ಹೊಂಬಾಳೆ ಫಿಲ್ಮ್ಸ್ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ; ಹೀರೊ ಯಾರು?

ಮಂಗಳೂರು ಚೆಲುವೆ ಅನುಷ್ಕಾ ಶೆಟ್ಟಿ ಕನ್ನಡ ಚಿತ್ರದಲ್ಲಿ ಮಾತ್ರ ನಟಿಸಲೇ ಇಲ್ಲ. ತೆಲುಗು ಸಿನಿಮಾಗಳಲ್ಲೇ ಹೆಚ್ಚು ನಟಿಸಿ ಮೋಡಿ ಮಾಡಿದ್ದಾರೆ. ಇತ್ತೀಚೆಗೆ ಸ್ವೀಟಿ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಸಿನಿಮಾಗಳಿಂದ ಕೂಡ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ನೆಚ್ಚಿನ ನಟಿಯನ್ನು ತೆರೆಮೇಲೆ ನೋಡಲು ಕಾಯುತ್ತಿದ್ದಾರೆ.

ಸದ್ಯ ತೆಲುಗಿನ 'ಘಾಟಿ' ಹಾಗೂ ಮಲಯಾಳಂನ 'ಕತನ್ನಾರ್' ಎಂಬ ಸಿನಿಮಾಗಳಲ್ಲಿ ಅನುಷ್ಕಾ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಆ ಎರಡು ಚಿತ್ರಗಳು ತೆರೆಗೆ ಬರಲಿದೆ. ಇನ್ನೂ ನಾಲ್ಕು ಸಿನಿಮಾಗಳಿಗೆ ಸ್ವೀಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಗುಲ್ಲಾಗಿದೆ. ಫಿಲ್ಮ್ ನಗರ್‌ನಲ್ಲಿ ಇದೇ ವಿಚಾರ ಭಾರೀ ಸುದ್ದಿ ಆಗ್ತಿದೆ. ಅದರಲ್ಲಿ ಒಂದು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಸಿನಿಮಾ ಎನ್ನಲಾಗ್ತಿದೆ.

Anushka Shetty is starring in a film produced by Hombale Films

ಕನ್ನಡದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ 'KGF' ಸರಣಿ ಬಳಿಕ ಬೇರೆ ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಆರಂಭಿಸಿದೆ. ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಈಗಾಗಲೇ ಒಂದೊಂದು ಸಿನಿಮಾ ನಿರ್ಮಿಸಿದೆ. ಪ್ರಭಾಸ್ ಹೀರೊ ಆಗಿ 'ಸಲಾರ್' ಸಿನಿಮಾ ತಯಾರಿಸಿ ಸಂಸ್ಥೆ ಗೆದ್ದಿದೆ. 'ಸಲಾರ್'-2 ಜೊತೆಗೆ ಮತ್ತೆರಡು ಸಿನಿಮಾಗಳನ್ನು ಯಂಗ್ ರೆಬಲ್ ಸ್ಟಾರ್ ಜೊತೆ ಮಾಡಲು ಈಗಾಗಲೇ ಒಪ್ಪಂದವಾಗಿದೆ.

ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆ ಬಳಿಕ ಒಟ್ಟಾಗಿ 'ಸಲಾರ್'-2 ಶೌರ್ಯಾಂಗ ಪರ್ವ ಸಿನಿಮಾ ಮಾಡಲಿದ್ದಾರೆ. ಇನ್ನುಳಿದ 2 ಚಿತ್ರಗಳಿಗೆ ನಿರ್ದೇಶಕರು ಯಾರು ಎನ್ನುವುದು ಖಚಿತವಾಗಿಲ್ಲ. ಒಂದು ಚಿತ್ರದಲ್ಲಿ ಮಾತ್ರ ಪ್ರಭಾಸ್ ಜೋಡಿಯಾಗಿ ಅನುಷ್ಕಾ ಶೆಟ್ಟಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ.

Anushka Shetty is starring in a film produced by Hombale Films

ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಅವರದ್ದು ಸೂಪರ್ ಹಿಟ್ ಜೋಡಿ. 'ಬಿಲ್ಲಾ', 'ಮಿರ್ಚಿ' ಹಾಗೂ 'ಬಾಹುಬಲಿ' ಸರಣಿ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. 4 ಚಿತ್ರಗಳು ಹಿಟ್ ಆಗಿತ್ತು. ಇವರಿಬ್ಬರೂ ಆತ್ಮೀಯ ಸ್ನೇಹಿತರು ಕೂಡ. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ, ಮದುವೆ ಕೂಡ ಆಗುತ್ತಾರೆ ಎನ್ನುವ ಮಾತುಗಳು ಪದೇ ಪದೆ ಕೇಳಿಬರುತ್ತದೆ. ಆದರೆ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಂತ ಅವರಿಬ್ಬರು ಹೇಳುತ್ತಾ ಬರ್ತಿದ್ದಾರೆ. ಇಬ್ಬರೂ ಮದುವೆ ಆಗಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿದೆ.

ಒಳ್ಳೆ ಕಥೆ ಸಿಕ್ಕರೆ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮತ್ತೆ ಒಟ್ಟಿಗೆ ನಟಿಸುವುದರಲ್ಲಿ ಅನುಮಾನವಿಲ್ಲ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ದೊಡ್ಡ ದೊಡ್ಡ ಸಿನಿಮಾಗಳಿಗೆ ಹಣ ಹೂಡುತ್ತಿದೆ. 'ಕಾಂತಾರ'-1 ಸಿನಿಮಾ ಅಕ್ಟೋಬರ್ 2ಕ್ಕೆ ತೆರೆಗೆ ಬರಲಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಈ ಸಿನಿಮಾ ಸಿದ್ಧವಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ.

ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಬೇಕಿರುವ 'ರಿಚರ್ಡ್ ಆಂಟನಿ' ಚಿತ್ರವನ್ನು ಕೂಡ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಲಿದೆ. ಆದಷ್ಟು ಬೇಗ 'KGF'-3 ಸಿನಿಮಾ ಮಾಡುವುದಾಗಿಯೂ ಚಿತ್ರತಂಡ ಹೇಳ್ತಾ ಬರ್ತಿದೆ. 'ಮಹಾವತಾರ್ ನರಸಿಂಹ' ಎಂಬ ಒಂದು ಆನಿಮೇಷನ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

ಅತ್ತ ಪ್ರಭಾಸ್ 'ಕಲ್ಕಿ 2898AD' ಸಿನಿಮಾ ಬಳಿಕ 'ದಿ ರಾಜಾಸಾಬ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ಫೌಜಿ' ಎಂಬ ಮತ್ತೊಂದು ಸಿನಿಮಾ ಚಿತ್ರೀಕರಣ ಕೂಡ ನಡೀತಿದೆ. ಈ ವರ್ಷವೇ ಹಾರರ್ ಕಾಮಿಡಿ ಸಿನಿಮಾ 'ದಿ ರಾಜಾಸಾಬ್' ತೆರೆಗೆ ಬರುವ ನಿರೀಕ್ಷೆಯಿದೆ. ಹನು ರಾಘವಪುಡಿ ನಿರ್ದೇಶನದ 'ಫೌಜಿ' ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆಯಿದೆ. ಈ 2 ಸಿನಿಮಾಗಳ ಬಳಿಕ 'ಸಲಾರ್-2' ಚಿತ್ರದಲ್ಲಿ ನಟಿಸ್ತಾರಾ? ಕಾದು ನೋಡಬೇಕಿದೆ.

More from Filmibeat

English summary
Hombale Films is producing a film featuring Anushka Shetty?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X