿಮಾದ ಬಳಿಕ ಸುಮಾರು 30 ಸಿನಿಮಾಗಳಲ್ಲಿ ನಾಗಯ್ಯ ನಟಿಸಿದರು.

More from Filmibeat

English summary
Actress Anushka Shetty express condolence over actor Nagaiah's death. Anushka and Nagaiah both acted in Vedam movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X