For Quick Alerts
  ALLOW NOTIFICATIONS  
  For Daily Alerts

  'ಕೂ'ನಲ್ಲಿ ಖಾತೆ ತೆರೆದ ಅನುಷ್ಕಾ: ಕೆಲವೇ ಗಂಟೆಯಲ್ಲಿ ಸಾವಿರಾರು ಹಿಂಬಾಲಕರು

  |

  ಭಾರತದ ಕಾನೂನಿಯ ಅಡಿಯಲ್ಲಿ ಟ್ವಿಟ್ಟರ್ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಕಟ್ಟುನಿಟ್ಟಾಗಿ ಸೂಚಿಸಿದೆ. ಸರ್ಕಾರದ ಆದೇಶದ ಬಗ್ಗೆ ಟ್ವಿಟ್ಟರ್ ಸಂಸ್ಥೆ ಅಸಮಾಧಾನ ಹೊಂದಿದ್ದು, ಸಮಯದ ಅವಕಾಶ ಪಡೆದಿದೆ. ಈ ನಡುವೆ ಟ್ವಿಟ್ಟರ್‌ನಿಂದ ಹೊರಬರುತ್ತಿರುವ ಸೆಲೆಬ್ರಿಟಿಗಳು ಅದಕ್ಕೆ ಪರ್ಯಾಯವಾಗಿ ಹುಟ್ಟಿಕೊಂಡಿರುವ 'ಕೂ' (Koo) ಸೇರುತ್ತಿದ್ದಾರೆ.

  ಇದೀಗ, ದಕ್ಷಿಣ ಭಾರತದ ಖ್ಯಾತ ಕಲಾವಿದೆ ಅನುಷ್ಕಾ ಶೆಟ್ಟಿ 'ಕೂ'ನಲ್ಲಿ ಖಾತೆ ತೆರೆದಿದ್ದಾರೆ. 'ಕೂ' ಸೇರುತ್ತಿರುವ ಬಗ್ಗೆ ಬಾಹುಬಲಿ ನಟಿ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟಪಡಿಸಿದ್ದಾರೆ.

  ಕಂಗನಾ ರಣಾವತ್ ಟ್ವಿಟ್ಟರ್ ಖಾತೆ ಅಮಾನತುಕಂಗನಾ ರಣಾವತ್ ಟ್ವಿಟ್ಟರ್ ಖಾತೆ ಅಮಾನತು

  ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಅನುಷ್ಕಾ ''ಎಲ್ಲರಿಗೂ ನಮಸ್ಕಾರ, ನೀವೆಲ್ಲರೂ ಸುರಕ್ಷಿತರಾಗಿದ್ದೀರಿ ಎಂದು ಭಾವಿಸುತ್ತೇನೆ. ಮುಂದಿನ ದಿನಗಳಲ್ಲಿ ನನ್ನನ್ನು ಕೂನಲ್ಲಿ ಕಾಣಬಹುದು. ನನ್ನ ಕುರಿತು ಹೆಚ್ಚಿನ ವಿಷಯಗಳನ್ನು ತಿಳಿಯಲು 'ಕೂ'ನಲ್ಲಿ ನನ್ನನ್ನು ಫಾಲೋ ಮಾಡಿ'' ಎಂದು ವಿನಂತಿಸಿದ್ದಾರೆ.

  ಅನುಷ್ಕಾ ಶೆಟ್ಟಿ ಕೋಗೆ ಎಂಟ್ರಿಯಾದ ಕಾರಣ ಅಭಿಮಾನಿಗಳು ಖುಷಿಯಾಗಿದ್ದು, ಕೂನಲ್ಲಿ ಹಿಂಬಾಲಿಸುತ್ತಿದ್ದಾರೆ. ಈಗಾಗಲೇ ಅನುಷ್ಕಾ ಕೋನಲ್ಲಿ 10,309 ಜನ ಹಿಂಬಾಲಕರು ಹೊಂದಿದ್ದಾರೆ. ಆದರೆ, ಇದುವರೆಗೂ ಒಬ್ಬರನ್ನು ತಾವು ಫಾಲೋ ಮಾಡ್ತಿಲ್ಲ.

  ಅನುಷ್ಕಾ ಶೆಟ್ಟಿ ಕೂ ಸೇರಿದ ಹಿನ್ನೆಲೆ 'ಬಾಹುಬಲಿ ನಟಿ ಕಂಗನಾ ರಣಾವತ್ ಅವರನ್ನು ಅನುಸರಿಸುತ್ತಿದ್ದಾರೆ' ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ಏಕಂದ್ರೆ, ಕಂಗನಾ ಸಹ ಇತ್ತೀಚಿಗಷ್ಟೆ ಕೂ ಸೇರಿದ್ದರು.

  10 ಕೋಟಿ ಕೊಟ್ರು ಈ ಕೆಲಸ ಮಾಡಲ್ಲ ಎಂದ ಶಿಲ್ಪಾ ಶೆಟ್ಟಿ | Filmibeat Kannada

  ಅದಕ್ಕೂ ಮುಂಚೆ ತನ್ನ ವಿವಾದಾತ್ಮಕ ಟ್ವೀಟ್‌ಗಳ ಕಾರಣ, ನಟಿ ಕಂಗನಾ ರಣಾವತ್‌ರನ್ನು ಖುದ್ದು ಟ್ವಿಟ್ಟರ್‌ ಸಂಸ್ಥೆ ನಿಷೇಧ ಮಾಡಿತ್ತು. ಶಾಶ್ವತವಾಗಿ ಅವರ ಖಾತೆಯನ್ನು ನಿಷ್ಕ್ರಿಯಗೊಳಿಸಿತ್ತು.

  English summary
  Baahubali actress Anushka shetty joins Koo and sends message to her fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X