ನಿಶ್ಯಬ್ದಂ ಚಿತ್ರಕ್ಕೆ ಅನುಷ್ಕಾ ಶೆಟ್ಟಿ ಮೊದಲ ಆಯ್ಕೆ ಆಗಿರಲಿಲ್ಲ, ಮತ್ಯಾರು?

ಅನುಷ್ಕಾ ಶೆಟ್ಟಿ ಮತ್ತು ಆರ್ ಮಾಧವನ್ ನಟಿಸಿದ್ದ 'ನಿಶ್ಯಬ್ದಂ' ಸಿನಿಮಾ ಇತ್ತೀಚಿಗಷ್ಟೆ ತೆರೆಕಂಡಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅನುಷ್ಕಾ ಅಭಿಮಾನಿಗಳಿಗೆ ಇದು ನಿರಾಸೆ ತಂದಿತ್ತು.

ಆದ್ರೆ, ನಿಶ್ಯಬ್ದಂ ಚಿತ್ರಕ್ಕೆ ಅನುಷ್ಕಾ ಶೆಟ್ಟಿ ಮೊದಲ ಆಯ್ಕೆ ಆಗಿರಲಿಲ್ಲ ಎಂಬ ವಿಚಾರ ಹೊರಬಿದ್ದಿದೆ. ಹೌದು, ನಿರ್ದೇಶಕ ಹೇಮಂತ್ ಮಧುಕರ್ ಮೊದಲ ಈ ಕಥೆಯನ್ನು ನಟಿ ರೆಜಿನಾಗೆ ಹೇಳಿದ್ದರಂತೆ.

ಇಡೀ ಕಥೆ ಸೈಲೆಂಟ್ ಆಗಿ ಯಾವುದೇ ಸಂಭಾಷಣೆ ಇಲ್ಲದೇ ಮಾಡುವುದು ನಿರ್ದೇಶಕ ಗುರಿಯಾಗಿತ್ತಂತೆ. ಆದ್ರೆ, ನಿರ್ಮಾಪಕ ಕೋನಾ ವೆಂಕಟ್ ನಿರ್ದೇಶಕರ ಕಥೆಗೆ ಬದಲಾವಣೆ ತಂದರಂತೆ.

Anushka Shetty is Not First choice For Nishabdham movie

ರೆಜಿನಾ ಅವರ ಜಾಗಕ್ಕೆ ಅನುಷ್ಕಾ ಶೆಟ್ಟಿ ಇದ್ದರೆ ಸೂಕ್ತ ಎಂದು ನಿರ್ಧರಿಸಿದ ನಿರ್ಮಾಪಕರು, ಕಥೆಯಲ್ಲೂ ಬದಲಾವಣೆ ತಂದರು. ಆದ್ದರಿಂದಲೇ ಮಾಧವನ್ ಮತ್ತು ಅಂಜಲಿಯಂತಹ ಸ್ಟಾರ್‌ಗಳು ಈ ಚಿತ್ರಕ್ಕೆ ಆಯ್ಕೆ ಮಾಡಲಾಯಿತು. ಆದ್ರೆ, ಸಿನಿಮಾ ರಿಲೀಸ್ ಆದ್ಮೇಲೆ ಈ ಯೋಜನೆ ವಿಫಲವಾಗಿದೆ ಎಂದು ಫಲಿತಾಂಶ ಹೇಳಿದೆ.

ಸಿನಿಮಾ ತೆರೆಕಂಡ ಬಳಿಕ ಅನುಷ್ಕಾ ಅವರ ಮಟ್ಟಕ್ಕೆ ತಕ್ಕಂತೆ ಕಥೆಯಿಲ್ಲ ಎಂಬ ಕಾಮೆಂಟ್‌ಗಳೂ ಬಂದವು. ಒಂದು ವೇಳೆ ಈ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದರೆ ದೊಡ್ಡ ನಷ್ಟ ಅನುಭವಿಸಬೇಕಾಗಿತ್ತು ಎಂಬ ಆತಂಕವೂ ಕಾಡಿತ್ತು. ಹಾಗಾಗಿ, ಓಟಿಟಿ ಮೂಲಕ ಸಿನಿಮಾ ಬಿಡುಗಡೆ ಮಾಡಲು ಮುಂದಾದರು.

ನಿಶ್ಯಬ್ದಂ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡಲು ಚಿಂತಿಸಲಾಗಿದೆ. ನಾನಿ ಹಾಗೂ ಸುಧೀರ್ ಬಾಬು ನಟಿಸಿದ್ದ 'ವಿ' ಚಿತ್ರವನ್ನು ಚಿತ್ರಮಂದಿರಗಳಲ್ಲಿ ಮತ್ತೆ ರಿ ರಿಲೀಸ್ ಮಾಡುವ ಸಾಧ್ಯತೆ ಇದೆ.

More from Filmibeat

English summary
Actress Anushka Shetty is not first choice for Nishabdham movie says sourse.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X