For Quick Alerts
  ALLOW NOTIFICATIONS  
  For Daily Alerts

  ಅವಳಿ ಮಕ್ಕಳಿಗೆ ತಾಯಿಯಾಗ್ತಾರಾ ನಟಿ ಅನುಷ್ಕಾ ಶೆಟ್ಟಿ?

  |

  ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸದ್ಯ ಯಾವ ಸಿನಿಮಾವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. 'ನಿಶಬ್ದಂ' ಸಿನಿಮಾ ಬಳಿಕ ಅನುಷ್ಕಾ ಮತ್ತೆ ಅಭಿಮಾನಿಗಳ ಮುಂದೆ ಬಂದಿಲ್ಲ. ಹಾಗಾಗಿ ಅನುಷ್ಕಾ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.

  ಮದುವೆ ವಿಚಾರವಾಗಿ ಆಗಾಗ ಸುದ್ದಿಯಲ್ಲಿರುವ ನಟಿ ಅನುಷ್ಕಾ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಬಾಹುಬಲಿ ಸ್ಟಾರ್ ಅವಳಿ ಮಕ್ಕಳ ತಾಯಿಯಾಗಲಿದ್ದಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಅಂದಹಾಗೆ ಇದು ರಿಯಲ್ ಆಗಿ ಅಲ್ಲ ರೀಲ್ ನಲ್ಲಿ.

  'ಕೂ'ನಲ್ಲಿ ಖಾತೆ ತೆರೆದ ಅನುಷ್ಕಾ: ಕೆಲವೇ ಗಂಟೆಯಲ್ಲಿ ಸಾವಿರಾರು ಹಿಂಬಾಲಕರು'ಕೂ'ನಲ್ಲಿ ಖಾತೆ ತೆರೆದ ಅನುಷ್ಕಾ: ಕೆಲವೇ ಗಂಟೆಯಲ್ಲಿ ಸಾವಿರಾರು ಹಿಂಬಾಲಕರು

  ಅನುಷ್ಕಾ ಶೆಟ್ಟಿ ಮತ್ತೊಂದು ಮಹಿಳಾ ಕೇಂದ್ರಿತ ಸಿನಿಮಾಗೆ ಸಹಿ ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈಗಾಗಲೇ ಅರುಂಧತಿ, ರುದ್ರಮಾದೇವಿ, ಭಾಗಮತಿ ಸಿನಿಮಾಗಳಲ್ಲಿ ನಟಿಸಿರುವ ಅನುಷ್ಕಾ ಇದೀಗ ಮತ್ತೊಂದು ಮಹಿಳಾ ಕೇಂದ್ರಿತ ಸಿನಿಮಾಗೆ ಸಹಿ ಮಾಡಿದ್ದರಂತೆ. ಈ ಚಿತ್ರದಲ್ಲಿ ಅನುಷ್ಕಾ ಅವಳಿ ಮಕ್ಕಳ ಸಿಂಗಲ್ ಪೇರೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

  ಮದುವೆಯಾಗಿ ಕೆಲವೇ ದಿನಗಳಲ್ಲಿ ಗಂಡನನ್ನು ಕಳೆದುಕೊಳ್ಳುವ ಮಹಿಳೆಯ ಪಾತ್ರದಲ್ಲಿ ಅನುಷ್ಕಾ ಬಣ್ಣಹಚ್ಚಲು ಸಜ್ಜಾಗಿದ್ದಾರೆ. ಗಂಡ ಇಲ್ಲದೆ ಒಂಟಿಯಾಗಿ ಬದುಕಿನ ಹೋರಟ ನಡೆಸುವ ಮಹಿಳೆ ಬಳಿಕ ಗರ್ಭಿಣಿಯಾಗುತ್ತಾರೆ. ನಂತರ ಸಾಕಷ್ಟು ಕಷ್ಟಗಳನ್ನು ಎದುರಿಸಿ ಇಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡುವ ಮಹಿಳೆ ಪಾತ್ರದಲ್ಲಿ ಅನುಷ್ಕಾ ನಟಿಸುತ್ತಿದ್ದಾರೆ.

  ಅಂದಹಾಗೆ ಈ ಸಿನಿಮಾಗೆ ಯಾರು ನಿರ್ದೇಶನ ಮಾಡ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ಅನೇಕ ಖ್ಯಾತ ನಿರ್ದೇಶಕರ ಹೆಸರುಗಳು ಈ ಯೋಜನೆಯಲ್ಲಿದ್ದು, ಅಂತಿಮವಾಗಿ ಯಾರ ಪಾಲಾಗಲಿದೆ ಎಂದು ಕಾದುನೋಡಬೇಕು.

  ಗರ್ಲ್ ಫ್ರೆಂಡ್ ಗಾಗಿ ಐಫೋನ್ ಕೇಳಿದವನಿಗೆ ಸೋನು ಸೂದ್ ಏನಂದ್ರು ನೋಡಿ | Filmibeat Kannada

  ಇನ್ನು ಅನುಷ್ಕಾ ನಟಿಸುತ್ತಿದ್ದಾರೆ ಎನ್ನುವ ಮತ್ತೊಂದು ಸಿನಿಮಾ ಕೂಡ ಕುತೂಹಲ ಮೂಡಿಸಿದೆ. 40 ವರ್ಷದ ಮಹಿಳೆ 25 ವರ್ಷದ ಯುವಕನ ಪ್ರೀತಿಯಲ್ಲಿ ಬೀಳುವ ಕಥೆ ಇದಾಗಿದೆ. ಈ ಸಿನಿಮಾದಲ್ಲಿ ಅನುಷ್ಕಾ 40 ವರ್ಷದ ಮಹಿಳೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಪಾತ್ರಕ್ಕಾಗಿ ಸ್ಟೀಟಿ ಸಿಕ್ಕಾಪಟ್ಟೆ ತಯಾರಿ ನಡೆಸುತ್ತಿದ್ದು, ಸಖತ್ ವರ್ಕೌಟ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಎರಡು ಸಿನಿಮಾಗಳಲ್ಲಿ ಅನುಷ್ಕಾ ಮೊದಲು ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎಂದು ಕಾದು ನೋಡಬೇಕು.

  English summary
  South famous Actress Anushka Shetty likely to play mother of twins role in her new film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X