ಅನುಷ್ಕಾ ಮದುವೆ ಸುದ್ದಿ ಬೆನ್ನಲ್ಲೇ ಅಭಿಮಾನಿಗಳಿಂದ ಸರ್ಪ್ರೈಸ್
ಸೌತ್ ಸುಂದರಿ ಅನುಷ್ಕಾ ಶೆಟ್ಟಿ ಮದುವೆ ವಿಚಾರದಲ್ಲಿ ಭಾರಿ ಚರ್ಚೆಯಲ್ಲಿದ್ದಾರೆ. ಭಾರತ ಕ್ರಿಕೆಟ್ ತಂಡದ ಆಟಗಾರನೊಬ್ಬನ ಜೊತೆ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಗಳು ಸದ್ದು ಮಾಡ್ತಿದೆ.
ಈ ಕುರಿತು ಅನುಷ್ಕಾ ಆಗಲಿ ಅಥವಾ ಅವರ ಕುಟುಂಬದವರಾಗಲಿ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೂ ಆ ಕ್ರಿಕೆಟ್ ಆಟಗಾರ ಯಾರಿರಬಹುದು ಎಂಬ ಹುಡುಕಾಟ ನಡೆಯುತ್ತಿದೆ.
ಇದೀಗ, ಅನುಷ್ಕಾ ಶೆಟ್ಟಿಗೆ ಸರ್ಪ್ರೈಸ್ ನೀಡಲು ಅವರ ಅಭಿಮಾನಿಗಳು ನಿರ್ಧರಿಸಿದ್ದಾರೆ. ಅನುಷ್ಕಾ ಶೆಟ್ಟಿ ಅಂದ್ರೆ ಎಷ್ಟು ಇಷ್ಟ ಎಂದು ತೋರಿಸಲು ಮುಂದಾಗಿದ್ದಾರೆ. ಅಷ್ಟಕ್ಕೂ, ಅನುಷ್ಕಾ ಶೆಟ್ಟಿ ಅಭಿಮಾನಿಗಳ ಪ್ಲಾನ್ ಏನು? ಮುಂದೆ ಓದಿ....

5 ಗಂಟೆಗೆ ಟ್ರೆಂಡ್ ಮಾಡಲು ಪ್ಲಾನ್
ಅನುಷ್ಕಾ ಶೆಟ್ಟಿ ಅವರಂದ್ರೆ ಎಷ್ಟು ಇಷ್ಟ, ಅವರನ್ನು ಎಷ್ಟು ಪ್ರೀತಿಸುತ್ತೇವೆ ಎಂದು ತೋರಿಸಲು ಅವರ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ವಿಶೇಷವಾದ ಹ್ಯಾಷ್ ಟ್ಯಾಗ್ ಟ್ರೆಂಡ್ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಇಂದು ಸಂಜೆ 5 ಗಂಟೆಗೆ '#Weloveanushkashetty' ಹ್ಯಾಷ್ ಟ್ಯಾಗ್ ಟ್ರೆಂಡ್ ಮಾಡುವ ಮೂಲಕ ಅನುಷ್ಕಾ ಮೇಲಿನ ಅಭಿಮಾನಿ ಸಾಬೀತು ಮಾಡಲು ಸಜ್ಜಾಗಿದ್ದಾರೆ.

ಇದ್ದಕ್ಕಿದ್ದಂತೆ ಈ ಟ್ರೆಂಡ್ ಯಾಕೆ?
ಅನುಷ್ಕಾ ಶೆಟ್ಟಿ ಅವರ ಪರ ಇದ್ದಕ್ಕಿದ್ದಂತೆ ಈ ಟ್ರೆಂಡ್ ಯಾಕೆ ಎನ್ನುವುದು ಕುತೂಹಲ ಮೂಡಿಸಿದೆ. ಟೀಂ ಇಂಡಿಯಾ ಆಟಗಾರನ ಜೊತೆ ಮದುವೆ ಎನ್ನುವ ಸುದ್ದಿ ಬಿಟ್ಟರೆ ಬೇರೆ ಯಾವುದೇ ವಿಚಾರಕ್ಕೆ ಅನುಷ್ಕಾ ಸುದ್ದಿಯಲ್ಲಿಲ್ಲ. ಈ ಮದುವೆ ಸುದ್ದಿಯೂ ಕೇವಲ ವದಂತಿ ಎನ್ನಲಾಗಿದೆ. ಹಾಗಿದ್ದರೂ ಈ ಹ್ಯಾಷ್ ಟ್ಯಾಗ್ ಟ್ರೆಂಡ್ ಮಾಡುತ್ತಿರುವ ಆಕೆಯೆ ಮೇಲಿನ ಅಭಿಮಾನಕ್ಕೆ ಅಷ್ಟೆ.

ಟೀಂ ಇಂಡಿಯಾ ಆಟಗಾರ ಯಾರಿರಬಹುದು?
ಭಾರತ ಕ್ರಿಕೆಟ್ ಆಟಗಾರನ ಜೊತೆ ಮದುವೆ ಎಂಬ ಸುದ್ದಿ ಆಗಿರುವ ಕಾರಣ ಆ ಆಟಗಾರ ಯಾರಿರಬಹುದು ಎಂಬ ಕುತೂಹಲ ಕಾಡುತ್ತಿದೆ. ಉತ್ತರ ಭಾರತಕ್ಕೆ ಸೇರಿದ ಈ ಆಟಗಾರ ಸದ್ಯಕ್ಕೆ ದಕ್ಷಿಣ ವಲಯದ ರಣಜಿ ತಂಡದ ಪರ ಆಡುತ್ತಿದ್ದಾರಂತೆ. ಆದರೆ ಯಾರು ಆ ಆಟಗಾರ ಎನ್ನುವುದು ಮಾತ್ರ ಗೊತ್ತೇ ಆಗಿಲ್ಲ.

ಒಂದೇ ಸಿನಿಮಾ ಇರೋದು!
ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದ ಅನುಷ್ಕಾ ಶೆಟ್ಟಿ, ಅದಕ್ಕೂ ಮುಂಚೆಯೇ 'ನಿಶ್ಯಬ್ದಂ' ಎಂಬ ಸಿನಿಮಾ ಮಾಡಿದ್ದರು. ಇದು ತೆಲುಗು ಮತ್ತು ತಮಿಳಿನಲ್ಲಿ ತೆರೆಕಾಣಲು ಸಜ್ಜಾಗಿದೆ. ಈ ಸಿನಿಮಾ ಬಿಟ್ಟರೇ ಸದ್ಯ ಅನುಷ್ಕಾ ಶೆಟ್ಟಿ ಕೈಯಲ್ಲಿ ಯಾವ ಚಿತ್ರವು ಇಲ್ಲ. ಹಾಗಾಗಿ, 38 ವರ್ಷದ ಅನುಷ್ಕಾ ಮದುವೆಗೆ ತಯಾರಿ ಆಗುತ್ತಿರಬಹುದು ಎಂಬ ಅನುಮಾನ ಮೂಡಿದೆ.


Click it and Unblock the Notifications











